ಪ್ರಧಾನಿ ಮೋದಿಯವರು ಡೆನ್ಮಾರ್ಕ್ ರಾಣಿಯನ್ನು ಭೇಟಿಯಾದ ೨೦೨೨ರ ವೀಡಿಯೋವನ್ನು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್
ಸೆಪ್ಟೆಂಬರ್ 4 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪ್ರಧಾನಿ ಮೋದಿಯವರು ಡೆನ್ಮಾರ್ಕ್ ರಾಣಿಯನ್ನು ಭೇಟಿಯಾದ ೨೦೨೨ರ ವೀಡಿಯೋವನ್ನು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಬ್ರಿಟನ್ ರಾಜಮನೆತನವನ್ನು ಮೊದಲು ಭೇಟಿಯಾದವರು ಭಾರತದ ಪ್ರಧಾನಿ ಮೋದಿ ಎಂಬ ಮಾತು ತಪ್ಪು. ೧೯೬೯ ರಲ್ಲಿ, ರಾಣಿ ಎಲಿಜಬೆತ್ II ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಭೇಟಿಯಾಗಿದ್ದರು

ಕ್ಲೈಮ್ ಐಡಿ 7ba04268

ಹೇಳಿಕೆ ಏನು?
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟಿಷ್ ರಾಜಮನೆತನದವರನ್ನು ಭೇಟಿಯಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರಿಗೆ ರಾಜಮನೆತನವು ಸ್ವಾಗತವನ್ನು ಕೋರಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಅದಲ್ಲದೆ ಮೋದಿಯವರನ್ನು ಊಟಕ್ಕೆ ಆಹ್ವಾನಿಸಿ ಫೋಟೋಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಹೇಳಲಾಗಿದೆ. 

ಎಕ್ಸ್‌ (ಹಿಂದೆ ಟ್ವಿಟ್ಟರ್) ಮತ್ತು ಫೇಸ್ಬುಕ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಹೇಳಿಕೆ ವೈರಲ್ ಆಗಿದೆ. ಪ್ರೀತಿ ಯಾದವ್ ಎಂಬ ಎಕ್ಸ್‌ ಬಳಕೆದಾರರು ವೀಡಿಯೋವನ್ನು, "ಯುನೈಟೆಡ್ ಕಿಂಗ್‌ಡಮ್ ಸರ್ಕಾರವು ನಮ್ಮ ದೇಶದ ಪ್ರಧಾನಿಯನ್ನು ಅವರ ಮನೆಯಲ್ಲಿ ಔತಣಕೂಟಕ್ಕೆ ಅವರೊಂದಿಗೆ ಕುಳಿತುಕೊಳ್ಳಲು ಆಹ್ವಾನಿಸಿರುವುದು ಇದೇ ಮೊದಲು. ಮತ್ತು ರಾಜಮನೆತನದವರು ಅವರೊಂದಿಗೆ ಫೋಟೋಗಳನ್ನೂ ಸಹ ತೆಗೆದುಕೊಂಡರು. ಇದು ಅವರ ಉತ್ತಮ ವ್ಯಕ್ತಿತ್ವಕ್ಕೆ ಗೌರವವನ್ನು ತೋರಿಸುತ್ತದೆ. ಇದು ಪ್ರಧಾನಿ ಮೋದಿಜಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ,(ಹಿಂದಿಯಿಂದ ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ೩,೦೦೦ ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ ಗಳು (ಮೂಲ: ಎಕ್ಸ್‌/@mahi008yadav, ಫೇಸ್ಬುಕ್/@100041124500840)

ಆದರೆ, ಈ ವೀಡಿಯೋದಲ್ಲಿ ಮೋದಿಯವರು ಬ್ರಿಟಿಷ್ ರಾಜಮನೆತನವನ್ನು ಭೇಟಿಯಾಗುವುದನ್ನು ತೋರಿಸುವುದಿಲ್ಲ, ಅವರು ೨೦೨೨ ರಲ್ಲಿ ಡೆನ್ಮಾರ್ಕ್ ರಾಣಿ ಮಾರ್ಗರೆಥೆ II ಅವರನ್ನು ಭೇಟಿಯಾಗುವುದನ್ನು ಇದು ತೋರಿಸುತ್ತದೆ. ಅದಲ್ಲದೆ, ಇಂದಿರಾ ಗಾಂಧಿ ಅವರು ಬ್ರಿಟಿಷ್ ರಾಜಮನೆತನದಿಂದ ಆಯೋಜಿಸಲ್ಪಟ್ಟ ಮೊದಲ ಭಾರತೀಯ ಪ್ರಧಾನಿಯಾಗಿದ್ದರು. 

ನಾವು ಕಂಡುಹಿಡಿದದ್ದು ಏನು?
ಲಾಜಿಕಲಿ ಫ್ಯಾಕ್ಟ್ಸ್ ವೈರಲ್  ವೀಡಿಯೋವನ್ನು ಗಮನಿಸಿದಾಗ, ೪೫-ಸೆಕೆಂಡ್ ಗಳ ಟೈಮ್ ಸ್ಟ್ಯಾಂಪ್ ನಲ್ಲಿ 'www.kongehuset.dk' ಪಠ್ಯವನ್ನು ನೋಡಬಹುದು. ಇದು ರಾಯಲ್ ಹೌಸ್ ಆಫ್ ಡೆನ್ಮಾರ್ಕ್‌ನ ಅಧಿಕೃತ ವೆಬ್‌ಸೈಟ್ ಎಂದು ನಾವು ಕಂಡುಕೊಂಡೆವು. 

ನಾವು ನಂತರ ರಾಯಲ್ ಹೌಸ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದ್ದೇವೆ ಮತ್ತು ಅದರ  ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಡ್ಯಾನಿಶ್ ರಾಯಲ್ ಹೌಸ್‌ನಲ್ಲಿ ಈಗ ವೈರಲ್ ಆಗಿರುವ ವೀಡಿಯೋವನ್ನು ಕಾಣಬಹುದು, ಮತ್ತು ಇದನ್ನು ಮೂಲತಃ ಮೇ ೪, ೨೦೨೨ ರಂದು ಹಂಚಿಕೊಳ್ಳಲಾಗಿದೆ. ವೀಡಿಯೋದ ಶೀರ್ಷಿಕೆಯನ್ನು ಡ್ಯಾನಿಶ್‌ನಿಂದ ಇಂಗ್ಲಿಷ್‌ಗೆ ಅನುವಾದಿಸಿದಾಗ, ಹೀಗೆ ಅರ್ಥೈಸುತ್ತದೆ, "ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಡೆನ್ಮಾರ್ಕ್ ಭೇಟಿಯ ಸಂದರ್ಭದಲ್ಲಿ ಇಂದು ರಾತ್ರಿಯ ಅಧಿಕೃತ ಭೋಜನವು ಅಮಾಲಿಯನ್‌ಬೋರ್ಗ್‌ನಲ್ಲಿರುವ ಕ್ರಿಶ್ಚಿಯನ್ VII ಅರಮನೆಯ ನೈಟ್ಸ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. ಹರ್ ಮೆಜೆಸ್ಟಿ ದಿ ಕ್ವೀನ್ ಭೋಜನವನ್ನು ಏರ್ಪಡಿಸಿದ್ದು, ಕ್ರೌನ್ ಪ್ರಿನ್ಸ್ ದಂಪತಿಗಳೂ ಸಹ ಹಾಜರಿದ್ದರು."

ಡೆನ್ಮಾರ್ಕ್‌ನ ರಾಣಿ ಮಾರ್ಗರೆಥೆ II ಆಯೋಜಿಸಿದ್ದ ಅಧಿಕೃತ ಔತಣಕೂಟಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿತ್ತು (ಮೂಲ: ಇನ್ಸ್ಟಾಗ್ರಾಮ್/@detdanskekongehus)

ಈ ವೀಡಿಯೋವನ್ನು ಮೇ ೪, ೨೦೨೨ ರಂದು ಭಾರತೀಯ ಸುದ್ದಿ ಸಂಸ್ಥೆ ಎಎನ್ಐ (ANI) ನ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ರೀತಿಯ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ. "ಹರ್ ಮೆಜೆಸ್ಟಿ, ಡೆನ್ಮಾರ್ಕ್ ಸಾಮ್ರಾಜ್ಯದ ರಾಣಿಯಾದ ಮಾರ್ಗರೆಥೆ ಈ ಅವರನ್ನು ಕೋಪನ್‌ಹೇಗನ್‌ನಲ್ಲಿ ಭೇಟಿಯಾಯಿತು." ಎಂಬ ಶೀರ್ಷಿಕೆಯೊಂದಿಗೆ ಈವೆಂಟ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ವೈರಲ್  ವೀಡಿಯೋದ ಸ್ಕ್ರೀನ್‌ಗ್ರಾಬ್‌ನ ಹೋಲಿಕೆ ಮತ್ತು ೨೦೨೨ರಲ್ಲಿ ಪಿಎಂ ಮೋದಿ ಅವರು ಹಂಚಿಕೊಂಡ ಚಿತ್ರ  (ಮೂಲ: ಎಕ್ಸ್‌/@mahi008yadav, ಎಕ್ಸ್‌/narendramodi)

ವೀಡಿಯೋಗಳಲ್ಲಿ ಮೋದಿಯವರಿಗೆ ಆತಿಥ್ಯ ನೀಡುತ್ತಿರುವ ರಾಜಮನೆತನವು ಬ್ರಿಟಿಷ್ ರಾಜಮನೆತನವಲ್ಲ, ಆದರೆ ಡ್ಯಾನಿಶ್ ರಾಜ ಕುಟುಂಬ ಎಂದು ಇದು ತೋರಿಸುತ್ತದೆ.

ಯುಕೆ ಮತ್ತು ಡೆನ್ಮಾರ್ಕ್ ರಾಜಮನೆತನವನ್ನು ಭೇಟಿಯಾದ ಮೊದಲ ಭಾರತೀಯ ಪ್ರಧಾನಿ ನರೇಂದ್ರ ಮೋದಿಯೇ?
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಜೂನ್ ೧೯೫೭ ರಲ್ಲಿ ಡ್ಯಾನಿಶ್ ರಾಜಮನೆತನವನ್ನು ಭೇಟಿಯಾಗಿದ್ದರು ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿತು. ನೆಹರು ಅವರು ಡೆನ್ಮಾರ್ಕ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಫ್ರೆಡೆನ್ಸ್‌ಬರ್ಗ್ ಕ್ಯಾಸಲ್‌ನಲ್ಲಿ ಡ್ಯಾನಿಶ್ ರಾಜಮನೆತನವನ್ನು ಭೇಟಿಯಾಗಿದ್ದರು.

ಜವಾಹರಲಾಲ್ ನೆಹರು ಅವರು ೧೯೫೭ ರಲ್ಲಿ ಡೆನ್ಮಾರ್ಕ್ ರಾಜಮನೆತನವನ್ನು ಭೇಟಿಯಾಗಿದ್ದರು  (ಮೂಲ: ಕೀಸ್ಟೋನ್ ಪ್ರೆಸ್/ಅಲಮಿ ಸ್ಟಾಕ್ ಫೋಟೋ)

ಬ್ರಿಟನ್ ರಾಜಮನೆತನವನ್ನು ಭೇಟಿಯಾದ ಮೊದಲ ಪ್ರಧಾನಿ ಮೋದಿ ಎಂಬ ಹೆಗ್ಗಳಿಕೆಯೂ ತಪ್ಪು. ರಾಣಿ ಎಲಿಜಬೆತ್ II ಅವರು ೧೯೬೯ ರಲ್ಲಿ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಮಾಜಿ ಭಾರತೀಯ ಪ್ರಧಾನಿ ಇಂದಿರಾ ಗಾಂಧಿಗೆ ಆತಿಥ್ಯ ವಹಿಸಿದ್ದರು. ಮೋದಿಯವರನ್ನು ೨೦೧೫ ರಲ್ಲಿ ಬಕಿಂಗ್ಹ್ಯಾಮ್ ಅರಮನೆಗೆ ಆಹ್ವಾನಿಸಲಾಗಿತ್ತು.

ಬಕಿಂಗ್ಹ್ಯಾಮ್ ಅರಮನೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ರಾಣಿ ಎಲಿಜಬೆತ್ II
(ಮೂಲ: ಎವೆರೆಟ್ಟ್ ಕಲೆಕ್ಷನ್ ಹಿಸ್ಟಾರಿಕಲ್ /ಅಲಮಿ ಸ್ಟಾಕ್ ಫೋಟೋ)

ತೀರ್ಪು
ವೈರಲ್ ಆಗಿರುವ ವೀಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ರಾಜಮನೆತನದವರನ್ನು ಭೇಟಿ ಮಾಡಿದ್ದನ್ನು ತೋರಿಸುತ್ತಿಲ್ಲ. ಅವರು ೨೦೨೨ ರಲ್ಲಿ ಡ್ಯಾನಿಶ್ ರಾಜಮನೆತನವನ್ನು ಭೇಟಿಯಾಗುವುದನ್ನು ಇದು ತೋರಿಸುತ್ತದೆ. ಯುನೈಟೆಡ್ ಕಿಂಗ್‌ಡಮ್‌ನ ರಾಜಮನೆತನವನ್ನು ಭೇಟಿಯಾದ ಮೊದಲ ಪ್ರಧಾನಿ ಮೋದಿ ಎಂಬ ಹೇಳಿಕೆಯೂ ತಪ್ಪು. ರಾಣಿ ಎಲಿಜಬೆತ್ II ಅವರನ್ನು ೧೯೬೯ ರಲ್ಲಿ ಇಂದಿರಾ ಗಾಂಧಿಗೆ ಆತಿಥ್ಯ ವಹಿಸಿದ್ದರು. ಆದರಿಂದ ನಾವು ಈ ವೈರಲ್ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ. 

ಅನುವಾದಿಸಿದವರು: ಅಂಕಿತಾ ಕುಲಕರ್ಣಿ 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.