Copy Link

ನಾವು ಸಾಮಯಿಕ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಹೊಂದಾಣಿಕೆಯಾಗುವ ವಿಷಯಗಳ ಮೇಲೆ ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸುತ್ತೇವೆ. ಟ್ರೆಂಡಿಂಗ್ ನಲ್ಲಿರುವ  ತಪ್ಪು ಮಾಹಿತಿಗಳಿಗೆ ಸಂಬಂಧಪಟ್ಟ ನಿರೂಪಣೆಯನ್ನು ಪರಿಶೀಲಿಸಿ ಅದರ ನೈಜ ಮಾಹಿತಿಯನ್ನು ವಿವರಿಸುತ್ತೇವೆ. 

ಹಾನಿಗೆ ಗಮನಾರ್ಹವಾಗಿ ಸಂಭಾವ್ಯವಿರುವ ಮಾಹಿತಿಗೆ ಸಂಬಂಧಪಟ್ಟ ವಾಸ್ತವಾಂಶವನ್ನು ಗುರುತಿಸಿ, ಸತ್ಯವಾದ ಮಾಹಿತಿಗೆ ಆದ್ಯತೆ ನೀಡಲು, ನಮ್ಮ ಫ್ಯಾಕ್ಟ್ ಚೆಕರ್ಸ್, ವಿಷಯ ವಿಶ್ಲೇಷಣೆಗಳನ್ನು, ಡೇಟಾಗಳನ್ನು, ಮತ್ತು ವಸ್ತುನಿಷ್ಠ ತೀರ್ಪುಗಳನ್ನು  ಬಳಸುತ್ತಾರೆ. ನಮ್ಮ ಅನುಭವಿತ ಸಂಪಾದಕೀಯ ತಂಡ ಮತ್ತು  ಫ್ಯಾಕ್ಟ್ ಚೆಕರ್ಸ್ ವೈಯಕ್ತಿಕವಾಗಿ ವಾಸ್ತವ ಮಾಹಿತಿಯ ಹರಡುವಿಕೆ ಮತ್ತು ಪರಿಣಾಮವನ್ನು ವಿಶ್ಲೇಷಿಸುತ್ತಾರೆ.

ಲಾಜಿಕಲಿ ಫ್ಯಾಕ್ಟ್ ಈ ಮಾನದಂಡಗಳ ಆಧಾರದಲ್ಲಿ ತನಿಖೆ ಮಾಡುತ್ತದೆ:

 • ಯಾವುದೇ ಒಂದು ವಿಷಯ/ಸುದ್ದಿ/ ಘಟನೆಗೆ ಸಂಬಂಧಪಟ್ಟ ಮಾಹಿತಿ ಸಾರ್ವಜನಿಕವಾಗಿ ಅಥವಾ ಸಾರ್ವಜನಿಕರು ಕಾಣಬಲ್ಲ ಮತ್ತು  ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ನೀಡಿದ ಹೇಳಿಕೆಯಾಗಿದ್ದರೆ,
 • ಒಂದು ಮಾಹಿತಿಯನ್ನು ಸಮಂಜಸ ಅಥವಾ ಅಸಮಂಜಸ, ಸರಿ ಅಥವಾ ತಪ್ಪು ಎಂದು ಸುಲಭವಾಗಿ ನಿರ್ಣಯಿಸಬಹುದಾದರೆ.
 • ಸಾರ್ವಜನಿಕವಾಗಿ ಲಭ್ಯವಾಗುವ ಸಮಂಜಸವಾದ ಮತ್ತು ಸಾಮಾನ್ಯವಾದ ಸಾಕ್ಷಿಗಳ ಮಾನದಂಡಗಳ ಆಧಾರದ ಮೇಲೆ ಇದನ್ನುನಿರ್ಣಯಿಸಬಹುದಾದರೆ.
 • ಲಾಜಿಕಲಿ ಫ್ಯಾಕ್ಟ್ಸ್ ನ ಸಮರ್ಥನೆಗಳು ಅಥವಾ ವಾಕ್ಯಗಳು ಸತ್ಯ ಪರಿಶೀಲನೆಯಿಂದ ಕೂಡಿರುತ್ತವೆ. ಅದನ್ನು ಸಮರ್ಥನೆಗಳಾಗಿ ಅರ್ಥೈಸಬಹುದು. ಸಮರ್ಥನೆ ಎಂದರೆ, ಯಾರಾದರೂ, ಏನನ್ನಾದರೂ ನಿಜವೆಂದು ನಂಬುವ ಗುರಿಯನ್ನು ಹೊಂದಿರುವ ವಾಕ್ಯವಾಗಿರುತ್ತದೆ.

ಮೂಲ ಹೇಳಿಕೆಯನ್ನು ಯಾರು ಮಾಡಿದ್ದಾರೆ ಅಥವಾ ಅದು ಯಾವ ರಾಜಕೀಯ ವರ್ಣಪಟಲ ಮೇಲೆ ಬೀಳುತ್ತದೆ ಎಂಬುದನ್ನು ಲೆಕ್ಕಿಸದೆ ಅದೇ ರೀತಿಯ ಕಠಿಣ ಮಾನದಂಡಗಳನ್ನು ಬಳಸಿಕೊಂಡು ಎಲ್ಲಾ ಸಂಭಾವ್ಯ ಪುರಾವೆಗಳನ್ನು ಮೌಲ್ಯಮಾಪನ ಮಾಡಲು ತಂಡವು ಬದ್ಧವಾಗಿದೆ. ತಂಡವು ರಾಜಕೀಯ ವರ್ಣಪಟಲದಲ್ಲಿರುವ ಎಲ್ಲಾ ಹೇಳಿಕೆಗಳನ್ನು ಪರಿಶೀಲಿಸುತ್ತದೆ, ಆದರೆ ಇದು ಪ್ರತಿ ಪಕ್ಷದ ಬಗ್ಗೆ ಸಮಾನ ಸಂಖ್ಯೆಯ ಹೇಳಿಕೆಗಳನ್ನು ವಾಸ್ತವವಾಗಿ ಪರಿಶೀಲಿಸುವುದು ಎಂದರ್ಥವಲ್ಲ.

ಮಾನ್ಯವಾದ ವಿಷಯವನ್ನು ನಾವು ಕೆಲವೊಮ್ಮೆ ನಮ್ಮ ಯಾವುದೇ ಪುರಾವೆಗಳಿಂದ ಇತ್ಯರ್ಥಪಡಿಸಲು ಆಗುವುದಿಲ್ಲ.  ಭವಿಷ್ಯದಲ್ಲೂ ಇದು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ಇವು, ಐತಿಹಾಸಿಕ ವಿಷಯಗಳಲ್ಲಿ ಸಂಪೂರ್ಣ ಆಧಾರವಿಲ್ಲದಿರುವ ವಿಷಯಗಳಾಗಿರುತ್ತವೆ ಮತ್ತು ಮೂಲಭೂತವಾಗಿ ನೈತಿಕ ಮತ್ತು ಧಾರ್ಮಿಕ ವಿಷಯಗಳು ಯಾವುದೇ ಪುರಾವೆಗಳನ್ನು ಹೊಂದಿರುವುದಿಲ್ಲ. ಇಂತಹ ಮಾನ್ಯವಾದ ವಿಷಯಗಳನ್ನು  ಪ್ರವೇಶಿಸುವುದು ಬೇಜವಾಬ್ದಾರಿ ಎಂದು ನಂಬಿರುವ ನಾವು ಇವುಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. 

ನಮಗೆ ಡೋಮೆನ್ ಪರಿಣಿತಿಯು ಸಿಗದಿದ್ದಲ್ಲಿ ಅಥವಾ ಇಂತಹ ಮಾನ್ಯವಾದ ವಿಷಯಗಳ ಸಂಬಂಧ ನಿರ್ಣಯಿಸುವ ಸಾಮರ್ಥ್ಯ ಇಲ್ಲದಿದ್ದಲ್ಲಿ  ಅಂತಹ ವಿಷಯಗಳ ಬಗ್ಗೆ ಖಂಡನೆಯನ್ನು ಪ್ರಕಟಿಸಲು ಸ್ಪಷ್ಟವಾಗಿ ಸಾಧ್ಯವಿಲ್ಲ. ನಾವು ಯಾವುದೇ ಟ್ರೋಲ್ ನಲ್ಲಿ ಮತ್ತು ಖಂಡನೆಯನ್ನು ಪ್ರಕಟಿಸಲು ಸ್ಪಷ್ಟವಾದ ಪತ್ರಿಕೋದ್ಯಮದ ಪ್ರಕರಣವಿಲ್ಲದಿದ್ದರೆ ಅದರಲ್ಲಿ ತೊಡಗಿಸಿಕೊಳ್ಳುವುದು, ಒಳಗಾಗುವುದು ಮತ್ತು ಹಾನಿಕಾರಕ ಮೈತ್ರಿಗಳೊಂದಿಗೆ ಮನರಂಜನೆಗೆ ಆಸ್ಪಾದ ನೀಡುವುದಿಲ್ಲ.

ಫ್ಯಾಕ್ಟ್-ಚೆಕ್ ಮಾಡಬಹುದಾದ ಹೇಳಿಕೆಗಳನ್ನು ನಮ್ಮ ತಂಡದೊಂದಿಗೆ ಹಂಚಿಕೊಳ್ಳಲು ನಾವು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ. ಈ ಫಾರ್ಮ್ ಅನ್ನು ಬಳಸಿಕೊಂಡು ನಿಮ್ಮ ವಿನಂತಿಯನ್ನು ನೀವು ಕಳುಹಿಸಬಹುದು ಮತ್ತು ತಂಡವು ಈ ಮೇಲೆ ವಿವರಿಸಿದ ಮಾನದಂಡಗಳನ್ನು, ಹೇಳಿಕೆಯು ಪೂರೈಸುತ್ತದೆಯೇ ಎಂದು ಪರಿಶೀಲಿಸಿ ಫ್ಯಾಕ್ಟ್-ಚೆಕ್ ಅನ್ನು ನಡೆಸಲಾಗುವುದು. ಇದಲ್ಲದೆ, ನಾವು ಕೆಲವೊಮ್ಮೆ ನಮ್ಮ ಸಾಮಾಜಿಕ ಮಾಧ್ಯಮ ಚಾನಲ್‌ಗಳ ಮೂಲಕವೂ ಸಹ ಟಿಪ್-ಆಫ್‌ಗಳು ಮತ್ತು ಫ್ಯಾಕ್ಟ್-ಚೆಕ್ ನ ವಿನಂತಿಗಳನ್ನು ಸ್ವೀಕರಿಸುತ್ತೇವೆ.

Copy Link

ಮೊದಲು, ವಿಷಯ, ಘಟನೆಯ ಅಥವಾ ಹೇಳಿಕೆಗಳ ಮೂಲವನ್ನು ಪತ್ತೆ ಹಚ್ಚುತ್ತೇವೆ. ನಂತರ, ನಾವು ಅದನ್ನು ಡಿಬಂಕ್ ಮಾಡಲು ಮಾಹಿತಿಯ ಅತ್ಯುತ್ತಮ ಪ್ರಾಥಮಿಕ ಮೂಲವನ್ನು (ಫಸ್ಟ್ ಹ್ಯಾಂಡ್ ಮಾಹಿತಿ ) ಹುಡುಕಲು ಮತ್ತು ಉಲ್ಲೇಖಿಸಲು ಪ್ರಯತ್ನಿಸುತ್ತೇವೆ.

ಒಮ್ಮೆ ನಾವು ಪುರಾವೆಗಳನ್ನು ಕಂಡುಕೊಂಡ ಮೇಲೆ, ಹೇಳಿಕೆಯು ಎಷ್ಟು ವಿಶ್ವಾಸಾರ್ಹವಾಗಿದೆ ಎಂದು ನಾವು ನಿರ್ಣಯಿಸುತ್ತೇವೆ ಮತ್ತು ನಮ್ಮ ಸಂಶೋಧನೆಗಳ ಆಧಾರದ ಮೇಲೆ ವರದಿಯನ್ನು ರಚಿಸುತ್ತೇವೆ. ನಮ್ಮ ಪುರಾವೆಗಳನ್ನು ಹುಡುಕಲು ನಾವು ಅನುಸರಿಸಿದ ಮಾರ್ಗವನ್ನೂ ಸಹ ನಾವು ವಿವರಿಸುತ್ತೇವೆ. ನಮ್ಮ ಫ್ಯಾಕ್ಟ್ ಚೆಕ್ ವರದಿಗಳನ್ನು ನಾವು ಹೀಗೆ ಬರೆಯುತ್ತೇವೆ. ಸಂಪಾದಕೀಯ ವಿಮರ್ಶೆಯ ಎಲ್ಲಾ ಹಂತಗಳನ್ನು ಒಮ್ಮೆ ಅದು ದಾಟಿದ ನಂತರ, ನಾವು ನಮ್ಮ ಸಂಶೋಧನೆಗಳನ್ನು ಪ್ರಕಟಿಸುತ್ತೇವೆ.

ಲಾಜಿಕಲಿ ಫ್ಯಾಕ್ಟ್ಸ್ ನ ಸಿಬ್ಬಂದಿಯು ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸಲು ಕನಿಷ್ಠ ಎರಡು   ಮೂಲಗಳು ಹುಡುಕಬೇಕು. ಅವುಗಳು ಹೀಗಿರಬಹುದು, ಆದರೆ ಸಂಖ್ಯೆ ಸೀಮಿತವಾಗಿಲ್ಲ:

 • ಮೊದಲನೇಯದಾಗಿ ಯಾವುದೇ ವಿಷಯ, ಸುದ್ದಿ ಅಥವಾ ಘಟನೆಗೆ ಸಂಬಂಧಪಟ್ಟಂತೆ ತಜ್ಞರ, ಪ್ರತ್ಯಕ್ಷದರ್ಶಿಗಳ, ಅಧಿಕಾರಿಗಳ ಅಥವಾ ಇಲಾಖೆ ಅಥವಾ ಪ್ರಾಧಿಕಾರಗಳಿಂದ ಕೋಟ್ ಗಳನ್ನು ಪಡೆದು ಉಲ್ಲೇಖಿಸುವುದು. 
 • ಶೈಕ್ಷಣಿಕ ನಿಯತಕಾಲಿಕೆಗಳು ಮತ್ತು ರಿಸರ್ಚ್ ಪೇಪರ್ಸ್ 
 • ಪ್ರತಿಷ್ಠಿತ ಮತ್ತು ಸ್ಥಾಪಿತ ಸುದ್ದಿ ಮೂಲಗಳ ವರದಿಗಳು. 
 • ರಿವರ್ಸ್ ಇಮೇಜ್, ಕೀಫ್ರೇಮ್ಸ್ ವಿಶ್ಲೇಷಣೆ ಮತ್ತು ಜಿಯೋಲೊಕೇಷನ್ ನಂತಹ ತಂತ್ರಗಳನ್ನು ಒಳಗೊಂಡಂತೆ ಓಪನ್ ಸೋರ್ಸ್ ಇಂಟೆಲಿಜೆನ್ಸ್‌ (OSINT) ಬಳಕೆ ಮಾಡಿಕೊಳ್ಳಬಹುದುದು.
 • ಸೂಕ್ತ ಮತ್ತು ಸಾಧ್ಯವಿರುವಲ್ಲೆಲ್ಲಾ, ಪ್ರಕಟಣೆಯ ಮೊದಲು ತಪ್ಪಾದ ಹೇಳಿಕೆ ಮತ್ತು/ಅಥವಾ ಆರೋಪಗಳ ವಿಷಯದ ಮೂಲವಾಗಿರುವ ವ್ಯಕ್ತಿ ಹಾಗು ಸಂಸ್ಥೆಗಳನ್ನು ನಾವು ಸಂಪರ್ಕಿಸುತ್ತೇವೆ ಮತ್ತು ಅವರಿಗೆ ಪ್ರತ್ಯುತ್ತರ ನೀಡುವ ಹಕ್ಕನ್ನು ನಾವು ನೀಡುತ್ತೇವೆ.

ಫ್ಯಾಕ್ಟ್ ಚೆಕರ್ಸ್ ಒಂದು ಹೇಳಿಕೆಯನ್ನು ಗುರುತಿಸಿದ ನಂತರ, ಅದನ್ನು ಉಪ ಸಂಪಾದಕರು, ಸಹಾಯಕ ಸಂಪಾದಕರು ಅಥವಾ ಪ್ರಾದೇಶಿಕ ಸಂಪಾದಕೀಯ ಮುಖ್ಯಸ್ಥರು ಅನುಮೋದಿಸುತ್ತಾರೆ. ಫ್ಯಾಕ್ಟ್ ಚೆಕ್ ನ ವರದಿಯ ಕರಡು ಪೂರ್ಣಗೊಂಡ ನಂತರ, ನಮ್ಮ ಉಪ ಸಂಪಾದಕರೊಬ್ಬರು ಸಂಪಾದಕೀಯ ಕಠಿಣತೆಗಾಗಿ ವರದಿಯನ್ನು ಪರಿಶೀಲಿಸುತ್ತಾರೆ (ಸಾಕ್ಷ್ಯ, ರಚನೆ, ವಾದ, ತಜ್ಞರ ಹೇಳಿಕೆ, ಪ್ರತ್ಯಕ್ಷದರ್ಶಿಗಳ, ಮಧ್ಯಸ್ಥಗಾರರ ಮತ್ತು ಅಧಿಕಾರಿಗಳ ಹೇಳಿಕೆಗಳು) ವರದಿಯ ಮೊದಲ ವಿಮರ್ಶೆಯಾದ ನಂರತ,  ವರದಿಯು ಪ್ರತಿಷ್ಠಿತ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆಯೇ?, ನಿಖರವಾಗಿದೆಯೇ?, ಯಾವುದೇ ವ್ಯಾಕರಣ ದೋಷಗಳು ಇಲ್ಲ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ಇದು ಸಹಾಯಕ ಸಂಪಾದಕರ ಜವಾಬ್ದಾರಿಯಾಗಿರುತ್ತದೆ. ಸಹಾಯಕ ಸಂಪಾದಕರ ಮೌಲ್ಯಮಾಪನದ ನಂತರ, ಮಾಹಿತಿ ಮೂಲ ಮತ್ತು ಸಂಪಾದಕೀಯದ ಯಾವುದೇ ನಿರ್ಣಯಗಳು ಬಾಕಿ ಇಲ್ಲ ಎಂದು ಖಾತ್ರಿಯಾದ ನಂತರ ಪ್ರಕಟಿಸಲಾಗುತ್ತದೆ. ಇದಕ್ಕೂ ಮೊದಲು ತೊಂದರೆ ಕಂಡುಬಂದಲ್ಲಿ  ಸಂಪಾದಕೀಯ ತಂಡದ ಫ್ಯಾಕ್ಟ್ ಚೆಕರ್ಸ್ ಮತ್ತು  ಹಿರಿಯ ಸದಸ್ಯರಿಗೆ ತಿಳಿಸಲಾಗುತ್ತದೆ.

Copy Link

ಲಭ್ಯವಿರುವ ಕೆಲವು ಪುರಾವೆಗಳು ದುರ್ಬಲವಾದ ನಿರೂಪಣೆಗಳೊಂದಿಗೆ ಸಮರ್ಥಿಸಲ್ಪಟ್ಟಿರುತ್ತವೆ ಅಥವಾ ಸಂಭಾವ್ಯವಾಗಿ  ತಪ್ಪು ಮಾಹಿತಿಯಕುಶಲತೆಯನ್ನು ಹೊಂದಿರುತ್ತವೆ ಅಂತಹ ಮೂಲಗಳಿಂದ ವಿಷಯ, ಸುದ್ದಿ ಮತ್ತು ಪ್ರಕರಣಗಳನ್ನು ಸ್ವೀಕರಿಸುವುದು ಸಹಕಾರಿಯಲ್ಲ. ಇಂತಹ ಹಾನಿಕಾರಕ ಮೂಲಗಳ ಮಾಹಿತಿಯು ಸತ್ಯಕ್ಕಿಂತ ಸುಳ್ಳನ್ನು ನಂಬಿಸಲು ಉತ್ತೇಜಿಸುತ್ತವೆ. ಹಾಗಾಗಿ, ನಾವು

ಒದಗಿಸುವ ಮಾಹಿತಿ ಹೆಚ್ಚಾಗಿ ಸಾರ್ವಜನಿಕರಿಗೆ  ಲಭ್ಯವಿರುವ ಮತ್ತು ಅಧಿಕೃತ ಮೂಲಗಳ ಮಾಹಿತಿಯ ಮೇಲೆ ಅವಲಂಬಿತವಾಗಿದೆ. ವಿಶ್ವಾಸಾರ್ಹ ಮೂಲಗಳು ನಿಮಗೆ ಹೆಚ್ಚು ನಿಖರವಾದ ಮತ್ತು ಸಂಪೂರ್ಣ ಮಾಹಿತಿಯನ್ನು ನೀಡುವ ಆಸಕ್ತಿ ಮತ್ತು ಒಲವು ಹೊಂದಿರುತ್ತವೆCopy Link

ನಮ್ಮ ಫ್ಯಾಕ್ಟ್- ಚೆಕ್ ಗಳಿಗೆ ನಾವು ಆರು ವಿಭಿನ್ನ ರೇಟಿಂಗ್‌ಗಳನ್ನು ಅನ್ವಯಿಸುತ್ತೇವೆ. ಅವು ನಮ್ಮ ಸಂಶೋಧನೆಗಳ ತ್ವರಿತ ಸಾರಾಂಶವನ್ನು ಮತ್ತು ಹೇಳಿಕೆಗಳ ವಿಶ್ವಾಸಾರ್ಹತೆಯ ಕುರಿತು ತೀರ್ಪನ್ನು ಒದಗಿಸುವ ಗುರಿಯನ್ನು ಹೊಂದಿವೆ.

 • ನಿಜ- ಲಭ್ಯವಿರುವ ಪುರಾವೆಗಳನ್ನು ಆಧರಿಸಿ ಈ ವಿಷಯ ಅಥವಾ ಮಾಹಿತಿ ಸಂಪೂರ್ಣವಾಗಿ ಪರಿಶೀಲಿಸ್ಪಟ್ಟಿದೆ ಮತ್ತು ಸಮರ್ಥಿಸಲ್ಪಟ್ಟಿದೆ ಹಾಗೂ ಸಮಸ್ಯೆಯ ಬಿಂದುವನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ ಎಂಬುದು.
 • ಭಾಗಶಃ ನಿಜ- ಒಂದು ಮಾಹಿತಿ ಆಧಾರರಹಿತವಾಗಿ ತಪ್ಪುದಾರಿಗೆಳೆಯಬಹುದಾದರೂ ಸಮಸ್ಯೆಯ ಬಿಂದುವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ ಎಂಬುದು.
 • ಸಂದರ್ಭದಿಂದ ಹೊರಗಿಡಲಾಗಿದೆ- ಈ ವಿಷಯದಲ್ಲಿರುವ ಅಂಶಗಳು ಲಭ್ಯವಿರುವ ಪುರಾವೆಗಳ ಮೂಲಕ ಸಮರ್ಥಿಸಿರಬಹುದಾದರೂ, ಸಮಸ್ಯೆಯ ಬಿಂದುವನ್ನು ಅರ್ಥಮಾಡಿಕೊಳ್ಳಲು ಈ ಮಾಹಿತಿ ಹೆಚ್ಚು ಸಹಕಾರಿಯಾಗಿಲ್ಲ ಎಂಬುದು.
 • ತಪ್ಪು- ಒಂದು ವಿಷಯ ಅಥವಾ ಮಾಹಿತಿ ಲಭ್ಯವಿರುವ ಎಲ್ಲ ಪುರಾವೆಗಳಿಂದಲೂ ಸಂಪೂರ್ಣವಾಗಿ ಅಸಮರ್ಥನೀಯವಾಗಿದೆ ಎಂಬುದು.
 • ಫೇಕ್- ಲಭ್ಯವಿರುವ ಪುರಾವೆಗಳಿಂದ ಹೇಳಿಕೆಯು ಸಂಪೂರ್ಣವಾಗಿ ಅಸಮರ್ಥನೀಯವಾಗಿದೆ ಮತ್ತು ಚಿತ್ರ/ ವೀಡಿಯೋವನ್ನು ನಿರ್ಮಿಸಲಾಗಿದೆ.
 • ಪರಿಶೀಲಿಸಲಾಗುವುದಿಲ್ಲ- ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ಈ ಮಾಹಿತಿಯನ್ನು ಪರಿಶೀಲಿಸಲಾಗುವುದಿಲ್ಲ ಎಂಬುದು.
Copy Link

ತಪ್ಪು ಮಾಹಿತಿಗೆ ಸಂಬಂಧಿಸಿದ ಹಾನಿಗಳನ್ನು ಗುರುತಿಸುವುದು, ಕಡಿಮೆ ಮಾಡುವುದು ಮತ್ತು ತೆಗೆದು ಹಾಕುವುದು ನಮ್ಮ ಉದ್ದೇಶವಾಗಿದೆ. ವಾಕ್ ಸ್ವಾತಂತ್ರ್ಯವನ್ನು ಬೆಂಬಲಿಸುವ ನಾವು, ಸಾಮಾಜಿಕ ಮಾಧ್ಯಮಗಳಲ್ಲಿ (ಆನ್‌ಲೈನ್‌ಗಳಲ್ಲಿ) ವೈಯಕ್ತಿಕ ಅಭಿವ್ಯಕ್ತಿಗೆ ಇರುವ ನಿರ್ಬಂಧಗಳನ್ನು (ಸೆನ್ಸಾರ್) ವಿರೋಧಿಸುತ್ತೇವೆ. ವಂಚಿಸುವ, ಮೋಸಗೊಳಿಸುವ ಸಾಮಾಜಿಕ ಮಾಧ್ಯಮಗಳ ಚರ್ಚೆಗಳು ವೈಯಕ್ತಿಕ ಮತ್ತು ಸಾಮಾಜಿಕವಾಗಿ ಹಾನಿಯನ್ನು ಉಂಟು ಮಾಡಿದರೆ, ಅದನ್ನು ಗುರುತಿಸುವ ಮತ್ತು ಪರಿಹರಿಸುವ ಅಗತ್ಯವಿದೆ ಎಂದು ನಂಬಿದ್ದೇವೆ. ರಾಜಕೀಯವಾಗಿ ತೊಡಗಿಸಿಕೊಳ್ಳುವುದು, ಪ್ರಾಮಾಣಿಕತೆ, ಸಮಗ್ರತೆಯೊಂದಿಗಿನ ಚರ್ಚೆ, ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ಸ್ನೇಹಿತರೊಂದಿಗೆ, ಪ್ರತಿಪಕ್ಷಗಳಿಂದ ಸೌಜನ್ಯ, ವೈಚಾರಿಕವಾದ ಗೌರವದ ಅತ್ಯುನ್ನತ ಮಾನದಂಡವನ್ನು ಪೂರ್ವಾಗ್ರಹ ಪೀಡಿತರಾಗದೆ ಬದಕುವುದು ಸಾಧ್ಯ ಮತ್ತು ಅಪೇಕ್ಷಣೀಯವಾಗಿದೆ. ಇದು ಯಾವ ವಿಷಯ, ಮಾಹಿತಿ ಸತ್ಯ ಮತ್ತು ವಿವಾದಾತೀತವಾಗಿವೆ ಎಂಬುದನ್ನು ತೋರಿಸಲು ಪಕ್ಷಾತೀತ ಮತ್ತು ನಿಷ್ಪಕ್ಷಪಾತ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಇದು ಉತ್ತಮ ಮಾರ್ಗ ಎಂದು ನಂಬಿದ್ದೇವೆ.

ಸತ್ಯದ ಆಧಾರದ ಮೇಲೆ ಉತ್ತಮ ಸ್ಥಾನವನ್ನು ಹೊಂದುವುದು. ಸತ್ಯದ ಪರವಾದ ಮಾಹಿತಿಯ ಆಧಾರದ ಮೇಲೆ ವಾದಿಸಲು ಎಲ್ಲರಿಗೂ ಅಗತ್ಯವಾದ ಸಂಪನ್ಮೂಲವನ್ನು ಒದಗಿಸುವುದು ಹಾಗೂ ಸತ್ಯದ ಆಧಾರದ ಮೇಲೆ ಮಂಡನೆಯಾಗುವ ವಾದವನ್ನು ವಿತರಿಸುವ ಬದ್ಧತೆಯನ್ನು ದುರ್ಬಲಗೊಳಿಸಬಾರದು ಎಂಬ ಅಂಶಗಳ ಮೇಲೆ ನಂಬಿಕೆ ಹೊಂದಿದ್ದೇವೆ.

ಲಾಜಿಕಲಿ ಫ್ಯಾಕ್ಟ್ಸ್‌ನ ಸಿಬ್ಬಂದಿಗಳಾದ ನಾವು, ಯಾವುದು ನಿಜ ಮತ್ತು ಯಾವುದು ಸುಳ್ಳು ಎಂಬುದನ್ನು ಗುರುತಿಸುವುದರಲ್ಲಿ ಹಾಗೂ ವಾಸ್ತವವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತೇವೆ. ಇದನ್ನು ರಾಜಕೀಯ ವಲಯ ನಂಬಬೇಕು. ಅಲ್ಲದೇ, ನಾಗರಿಕನಾದ ನಂತರ ಒಂದಲ್ಲ ಒಂದು ವಿಧದಲ್ಲಿ ರಾಜಕೀಯದಲ್ಲಿ ತೊಡಗಿಕೊಳ್ಳುವುದು ಕರ್ತವ್ಯವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ.

ನಮ್ಮದು ಸ್ವತಂತ್ರವಾದ ಸತ್ಯ ಪರಿಶೀಲನಾ ಸಂಸ್ಥೆಯಾಗಿದ್ದು, ವೈಯಕ್ತಿಕ ರಾಜಕೀಯ ಪಕ್ಷಪಾತ ಮತ್ತು ಹಿತಾಸಕ್ತಿಗಳನ್ನು ಮೀರಿದ ವಿಶಾಲವಾದ ರಾಜಕೀಯ ಮತ್ತು ನೈತಿಕ ಪರಿಗಣನೆಯಿಂದ ಪ್ರೇರಿತವಾಗಿದೆ. ನಮ್ಮ ವೈಯಕ್ತಿಕ ರಾಜಕೀಯ ದೃಷ್ಟಿಕೋನಗಳು ಎಂದಿಗೂ ಕೆಲಸದ ಮೇಲೆ ಪ್ರಭಾವ ಬೀರುವುದಿಲ್ಲ. ಲಾಜಿಕಲಿ ಫ್ಯಾಕ್ಟ್‌ನ  ಸ್ಥಾನವನ್ನು, ಪಕ್ಷಪಾತವಿಲ್ಲದ ಕೆಲಸವನ್ನು ದುರ್ಬಲಗೊಳಿಸುವ ರೀತಿಯಲ್ಲಿ ವೈಯಕ್ತಿಕವಾಗಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸಂಸ್ಥೆಯ ಎಲ್ಲ ಉದ್ಯೋಗಿಗಳು ಪಕ್ಷಾತೀತ ನೀತಿಗೆ ಬದ್ಧರಾಗಿರುತ್ತಾರೆ.

Copy Link

ನಮ್ಮ ಷೇರುದಾರರು, ಗ್ರಾಹಕರು ಮತ್ತು ಪೋಷಕ ಕಂಪನಿಯಾದ ದಿ ಲಾಜಿಕಲ್ ಲಿಮಿಟೆಡ್ ನಮ್ಮ ಫ್ಯಾಕ್ಟ್ ಚೆಕ್ ಕೆಲಸ ಮೇಲೆ ಯಾವುದೇ ರೀತಿಯಲ್ಲಿ ನಿಯಂತ್ರಣವನ್ನು ಹೊಂದಿಲ್ಲ. ಅಥವಾ ಅವರು ನಮ್ಮ ಸಂಪಾದಕೀಯ ನಿರ್ಧಾರದಲ್ಲಿ ಯಾವುದೇ ಹೇಳಿಕೆಯನ್ನು ನೀಡಲು ಸಾಧ್ಯವಿಲ್ಲ .ಪ್ರಾದೇಶಿಕ ಸಂಪಾದಕೀಯ ನಾಯಕರು ಸಂಪಾದಕೀಯ ಕಠಿಣತೆ, ಗುಣಮಟ್ಟ ಮತ್ತು ಸ್ಥಿರತೆಗೆ ಜವಾಬ್ದಾರರಾಗಿರುತ್ತಾರೆ.ಅಂತಿಮವಾಗಿ ದಿ ಗ್ಲೋಬಲ್ ಹೆಡ್ ಆಫ್ ಎಡಿಟೋರಿಯಲ್ ಒಪೆರಷನ್ಸ್ ಆದ  ಜಸ್ಕಿರತ್ ಸಿಂಗ್ ಬಾವಾ ಜಾಗತಿಕ ಸಂಪಾದಕೀಯ ತಂಡದಾದ್ಯಂತ ಸಂಪಾದಕೀಯ ನೀತಿ ಮತ್ತು ಮಾನದಂಡಗಳಿಗೆ ಅಂತಿಮವಾಗಿ ಜವಾಬ್ದಾರನಾಗಿರುತ್ತಾರೆ .  ಲಾಜಿಕಲಿ ಫ್ಯಾಕ್ಟ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ಬೇಬಾರ್ಸ್ ಓರ್ಸೆಕ್ ಅವರು ಕಾರ್ಯಾಚರಣೆ ಮೇಲ್ವಿಚಾರಣೆಯ ಉಸ್ತುವಾರಿಯನ್ನು ವಹಿಸುವುದಲ್ಲದೇ, ವ್ಯವಹಾರದ ಪಿ ಅಂಡ್ ಎಲ್ ಅನ್ನು ಗ್ರಾಹಕರು ಮತ್ತು ಮಧ್ಯಸ್ಥಗಾರರೊಂದಿಗೆ ಖಾತೆಗಳನ್ನು ನಿರ್ವಹಿಸುತ್ತಾರೆ. ಇದರ ಮೇಲೆ ಹೆಚ್ಚಿನ ಮಾಹಿತಿಯನ್ನು  'ತಂಡದ ಫೇಜ್' ಮೇಲೆ ಕಾಣಬಹುದು.

ಗ್ರಾಹಕರೊಡನೆ ಮತ್ತು ಫ್ಯಾಕ್ಟ್ ಚೆಕ್ ಗೆ  ಸಂಬಂಧಿಸಿದಂತೆ ವ್ಯವಹರಿಸುವಾಗ ನಮ್ಮ ಸಿಬ್ಬಂದಿಯು ಉಪ ಮತ್ತು ಸಹಾಯಕ ಸಂಪಾದಕರ ಮೇಲ್ವಿಚಾರಣೆಯಲ್ಲಿ ಮೂರು ಹಂತದ ಸಂರಚನೆಯಲ್ಲಿ ಕೆಲಸ ಮಾಡುತ್ತಾರೆ.

ಯಾವುದೇ ಸಂಭಾವ್ಯ ವಿವಾದಾತ್ಮಕ ಸಂಪಾದಕೀಯ ನಿರ್ಧಾರಗಳು, ದೂರುಗಳು ಅಥವಾ ಅಗತ್ಯ ತಿದ್ದುಪಡಿಗಳು ರೀಜನಲ್ ಲೀಡ್ಸ್ ಅವರ ನೇರ ಹಸ್ತಕ್ಷೇಪವನ್ನು ಒಳಗೊಂಡಿರುತ್ತವೆ, ಅವರು ಗ್ಲೋಬಲ್ ಹೆಡ್ ಆಫ್ ಎಡಿಟೋರಿಯಲ್ ಒಪೆರಷನ್ಸ್ ಅವರಿಗೆ  ವರದಿ ಮಾಡುತ್ತಾರೆ.

ಈ ನಿಟ್ಟಿನಲ್ಲಿ ನೀತಿ ನಿರ್ವಾಹಕರು ತಂಡ ಮುಖ್ಯಸ್ಥರಿಗೆ ಸಹಾಯಕ ಮಾಡುತ್ತಾರೆ.  ಫ್ಯಾಕ್ಟ್ ಚೆಕ್ ತಂಡವು ಅತ್ಯುತ್ತಮ ಮಾನದಂಡಗಳನ್ನು ಹೊಂದಿದ್ದು, ಜಾಗತಿಕ ಸತ್ಯ ಪರಿಶೀಲನಾ ಸಮುದಾಯದಿಂದ (the global fact-checking community) ಅತ್ಯುತ್ತಮ ರೂಢಿಗಳು ಮತ್ತು ನೀತಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಬೇಕು.

Copy Link

ವಿವಿಧ ವಿಷಯಗಳಿಗೆ ಅಥವಾ ಮಾಹಿತಿಗಳಿಗೆ ಸಂಬಂಧಪಟ್ಟಂತೆ ವಿವಿಧ ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ಸಮರ್ಥಿಸಿಕೊಳ್ಳಬಹುದು. ಉದಾಹರಣೆಗೆ ಪ್ರಾಯೋಗಿಕ ವಿಷಯಗಳಿಗೆ ಸಂಬಂಧಪಟ್ಟಂತೆ ವೈಜ್ಞಾನಿಕ  ಸಂಶೋಧನೆಗಳಿಂದ, ಆರ್ಥಿಕ ವಲಯದ ಮುನ್ನೋಟಗಳಿಗೆ ಸಂಬಂಧಪಟ್ಟಂತೆ ಪರಿಣಿತ, ಹಣಕಾಸು ಮತ್ತು ವ್ಯವಹಾರಿಕ ಸಂಸ್ಥೆಗಳು ಅಥವಾ ತಜ್ಞರಿಂದ, ರಾಜಕೀಯ ವಿಷಯಗಳ ಕುರಿತು ಮತದಾನದ ಅಂಕಿ-ಅಂಶಗಳು ಅಥವಾ ರಾಜಕೀಯ ತತ್ವ ಮತ್ತು ಸಿದ್ದಾಂತಗಳ ಮೂಲಕ ವಿಷಯ  ಸಮರ್ಥನೆ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲದೇ, ಇನ್ನು ಅನೇಕ ವಿಧಾನಗಳ ಮೂಲಕ ವಿಷಯಗಳಿಗೆ ಸಂಬಂಧಿಸಿದಂತೆ ಪುರಾವೆಗಳನ್ನು, ಮೂಲಗಳನ್ನು ಕಂಡುಕೊಳ್ಳಬಹುದಾಗಿದ್ದು, ಇದರಿಂದಾಗಿ ಗುಣಮಟ್ಟದ ಮಾಹಿತಿ ಒದಗಿಸಲು ಅನುವಾಗುತ್ತದೆ. 

ನಾವು ಆಧರಿಸುವ ಮೂಲಗಳಿಗೆ ಕ್ರಮಾನುಗುಣವಾಗಿ ರೇಟಿಂಗ್ ನೀಡುತ್ತೇವೆ, ಅದರಲ್ಲಿ, ನಾವು ಹೈ ರೇಟ್ ಮಾಡಲಾದ ಮೂಲಗಳಿಗೆ ಆದ್ಯತೆ ನೀಡುತ್ತೇವೆ. ಅದರಲ್ಲೂ ನಾವು ಪ್ರಾಥಮಿಕ ಮೂಲಗಳಿಗೆ ಹೆಚ್ಚು ಆದ್ಯತೆ ನೀಡುತ್ತೇವೆ. ದ್ವಿತೀಯ ಮೂಲಗಳ ಮಾಹಿತಿ ಉಲ್ಲೇಖಿಸುವಾಗ ಇದು ವಿಶ್ವಾಸಾರ್ಹವೇ,  ನಂಬಲು ಸಾಧ್ಯವೇ ಅಥವಾ ಈ ವರದಿಯಲ್ಲಿ ಯಾವುದಾದರೂ ಹಿತಾಸಕ್ತಿ ಇದೆಯೇ ಎಂದು ಸೂಕ್ಷ್ಮವಾಗಿ ಪರೀಕ್ಷಿಸಿ ಅದನ್ನ ನಮ್ಮ ರಿಪೋರ್ಟ್ ನಲ್ಲಿ ಬರೆಯುತ್ತೇವೆ .

ಮೂಲದ ಗುಣಮಟ್ಟವನ್ನು ನಿರ್ಧಸರಿಸುವ ಮುನ್ನ, "ನಮ್ಮನ್ನು ದಾರಿತಪ್ಪಿಸುವ ಮೂಲಕ ಅವರು ಎಷ್ಟು ಗಳಿಸುತ್ತಾರೆ ಅಥವಾ ಕಳೆದುಕೊಳ್ಳುತ್ತಾರೆ?" ಎಂದು ಪರಿಶೀಲಿಸುವುದು ನಮ್ಮ ಮುಖ್ಯ ನಿಯಮವಾಗಿದೆ. ಹೇಳಿಕೆಯ ತೀರ್ಪನ್ನು ದೃಢೀಕರಿಸಲು ನಮಗೆ ಲಭ್ಯವಿರುವ ಅತ್ಯುನ್ನತ ಗುಣಮಟ್ಟದ ಕನಿಷ್ಠ ಎರಡು ಮೂಲಗಳ ಅಗತ್ಯವಿದೆ.

 • ತಜ್ಞರ ಒಮ್ಮತ: ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಾನ್ವಿತ ಸಂಸ್ಥೆಗಳು ಮತ್ತು ಸಂಬಂಧಿತ ಕ್ಷೇತ್ರದಲ್ಲಿನ ತಜ್ಞರ, ನಾವು ಪ್ರಕಟಿಸಿರುವ ಸಂಶೋಧನೆ ಅಥವಾ ಅಧಿಕೃತ ಹೇಳಿಕೆಯಲ್ಲಿ, ನಮ್ಮ ತೀರ್ಪಿನ ಆಧಾರವನ್ನು ನಿರ್ವಿವಾದವೆಂದು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ.
 • ಪೀರ್ ರಿವ್ಯೂಡ್ ಸಂಶೋಧನೆ: ಪ್ರಖ್ಯಾತ, ಪೀರ್-ರಿವ್ಯೂಡ್ ಜರ್ನಲ್‌ಗಳಲ್ಲಿನ ಲೇಖನಗಳಲ್ಲಿ ಪ್ರಕಟವಾದ ಸಂಶೋಧನೆಗಳು ಮತ್ತು ಸಮಾರೋಪಗಳು.
 • ಪಕ್ಷಾತೀತವಾದ ಸರ್ಕಾರ/ಅಧಿಕೃತ ಮೂಲಗಳು: ಸೂಕ್ತ ಪರಿಶೀಲನೆಗೆ ಒಳಪಟ್ಟಿರುವ ವಿಶ್ವಾಸಾರ್ಹ, ಪ್ರತಿಷ್ಠಿತ ಮತ್ತು ಪಕ್ಷಾತೀತ ಸರ್ಕಾರಿ ಏಜೆನ್ಸಿಗಳ ಅಂಕಿ-ಅಂಶಗಳು, ನೀತಿ ಮತ್ತು ಕಾನೂನು ಒಳಗೊಂಡ ಮಾಹಿತಿ. ಇದು ಅಧಿಕಾರ ಮತ್ತು ನಿಖರತೆಗೆ ಖ್ಯಾತಿಯನ್ನು ಹೊಂದಿರುವ ರಾಷ್ಟ್ರೀಯ ಸಂಸ್ಥೆಗಳ ಹೇಳಿಕೆಗಳನ್ನು ಒಳಗೊಂಡಿದೆ. (ಉದಾಹರಣೆಗೆ ಯು. ಎಸ್. ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಅಥವಾ ವಿಶ್ವ ಬ್ಯಾಂಕ್‌ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳು). ಇದು ಯಾವುದೇ ಪಕ್ಷಪಾತದ ರಾಜಕೀಯ ವ್ಯಕ್ತಿ, ರಾಜಕೀಯ ಪಕ್ಷ ಅಥವಾ ಅವರ ವಕ್ತಾರರಿಂದ ಯಾವುದೇ ಹೇಳಿಕೆಯನ್ನು ಒಳಗೊಂಡಿರುವುದಿಲ್ಲ (ಆದರೆ ವಿಷಯವು ನೇರವಾಗಿ ಅವರಿಗೆ ಸಂಬಂಧಿಸಿದ್ದರೆ ಮತ್ತು ಪ್ರಶ್ನೆಯಲ್ಲಿರುವ ವಿಷಯದಲ್ಲಿ ಅವರ ವಿಶೇಷ ಜ್ಞಾನವಿದ್ದರೆ ಮಾತ್ರ ಅವರ ಹೇಳಿಕೆಯನ್ನು ತೆಗೆದುಕೊಳ್ಳಬಹುದು)  
 • ತಜ್ಞರ ಅಭಿಪ್ರಾಯ:ಪೀರ್-ರಿವ್ಯೂಡ್ ಅಥವಾ ಇತರ ಅಧಿಕೃತ ಅಭಿಪ್ರಾಯಗಳನ್ನು ಹೊರತುಪಡಿಸಿದ ಸಂಶೋಧನೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು ನೀಡಿದ ಅಧಿಕೃತ ಅಭಿಪ್ರಾಯಗಳು. ವಿಷಯಗಳಿಗೆ ಪರಿಣಿತಗೊಂಡಿರುವ   ಪ್ರತಿಷ್ಠಿತ ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ  ಉತ್ತಮ ಸಂಬಂಧ ಸ್ಥಾಪಿಸಿಕೊಂಡಿರುವ ವ್ಯಕಿಗಳ ಮೂಲಕ ಮಾಹಿತಿ ಸಂಗ್ರಹಿಸುವುದು.
 • ತಜ್ಞರಲ್ಲದವರಿಂದ ತನಿಖಾ ಪತ್ರಿಕೋದ್ಯಮ: ಯಾವುದೇ ನಿರ್ದಿಷ್ಟ ವಿಷಯವನ್ನು ಕುರಿತು ಪರಿಣಿತಿಯನ್ನು ಹೊಂದಿರದ ಆದರೆ, ಪ್ರತಿಷ್ಠಿತ ಪತ್ರಿಕೋದ್ಯಮ ಕಚೇರಿಗಳೊಂದಿಗೆ, ತನಿಖಾ ಸಂಸ್ಥೆಗಳೊಂದಿಗೆ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಬಲವಾದ ಸಾಂಸ್ಥಿಕ ಸಂಬಂಧವನ್ನು ಹೊಂದಿರುವ ಜನರಿಂದ ತನಿಖೆ ಮಾಡಿರುವುದು.
 • ಪ್ರತ್ಯಕ್ಷ‌ದರ್ಶಿಗಳ ಖಾತೆಗಳು: ಯಾವುದೇ ವಿಷಯ ಅಥವಾ ಘಟನೆಗಳಿಗೆ ಸಂಬಂಧಪಟ್ಟಂತೆ ನೇರವಾಗಿ ನೋಡಿದ ವ್ಯಕ್ತಿದಾರರು ಮತ್ತು ಅವರ ಸಾಮಾಜಿಕ ಜಾಲತಾಣದ ಖಾತೆಗಳು ಮಾಹಿತಿ ಮೂಲಗಳಾಗಿರುತ್ತವೆ. (ಇಂತಹ ಖಾತೆಗಳು ಯಾವಾಗಲೂ ದೃಢೀಕರಿಸಲ್ಪಟಿರಬೇಕು)
 • ಪ್ರಸ್ತುತ ಮತ್ತು ಸಾಧ್ಯವಾದರೆ  ಗ್ರೌಂಡ್ ರಿಪೋರ್ಟಿಂಗ್ ನಲ್ಲಿ ನಿಯೋಜಿಸಲಾದ   ಸಂಪಾದಕೀಯ ತಂಡದ ಸದಸ್ಯರು. ಲಾಜಿಕಲಿ ಫ್ಯಾಕ್ಟ್ಸ್ ಯಾವಾಗಲೂ ಪಾರದರ್ಶಕತೆ ಉದ್ದೇಶಗಳಿಗಾಗಿ ಚೆಕ್‌ನಲ್ಲಿ ಬಳಸಲಾದ ಎಲ್ಲಾ ಮೂಲಗಳನ್ನು ಹೆಸರಿಸಲು ಗುರಿಯನ್ನು ಹೊಂದಿವೆ ಆದರೆ ಅವುಗಳ ಸುರಕ್ಷತೆಯು ಅಪಾಯದಲ್ಲಿದ್ದರೆ ನಾವು ಮೂಲವನ್ನು ಅನಾಮಧೇಯವಾಗಿ ಇರಿಸಿದಾಗ ವಿನಾಯಿತಿ ಇರುತ್ತದೆ. ಹೆಸರಿಸಲಾದ ಮೂಲಗಳು ಅಥವಾ ವಸ್ತು ಪುರಾವೆಗಳಿಂದ ದೃಢೀಕರಿಸಲ್ಪಟ್ಟಿದ್ದರೆ ಅವರು ಒದಗಿಸಿದ ಮಾಹಿತಿಯನ್ನು ನಾವು ವರದಿಯಲ್ಲಿ ಬಳಸುತ್ತೇವೆ.

ಲಾಜಿಕಲಿ ಫ್ಯಾಕ್ಟ್ಸ್ ಯಾವಾಗಲೂ ಪಾರದರ್ಶಕತೆ ಉದ್ದೇಶಗಳಿಗಾಗಿ ಚೆಕ್‌ನಲ್ಲಿ ಬಳಸಲಾದ ಎಲ್ಲಾ ಮೂಲಗಳನ್ನು ಹೆಸರಿಸಲು ಗುರಿಯನ್ನು ಹೊಂದಿದೆ, ಆದರೆ ವಿನಾಯಿತಿಗಳು ಇರಬಹುದು. ಅಧಿಕೃತ ಅಧಿಕಾರಿಗಳು ವಕ್ತಾರರಿಗೆ ನಿರ್ದಿಷ್ಟ ಹೆಸರನ್ನು ನೀಡುವ ಬದಲು ಸಂಸ್ಥೆ ಅಥವಾ ಸಂಸ್ಥೆಯ ಪರವಾಗಿ ಹೇಳಿಕೆಗಳನ್ನು ನೀಡಿದಾಗ ಇದು ಆಗಿರಬಹುದು. ಅವರ ಸುರಕ್ಷತೆಯು ಅಪಾಯದಲ್ಲಿದ್ದರೆ ನಾವು ಮೂಲವನ್ನು ಅನಾಮಧೇಯವಾಗಿ ಇಡುತ್ತೇವೆ. ಹೆಸರಿಸಲಾದ ಮೂಲಗಳು ಅಥವಾ ವಸ್ತು ಪುರಾವೆಗಳಿಂದ ದೃಢೀಕರಿಸಲ್ಪಟ್ಟಿದ್ದರೆ ನಾವು ಒದಗಿಸಿದ ಮಾಹಿತಿಯನ್ನು ಸೇರಿಸುತ್ತೇವೆ. ಮೂಲದ ಅನಾಮಧೇಯತೆಯನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ನಮ್ಮ ತಂಡದಲ್ಲಿರುವ ಹಿರಿಯ ಮಟ್ಟದ ಸಂಪಾದಕರು ಸಹಿ ಮಾಡಬೇಕಾಗುತ್ತದೆ.

ನಾವು 'ಉಲ್ಲೇಖ ಲಿಂಕ್‌ಗಳು' ಎಂಬ ವಿಭಾಗದಲ್ಲಿ ಚೆಕ್‌ಗಳ ಕೊನೆಯಲ್ಲಿ ಮೂಲಗಳನ್ನು ಸೇರಿಸುತ್ತೇವೆ, ಇದು ಹೇಳಿಕೆಯನ್ನು ಪರಿಶೀಲಿಸಲು ನಾವು ಸಂಪರ್ಕಿಸಿದ ಮೂಲಗಳನ್ನು ತ್ವರಿತವಾಗಿ ವಿಶ್ಲೇಷಿಸಲು ಬಳಕೆದಾರರಿಗೆ ಸಹಾಯ ಮಾಡುವ ಪಟ್ಟಿಯಾಗಿದೆ. ಈ ಮೂಲಗಳು ವರದಿಗಳಿಂದ ಅಧಿಕೃತ ದಾಖಲೆಗಳು, ಮಾಧ್ಯಮ ಲೇಖನಗಳು, ಅಧಿಕೃತ ಸೈಟ್‌ಗಳು ಮತ್ತು ತಜ್ಞರ ಬಯೋ ಹಾಗು ಇತ್ಯಾದಿಗಳಾಗಿರುತ್ತವೆ. 

ಉಲ್ಲೇಖ ಲಿಂಕ್‌ಗಳಲ್ಲಿ, ಈ ಮೂಲಗಳು ತಟಸ್ಥವಾಗಿವೆಯೇ ಅಥವಾ ಸಮರ್ಥನೆಯನ್ನು ಬೆಂಬಲಿಸುತ್ತವೆಯೇ ಅಥವಾ ನಿರಾಕರಿಸುತ್ತವೆಯೇ ಎಂಬುದನ್ನು ಸಹ ನಾವು ಹೇಳುತ್ತೇವೆ.  ಮೂಲವು ಹೇಳಿಕೆಯನ್ನು ಸರಿ ಎಂದಾಗ ನಾವು 'ಬೆಂಬಲಿಸುತ್ತದೆ' ಎಂಬ ಲೇಬಲ್ ಅನ್ನು ಬಳಸುತ್ತೇವೆ, ಹೇಳಿಕೆ ಮಾಡಿರುವುದನ್ನು ನಿರಾಕರಿಸಿದಾಗ 'ನಿರಾಕರಿಸುತ್ತದೆ' ಮತ್ತು ಅದು ಸಂದರ್ಭವನ್ನು ಒದಗಿಸಿದಾಗ 'ತಟಸ್ಥ' ಆದರೆ ಅದು ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಅಥವಾ ನಿರಾಕರಿಸುವುದಿಲ್ಲ.

ಚೆಕ್‌ನ ಪಠ್ಯದೊಳಗೆ ನಾವು ಹೇಳಿಕೆಗಳ ಆರ್ಕೈವ್ ಲಿಂಕ್‌ಗಳನ್ನು ಒದಗಿಸುತ್ತೇವೆ ಮತ್ತು ಈಗ ಪಠ್ಯದೊಳಗೆ ಎಲ್ಲಾ ಉಲ್ಲೇಖ ಲಿಂಕ್‌ಗಳನ್ನು ಹೈಪರ್‌ಲಿಂಕ್ ಮಾಡುತ್ತೇವೆ ಆದ್ದರಿಂದ ಚೆಕ್ ಅನ್ನು ಓದುವಾಗ ಯಾವ ಮೂಲವನ್ನು ಬಳಸಲಾಗಿದೆ ಎಂಬುದನ್ನು ಓದುಗರಿಗೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.

Copy Link

ಹೊಸ ಪುರಾವೆಗಳ ಶೋಧನೆ, ಮಾಹಿತಿಗಳ ಹೊರಹೊಮ್ಮುವಿಕೆ, ಪ್ರಕಟಿತ ವರದಿಗಳಲ್ಲಿನ ದೋಷಗಳನ್ನು ಸರಿಪಡಿಸುವುದನ್ನು ಸೇರಿದಂತೆ ಹಲವಾರು ಕಾರಣಗಳಿಗಾಗಿ ಫ್ಯಾಕ್ಟ್ ಚೆಕ್‌ಗಳನ್ನು ಪರಿಷ್ಕರಿಸಬೇಕಾಗಬಹುದು. ನಾವು ಪ್ರಕಟಿಸಿದ ಯಾವುದೇ ವರದಿಯಲ್ಲಿನ ವಾಸ್ತವಾಂಶದಲ್ಲಿ ತಪ್ಪು ಇದೆ ಎಂದು ನಿಮಗನಿಸಿದರೆ 'ಕಾಲ್ಸ್ ಫಾರ್ ಅಕ್ಷನ್ಸ್' ಮೂಲಕ ನಮ್ಮನ್ನು ಸಂಪರ್ಕಿಸಿ ತಿಳಿಸಬಹುದು.

ನಮ್ಮ ಪ್ರತಿಯೊಂದು ಫ್ಯಾಕ್ಟ್ ಚೆಕ್ ವಿಶಿಷ್ಟವಾದ ಗುರುತಿಸುವಿಕೆಯೊಂದಿಗೆ ಬಂದಿರುತ್ತದೆ. ಹಾಗಾಗಿ, ಮಾಹಿತಿಗೆ ಸಂಬಂಧಪಟ್ಟ ಅಪಡೇಟ್, ದೂರು, ತಿದ್ದುಪಡಿ ಇದ್ದಲ್ಲಿ ಅದನ್ನು ಮತ್ತೊಮ್ಮೆ ಪರಿಶೀಲಿಸಲು ಸಂಪಾದಕೀಯ ತಂಡವು ತ್ವರಿತವಾಗಿ ಹಿಂಪಡೆದು, ಸರಿಪಡಿಸುತ್ತದೆ.

ವಸ್ತುನಿಷ್ಠ ಮಾಹಿತಿಯೊಂದಿಗೆ ತಿದ್ದುಪಡಿ ಮಾಡಲಾದ ಫ್ಯಾಕ್ಟ್ ಚೆಕ್‌ಗಳನ್ನು ‘ತಿದ್ದುಪಡಿ’ ಎಂದು ಓದುವ ಟಿಪ್ಪಣಿಯನ್ನು ಸೇರಿಸಲಾಗುತ್ತದೆ.

ನೀಡಬೇಕಾದ ತಿದ್ದುಪಡಿಯು ಫ್ಯಾಕ್ಟ್-ಚೆಕ್ ನ ತೀರ್ಮಾನಗಳನ್ನು ಗಣನೀಯವಾಗಿ ಬದಲಾಯಿಸಿದರೆ ಮತ್ತು/ಅಥವಾ ತಂಡವು ಅನುಸರಿಸುವ ವಿಧಾನ ಮತ್ತು ನೀತಿಗಳಿಗಿಂತ ತುಂಬಾ ಭಿನ್ನವಾಗಿದ್ದರೆ, ನಾವು ಫ್ಯಾಕ್ಟ್-ಚೆಕ್ ಅನ್ನು ಡಿಲೀಟ್ ಮಾಡುತ್ತೇವೆ ಮತ್ತು ದೋಷದ ವಿವರಣೆಯನ್ನು ಒದಗಿಸುತ್ತೇವೆ ಹಾಗು ಇದು ಸಂಭವಿಸಲು ಅನುಮತಿಸಿದ ಸಂದರ್ಭಗಳು ಹೇಳುತ್ತೇವೆ. ನಾವು ಅದನ್ನು "ಸ್ಪಷ್ಟೀಕರಣ" ಎಂದು ಗುರುತಿಸುತ್ತೇವೆ, ಫ್ಯಾಕ್ಟ್-ಚೆಕ್ ಅನ್ನು ಏಕೆ ಹಿಂತೆಗೆದುಕೊಳ್ಳಲಾಗಿದೆ ಎಂಬುದನ್ನು ವಿವರಿಸಿ, ಯಾವುದು ನಿಖರ ಮತ್ತು ಯಾವುದು ಅಲ್ಲ ಎಂಬುದನ್ನು ಹೇಳುತ್ತೇವೆ. 

ವಸ್ತುನಿಷ್ಠವಲ್ಲದ (ವಿಷಯದ ತೀರ್ಪಿಗೆ ಪಾಣಿನಾಮ ಬೀರದಿದ್ದಲ್ಲಿ ಕೇವಲ ವ್ಯಾಕರಣ  ಅಥವಾ ಇತರ ತಪ್ಪುಗಳನ್ನು ಸರಿಪಡಿಸಿದಾಗ) ಮಾಹಿತಿಯನ್ನು ತಿದ್ದುಪಡಿ ಮಾಡಿದಾಗ ‘ಅಪಡೇಟ್‌’(ನವೀಕರಿಸಲಾಗಿದೆ) ಮಾಡಲಾಗಿದೆ ಎಂದು ಗುರತಿಸಲಾಗುವುದು.

ತಪ್ಪು ಮಾಡಿದ ಮೂಲ ಪ್ರಕಟಣೆ ಅಥವಾ ಪೋಷ್ಟ್ ಅನ್ನು ಸಂಪಾದಿಸಲಾಗದಿದ್ದರೆ, ನಾವು ತಿದ್ದುಪಡಿಯನ್ನು ಮೂಲ ಸ್ವರೂಪದಲ್ಲಿ ಮತ್ತು ಚಾನಲ್‌ನಲ್ಲಿಯೇ ಪ್ರಸಾರ ಮಾಡುತ್ತೇವೆ.

ಸಂಪಾದಕೀಯ ತಂಡದ ಹಿರಿಯ ಸದಸ್ಯರು ದೂರಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಫ್ಯಾಕ್ಟ್ ಚೆಕ್ ನ  ಮಾಹಿತಿಯನ್ನು ಬದಲಿಸಬೇಕಾಬಹುದೇ ಅಥವಾ ಅದನ್ನು ಹಾಗೆಯೇ ಬಿಡಬೇಕೆ ಎಂಬ ನಿರ್ಧಾರವನ್ನು ವಿವರಣೆಯೊಂದಿಗೆ ತ್ವರಿತವಾಗಿ ತಿಳಿಸುತ್ತಾರೆ. ಸಂಪಾದಕೀಯ ತಂಡದ ಸದಸ್ಯರು ಸಾರ್ವಜನಿಕರಿಂದ ನಾವು ಪಡೆಯುವ ಎಲ್ಲಾ ವಿನಂತಿಗಳನ್ನು ಪರಿಶೀಲಿಸಲು ಮತ್ತು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸಲು ನಮ್ಮ ತಿದ್ದುಪಡಿಗಳ ಚಾನಲ್‌ಗಳನ್ನು ಮತ್ತು ಪೈಪ್‌ಲೈನ್ ಅನ್ನು ಪ್ರತಿದಿನ ಮೇಲ್ವಿಚಾರಣೆ ಮಾಡುತ್ತಾರೆ.

ತಿದ್ದುಪಡಿಯನ್ನು ನೀಡಬೇಕಾದರೆ, ತಂಡದ ಹಿರಿಯ ಸದಸ್ಯರು ಅದನ್ನು ರೀಜನಲ್ ಲೀಡ್  ಅವರೊಂಗಿದೆ ಚರ್ಚಿಸುತ್ತಾರೆ, ತಿದ್ದುಪಡಿಯನ್ನು ಪರಿಶೀಲಿಸುತ್ತಾರೆ ಮತ್ತು ಯಾವುದೇ ದೋಷಗಳು ಇಲ್ಲದ ಹಾಗೆ ಖಚಿತಪಡಿಸಿಕೊಳ್ಳಲು ಸರಿಪಡಿಸಬೇಕಾದದ್ದನ್ನು ಅನುಮೋದಿಸುತ್ತಾರೆ.

ನಮ್ಮ ಪ್ರತಿಕ್ರಿಯೆಯಿಂದ ನೀವು  ತೃಪ್ತರಾಗದಿದ್ದರೆ, ನೀವು ಅದನ್ನು ಸಂಪಾದಕೀಯ ತಂಡದ ಹಿರಿಯ ಸಂಪಾದಕೀಯ ಸದಸ್ಯರೊಂದಿಗೆ ತಕರಾರು ಮಾಡಲು ಸಾಧ್ಯವಾಗುತ್ತದೆ, ಅವರು ಆ ಹೇಳಿಕೆಯನ್ನು ತನಿಖೆ ಮಾಡಲು ಸ್ವತಂತ್ರ ಸಲಹೆಗಾರರನ್ನು ನೇಮಿಸುವವರೆಗೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.

ಇದು ಅಪಡೇಟ್ ಅಥವಾ ತಿದ್ದುಪಡಿಗೊಂಡ ಫ್ಯಾಕ್ಟ್ ಚೆಕ್‌ನ ಮಾಹಿತಿಯನ್ನು ಸ್ವೀಕರಿಸಿದ ಅಥವಾ ಪತ್ತೆ ಮಾಡಿದ ಗ್ರಾಹಕರಿಗೆ ಸೂಚಿಸಲಾಗುವುದು.

ತಿದ್ದುಪಡಿಗಳನ್ನು ಮಾಡಿದ ನಮ್ಮ ವರದಿಗಳ ಪಟ್ಟಿ ಇಲ್ಲಿದೆ.

Copy Link

ನಮ್ಮ ಪತ್ರಿಕೋದ್ಯಮ, ಸಂಶೋಧನೆಗಳ ಮತ್ತು ಶೈಕ್ಷಣಿಕ ಕಾರ್ಯಗಳ ಮೂಲಕ ಪ್ರಕಟಗೊಂಡು ಯಾವುದೇ ಮಾಹಿತಿಯು ನಿಮಗೆ ತಪ್ಪು ಅಥವಾ ಅನ್ಯಾಯದ ಮಾಹಿತಿ ಎಂದು ನಿಮಗೆ ಅನಿಸಿದ್ದರೆ. ಗ್ರಾಹಕರು ನಮ್ಮ ಫ್ಯಾಕ್ಟ್ ಚೆಕ್ ಪುಟದ ಅಂತ್ಯದಲ್ಲಿರುವ ನಮೂನೆ (ಫಾರ್ಮ್) ಮೂಲಕ ತಿದ್ದುಪಡಿಗೆ ಮನವಿ ಸಲ್ಲಿಸಬಹುದು. 'ನಮ್ಮನ್ನು ಸಂಪರ್ಕಿಸಿ'  ಎಂಬ ಪುಟದಲ್ಲಿಯೂ ಸಹ ನೀವು ಫಾರ್ಮ್ ಅನ್ನು  ಕಾಣಬಹುದು. 

ಬರುವ ಯಾವುದೇ ದೂರಗಳನ್ನು ಸಂಪಾದಕೀಯ ಮುಖ್ಯಸ್ಥರಿಗೆ ತಿಳಿಸುವ ಮೂಲಕ ೪೮ ಗಂಟೆಗಳ ಒಳಗೆ ಪ್ರತಿಕ್ರಿಯೆಯನ್ನು ನೀಡಲಾಗುತ್ತದೆ. ವಸ್ತುನಿಷ್ಠ ಅರ್ಹತೆಯನ್ನು ಹೊಂದಿರುವ ಯಾವುದೇ ದೂರನ್ನು ಸಾರ್ವಜನಿಕವಾಗಿ ಸರಿಪಡಿಸಲಾಗುತ್ತದೆ ಮತ್ತು ತಿದ್ದುಪಡಿಗೆ ಲೇಖನದಲ್ಲಿ ಸಮಾನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಚೆಕ್‌ನಲ್ಲಿ ಹೆಸರಿಸಲಾದ ಎಲ್ಲಾ ಮಧ್ಯಸ್ಥಗಾರರಿಗೆ ನಾವು ಪ್ರತಿಕ್ರಿಯೆಯ ಹಕ್ಕನ್ನು ನೀಡುತ್ತೇವೆ. ಪ್ರತ್ಯುತ್ತರವನ್ನು ನೀಡಲು ಸಾಧ್ಯವಾಗದಿದ್ದಲ್ಲಿ ನಿರಾಕರಣೆಯ ಕಾರಣಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಒಂದು ವೇಳೆ ಲಾಜಿಕಲಿ ಫ್ಯಾಕ್ಟ್  ವರದಿಗಳು ಅಥವಾ ಫ್ಯಾಕ್ಟ್ ಚೆಕ್ ಗಳು IFCN ಕೋಡ್ ತತ್ವಗಳನ್ನು ಉಲ್ಲಂಘಿಸುತ್ತಿವೆ ಎಂದು ನಿಮಗನಿಸಿದರೆ, ನೀವು ನೇರವಾಗಿ IFCN ಗೆ  ಇಲ್ಲಿ ತಿಳಿಸಬಹುದು.

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.