ಲಾಜಿಕಲಿ ಫ್ಯಾಕ್ಟ್ಸ್ ನ ಮುಖ್ಯ ಕಛೇರಿ ಐರ್ಲೆಂಡ್‌ನಲ್ಲಿದೆ. ಪ್ರಸ್ತುತವಾಗಿ ಕಂಪನಿಯು ಯೂರೋಪಿಯನ್ ಯೂನಿಯನ್ (ಇಯು), ಯುನಿಟೈಡ್ ಕಿಂಗ್‌ಡಮ್(ಯು.ಕೆ) ಮತ್ತು ಭಾರತದಲ್ಲಿ ಸಿಬ್ಬಂದಿಯನ್ನು ಹೊಂದಿದೆ. ಆಂಗ್ಲ ಜೊತೆಗೆ, ನಾವು ಡ್ಯಾನಿಶ್, ಸ್ವೀಡಿಷ್, ಹಿಂದಿ, ಕನ್ನಡ, ಅಸ್ಸಾಮಿ ಮತ್ತು ತೆಲುಗು ಭಾಷೆಗಳಲ್ಲಿ ಫ್ಯಾಕ್ಟ್ ಚೆಕ್ ಗಳನ್ನು ಪ್ರಕಟಿಸುತ್ತೇವೆ, ಫಿನ್ನಿಷ್, ಟರ್ಕಿಶ್, ಸ್ಪ್ಯಾನಿಷ್ ಮತ್ತು ರಷ್ಯನ್ ಭಾಷೆಗಳಲ್ಲಿ ಫ್ಯಾಕ್ಟ್ ಚೆಕ್ ಗಳನ್ನು ಪ್ರಕಟಿಸುವ ಯೋಜನೆಯನ್ನು ಹೊಂದಿದೆ.


ವೃತ್ತಿಪರ ಫ್ಯಾಕ್ಟ್ ಚೆಕ್‌ರ್ಸ್ ಮತ್ತು ಬಹುಭಾಷ ವೃತ್ತಿಪರ ಫ್ಯಾಕ್ಟ್ ಚೆಕ್‌ರ್ಸ್ ಮತ್ತು ಬಹುಭಾಷ ಪರಿಣಿತಿ ಹೊಂದಿರುವ ಸಂಪಾದಕೀಯ ಸದಸ್ಯರ ತಂಡವು ಎಡಿಟೋರಿಯಲ್ ಆಪರೇಷನ್ಸ್ ನ ಗ್ಲೋಬಲ್ ಹೆಡ್ ಆದ ಜಸ್ಕಿರತ್ ಸಿಂಗ್ ಬಾವಾ ಅವರ ನೇತೃತ್ವದಲ್ಲಿ ಮತ್ತು ಲಾಜಿಕಲಿ ಫ್ಯಾಕ್ಟ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ಬೇಬಾರ್ಸ್ ಓರ್ಸೆಕ್ ಅವರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ.

meet the team

ಸಂಪಾದಕೀಯ ತಂಡ

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.