ಹಳೆಯ ರಸ್ತೆ ಅಪಘಾತದ ಚಿತ್ರಗಳನ್ನು ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಸಾವಿಗೆ ಸಂಬಂಧಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ವಿವೇಕ್ ಜೆ
ಜುಲೈ 26 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಹಳೆಯ ರಸ್ತೆ ಅಪಘಾತದ ಚಿತ್ರಗಳನ್ನು ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಸಾವಿಗೆ ಸಂಬಂಧಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಪನ್ನುನ್ ಅಪಘಾತದಲ್ಲಿ ಮೃತಪಟ್ಟಿರುವುದನ್ನು ತೋರಿಸಲು ಈ ಘಟನೆಗೆ ಸಂಬಂಧವಿಲ್ಲದ ರಸ್ತೆ ಅಪಘಾತದ ಹಳೆಯ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.

ಕ್ಲೈಮ್ ಐಡಿ a33d6cfc

ಸಂದರ್ಭ
ಪ್ರತ್ಯೇಕತಾವಾದಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (ಎಸ್.ಎಫ್.ಜೆ) ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಊಹಾಪೋಹದೊಂದಿಗೆ ಚರ್ಚೆಯ ವಿಷಯವಾಗಿದೆ. ಅಪಘಾತದ ದೃಶ್ಯಗಳದ್ದೆಂದು ಎರಡು ಹಳೆಯ ಮತ್ತು ಸಂಬಂಧವಿಲ್ಲದ ಛಾಯಾಚಿತ್ರಗಳು, ಇದು ಪನ್ನುನ್‌ ಅವರ ಅಪಘಾತ ಸ್ಥಳದಿಂದ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಹಿಂದೂ ಸೇವಾ ಕೇಂದ್ರದ ಕಾರ್ಯಕರ್ತ ಪ್ರತೀಶ್ ವಿಶ್ವನಾಥ್ ಎಂಬ ಸ್ವಯಂ ಘೋಷಿತ ಕಾರ್ಯಕರ್ತ ಪನ್ನುನ್ ಅವರ ಛಾಯಾಚಿತ್ರದ ಒಳಸೇರಿಸುವಿಕೆಯೊಂದಿಗೆ ಟ್ರಕ್ ಮೆರೂನ್ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಸ್ಥಳದ್ದು ಎನ್ನುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಷ್ಟ್ ನ ಶೀರ್ಷಿಕೆಯು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, "#BreakingNews #Khalistani terror!st & ಸಿಖ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್‌ವಂತ್ ಸಿಂಗ್ #ಪನ್ನು ಯುಎಸ್‌ನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು, ಅವರು ಖಲಿಸ್ತಾನಿ ಭಯೋತ್ಪಾದಕರ ಇತ್ತೀಚಿನ ಮೂರು ನಿಗೂಢ ಹತ್ಯೆಗಳ ನಂತರ ತಲೆಮರೆಸಿಕೊಂಡಿದ್ದರು. ಕರ್ಮ!!!!"

ವೈರಲ್ ಚಿತ್ರವು ಕೆಂಪು ಎಸ್‌ಯುವಿ ಮತ್ತು ಬಿಳಿ ಸೆಮಿ ಟ್ರಕ್ ನಡುವಿನ ಅಪಘಾತದ ಚಿತ್ರವನ್ನು ತೋರಿಸಿದೆ. ಈ ಫ್ಯಾಕ್ಟ್ ಚೆಕ್ ಬರೆಯುವ ಸಮಯದಲ್ಲಿ ಪೋಷ್ಟ್ ೪೭.೧ ಸಾವಿರ ವೀಕ್ಷಣೆಗಳನ್ನು ಸಂಗ್ರಹಿಸಿದೆ.

ಅಪಘಾತದ ದೃಶ್ಯದ ವಿಭಿನ್ನ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಷ್ಟ್ ಮಾಡಲಾಗಿದ್ದು ಅದು ಅಪಘಾತದಲ್ಲಿ ಡ್ಯಾಮೇಜ್ ಆದ ಕಪ್ಪು ಕಾರು ಮತ್ತು ಅದರ ಹಿಂದೆ ಅಗ್ನಿಶಾಮಕ ದಳದ ವಾಹನ ನಿಂತಿರುವುದನ್ನು ತೋರಿಸುತ್ತದೆ. ಪೋಷ್ಟ್ ಪನ್ನುನ್ ಅವರ ಆಪಾದಿತ ಅಪಘಾತಕ್ಕೆ ಚಿತ್ರವನ್ನು ಲಿಂಕ್ ಮಾಡಿದೆ. ವೈರಲ್ ಪೋಷ್ಟ್ ನ ಶೀರ್ಷಿಕೆಯು, “#ಖಲಿಸ್ತಾನಿಗೆ ದುಃಖದ ಸುದ್ದಿ ಮತ್ತೊಂದು #ಖಲಿಸ್ತಾನಿ ಭಯೋತ್ಪಾದಕ ಪನ್ನು ರಸ್ತೆ ೧೦೧ USA ನಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಇನ್ನೂ ಅನೇಕ ಭಯೋತ್ಪಾದಕರು ಹೋಗಲಿದ್ದಾರೆ...!!” ಈ ಪೋಷ್ಟ್ ಸುಮಾರು ೧೩ ಸಾವಿರ ವೀಕ್ಷಣೆಗಳನ್ನು ಸಂಗ್ರಹಿಸಿದೆ.

ಆದರೆ, ಈ ಎರಡೂ ಚಿತ್ರಗಳು ಹಳೆಯದಾಗಿದ್ದು ಪನ್ನುನ್ ಅವರ ಸಾವಿಗೆ ಸಂಬಂಧಿಸಿದ್ದಲ್ಲ.

ವಾಸ್ತವವಾಗಿ

ರಿವರ್ಸ್ ಇಮೇಜ್ ಸರ್ಚ್ ಬಳಸಿಕೊಂಡು, ಲಾಜಿಕಲಿ ಫ್ಯಾಕ್ಟ್ಸ್ ಛಾಯಾಚಿತ್ರಗಳು ಎರಡು ವಿಭಿನ್ನ ಕ್ಯಾಲಿಫೋರ್ನಿಯಾ ನಗರಗಳ ಅಪಘಾತದ ಸ್ಥಳಗಳಾಗಿವೆ ಮತ್ತು ಇವು ಹಳೆಯ ಚಿತ್ರಗಳು ಎಂದು ಕಂಡುಹಿಡಿದಿದೆ.

ಗೆಟ್ಟಿ ಇಮೇಜಸ್ ನಲ್ಲಿ ಕಂಡುಬಂದ ಚಿರ್ತವು ಮರೂನ್ ಕಾರ್ ಅಪಘಾತದ ವೈರಲ್ ಚಿತ್ರವನ್ನು ೨೦೨೧ ರದ್ದು ಎಂದು ದೃಢಪಡಿಸಿದೆ. ಗೆಟ್ಟಿ ಇಮೇಜಸ್ ನಲ್ಲಿನ ಚಿತ್ರದ ಶೀರ್ಷಿಕೆಯು ಹೀಗೆ ಹೇಳುತ್ತದೆ, "ಮಾರ್ಚ್ ೨, ೨೦೨೧ ರಂದು ಕ್ಯಾಲಿಫೋರ್ನಿಯಾದ ಹಾಲ್ಟ್‌ವಿಲ್ ಬಳಿ ಎಸ್‌ಯುವಿ ಮತ್ತು ಜಲ್ಲಿಕಲ್ಲು ತುಂಬಿದ ಸೆಮಿ ಟ್ರಕ್ ನಡುವಿನ ಅಪಘಾತದ ದೃಶ್ಯವನ್ನು ತನಿಖಾಧಿಕಾರಿಗಳು ನೋಡುತ್ತಾರೆ."

ಯುಎಸ್ಎ ಟುಡೇ ವರದಿಯ ಪ್ರಕಾರ, ಎಸ್‌ಯುವಿಯು ಡಜನ್‌ಗಟ್ಟಲೆ ಪ್ರಯಾಣಿಕರಿಂದ ತುಂಬಿದ್ದು, ಅದು ಯುಎಸ್-ಮೆಕ್ಸಿಕೋ ಗಡಿಯ ಬಳಿ ಸೆಮಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಕ್ಯಾಲಿಫೋರ್ನಿಯಾ ಹೈವೇ ಪೆಟ್ರೋಲ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಪಘಾತದ ನಂತರ ಕನಿಷ್ಠ ೧೩ ಜನರು ಸಾವನ್ನಪ್ಪಿದ್ದಾರೆ ಎಂದು ಕೂಡ ವರದಿಯಾಗಿದೆ.

ಲಾಜಿಕಲಿ ಫ್ಯಾಕ್ಟ್ಸ್ ಎರಡನೇ ಚಿತ್ರದ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿತು ಮತ್ತು ಅಪಘಾತದ ಸ್ಥಳದಲ್ಲಿ ಡ್ಯಾಮೇಜ್ ಆದ ಕಪ್ಪು ಕಾರಿನ ಚಿತ್ರವು ೨೦೨೨ ರದ್ದಾಗಿದೆ ಎಂದು ಕಂಡುಹಿಡಿದಿದೆ. ಅದೇ ಚಿತ್ರವನ್ನು ಹೊಂದಿರುವ ಪ್ರೆಸ್ ಡೆಮಾಕ್ರಾಟ್‌ನ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ಕ್ಯಾಲಿಫೋರ್ನಿಯಾದ ಹೀಲ್ಡ್ಸ್‌ಬರ್ಗ್ ಬಳಿ ಮಹಿಳೆಯೊಬ್ಬರು ಸಾವನ್ನಪ್ಪಲು ಕಾರಣವಾದ ಆಕ್ಸಿಡೆಂಟ್ ನಂತರ ಈ ಚಿತ್ರವನ್ನು ತೆಗೆಯಲಾಗಿದೆ.

ಪನ್ನುನ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ವದಂತಿಗಳು ಇದ್ದರೂ, ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಅಥವಾ ಹೇಳಿಕೆ ಇಲ್ಲ. ಖಾಲ್ಸಾ ಟುಡೇ ಸಂಸ್ಥಾಪಕರಾದ ಸುಖಿ ಚಾಹಲ್ ಅವರು ಟ್ವಿಟರ್‌ನಲ್ಲಿ ಪನ್ನುನ್ ಸಾವಿನ ಸುತ್ತಲಿನ ವದಂತಿಗಳನ್ನು ನಿರಾಕರಿಸಿದ್ದಾರೆ. ಈ ಮಾಹಿತಿಯು ನಕಲಿ ಎಂದು ಅವರು ಹೇಳಿದ್ದಾರೆ.

ಜುಲೈ ೦೭, ೨೦೨೩ ರ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಎಸ್‌ಎಫ್‌ಜೆ ಮುಖ್ಯಸ್ಥರು ಅವರು ಜೀವಂತವಾಗಿದ್ದಾರೆ ಮತ್ತು ನ್ಯೂಯಾರ್ಕ್‌ನಲ್ಲಿದ್ದಾರೆ ಎಂದು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ. ನಂತರ ಕೆನಡಾ, ಯುಎಸ್, ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಹೊಸ ಬೆದರಿಕೆಯನ್ನು ಕೂಡ ಹಾಕಿದ್ದಾರೆ. ಪ್ರತ್ಯೇಕತಾವಾದಿ ಹರ್ದೀಪ್ ನಿಜ್ಜರ್ ಅವರ ಸಾವಿನ ಕುರಿತು ಮಾತನಾಡುತ್ತಾ, ಪನ್ನುನ್ ಹೀಗೆ ತಿಳಿಸಿದರು, "ಅವರು ನನ್ನ ಕಿರಿಯ ಸಹೋದರ, ಮತ್ತು ನಾವು ೨೦ ವರ್ಷಗಳಿಗೂ ಹೆಚ್ಚು ಒಡನಾಟವನ್ನು ಹೊಂದಿದ್ದೇವೆ. ನಾವು ಅವನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ."

 ಪತ್ರಕರ್ತ ಆದಿತ್ಯ ರಾಜ್ ಕೌಲ್ ಕೂಡ ಪನ್ನುನ್ ಅವರು ಜೀವಂತವಾಗಿದ್ದಾರೆ ಎಂದು ಸಂದೇಶದ ಮೂಲಕ ಖಚಿತಪಡಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಸಂದೇಶವನ್ನು ಹಂಚಿಕೊಂಡಿದ್ದಾರೆ.

ತೀರ್ಪು
ಪನ್ನುನ್‌ನ ಸಾವನ್ನಪ್ಪಿದ್ದಾರೆ ಎಂದು ತೋರಿಸಲು ಬೇರೆ ಬೇರೆ ವರ್ಷಗಳಲ್ಲಿ ತೆಗೆಯಲಾದ ವಿಭಿನ್ನ ಅಪಘಾತಗಳ ಎರಡು ಹಳೆಯ ಚಿತ್ರಗಳನ್ನು ಬಳಸಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.