ನೀತಿ ಸಂಹಿತೆ ಮತ್ತು ಪಾರದರ್ಶಕತೆ

ಯಾವುದೇ ವಿಷಯ, ಘಟನೆ, ಸುದ್ದಿ ಮತ್ತು ಸೇವೆಗಳಿಗೆ ಸಂಬಂಧಪಟ್ಟಂತೆ ಹರಡುವ ತಪ್ಪು/ತಪ್ಪು ಮಾಹಿತಿಗಳನ್ನು ಗುರುತಿಸುವುದು ಹಾಗು ಇಂತಹ ತಪ್ಪು/ತಪ್ಪು ಮಾಹಿತಿಗಳನ್ನು ಆಗಬಹುದಾದ ಹಾನಿಗಳನ್ನು ಕಡಿಮೆ ಮಾಡುವುದು ಮತ್ತು ತೆಗೆದುಹಾಕುವುದು 'ಲಾಜಿಕಲಿ ಫ್ಯಾಕ್ಸ್‌'ನ ಉದ್ದೇಶವಾಗಿದೆ. ಅಲ್ಲದೇ ನಾವು ವಾಕ್ ಸ್ವಾತಂತ್ರ್ಯದ ಬೆಂಬಲಿಗರಾಗಿದ್ದೇವೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಅಭಿವ್ಯಕ್ತಿಗೆ ಇರುವ ನಿರ್ಬಂಧಗಳನ್ನು ( ಸೆನ್ಸಾರ್ ವಿಧಾನಗಳನ್ನು) ವಿರೋಧಿಸುತ್ತೇವೆ. ತಪ್ಪ ಮಾಹಿತಿಗಳು ಮತ್ತು ವಂಚಿಸುವ ಆನ್ ಲೈನ್ ಚರ್ಚೆಗಳು ಸಮಾಜಕ್ಕೆ ಹಾನಿ ಉಂಟು ಮಾಡಿದಾಗ ಅದನ್ನು ಗುರುತಿಸಬೇಕು ಮತ್ತು ಅದನ್ನು ಪರಿಹರಿಸಿ ನೈಜ ಮಾಹಿತಿಯನ್ನು ತಿಳಿಸಬೇಕು ಎಂಬುದು ನಮ್ಮ ದೃಢ ನಂಬಿಕೆ ಮತ್ತು ಆದ್ಯತೆಯಾಗಿದೆ.

ಲಾಜಿಕಲಿ ಫ್ಯಾಕ್ಟ್ಸ್ ತಪ್ಪು/ತಪ್ಪು ಮಾಹಿತಿಗಳಿಂದ ಆಗುವ ಹಾನಿಗಳ ಪ್ರಮಾಣವನ್ನು ನಿಭಾಯಿಸಲು ತನ್ನದೇ ಆದ ಉತ್ಪನ್ನ ಮತ್ತು‌ ಸೇವೆಗಳನ್ನು ಒದಗಿಸುವ ಉದ್ಯಮವನ್ನು ನಿರ್ಮಿಸಿದೆ. ಇದನ್ನು ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು, ಸರ್ಕಾರಗಳು ಮತ್ತು ಸಮಾಜದ ನಾಗರಿಕ ಸಮೂಹದ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಸಮಗ್ರತೆ, ನೈತಿಕತೆ ಮತ್ತು ಉನ್ನತ ಗುಣಮಟ್ಟವನ್ನು ಅಪೇಕ್ಷಿಸುವ ಗ್ರಾಹಕರಿಗೆ/ಓದುಗರಿಗೆ ನಮ್ಮ ಸೇವೆಯನ್ನು ಒದಗಿಸುತ್ತೇವೆ.

ನಾವು ನಿಖರತೆ, ವಿಶ್ವಾಸಾರ್ಹತೆ ಮತ್ತು ಕಠಿಣತೆಯ ಅತ್ಯುನ್ನತ ಮಾನದಂಡಗಳಿಗೆ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತೇವೆ. IFCN ನ ಪರಿಶೀಲಿಸಿದ ಸಹಿದಾರರಾಗಿರುವುದರಿಂದ, ನಾವು ಪಕ್ಷಾತೀತತೆ ಮತ್ತು ನ್ಯಾಯಸಮ್ಮತತೆ, ಹಾಗೆಯೇ ಮೂಲಗಳ ಪಾರದರ್ಶಕತೆ, ನಿಧಿಗಳು ಮತ್ತು ಸಾಂಸ್ಥಿಕ ರಚನೆಗೆ ಬದ್ಧರಾಗಿದ್ದೇವೆ. IFCN ಅವರ ತತ್ವಗಳ ಸಂಹಿತೆಯೊಂದಿಗೆ ನಮ್ಮ ಅನುಸರಣೆಗಾಗಿ ನಮ್ಮನ್ನು ವಾರ್ಷಿಕವಾಗಿ ಪರಿಶೀಲಿಸಲಾಗುತ್ತದೆ ಮತ್ತು ಎಲ್ಲಾ ಮೌಲ್ಯಮಾಪನ ವರದಿಗಳನ್ನು ಇಲ್ಲಿ ಕಾಣಬಹುದು.

ನಾವು ಯಾವುದೇ ಸಂಭಾವ್ಯ ಗ್ರಾಹಕರನ್ನು ನಿರ್ಣಯಿಸುವಾಗ, ಈ ಮಾನದಂಡಗಳು ಅನ್ವಯವಾಗುತ್ತವೆ:

ಯಾವ ಒಪ್ಪಂದಕ್ಕೆ ನಾವು ಮುಂದಾಗುವುದಿಲ್ಲ:

  • ಯಾವುದು ನಾಗರಿಕ ಸಂವಾದವನ್ನು ಹೆಚ್ಚಿಸುವ, ಪ್ರಜಾಪ್ರಭುತ್ವದ ಚರ್ಚೆ, ಪ್ರಕ್ರಿಯೆಯನ್ನು ಮತ್ತು ವಿಶ್ವಾಸಾರ್ಹ ಮಾಹಿತಿಗೆ ಪ್ರವೇಶವನ್ನು ಒದಗಿಸುವ ತತ್ವಗಳನ್ನು ವಿರೋಧಿಸುತ್ತದೆ.
  • ನಾವು ನೀಡುವ ಯಾವುದೇ ಮಾಹಿತಿಯನ್ನು ಗ್ರಾಹಕರು( ಕ್ಲೈಂಟ್ ) ಬಳಸಿಕೊಂಡು, ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ಹಾನಿ ಮಾಡುವುದು, ಹೆದರಿಸುವ ಮೂಲಕ ಮಾನವ ಹಕ್ಕುಗಳನ್ನು ದುರ್ಬಲಗೊಳಿಸುವವರೊಂದಿಗೆ ಯಾವುದೇ ಒಪ್ಪಂದಕ್ಕೆ ಇಚ್ಛಿಸುವುದಿಲ್ಲ.
  • ಎಲ್ಲಾ ವಾಣಿಜ್ಯ ಒಪ್ಪಂದಗಳು ನಿಯಮಿತ, ನಿರ್ದಿಷ್ಟ ಮತ್ತು ಉದ್ದೇಶಿತ ವ್ಯಾಪ್ತಿಗೆ ಒಳಪಡುತ್ತವೆ ಎಂದು‌ ನಾವು ತಿಳಿಸಲು ಬಯಸುತ್ತೇವೆ. ಇದರೊಳಗೆ ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸಲು ಪರವಾನಗಿ‌ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಲಾಜಿಕಲಿ ಫ್ಯಾಕ್ಟ್ಸ್ ಮತ್ತು ಗ್ರಾಹಕರ( ಕ್ಲೈಂಟ್) ನಡುವೆ ಒಪ್ಪಂದವಾಗಿರುತ್ತದೆ. ಯಾವುದೇ ರೀತಿಯಲ್ಲಿ ಈ ನಿಯಮಗಳು ಉಲ್ಲಂಘನೆಯಾದಲ್ಲಿ ಸೇವೆಯು ಮುಕ್ತಾಯವಾಗುತ್ತದೆ.
  • ರಾಜಕೀಯ ಮತ್ತು ಪಕ್ಷಪಾತತೆಯಿಂದ ನಮ್ಮ ಬದ್ಧತೆಯನ್ನು ಹಾಳು ಮಾಡುವವರೊಂದಿಗೆ ನಾವು ಪಾಲುದಾರಿಕೆಯಲ್ಲಿ ತೊಡಗುವುದಿಲ್ಲ.

ಅಂತಿಮವಾಗಿ ನಮ್ಮ ಎಲ್ಲಾ ಹೊಸ ಒಪ್ಪಂದಗಳು ನಮ್ಮ ಈ ಮಾನದಂಡಗಳಿಗೆ ಅನುಗುಣವಾಗಿಯೇ ಇರುತ್ತವೆ ಎಂದು ನಾವು ಖಚಿತಪಡಿಸುತ್ತೇವೆ. ಇದು ದೃಢವಾದ ನೀತಿಶಾಸ್ತ್ರದ ವಿಮರ್ಶಾ ಪ್ರಕ್ರಿಯೆಯನ್ನು ಆಧರಿಸಿದೆ.ಪಕ್ಷಾತೀತತೆಗೆ ನಮ್ಮ ಬದ್ಧತೆಯನ್ನು ಹಾಳುಮಾಡುವ ಯಾವುದೇ ಹಿತಾಸಕ್ತಿ ಸಂಘರ್ಷವಿಲ್ಲ ಎಂದು ನಮ್ಮ ನಾಯಕತ್ವದ ತಂಡವು ಸರ್ವಾನುಮತದಿಂದ ಒಪ್ಪಿಕೊಳ್ಳುವವರೆಗೆ ಯಾವುದೇ ಯೋಜನೆಯು ನಮ್ಮ ಆಂತರಿಕ ನೈತಿಕತೆಯ ವಿಮರ್ಶೆಯನ್ನು ರವಾನಿಸುವುದಿಲ್ಲ. ಮಾರ್ಕ್ ವುಡ್ ಅವರ ಅಧ್ಯಕ್ಷತೆಯಲ್ಲಿ ನಮ್ಮ ಸಲಹಾ ಮಂಡಳಿಯು ಲಾಜಿಕಲಿ ಫ್ಯಾಕ್ಟ್ಸ್  ಪಕ್ಷಾತೀತತೆಗೆ ಅದರ ಬದ್ಧತೆಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ನೋಡಿಕೊಳ್ಳುತ್ತದೆ. 

ನಮ್ಮ ಸಿಬ್ಬಂದಿಗಳಿಗೂ ಸಹ ಈ ಕೆಳಗಿನ ಮಾನದಂಡಗಳು ಅನ್ವಯಿಸುತ್ತವೆ: 

  • ನಮ್ಮ ಎಲ್ಲಾ ಸಂಪಾದಕೀಯ ತಂಡದ ಸದಸ್ಯರು:

  • ಯಾವುದೇ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುವಾಗ ಉಂಟಾಗುವ ಹಿತಾಸಕ್ತಿಯ ಸಂಭಾವ್ಯ ಸಂಘರ್ಷವನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು. ಈ ಯೋಜನೆಯಲ್ಲಿ ಪಕ್ಷತೀತವಾಗಿ ಕೆಲಸ ಮಾಡಬಹುದೇ? ಮತ್ತು ಇದು ನಮ್ಮ ಖ್ಯಾತಿ, ಗೌರವವನ್ನು ದುರ್ಬಲಗೊಳಿಸುತ್ತದೆಯೇ? ಎಂಬುದನ್ನು ಮುಂಚಿತವಾಗಿಯೇ ನಿರ್ಧರಿಸಬೇಕು.
  • ಲಾಜಿಕಲಿ ಫ್ಯಾಕ್ಟ್ಸ್ ನಲ್ಲಿ ಕೆಲಸ ಆರಂಭಿಸುವ ಮೊದಲೇ ಸಿಬ್ಬಂದಿ ತಮ್ಮ ವೈಯಕ್ತಿಕ ಆಸಕ್ತಿಗಳ ಬಗ್ಗೆ ಸಂಪೂರ್ಣವಾಗಿ ಹೇಳಿಕೊಳ್ಳಬೇಕು.
  • ಆ ವರದಿಯ ಆವಿಷ್ಕಾರಗಳ ಮೇಲೆ ಪ್ರಭಾವ ಬೀರಬಹುದು ಎಂದು ಸಾರ್ವಜನಿಕರು ತೀರ್ಮಾನಿಸಬಹುದಾದ ಯಾವುದೇ ವಾಣಿಜ್ಯ ಅಥವಾ ಇತರ ಸಂಬಂಧಗಳನ್ನು ಫ್ಯಾಕ್ಟ್-ಚೆಕ್ ನ ಒಳಗೆ ಬಹಿರಂಗಪಡಿಸಬೇಕು.

  • ಲಾಜಿಕಲಿ ಫ್ಯಾಕ್ಟ್ಸ್ ನ ಸಿಬ್ಬಂದಿ ಸದಸ್ಯರು:
  • ಪಕ್ಷಾತೀತವಾಗಿ ಕಾರ್ಯನಿರ್ವಹಣೆ ಮಾಡುವ ಲಾಜಿಕಲಿ ಫ್ಯಾಕ್ಟ್ಸ್ ನ ಘನತೆಗೆ ಧಕ್ಕೆ ಮಾಡುವಂತಹ ಯಾವುದೇ ಚಟುವಟಿಕೆಗಳನ್ನು ಮಾಡದಿರಲು ಬದ್ಧರಾಗಿರುತ್ತಾರೆ.
  • ಯಾವುದೇ ರಾಜಕೀಯ ಪಕ್ಷದ ಕಚೇರಿಗೆ ಹತ್ತಿರವಾಗುವುದು, ಯಾವುದೇ ರಾಜಕಾರಣಿ, ರಾಜಕೀಯ ಪಕ್ಷ ಮತ್ತು ಪಕ್ಷದ ಅಭ್ಯರ್ಥಿಯನ್ನು ಸಾರ್ವಜನಿಕವಾಗಿ ಬೆಂಬಲಿಸುವುದು, ರಾಜಕೀಯ ಚಳುವಳಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು, ಸಂಬಂಧವಿಟ್ಟುಕೊಳ್ಳುವುದು, ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಇವುಗಳಲ್ಲಿ ಯಾವುದೇ ಆಸಕ್ತಿ ತೋರುವ ಮೂಲಕ ಗುರುತಿಸಿಕೊಳ್ಳದೆ ದೂರವಿರಬೇಕು.  

ಲಾಜಿಕಲಿ ಫ್ಯಾಕ್ಟ್ಸ್ ಯಾವುದೇ ಸರ್ಕಾರ, ರಾಜ್ಯ, ರಾಜಕೀಯ ಪಕ್ಷ ಅಥವಾ ರಾಜಕಾರಣಿಯ ಸಂಪಾದಕೀಯ ನಿಯಂತ್ರಣದಲ್ಲಿಲ್ಲ. ನಾವು ನಮ್ಮ ತನಿಖೆಗಳು ಮತ್ತು ವರದಿಗಳನ್ನು ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ರಾಜಕೀಯ ವರ್ಣಪಟಲದ ಬದಿಯಲ್ಲಿ ಕೇಂದ್ರೀಕರಿಸುವುದಿಲ್ಲ.

ರಾಜಕೀಯ ಪಕ್ಷ, ಸರ್ಕಾರಿ ಅಥವಾ ಸಾರ್ವಜನಿಕ ಕಂಪನಿಯಲ್ಲಿ ಸಂಬಳ ಅಥವಾ ಪ್ರಮುಖ ಸ್ಥಾನವನ್ನು ಹೊಂದಿರುವ ಯಾವುದೇ ವ್ಯಕ್ತಿಯನ್ನು ನಾವು ನೇಮಿಸುತ್ತಿಲ್ಲ ಮತ್ತು ನೇಮಿಸುವುದೂ ಇಲ್ಲ.

ನಾವು ಓದುಗರಿಗೆ  ಫ್ಯಾಕ್ಟ್-ಚೆಕಿಂಗ್ ಅಭ್ಯಾಸಕ್ಕೆ ಸಂಬಂಧಿಸಿದ ನೀತಿಗಳನ್ನು ಹೊರತುಪಡಿಸಿ ಇತರ ನೀತಿಗಳನ್ನು ಯಾವುದೇ ರಾಜಕೀಯ ಪಕ್ಷಕ್ಕಾಗಲಿ, ಸಾರ್ವಜನಿಕ ಕಚೇರಿಗೆ ಸ್ಪರ್ಧಿಸುವ ಅಭ್ಯರ್ಥಿಗಾಗಲಿ ಅಥವಾ ನೀತಿಗಳಿಗಾಗಲಿ ಮತ ಹಾಕಲು ಕೇಳಿಕೊಳ್ಳುವುದೋ ಸಲಹೆ ನೀದುವುದೋ ಇಲ್ಲ.

ಲಾಜಿಕಲಿ ಫ್ಯಾಕ್ಟ್ಸ್ ರಾಜಕೀಯ ಪಕ್ಷದೊಂದಿಗೆ ಯಾವುದೇ ಒಪ್ಪಂದ ಅಥವಾ ಪಾಲುದಾರಿಕೆಯನ್ನು ಮುಕ್ತಾಯಗೊಳಿಸುವುದಿಲ್ಲ, ಮತ್ತು ಸಮಂಜಸವಾದ ಹಿತಾಸಕ್ತಿ ಸಂಘರ್ಷ ಅಥವಾ ಉಲ್ಲೇಖಿಸಲಾದ ತಜ್ಞರು ಅಥವಾ ಸಂಸ್ಥೆಗಳಿಂದ ರಾಜಕೀಯ ಪಕ್ಷಪಾತ ಮೊದಲಾದವುಗಳನ್ನು ಪರಿಹರಿಸುತ್ತದೆ.

 ಲಾಜಿಕಲಿ ಫ್ಯಾಕ್ಟ್ಸ್ ಉದ್ಯೋಗಿಗಳನ್ನು ಕಂಪನಿಯ ಹೆಸರಿನಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡುವುದನ್ನಾಗಲಿ  ಮತ್ತು  ಸಾಮಾನ್ಯ, ಸಾಮಾಜಿಕ ಮತ್ತು ಸೌಜನ್ಯದ ವಸ್ತುಗಳನ್ನು ಮೀರಿ ಕೆಲಸದ ವಾತಾವರಣದಲ್ಲಿ ಅನುಕೂಲಕರ ಪರಿಸ್ಥಿತಿಗಳನ್ನುಂಟುಮಾಡುವ ಯಾವುದೇ ಉಡುಗೊರೆಗಳು, ಉಪಕಾರಗಳು ಅಥವಾ ಸೇವೆಗಳನ್ನು ಸ್ವೀಕರಿಸುವುದನ್ನು ನಿಷೇಧಿಸುವ ನೀತಿಗಳನ್ನು ಹೊಂದಿದೆ.

ಲಾಜಿಕಲಿ ಫ್ಯಾಕ್ಟ್ಸ್ ಐರ್ಲೆಂಡ್‌ನಲ್ಲಿ ನೋಂದಾಯಿತ ಕಂಪನಿಯಾಗಿದ್ದು, ರಿಜಿಸ್ಟ್ರಿ ಹೆಸರು ಲಾಜಿಕಲಿ ಫ್ಯಾಕ್ಟ್ಸ್ ಲಿಮಿಟೆಡ್, ಮತ್ತು ರಿಜಿಸ್ಟ್ರಿ ಸಂಖ್ಯೆ ೭೦೪೧೬೬. ಇದು ಯುನೈಟೆಡ್ ಕಿಂಗ್‌ಡಂನಲ್ಲಿನ ದಿ ಲಾಜಿಕಲಿ ಲಿಮಿಟೆಡ್ ಒಡೆತನದಲ್ಲಿದೆ. ಆದರೆ, ಲಾಜಿಕಲಿ ಫ್ಯಾಕ್ಟ್ಸ್ ಸಂಪೂರ್ಣ ಸಂಪಾದಕೀಯ ಮತ್ತು ಆಡಳಿತಾತ್ಮಕ ಪ್ರತ್ಯೇಕತೆಯನ್ನು ಬಳಸಿಕೊಳ್ಳುತ್ತಿದೆ ಮತ್ತು ದಿ ಲಾಜಿಕಲಿ ಲಿಮಿಟೆಡ್ ನಿಂದ ಯಾವುದೇ ಹಣವನ್ನು ಸ್ವೀಕರಿಸುವುದಿಲ್ಲ. ಎಲ್ಲಾ ಆಡಳಿತಾತ್ಮಕ ಮತ್ತು ಬಜೆಟ್ ನಿರ್ಧಾರಗಳನ್ನು ಪ್ರಕಟಣೆಯ ವ್ಯವಸ್ಥಾಪಕ ನಿರ್ದೇಶಕ ಬೇಬಾರ್ಸ್ ಒರ್ಸೆಕ್ ಮಾಡುತ್ತಾರೆ.

ಲಾಜಿಕಲಿ ಫ್ಯಾಕ್ಟ್ಸ್‌ನಲ್ಲಿನ ಸಂಪಾದಕೀಯ ಮಾನದಂಡಗಳು ರಾಯಿಟರ್ಸ್‌ನ ಮಾಜಿ ಪ್ರಧಾನ ಸಂಪಾದಕ ಮಾರ್ಕ್ ವುಡ್ ಅವರ ಅಧ್ಯಕ್ಷತೆಯ ಲಾಜಿಕಲಿ ಫ್ಯಾಕ್ಟ್ಸ್  ಸಲಹಾ ಮಂಡಳಿಯ ಮೇಲ್ವಿಚಾರಣೆಗೆ ಒಳಪಟ್ಟಿರುತ್ತದೆ.

ಇತ್ತೀಚಿನ ಹಣಕಾಸು ವರ್ಷದ (೨೦೨೨) ವಾರ್ಷಿಕ ಆದಾಯ ಮತ್ತು ಒಟ್ಟು ವಾರ್ಷಿಕ ಆದಾಯದ ಶೇಕಡಾ ೫ ಕ್ಕಿಂತ ಹೆಚ್ಚು ಕೊಡುಗೆ ನೀಡುವ ಮೂಲಗಳನ್ನು ಕೆಳಗೆ ಕಾಣಬಹುದು.

ಕಳೆದ ವರ್ಷಕ್ಕೆ ನಿಮ್ಮ ವಾರ್ಷಿಕ ಆದಾಯ:

£ ೧,೭೯೯,೫೨೭ 

ಒಟ್ಟು ವಾರ್ಷಿಕ ಆದಾಯದ ೫% ಕ್ಕಿಂತ ಹೆಚ್ಚಿನ ಕೊಡುಗೆ ನೀಡುವ ಆದಾಯದ ಮೂಲಗಳು

ಬೈಟ್ಡಾನ್ಸ್, ಮೆಟಾ 

ಲೇಖನ ೪.೨.ಬಿ ನಲ್ಲಿ ಅರ್ಥಮಾಡಿಕೊಂಡಂತೆ ಆದಾಯದ ಇತರ ಸಂಬಂಧಿತ ಮೂಲಗಳು:

ಯಾವೂ ಇಲ್ಲ 

 

ನಮ್ಮ ಪಾಲುದಾರ ಸಂಸ್ಥೆಗಳೊಂದಿಗೆ ನಾವು ನಡೆಸುವ ಚಟುವಟಿಕೆಗಳ ವಿವರಣೆಯನ್ನು ನೀವು ಕೆಳಗೆ ನೋಡಬಹುದು.

ಪಾಲುದಾರ ಸಂಸ್ಥೆಯ ಹೆಸರು

ಚಟುವಟಿಕೆಗಳ ವಿವರಣೆ

ಮೆಟಾ

ಥರ್ಡ್ ಪಾರ್ಟಿ ಫ್ಯಾಕ್ಟ್-ಚೆಕಿಂಗ್ ಕಾರ್ಯಕ್ರಮದಲ್ಲಿ ಪಾಲುದಾರಿಕೆ

ಬೈಟ್ಡಾನ್ಸ್ (ಟಿಕ್ ಟಾಕ್)

ಥರ್ಡ್ ಪಾರ್ಟಿ ಫ್ಯಾಕ್ಟ್-ಚೆಕಿಂಗ್ ಕಾರ್ಯಕ್ರಮದಲ್ಲಿ ಪಾಲುದಾರಿಕೆ

 

ಲಾಜಿಕಲಿ ಫ್ಯಾಕ್ಟ್ಸ್  ಲಿಮಿಟೆಡ್ ನ ಕಾನೂನುಗಳು (ಲಾಜಿಕಲಿ ಫ್ಯಾಕ್ಟ್ಸ್)

ಆರ್ಟಿಕಲ್ I: ಹೆಸರು, ಉದ್ದೇಶ ಮತ್ತು ಸ್ವಾತಂತ್ರ್ಯ

1.1 ಈ ಸಂಸ್ಥೆಯ ಹೆಸರು ಲಾಜಿಕಲಿ ಫ್ಯಾಕ್ಟ್ಸ್ ಎಂದು ಇರುತ್ತದೆ

1.2 ಲಾಜಿಕಲಿ ಫ್ಯಾಕ್ಟ್ಸ್ ನ ಉದ್ದೇಶವು ಸ್ವತಂತ್ರ ಫ್ಯಾಕ್ಟ್- ಚೆಕಿಂಗ್ ಚಟುವಟಿಕೆಗಳನ್ನು ನಡೆಸುವುದು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸಾರ್ವಜನಿಕರಿಗೆ ತಪ್ಪು  ಮಾಹಿತಿಯೊಂದಿಗೆ ಸಂಬಂಧಿಸಿದ ಹಾನಿಗಳನ್ನು ಪರಿಹರಿಸುವ ಮೂಲಕ ಸೇವೆ ಸಲ್ಲಿಸುವುದು.

1.3 ಲಾಜಿಕಲಿ ಫ್ಯಾಕ್ಟ್ಸ್ ಮೂಲ ಕಂಪನಿಯಾದ ದಿ ಲಾಜಿಕಲಿ ಲಿಮಿಟೆಡ್‌ನಿಂದ (ಲಾಜಿಕಲಿ ಎಂದು ಕರೆಯಲಾಗುತ್ತದೆ) ಪ್ರತ್ಯೇಕ ಮತ್ತು ಸ್ವತಂತ್ರವಾದ ಬಿಸಿನೆಸ್ ಘಟಕವಾಗಿ ಕಾರ್ಯನಿರ್ವಹಿಸುತ್ತದೆ . ಲಾಜಿಕಲಿ ಫ್ಯಾಕ್ಟ್ಸ್ ಐರ್ಲೆಂಡ್‌ನಲ್ಲಿ ನೋಂದಾಯಿತ ಕಂಪನಿಯಾಗಿದ್ದು, ರಿಜಿಸ್ಟ್ರಿ ಹೆಸರು ಲಾಜಿಕಲಿ ಫ್ಯಾಕ್ಟ್ಸ್ ಲಿಮಿಟೆಡ್, ಮತ್ತು ರಿಜಿಸ್ಟ್ರಿ ಸಂಖ್ಯೆ 704166. ಇದು ಯುನೈಟೆಡ್ ಕಿಂಗ್‌ಡಂನಲ್ಲಿ ದಿ ಲಾಜಿಕಲಿ ಲಿಮಿಟೆಡ್‌ನ ಮಾಲೀಕತ್ವದಲ್ಲಿದೆ.

ಆರ್ಟಿಕಲ್ II: ಸಂಪಾದಕೀಯ ಸ್ವಾತಂತ್ರ್ಯ

2.1 ಸಂಪಾದಕೀಯ ಸ್ವಾತಂತ್ರ್ಯ: ಲಾಜಿಕಲಿ ಫ್ಯಾಕ್ಟ್ಸ್  ಲಾಜಿಕಲಿ ಇಂದ ಪೂರ್ಣ ಸಂಪಾದಕೀಯ ಸ್ವಾತಂತ್ರ್ಯವನ್ನು ನಿರ್ವಹಿಸುತ್ತದೆ. ಫ್ಯಾಕ್ಟ್ ಚೆಕಿಂಗ್ ನ ಚಟುವಟಿಕೆಗಳ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸಿಕೊಳ್ಳಲು ಈ ಸ್ವಾತಂತ್ರ್ಯವು ನಿರ್ಣಾಯಕವಾಗಿದೆ.

2.2 ಸಂಪಾದಕೀಯ ನಿರ್ಧಾರಗಳು: ಆಯ್ಕೆ, ಪರೀಕ್ಷೆ ಮತ್ತು ಫ್ಯಾಕ್ಟ್- ಚೆಕಿಂಗ್ ನ  ಪ್ರಕಟಣೆ ಸೇರಿದಂತೆ ಎಲ್ಲಾ ಸಂಪಾದಕೀಯ ನಿರ್ಧಾರಗಳನ್ನು, ಲಾಜಿಕಲಿಯ ಯಾವುದೇ ಹಸ್ತಕ್ಷೇಪ ಅಥವಾ ಪ್ರಭಾವವಿಲ್ಲದೆ ಲಾಜಿಕಲಿ ಫ್ಯಾಕ್ಟ್ಸ್  ನ ಸಂಪಾದಕೀಯ ತಂಡವು ಸ್ವತಂತ್ರವಾಗಿ ತೆಗೆದುಕೊಳ್ಳುತ್ತದೆ.

2.3 ಪ್ರತ್ಯೇಕ ನಿರ್ವಹಣೆ ಮತ್ತು ಕಾರ್ಯಾಚರಣೆಗಳು: ಲಾಜಿಕಲಿ ಫ್ಯಾಕ್ಟ್ಸ್ ತನ್ನ ಮೀಸಲಾದ ನಿರ್ವಹಣಾ ತಂಡ ಮತ್ತು ಕಾರ್ಯಾಚರಣೆಯ ಸಿಬ್ಬಂದಿಯನ್ನು ಹೊಂದಿದೆ, ಯಾವುದೇ ಆಸಕ್ತಿಯ ಸಂಘರ್ಷವನ್ನು ತಡೆಯಲು ಲಾಜಿಕಲಿ ಫ್ಯಾಕ್ಟ್ಸ್ ನಿಂದ ಭಿನ್ನವಾಗಿದೆ.

2.4 ಹಣಕಾಸಿನ ಸ್ವಾತಂತ್ರ್ಯ: ಲಾಜಿಕಲಿ ಫ್ಯಾಕ್ಟ್ಸ್   ಲಾಜಿಕಲಿ ಇಂದ ಪ್ರತ್ಯೇಕ ಮತ್ತು ಸ್ವತಂತ್ರ ಅಂಗಸಂಸ್ಥೆಯಾಗಿದ್ದರೂ, ಪೋಷಕ ಕಂಪನಿಯ ಹಣಕಾಸಿನ ಪರಿಗಣನೆಗಳು ಸಂಪಾದಕೀಯ ನಿರ್ಧಾರಗಳ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇದು ಪ್ರತ್ಯೇಕ ಬಜೆಟ್ ಮತ್ತು ಹಣಕಾಸು ಸಂಪನ್ಮೂಲಗಳೊಂದಿಗೆ ಕಾರ್ಯನಿರ್ವಹಿಸುತ್ತದೆ.

ಆರ್ಟಿಕಲ್ III: ಆಡಳಿತ ಮತ್ತು ಹೊಣೆಗಾರಿಕೆ

3.1 ಆಡಳಿತ ರಚನೆ: ಲಾಜಿಕಲಿ ಫ್ಯಾಕ್ಟ್ಸ್ ನ  ಮ್ಯಾನೇಜಿಂಗ್ ಡೈರೆಕ್ಟರ್ ನೇತೃತ್ವ ವಹಿಸುತ್ತಾರೆ, ಅವರು ಸಂಸ್ಥೆಯ ಧ್ಯೇಯ, ಸಂಪಾದಕೀಯ ಸ್ವಾತಂತ್ರ್ಯ ಮತ್ತು ಅದರ ಪಾಲುದಾರರು ಮತ್ತು ಗ್ರಾಹಕರಿಗೆ ಕಾರ್ಯವನ್ನು ತಲುಪಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಮತ್ತು ಸಂಪಾದಕೀಯ ಶ್ರೇಷ್ಠತೆಗಾಗಿ ಅದರ ಸಲಹಾ ಮಂಡಳಿಗೆ ವರದಿ ಮಾಡುತ್ತಾರೆ.

3.2 ಪಾರದರ್ಶಕತೆ ಮತ್ತು ವರದಿ: ಲಾಜಿಕಲಿ ಫ್ಯಾಕ್ಟ್ಸ್ ತನ್ನ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆಗೆ ಬದ್ಧವಾಗಿದೆ. ಅದರ ಸಂಪಾದಕೀಯ ನಿರ್ಧಾರಗಳು, ಆಡಳಿತ ರಚನೆ ಮತ್ತು ಅದರ ಹಣಕಾಸಿನ ಹೇಳಿಕೆಗಳ ಸ್ಥಗಿತವನ್ನು ವಿವರಿಸುವ ವಾರ್ಷಿಕ ವರದಿಯು ಅದರ ವೆಬ್‌ಸೈಟ್‌ನಲ್ಲಿ ಸ್ವಯಂ-ನಿಯಂತ್ರಕ ಸಂಸ್ಥೆಗಳು ಒದಗಿಸಿದ ಅಗತ್ಯತೆಗಳ ಪ್ರಕಾರ ಸಾರ್ವಜನಿಕವಾಗಿ ಲಭ್ಯವಿರುತ್ತದೆ, ಆದರೆ ಇವುಗಳಿಗೆ ಸೀಮಿತವಾಗಿಲ್ಲ, ಇಂಟರ್ನ್ಯಾಷನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್ ಮತ್ತು ಯುರೋಪಿಯನ್ ಫ್ಯಾಕ್ಟ್-ಚೆಕರ್ಸ್ ಸ್ಟ್ಯಾಂಡರ್ಡ್ಸ್ ನೆಟ್ವರ್ಕ್.

ಆರ್ಟಿಕಲ್ IV: ಪಕ್ಷೇತರ ನೀತಿ

4.1 ಲಾಜಿಕಲಿ  ಫ್ಯಾಕ್ಟ್ಸ್ ತನ್ನ ಎಲ್ಲಾ ಕಾರ್ಯಾಚರಣೆಗಳಲ್ಲಿ ಕಟ್ಟುನಿಟ್ಟಾದ ಪಕ್ಷಾತೀತ ವಿಧಾನವನ್ನು ಎತ್ತಿಹಿಡಿಯಲು ಸಮರ್ಪಿತವಾಗಿದೆ. ಯಾವುದೇ ರಾಜಕೀಯ ವ್ಯಕ್ತಿಗಳು, ಪಕ್ಷಗಳು ಅಥವಾ ಸೈದ್ಧಾಂತಿಕವಾಗಿ ಚಾಲಿತ ಸಂಸ್ಥೆಗಳೊಂದಿಗೆ ನಾವು ಯಾವುದೇ ವಾಣಿಜ್ಯ, ಸಾಂಸ್ಥಿಕ ಅಥವಾ ಹಣಕಾಸಿನ ಸಂಬಂಧಗಳನ್ನು ಹೊಂದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಮ್ಮ ಸೇವೆಗಳು ಅಂತಹ ಘಟಕಗಳಿಗೆ ಲಭ್ಯವಿಲ್ಲ ಅಥವಾ ನಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ರಾಜಕೀಯ ಜಾಹೀರಾತು ಉದ್ದೇಶಗಳಿಗಾಗಿ ಬಳಸಿಕೊಳ್ಳಲು ನಾವು ಅನುಮತಿಸುವುದಿಲ್ಲ.

4.2 ಲಾಜಿಕಲಿ ಫ್ಯಾಕ್ಟ್ಸ್ ತಂಡದ ಪ್ರತಿಯೊಬ್ಬ ಸದಸ್ಯರು ಅಂತಹ ಘಟಕಗಳಲ್ಲಿ ಸದಸ್ಯತ್ವ ಸೇರಿದಂತೆ ರಾಜಕೀಯ ಪಕ್ಷಗಳ ಸಾರ್ವಜನಿಕ ಪ್ರಚಾರವನ್ನು ನಿಷೇಧಿಸುವ ಒಪ್ಪಂದಕ್ಕೆ ಬದ್ಧರಾಗಿರುತ್ತಾರೆ.

4.3 ಇದಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅಥವಾ ರಾಜಕೀಯವಾಗಿ ಜೋಡಿಸಲಾದ ಚಳುವಳಿಗಳೊಂದಿಗೆ ಯಾವುದೇ ಬೆಂಬಲ ಅಥವಾ ಸಂಬಂಧವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದರಿಂದ ಲಾಜಿಕಲಿ ಫ್ಯಾಕ್ಟ್ಸ್  ಸಿಬ್ಬಂದಿಯನ್ನು ನಿರ್ಬಂಧಿಸಲಾಗಿದೆ. ಇದು ರಾಜಕೀಯ ವಿಷಯವನ್ನು ಪೋಷ್ಟ್ ಮಾಡುವುದು, ಅಥವಾ ಅನುಮೋದಿಸುವ ನಿಷೇಧವನ್ನು ಒಳಗೊಂಡಿದೆ. ತಮ್ಮ ಕೊಡುಗೆಗಳು ರಾಜಕೀಯ ಪಕ್ಷಪಾತವನ್ನು ಸೂಚಿಸುವ ಸೂಕ್ಷ್ಮ ಸಾಂಸ್ಕೃತಿಕ ಅಥವಾ ಸಾಮಾಜಿಕ ವಿಷಯಗಳ ಬಗ್ಗೆ ರಾಜಕೀಯವಾಗಿ ಆವೇಶದ ಚರ್ಚೆಗಳಲ್ಲಿ ಭಾಗವಹಿಸುವುದನ್ನು ಅಥವಾ ಕೊಡುಗೆ ನೀಡುವುದನ್ನು ಸಿಬ್ಬಂದಿ ಸದಸ್ಯರು ತಪ್ಪಿಸಬೇಕೆಂದು ಹೇಳಲಾಗಿದೆ.

4.4. ಮತ್ತು, ಲಾಜಿಕಲಿ ಫ್ಯಾಕ್ಟ್ಸ್ ಎಲ್ಲಾ ಉದ್ಯೋಗಿಗಳು ನಿರ್ದಿಷ್ಟ ಯೋಜನೆಗಳಲ್ಲಿ ಅವರ ಕೆಲಸದ ಮೇಲೆ ಪರಿಣಾಮ ಬೀರುವ ಆಸಕ್ತಿಯ ಯಾವುದೇ ಸಂಭಾವ್ಯ ಸಂಘರ್ಷಗಳನ್ನು ಬಹಿರಂಗಪಡಿಸುವ ಅಗತ್ಯವಿದೆ. ಯೋಜನೆಯಲ್ಲಿ ಅವರ ಪಾಲ್ಗೊಳ್ಳುವಿಕೆಯು ಪಕ್ಷಾತೀತತೆಯನ್ನು ಕಾಪಾಡಿಕೊಳ್ಳಲು ನಮ್ಮ ಖ್ಯಾತಿಗೆ ಧಕ್ಕೆ ತರಬಹುದೇ ಎಂದು ಅವರು ನಿರ್ಣಯಿಸಬೇಕು ಮತ್ತು ನಮ್ಮ ಫ್ಯಾಕ್ಟ್- ಚೆಕಿಂಗ್ ಕಾರ್ಯಾಚರಣೆಯ ಸಮಗ್ರತೆ ಮತ್ತು ನಿಷ್ಪಕ್ಷಪಾತವನ್ನು ಕಾಪಾಡಲು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ