ವೈರಲ್ ಚಿತ್ರದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಇರುವ ಮಹಿಳೆ ೨೦೨೦ ರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ಘೋಷಿಸಿದ ಕಾರ್ಯಕರ್ತೆಯಲ್ಲ

ಮೂಲಕ: ವಿವೇಕ್ ಜೆ
ನವೆಂಬರ್ 29 2022

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ವೈರಲ್ ಚಿತ್ರದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಇರುವ  ಮಹಿಳೆ ೨೦೨೦ ರಲ್ಲಿ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೀವಾ ಜಾಲಿ ಎಂಬ ಹೆಸರಿನ ಓರ್ವ ವಿದ್ಯಾರ್ಥಿಯನ್ನು ರಾಹುಲ್ ಗಾಂಧಿಯವರು ಭೇಟಿಯಾದ ಸಂದರ್ಭವು ವೈರಲ್ ಚಿತ್ರದಲ್ಲಿ ಕಂಡುಬಂದಿದೆ. ಪಾಕಿಸ್ತಾನ ಪರ ಘೋಷಣೆ ಮಾಡಿದ್ದು ಅವರಲ್ಲ.

ಕ್ಲೈಮ್ ಐಡಿ c4e8a090


ಸಂದರ್ಭ

ಫೆಬ್ರವರಿ ೨೦, ೨೦೨೨ ರಂದು ಬೆಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿ.ಎ.ಎ) ಯ ವಿರುದ್ಧ ನಡೆದ ಪ್ರತಿಭಟನೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ಘೋಷಿಸಿದ ಪ್ರತಿಭಟನಾಕಾರಿಯೊಬ್ಬರನ್ನು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಭೇಟಿಯಾಗಿದ್ದರು ಎಂದು ತೋರಿಸುವಂತೆ ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗಿದೆ. ಈ ಸಣ್ಣ ಕ್ಲಿಪ್ಪಿನಲ್ಲಿ ಎರಡು ವಿಭಿನ್ನ ದೃಶ್ಯಗಳನ್ನು ಜೊತೆ ಜೊತೆಗೆ ಕೂಡಿಸಿ ಹಂಚಿಕೊಳ್ಳಲಾಗಿದೆ. ಎಡಗಡೆಯ ದೃಶ್ಯದಲ್ಲಿ ರಾಹುಲ್ ಗಾಂಧಿಯವರು ಓರ್ವ ಹುಡುಗಿಯ ಜೊತೆ ನಿಂತಿರುವುದಾಗಿ ಕಾಣಿಸಿದ್ದು, ಬಲ ಬದಿಯಲ್ಲಿ ಒಂದು ಹುಡುಗಿ "ಪಾಕಿಸ್ತಾನ್ ಜಿಂದಾಬಾದ್" ಎಂದು ಘೋಷಿಸುವ ದೃಶ್ಯವು ಕಂಡುಬಂದಿದೆ. ಪ್ರಸ್ತುತವಾಗಿ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರಾ ಎಂಬ ಕಾರ್ಯಕ್ರಮ ನಡೆಸುತ್ತಿದ್ದು, ಪ್ರಚಲಿತವಾದ ವಿಡಿಯೋದಲ್ಲಿ ಅದರ ಲೋಗೋ ಕಂಡು ಬಂದಿದೆ. 


ವಾಸ್ತವವಾಗಿ

ಪಾಕಿಸ್ತಾನ ಪರ ಘೋಷಣೆಯನ್ನು ಕೂಗಿದಾಕೆಯು ಕರ್ನಾಟಕದ ಚಿಕ್ಕಮಗಳೂರು ಮೂಲದ ಪತ್ರಿಕೋದ್ಯಮ ವಿದ್ಯಾರ್ಥಿ ಅಮೂಲ್ಯಾ ಲಿಯೋನಾ. ಮೂಲತಃ ದಿ ಕ್ವಿಂಟ್ ಪ್ರಕಟಿಸಿದ ವರದಿಯೊಂದರಲ್ಲಿ ಅಮೂಲ್ಯಾ ಲಿಯೋನಾರವರು ಬೆಂಗಳೂರಿನಲ್ಲಿ ಸಿ.ಎ.ಎ ನಡೆದ ವಿರುದ್ಧ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಮಾಡುವುದನ್ನು ನೋಡಬಹುದು. ಆಕೆಯನ್ನು ದೇಶದ್ರೋಹ, ಶತ್ರುತ್ವವನ್ನು ಉತ್ತೇಜಿಸುವುದು ಹಾಗೂ ಸಾಮೂಹಿಕ ಕಿಡಿಗೇಡಿತನ ಮೊದಲಾದ ಆರೋಪಗಳ ಮೇಲೆ ಅರೆಸ್ಟ್ ಮಾಡಲಾಗಿತ್ತು. ಸುಮಾರು ೧೧೦ ದಿನಗಳ ಕಾರಾಗ್ರಹ ವಾಸದ ನಂತರ ಆಕೆಗೆ ಜಾಮೀನು ನೀಡಲಾಯಿತು. 


ಆದರೆ, ರಾಹುಲ್ ಗಾಂಧಿಯವರ ಜೊತೆ ಕಂಡು ಬಂದ ಹುಡುಗಿ ಅಮೂಲ್ಯಾ ಲಿಯೋನಾ ಅಲ್ಲ. ವೈರಲ್ ಆದ ರಾಹುಲ್ ಗಾಂಧಿಯವರ ಈ ಚಿತ್ರವು @miva_andreleo, ಎಂಬ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಕಂಡುಬಂದಿದೆ. ಈ ಇನ್ಸ್ಟಾಗ್ರಾಮ್ ಅಕೌಂಟ್ ಕೇರಳದ ಎರನಾಕುಲಮ್ ಮೂಲದ ಕೆ.ಎಸ.ಯು. ಸದಸ್ಯೆ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಮೀವಾ ಜಾಲಿಯವರದ್ದು. ಇವರ ಫೇಸ್ಬುಕ್ ಪೇಜ್ನಲ್ಲಿ ಇವರು ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ವಿಡಿಯೋ ಕೂಡ ಕಂಡುಬಂದಿದೆ. ಒಂದು ನಿಮಿಷ ದೀರ್ಘದ ಈ ವಿಡಿಯೋನಲ್ಲಿ ಮೀವಾ ಜಾಲಿಯವರು ಅಂಗರಕ್ಷಕರನ್ನು ದಾಟಿಬಂದು ರಾಹುಲ್ ಗಾಂಧಿಯವರನ್ನು ಭೇಟಿಯಾಗುವುದು, ಹಾಗು ಸ್ವಲ್ಪ ದೂರ ಅವರೊಂದಿಗೆ ನಡೆಯುವುದೂ ಕೂಡಾ ನೋಡಬಹುದು.


ಸೆಪ್ಟೆಂಬರ್ ೨೦೨೨ ರಲ್ಲಿ ಇದೇ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಲಿತಗೊಂಡಿದ್ದು, ಜಾಲಿಯವರು ಇದೇ ವಿಷಯದ ಬಗ್ಗೆ ಫೇಸ್ಬುಕ್ ನಲ್ಲಿ ಸ್ಪಷ್ಟೀಕರಣ ನೀಡಬೇಕಾಗಿ ಬಂದಿತ್ತು. ಮೂಲತಃ ಮಲಯಾಳಂ ಭಾಷೆಯಲ್ಲಿ ಇದ್ದ ಈ ಸ್ಪಷ್ಟೀಕರಣ ಹೇಳಿದ್ದೇನೆಂದರೆ "ಎರನಾಕುಲಮ್ ಜಿಲ್ಲೆಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ನನಗೆ ರಾಹುಲ್ ಗಾಂಧಿಯವರ ಜೊತೆ ನಡೆಯುವ ಅವಕಾಶ ಸಿಕ್ಕಿತ್ತು. ನಾನು ಅವರೊಂದಿಗೆ ಫೋಟೋ ತೆಗೆದುಕೊಂಡಿದ್ದೆ. ಆ ಫೋಟೋವನ್ನು ನಮ್ಮ ಪ್ರೀತಿಯ ನಾಯಕರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಕೂಡಾ ಹಂಚಿಕೊಂಡಿದ್ದರು. ಆದರೆ ಸಂಘ ಪರಿವಾರದವರು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರ ಮಾಡುತ್ತಿರುವುದೇನೆಂದರೆ, ಆ ಚಿತ್ರವು ಉತ್ತರ ಭಾರತದಲ್ಲೆಲ್ಲೋ ನಡೆದ ಘಟನೆಯಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ಘೋಷಿಸಿದ ಹುಡುಗಿಯದ್ದು. ನಾನು ನಿಮಗೆ ಹೇಳಬಹುದುದಾದದ್ದು ಇಷ್ಟೇ." 


ಡಿಜಿಟಲ್ ಮಾಧ್ಯಮವಾದ “ನ್ಯೂಸ್ ಮಿನಿಟ್” ಪ್ರಕಟಿಸಿದ ವರದಿಯೊಂದರ ಪ್ರಕಾರ ಬಿ.ಜೆ.ಪಿ. ಕಾರ್ಯಕರ್ತೆ ಪ್ರೀತಿ ಗಾಂಧಿಯವರೂ ಕೂಡಾ ಮೀವಾ ಜಾಲಿಯವರೇ ಅಮೂಲ್ಯಾ ಲಿಯೋನಾ ಎಂದು ತೋರಿಸುವಂತಹ ಚಿತ್ರವೊಂದನ್ನು ತಪ್ಪಾಗಿ ಹಂಚಿಕೊಂಡಿದ್ದರು. ಎರನಾಕುಲಮ್ ಜಿಲ್ಲೆಯ ಎಂ.ಪಿ. ಯಾದ ಹೈಬಿ ಈಡೆನ್ ಅವರು, ಪ್ರೀತಿ ಗಾಂಧಿಯವರು ಸುಳ್ಳು ಸುದ್ದಿ ಹರಡಿಸುತಿದ್ದಾರೆ ಎಂದು ಹೇಳಿ ಪೊಲೀಸ್ ಠಾಣೆಯಲ್ಲಿ ಒಂದು ದೂರನ್ನು ಸಲ್ಲಿಸಿದರು. ಮೇಲಾಗಿ, ಕಾಂಗ್ರೆಸ್ ಪಕ್ಷದ ಎಂ.ಪಿ. ಜೈರಾಮ್ ರಮೇಶ್ ಅವರು ಬೀ.ಜೆ.ಪಿ ಪಕ್ಷದ ಕಾರ್ಯಕರ್ತರ ಮೇಲೆ ಇದುವರೆಗೂ ೫ ದೂರುಗಳನ್ನು ನೋಂದಾಯಿಸಲಾಗಿದೆ ಎಂದು, ದೂರುಗಳ ಫೋಟೋ ಸಹಿತ ಟ್ವಿಟ್ಟರ್ನಲ್ಲಿ ಹಂಚಿಕೊಂಡರು.


ತೀರ್ಪು 

ರಾಹುಲ್ ಗಾಂಧಿಯವರು ಕೇರಳದ ಓರ್ವ ವಿದ್ಯಾರ್ಥಿನಿಯನ್ನು ಭೇಟಿಯಾಗುವ ಚಿತ್ರವನ್ನು ಆ ಚಿತ್ರದಲ್ಲಿರುವುದು ಅಮೂಲ್ಯಾ ಲಿಯೋನಾ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ರಾಹುಲ್ ಅವರು ಭೇಟಿಯಾಗಿದ್ದು ಮೀವಾ ಜಾಲಿ ಎಂಬ ಕೇರಳದ ಒಂದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಎಂದು, ಆ ವಿದ್ಯಾರ್ಥಿಯ ವೈಯಕ್ತಿಕ ಇನ್ಸ್ಟಾಗ್ರಾಮ್ ಅಕೌಂಟನ್ನು ಸಂಶೋಧಿಸಿದಾಗ ತಿಳಿದುಬಂದಿದೆ. ಆದ್ದರಿಂದ ಈ ಹೇಳಿಕೆಯನ್ನು ತಪ್ಪು ಎಂದು ಪರಿಗಣಿಸಲಾಗಿದೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.