೨೦೨೨ರ ಕಾಂಗ್ರೆಸ್ ಪ್ರತಿಭಟನೆಯ ಚಿತ್ರವನ್ನು ರಾಮ ಮಂದಿರದ ವಿರುದ್ಧ ನಡೆದ 'ಪ್ರತಿಭಟನೆ' ಎಂದು ತಪ್ಪಾಗಿ ಹಂಚಿಕೊಳ್ಳಲಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್
ನವೆಂಬರ್ 23 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೨ರ ಕಾಂಗ್ರೆಸ್ ಪ್ರತಿಭಟನೆಯ ಚಿತ್ರವನ್ನು ರಾಮ ಮಂದಿರದ ವಿರುದ್ಧ ನಡೆದ 'ಪ್ರತಿಭಟನೆ' ಎಂದು ತಪ್ಪಾಗಿ ಹಂಚಿಕೊಳ್ಳಲಗಿದೆ

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೈರಲ್ ಚಿತ್ರದಲ್ಲಿ, ಕಾಂಗ್ರೆಸ್ ನಾಯಕರು ಹಣದುಬ್ಬರ ಮತ್ತು ಜಿಎಸ್‌ಟಿ ಹೆಚ್ಚಳದ ವಿರುದ್ಧ ಪ್ರತಿಭಟಿಸುತ್ತಿದ್ದರು. ರಾಮ ಮಂದಿರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ಕ್ಲೈಮ್ ಐಡಿ 94ec1d7e

ಇಲ್ಲಿನ ಹೇಳಿಕೆ ಏನು?

ಭಾರತೀಯ ರಾಜಕಾರಣಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಪ್ಪು ಬಟ್ಟೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ೨೦೨೦ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶಂಕುಸ್ಥಾಪನೆ ಮಾಡಿದ ರಾಮ ಮಂದಿರಕ್ಕೆ ಚಿತ್ರವನ್ನು ಲಿಂಕ್ ಮಾಡಲಾಗಿದೆ.

ಆಗಸ್ಟ್ ೫, ೨೦೨೦ರಂದು ಶ್ರೀ ರಾಮ ಜನ್ಮಭೂಮಿ ಮಂದಿರ ಅಥವಾ ರಾಮ ಮಂದಿರದ ಶಂಕುಸ್ಥಾಪನೆ ನಡೆಯುತ್ತಿದ್ದಾಗ, ಕಾಂಗ್ರೆಸ್ ಪಕ್ಷದ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ ಭವನಕ್ಕೆ ಬಂದು ಪ್ರತಿಭಟಿಸಿದರು ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರವನ್ನು ಎಕ್ಸ್‌ (ಹಿಂದೆ ಟ್ವಿಟ್ಟರ್) ಮತ್ತು ಫೇಸ್‌ಬುಕ್‌ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಎಕ್ಸ್‌ ನಲ್ಲಿ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ, "ರಾಮ ಮಂದಿರದ ಭೂಮಿ ಪೂಜೆಯ ದಿನ ೦೫ ಆಗಷ್ಟ್ ೨೦೨೦ ರಂದು ಎಲ್ಲಾ ಕಾಂಗ್ರೇಸ್ MP ಗಳು ಕಪ್ಪು ಬಟ್ಟೆ ದರಿಸಿ ಸಂಸತ್ತಿಗೆ ಬಂದಿದ್ದರು, ಇವರಿಗೆ ಹಿಂದೂಗಳು ಬೇಡ ಹಿಂದೂಗಳ ವೋಟ್ ಮಾತ್ರ ಬೇಕು," ಎಂದು ಬರೆಯಲಾಗಿದೆ. ಪೋಷ್ಟ್ ನ ಆರ್ಕೈವ್ ಲಿಂಕ್ ಅನ್ನು ಇಲ್ಲಿ ನೋಡಬಹುದು. ಇದೇ ರೀತಿಯ ಹೇಳಿಕೆಗಳೊಂದಿಗೆ ಫೋಟೋವನ್ನು ಹಂಚಿಕೊಳ್ಳುವ ಪೋಷ್ಟ್ ಗಳ ಇತರ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ) 

ಆದರೆ, ಈ ಚಿತ್ರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಹಣದುಬ್ಬರ, ನಿರುದ್ಯೋಗ ಹಾಗು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಹೆಚ್ಚಳದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ವೈರಲ್ ಆಗಿರುವ ಫೋಟೋ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಸಂಬಂಧಿಸಿಲ್ಲ.

ವಾಸ್ತವಾಂಶಗಳು

ಈ ವೈರಲ್ ಚಿತ್ರದ ರಿವರ್ಸ್ ಇಮೇಜ್ ಸರ್ಚ್ ಆಗಸ್ಟ್ ೫, ೨೦೨೨ ರಂದು ಅದೇ ಚಿತ್ರವನ್ನು ಹೊಂದಿರುವ ಹಲವಾರು ಸುದ್ದಿ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ಆದರೆ, ಈ ವರದಿಗಳು ರಾಮ ಮಂದಿರದ ಶಿಲಾನ್ಯಾಸ ಸಮಾರಂಭದ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ಹಣದುಬ್ಬರ, ನಿರುದ್ಯೋಗ ಮತ್ತು ಜಿಎಸ್‌ಟಿ ಹೆಚ್ಚಳದ ವಿಷಯಗಳ ಕುರಿತು ಸಂಸತ್ ಭವನದ ಹೊರಗೆ ಕಾಂಗ್ರೆಸ್ ಸಂಸದರು ನಡೆಸಿದ ಪ್ರತಿಭಟನೆಯ ಬಗ್ಗೆ ಉಲ್ಲೇಖಿಸಿವೆ. 

ಆಗಸ್ಟ್ ೫, ೨೦೨೨ ರಂದು ಟೆಲಿಗ್ರಾಫ್ ಇಂಡಿಯಾ ಪ್ರಕಟಿಸಿದ ವರದಿಯು ವೈರಲ್ ಚಿತ್ರವನ್ನು ಒಳಗೊಂಡಿದೆ. ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿಯಲ್ಲಿ ಫೋಟೋಗೆ ಕ್ರೆಡಿಟ್ ನೀಡಲಾಗಿದೆ ವರದಿಯ ಪ್ರಕಾರ, ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳ ಮತ್ತು ನಿರುದ್ಯೋಗದ ವಿರುದ್ಧ ಪಕ್ಷದ ರಾಷ್ಟ್ರವ್ಯಾಪಿ ಆಂದೋಲನದ ಭಾಗವಾಗಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ ಭವನದ ಬಳಿ ಪ್ರತಿಭಟನೆ ನಡೆಸಿದ್ದರು ಮತ್ತು ರಾಷ್ಟ್ರಪತಿ ಭವನದತ್ತ ಪ್ರತಿಭಟನೆಯು ಮುಂದೊರೆಯಾಗಲಿತ್ತು.

ಆಗಸ್ಟ್ ೨೦೨೨ ರಲ್ಲಿ ಟೆಲಿಗ್ರಾಫ್ ಇಂಡಿಯಾ ಪ್ರಕಟಿಸಿದ ವರದಿಯ ಸ್ಕ್ರೀನ್‌ಶಾಟ್.
(ಮೂಲ: ಟೆಲಿಗ್ರಾಫ್ ಇಂಡಿಯಾ /ಸ್ಕ್ರೀನ್‌ಶಾಟ್)

ಪಿಟಿಐನ ಫೋಟೋ ಆರ್ಕೈವ್‌ನಲ್ಲಿ ನಾವು ಈ ಚಿತ್ರವನ್ನು ಕಂಡುಕೊಂಡೆವು. ಅಲ್ಲಿ ಫೋಟೋ ವಿವರಣೆಯು ಇದನ್ನು ಆಗಸ್ಟ್ ೫, ೨೦೨೨ ರಂದು ತೆಗೆದುಕೊಳ್ಳಲಾಗಿದೆ ಎಂದು ನಮೂದಿಸಲಾಗಿದೆ-ರಾಮ ಮಂದಿರದ ಶಂಕುಸ್ಥಾಪನೆ ಮಾಡಿದ ಎರಡು ವರ್ಷಗಳ ನಂತರ.

ಪಿಟಿಐ ಆರ್ಕೈವ್‌ನಲ್ಲಿ ನೋಡಿದಂತೆ ಚಿತ್ರದ ವಿವರಣೆಯ ಸ್ಕ್ರೀನ್‌ಶಾಟ್. (ಮೂಲ: ಪಿಟಿಐ)

ವೈರಲ್ ಆದ ಚಿತ್ರದಲ್ಲಿ ಹಣದುಬ್ಬರ ಮತ್ತು ಜಿಎಸ್‌ಟಿಗೆ ಸಂಬಂಧಿಸಿದ ಪೋಷ್ಟ್ರ್‌ಗಳು ಭಾಗವಹಿಸಿದ ನಾಯಕರ ಕೈಯಲ್ಲಿ ನೋಡಬಹುದು. ರಾಮ ಮಂದಿರ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಪೋಷ್ಟ್ರ್ ಚಿತ್ರದಲ್ಲಿ ಗೋಚರಿಸುವುದಿಲ್ಲ.

ಜಿಎಸ್‌ಟಿಯನ್ನು ಹಿಂಪಡೆಯಬೇಕು, ಗ್ಯಾಸ್ ಬೆಲೆ ಇಳಿಕೆ ಮತ್ತು ಹಣದುಬ್ಬರದ ವಿರುದ್ಧ ಒತ್ತಾಯಿಸುವ ಹಲವಾರು ಪೋಸ್ಟರ್‌ ಗಳನ್ನು ವೈರಲ್ ಚಿತ್ರದಲ್ಲಿ ಕಾಣಬಹುದು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಪ್ರತಿಭಟನೆಯ ಕಾರಣ?

ಸುದ್ದಿ ವರದಿಗಳ ಪ್ರಕಾರ, ವಿರೋಧ ಪಕ್ಷದ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಎತ್ತಿದರು, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳವನ್ನು ಹಿಂಪಡೆಯಲು ಒತ್ತಾಯಿಸಿದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ, ಹಿರಿಯ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್, ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್ ಸೇರಿದಂತೆ ೬೪ ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 

ದಿ ಇಂಡಿಯನ್ ಎಕ್ಸ್‌ಪ್ರೆಸ್, ದಿ ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ ಬಿಸಿನೆಸ್ ಲೈನ್ ಮತ್ತು ಎನ್‌ಡಿಟಿವಿಯಂತಹ ಹಲವಾರು ಮಾಧ್ಯಮಗಳು ಆಗಸ್ಟ್ ೫, ೨೦೨೨ ರಂದು ಸಂಸತ್ತಿನ ಹೊರಗೆ ಕಾಂಗ್ರೆಸ್ ನಾಯಕರು ಕಪ್ಪು ಬಟ್ಟೆ ಧರಿಸಿ ಹಣದುಬ್ಬರ ಮತ್ತು ಜಿಎಸ್‌ಟಿ ಹೆಚ್ಚಳದ ವಿರುದ್ಧ ಪ್ರತಿಭಟಿಸಿದ್ದ ಇತರ ಚಿತ್ರಗಳನ್ನೂ ಸಹ ಪ್ರಕಟಿಸಿವೆ.

ಕಾಂಗ್ರೆಸ್ ತನ್ನ ನಾಯಕರನ್ನು ಗುರಿಯಾಗಿಸಿಕೊಂಡ ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧವೂ ಪ್ರತಿಭಟಿಸಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪ್ರತಿಭಟನಾ ನಿರತ ವಿರೋಧ ಪಕ್ಷಗಳ ನಾಯಕರನ್ನು ದೆಹಲಿ ಪೊಲೀಸರು ವಿಜಯ್ ಚೌಕ್‌ನಲ್ಲಿ ತಡೆದರು ಮತ್ತು ರಾಷ್ಟ್ರಪತಿ ಭವನದ ಕಡೆಗೆ ಹೋಗಲು ಬಿಡಲಿಲ್ಲ ಎಂದು ವರದಿಯಲ್ಲಿ ಸೂಚಿಸಲಾಗಿದೆ. ಇದಲ್ಲದೆ, ಶ್ರೀರಾಮ ಜನ್ಮಭೂಮಿಯ ಅಡಿಪಾಯವನ್ನು ಕಾಂಗ್ರೆಸ್ ನಾಯಕರು ಸಾಂಕೇತಿಕವಾಗಿ ವಿರೋಧಿಸಿದ್ದರು ಎಂದು ಯಾವುದೇ ವರದಿಗಳಲ್ಲಿ ಎಲ್ಲಿಯೂ ಹೇಳಲಾಗಿಲ್ಲ.

೨೦೨೦ರ ಆಗಸ್ಟ್‌ನಲ್ಲಿ ರಾಮ ಮಂದಿರಕ್ಕೆ ಶಂಕುಸ್ಥಾಪನೆಯಾದಾಗ, ಯಾವುದೇ ವಿಶ್ವಾಸಾರ್ಹ ಸುದ್ದಿವಾಹಿನಿಯು ಈ ಕ್ರಮದ ವಿರುದ್ಧ ಕಾಂಗ್ರೆಸ್ ನ ಪ್ರತಿಭಟನೆಯ ಬಗ್ಗೆ ಎಲ್ಲಿಯೂ ವರದಿ ಪ್ರಕಟಿಸಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ವಾಸ್ತವವಾಗಿ, ಕಾಂಗ್ರೆಸ್ ಪಕ್ಷವು ಎಕ್ಸ್‌ ನಲ್ಲಿ ಪೋಷ್ಟ್ ಮೂಲಕ ಈ ಸಂದರ್ಭದಲ್ಲಿ ಜನರನ್ನು ಅಭಿನಂದಿಸಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾಡ್ರಾ ಸೇರಿದಂತೆ ಹಲವಾರು ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಭಗವಾನ್ ರಾಮನನ್ನು ವಿವರಿಸುವ ಪೋಷ್ಟ್ ಗಳನ್ನು ಹಂಚಿಕೊಂಡಿದ್ದಾರೆ- ರಾಮನು ಅಯೋಧ್ಯೆಯಲ್ಲಿ ಜನಿಸಿದರು ಎಂದು ನಂಬಲಾಗಿದೆ ಮತ್ತು ದೇವಾಲಯದ ಸ್ಥಳ - ಅತ್ಯುತ್ತಮ ಮಾನವ ಗುಣಗಳ ಮೂರ್ತರೂಪವಾಗಿವೆ ಎಂದು ವಿಶ್ಲೇಷಿಸಲಾಗಿದೆ.

ತೀರ್ಪು

ವೈರಲ್ ಚಿತ್ರವು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಹಣದುಬ್ಬರ, ನಿರುದ್ಯೋಗ ಮತ್ತು ಜಿಎಸ್‌ಟಿ ಹೆಚ್ಚಳದ ವಿರುದ್ಧ ಪ್ರತಿಭಟಿಸಿದನ್ನು ತೋರಿಸುತ್ತದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೂ ಇದಕ್ಕೂ ಸಂಬಂಧವಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿಸವರು: ಅಂಕಿತಾ ಕುಲಕರ್ಣಿ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.