ಇಲ್ಲ, ಭಾರತದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಕೆನಡಾ ಆರ್.ಎಸ್.ಎಸ್ ಅನ್ನು ನಿಷೇಧಿಸಿಲ್ಲ

ಮೂಲಕ: ಮೊಹಮ್ಮದ್ ಸಲ್ಮಾನ್
ಸೆಪ್ಟೆಂಬರ್ 26 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಭಾರತದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಕೆನಡಾ ಆರ್.ಎಸ್.ಎಸ್ ಅನ್ನು ನಿಷೇಧಿಸಿಲ್ಲ

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋ ಒಂದು ಲಾಭರಹಿತ ಸಂಸ್ಥೆಯ ಸಿಇಓ ಅನ್ನು ತೋರಿಸುತ್ತದೆ ಕೆನಡಾದ ಸರ್ಕಾರಿ ಅಧಿಕಾರಿಯಲ್ಲ, ಅಂತಹ ಕ್ರಮಕ್ಕಾಗಿ ಬೇಡಿಕೆಯನ್ನು ಮಾತ್ರ ನೀಡಲಾಗಿತ್ತು.

ಕ್ಲೈಮ್ ಐಡಿ 0b0dfa20

ಸಂದರ್ಭ

ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳು ಸಂಭಾವ್ಯವಾಗಿ ಭಾಗಿಯಾಗಿವೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ ನಂತರ ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿದೆ. ಭಾರತವು ಈ ಆರೋಪವನ್ನು ತಿರಸ್ಕರಿಸಿದೆ ಮತ್ತು ಅದನ್ನು ಅಸಂಬದ್ಧ ಎಂದು ಕರೆದಿದೆ. ಆರೋಪಗಳ ಬೆಳಕಿನಲ್ಲಿ ಕೆನಡಾ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕುವ ಮೂಲಕ ಪ್ರಚೋದಿಸಲ್ಪಟ್ಟ ಭಾರತವೂ ಸಹ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಿತು ಮತ್ತು ಕೆನಡಾದ ನಾಗರಿಕರಿಗೆ ವೀಸಾ ಸೇವೆಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ. 

ನಡೆಯುತ್ತಿರುವ ರಾಜತಾಂತ್ರಿಕ ಭಿನ್ನಾಭಿಪ್ರಾಯದ ಮಧ್ಯೆ, ಕೆನಡಾ ಸರ್ಕಾರವು ಹಿಂದೂ ರಾಷ್ಟ್ರೀಯವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ,ಭಾರತದ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೂಲ ಸಂಸ್ಥೆಯನ್ನು ನಿಷೇಧಿಸಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ಆ ವೀಡಿಯೋದಲ್ಲಿ, ವ್ಯಕ್ತಿಯೊಬ್ಬರು ನಾಲ್ಕು ಅಂಶಗಳಿಗಾಗಿ ತಮ್ಮ ವಾದವನ್ನು ಪ್ರಸ್ತುತಪಡಿಸುತ್ತಿದ್ದಾರೆ, ಅದರಲ್ಲಿ ಕೊನೆಯದು ಆರ್‌ಎಸ್‌ಎಸ್ ಅನ್ನು ತಕ್ಷಣವೇ ನಿಷೇಧಿಸಬೇಕು ಮತ್ತು ದೇಶದ ಕ್ರಿಮಿನಲ್ ಕೋಡ್‌ನಲ್ಲಿ ಪಟ್ಟಿ ಮಾಡಲಾದ ನಿಬಂಧನೆಗಳ ಅಡಿಯಲ್ಲಿ ಕೆನಡಾದಿಂದ ಅದರ ಏಜೆಂಟ್‌ಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸುತ್ತಿರುವುದನ್ನು ನೋಡಬಹುದು. 

ಈ ವೀಡಿಯೋವನ್ನು ಎಕ್ಸ್‌ (ಹಿಂದೆ ಟ್ವಿಟ್ಟರ್) ಮತ್ತು ಫೇಸ್‌ಬುಕ್‌ ನಲ್ಲಿ ಹಂಚಿಕೊಂಡ ಸಾಮಾಜಿಕ ಮಾಧ್ಯಮ ಬಳಕೆದಾರರು ಕೆನಡಾದ ಸರ್ಕಾರವು ಆರ್‌ಎಸ್‌ಎಸ್ ಮತ್ತು ಸಂಸ್ಥೆಯ ಏಜೆಂಟ್‌ಗಳು ತಕ್ಷಣವೇ ದೇಶದಿಂದ ತೊರೆಯಲು ಆದೇಶವನ್ನು ಹೊರಡಿಸಿದೆ ಎಂದು ಹೇಳಿಕೊಂಡಿದ್ದಾರೆ. ಆರ್ಕೈವ್ ಗಳನ್ನು  ಇಲ್ಲಿ ,ಇಲ್ಲಿ, ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್, ಫೇಸ್‌ಬುಕ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಕೆನಡಾ ಸರ್ಕಾರ ಅಂತಹ ಯಾವುದೇ ಆದೇಶ ಹೊರಡಿಸಿಲ್ಲ. ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿ ಸರ್ಕಾರಿ ಅಧಿಕಾರಿಯಲ್ಲ, ಆದರೆ ಲಾಭರಹಿತ ಸಂಸ್ಥೆಯೊಂದರ ಸದಸ್ಯ.

ವಾಸ್ತವಾಂಶಗಳೇನು?

ವೀಡಿಯೋದಲ್ಲಿ, ವ್ಯಕ್ತಿ ಆರ್‌ಎಸ್‌ಎಸ್ ಅನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ ಮತ್ತು ಯಾವುದೇ ಘೋಷಣೆಯನ್ನು ಮಾಡುತ್ತಿಲ್ಲ ಅಥವಾ ಯಾವುದೇ ಆದೇಶವನ್ನು ನೀಡುತ್ತಿಲ್ಲ. ವೀಡಿಯೋದಲ್ಲಿ ಮಾಡಲಾದ ನಾಲ್ಕು ಬೇಡಿಕೆಗಳಲ್ಲಿ ಒಂದಾದ- ಕೆನಡಾದಲ್ಲಿ ಆರ್‌ಎಸ್‌ಎಸ್‌ನ ಮೇಲೆ ನಿಷೇಧದ ಕರೆಯನ್ನು 'ಎನ್‌ಸಿಸಿಎಂ' ಮತ್ತು 'ಡಬ್ಲ್ಯುಎಸ್‌ಒ' ಜೊತಿಗೂಡಿ ಮಾಡಿದೆ ಎಂದು ವ್ಯಕ್ತಿ ಉಲ್ಲೇಖಿಸಿದ್ದಾರೆ.

ವೈರಲ್  ವೀಡಿಯೋ, '@nccmuslims' ಎಂಬ ವಾಟರ್‌ಮಾರ್ಕ್ ಅನ್ನು ಹೊಂದಿದೆ ಮತ್ತು ಇದರಿಂದ ಸುಳಿವನ್ನು ತೆಗೆದುಕೊಂಡು ನಾವು ಅದೇ ಹೆಸರಿನ ಟಿಕ್‌ಟಾಕ್ ಖಾತೆಯನ್ನು ಕಂಡುಕೊಂಡೆವು ಮತ್ತು ಖಾತೆಯು ಸೆಪ್ಟೆಂಬರ್ ೨೦ ರಂದು ವೈರಲ್ ವೀಡಿಯೋವನ್ನು ಹಂಚಿಕೊಂಡಿದೆ. ವೀಡಿಯೋ ವಿವರಣೆಯ ಪ್ರಕಾರ, ಎನ್‌ಸಿಸಿಎಂ ನ ಸಿಇಓ ಸ್ಟೀಫನ್ ಬ್ರೌನ್ ಅವರು ಕೆನಡಾದ ವಿಶ್ವ ಸಿಖ್ ಸಂಸ್ಥೆ (ಡಬ್ಲ್ಯುಎಸ್‌ಒ) ನೊಂದಿಗೆ ಜೊತೆಗೆ ಹೇಳಿಕೆಯನ್ನು ನೀಡಿದರು "ಭಾರತ ಸರ್ಕಾರದ ಏಜೆಂಟರಿಂದ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಪ್ರತಿಕ್ರಿಯೆಯಾಗಿ ನಮ್ಮ (ಕೆನಡಿಯನ್) ಸರ್ಕಾರದಿಂದ ಸ್ಪಷ್ಟ ಕ್ರಮಗಳಿಗೆ ಕರೆ ನೀಡಿ," ಎಂದು ಹೇಳುತ್ತಾರೆ. ಎನ್ ಸಿ ಸಿ ಎಂ ಕೆನಡಾದಲ್ಲಿ ನೆಲೆಗೊಂಡಿರುವ ಸ್ವತಂತ್ರ, ಪಕ್ಷೇತರ ಮತ್ತು ಲಾಭರಹಿತ ಸಂಸ್ಥೆಯಾದ, ನ್ಯಾಷನಲ್ ಕೌನ್ಸಿಲ್ ಆಫ್ ಕೆನಡಿಯನ್ ಮುಸ್ಲಿಂ (ಎನ್‌ಸಿಸಿಎಂ) 

ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾದ ಮೂಲ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಟಿಕ್‌ಟಾಕ್/ಸ್ಕ್ರೀನ್‌ಶಾಟ್)

ಎನ್‌ಸಿಸಿಎಂ ಅದೇ ವೀಡಿಯೋ ಅಥವಾ ಅದರ ವಿಸ್ತೃತ ಆವೃತ್ತಿಗಳನ್ನು ಇನ್‌ಸ್ಟಾಗ್ರಾಮ್ , ಫೇಸ್‌ಬುಕ್‌, ಯೂಟ್ಯೂಬ್, ಮತ್ತು ಎಕ್ಸ್‌ (ಹಿಂದೆ ಟ್ವಿಟ್ಟರ್) ನಲ್ಲಿ ಅದೇ ವಿವರಣೆಯೊಂದಿಗೆ ಅದರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ ಎಂದು ನಾವು ಕಂಡುಕೊಂಡಿದ್ದೇವೆ. ಆದರೆ ಅದರ ಎಕ್ಸ್‌ ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಸೆಪ್ಟೆಂಬರ್ ೧೯ ರಂದು ಇನ್‌ಸ್ಟಾಗ್ರಾಮ್  ನಲ್ಲಿ ಹಂಚಿಕೊಳ್ಳಲಾದ ವೀಡಿಯೋದ  ದೀರ್ಘ ಆವೃತ್ತಿಯು ಎನ್‌ಸಿಸಿಎಂ ಸಿಇಓ ಸ್ಟೀಫನ್ ಬ್ರೌನ್ ಎಂದು ವ್ಯಕ್ತಿಯನ್ನು ಗುರುತಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಬ್ರೌನ್ ಅವರು ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಸಾವಿನಲ್ಲಿ ಭಾರತವು ಭಾಗಿಯಾಗಿರುವ ಕುರಿತು ಕೆನಡಾ ಸರ್ಕಾರಕ್ಕೆ ಬೇಡಿಕೆಗಳ ಪಟ್ಟಿಯನ್ನು ಅವರ ಹೇಳಿಕೆಯಲ್ಲಿ ಪ್ರಸ್ತುತಪಡಿಸಿದ್ದರು.  ಡಬ್ಲ್ಯುಎಸ್‌ಒ ಮತ್ತು ಎನ್‌ಸಿಸಿಎಂ  ಒಟ್ಟಾಗಿ ಕೆನಡಾದ ಮುಸ್ಲಿಮರು ಆರ್‌ಎಸ್‌ಎಸ್‌ನಿಂದ ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಬ್ರೌನ್ ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್ ವೀಡಿಯೋ ಶೀರ್ಷಿಕೆಯಲ್ಲಿ ಎನ್‌ಸಿಸಿಎಂ ಮತ್ತು ಡಬ್ಲ್ಯುಎಸ್‌ಒ ಕೇವಲ ಆರ್‌ಎಸ್‌ಎಸ್ ಮೇಲೆ ನಿಷೇಧವನ್ನು ಕೋರುತ್ತಿದೆ ಎಂದು ಉಲ್ಲೇಖಿಸಲಾಗಿದೆ.(ಮೂಲ: ಇನ್‌ಸ್ಟಾಗ್ರಾಮ್/ಸ್ಕ್ರೀನ್‌ಶಾಟ್)

ಕೆನಡಾದ ನಾಗರಿಕರ ಮೇಲೆ ನಡೆಯುತ್ತಿರುವ ಹಿಂಸಾಚಾರವು ಭಾರತದಲ್ಲಿನ ಅಲ್ಪಸಂಖ್ಯಾತರು ಪ್ರತಿದಿನ ಎದುರಿಸಬೇಕಾದ ಸಂಗತಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬ್ರೌನ್ ಇದನ್ನು ಕೆನಡಾದ ನೆಲದಲ್ಲಿ ವಿದೇಶಿ ಸರ್ಕಾರದ ಉದ್ದೇಶಪೂರ್ವಕ ಹಿಂಸಾಚಾರ ಎಂದು ವಿವರಿಸಿದರು ಮತ್ತು ಕೆನಡಾದ ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕರೆ ನೀಡಿದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಅವರ ಹೇಳಿಕೆಯನ್ನು ಇನ್‌ಸ್ಟಾಗ್ರಾಮ್ ವೀಡಿಯೋದಲ್ಲಿ ೫:೦೭ ಮಾರ್ಕ್‌ನಲ್ಲಿ ಕೇಳಬಹುದು. ವರ್ಲ್ಡ್ ಸಿಖ್ ಆರ್ಗನೈಸೇಶನ್ ಆಫ್ ಕೆನಡಾ (ಡಬ್ಲ್ಯುಎಸ್‌ಒ) ಸಹಭಾಗಿತ್ವದಲ್ಲಿ ಎನ್‌ಸಿಸಿಎಂ ಮಾಡಿದ ನಾಲ್ಕು ಬೇಡಿಕೆಗಳು:

೧. ಭಾರತದಲ್ಲಿ ಕೆನಡಾದ ರಾಯಭಾರಿಯನ್ನು ಹಿಂಪಡೆಯುವುದು.

೨. ಕೆನಡಾದಲ್ಲಿರುವ ಭಾರತೀಯ ರಾಯಭಾರಿಯನ್ನು ಹೊರಹಾಕುವುದು.

೩. ಭಾರತ ನಡುವಿನ ವ್ಯಾಪಾರ ಮಾತುಕತೆಗೆ ಔಪಚಾರಿಕ ವಿರಾಮ.

೪.ಕ್ರಿಮಿನಲ್ ಕೋಡ್‌ನಲ್ಲಿ ಪಟ್ಟಿ ಮಾಡಲಾದ ನಿಬಂಧನೆಗಳ ಅಡಿಯಲ್ಲಿ ಆರ್‌ಎಸ್‌ಎಸ್ ಅನ್ನು ತಕ್ಷಣವೇ ನಿಷೇಧಿಸಲು ಮತ್ತು ಕೆನಡಾದಿಂದ ಅದರ ಏಜೆಂಟ್‌ಗಳನ್ನು ತೆಗೆದುಹಾಕುವ ಕರೆ 

ಈ ನಾಲ್ಕು ಬೇಡಿಕೆಗಳನ್ನು ಎನ್‌ಸಿಸಿಎಂನ ಫೇಸ್‌ಬುಕ್ ಪುಟದಲ್ಲೂ ಹಂಚಿಕೊಳ್ಳಲಾಗಿದೆ.

ಕೆನಡಾ ಸರ್ಕಾರಕ್ಕೆ ಎನ್‌ಸಿಸಿಎಂ  ಮತ್ತು ಡಬ್ಲ್ಯುಎಸ್‌ಒ  ಮುಂದಿಟ್ಟಿರುವ ಬೇಡಿಕೆಗಳು. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್)

ಸೆಪ್ಟೆಂಬರ್ ೧೯ ರಂದು ಪ್ರಕಟವಾದ ವರದಿಯಲ್ಲಿ, ಡಬ್ಲ್ಯುಎಸ್‌ಒ ನ ಅಧ್ಯಕ್ಷ ಮುಖ್ಬೀರ್ ಸಿಂಗ್ ಮತ್ತು ಎನ್‌ಸಿಸಿಎಂ ಸಿಇಓ ಸ್ಟೀಫನ್ ಬ್ರೌನ್ ಅವರು ಒಟ್ಟಾವಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು ಎಂದು ಅಲ್ ಜಜೀರಾ ವರದಿ ಮಾಡಿದೆ, ಅಲ್ಲಿ ಅವರ ಸಂಘಟನೆಗಳು, "ಅವರ ಸಮುದಾಯಗಳ ವಿರುದ್ಧ ಸಂಭಾವ್ಯ ಬೆದರಿಕೆಗಳನ್ನು ತಡೆಯಲು ಸರ್ಕಾರಾವು ಹೆಚ್ಚು ಪ್ರಯತ್ನಗಳನ್ನು ಮಾಡಲು ಕರೆಯನ್ನು ನೀಡಿತು."

ಈ ಸಂಪೂರ್ಣ ವಿಷಯದ ಕುರಿತು ವಿವರಗಳನ್ನು ಪಡೆಯಲು ಲಾಜಿಕಲಿ ಫ್ಯಾಕ್ಟ್ಸ್ ಎನ್‌ಸಿಸಿಎಂ ಅನ್ನು ತಲುಪಿದೆ. ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದಾಗ ಈ ಲೇಖನೆಯನ್ನು  ನವೀಕರಿಸಲಾಗುವುದು.

ನಮ್ಮ ತನಿಖೆಯ ಸಮಯದಲ್ಲಿ ನಾವು ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮ ವರದಿಗಳನ್ನು ಪರಿಶೀಲಿಸಿದ್ದೇವೆ ಆದರೆ ಕೆನಡಾ ಸರ್ಕಾರವು ಆರ್ಎಸ್ಎಸ್ ಅನ್ನು ನಿಷೇಧಿಸಿದೆ ಎಂದು ದೃಢೀಕರಿಸುವ ಯಾವುದೇ ವರದಿಗಳು ಕಂಡುಬಂದಿಲ್ಲ.

ತೀರ್ಪು

ಕೆನಡಾ ಅಂತಹ ಆದೇಶವನ್ನು ಹೊರಡಿಸಿಲ್ಲ ಅದರ ಕಾರಣ ಕೆನಡಾ ಸರ್ಕಾರ ಆರ್‌ಎಸ್‌ಎಸ್ ಅನ್ನು ನಿಷೇಧಿಸಿದೆ ಎಂಬ ಹೇಳಿಕೆ ತಪ್ಪು. ವೈರಲ್ ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿ ಕೆನಡಾದ ಅಧಿಕಾರಿ ಅಲ್ಲ ಆದರೆ ಎನ್‌ಸಿಸಿಎಂ ಹೆಸರಿನ ಲಾಭೋದ್ದೇಶವಿಲ್ಲದ ಸಂಸ್ಥೆಯ ಸಿಇಓ. ಆದ್ದರಿಂದ, ನಾವು  ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.

ಅನುವಾದಿಸಿದವರು: ಅಂಕಿತಾ ಕುಲಕರ್ಣಿ 

 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.