ಸಿದ್ದು ಮೂಸೆವಾಲಾ ಅವರ 'ಆಂತಿಮ್ ಅರ್ದಾಸ್' ನಲ್ಲಿ ಮುಸ್ಲಿಂ ವ್ಯಕ್ತಿ ಪೇಟವನ್ನು ಕಟ್ಟುವ ವೀಡಿಯೋವನ್ನು ರೈತರ ಚಳುವಳಿಗೆ ಲಿಂಕ್ ಮಾಡಿ ವೈರಲ್ ಆಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್
ಫೆಬ್ರವರಿ 23 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಸಿದ್ದು ಮೂಸೆವಾಲಾ ಅವರ 'ಆಂತಿಮ್ ಅರ್ದಾಸ್' ನಲ್ಲಿ ಮುಸ್ಲಿಂ ವ್ಯಕ್ತಿ ಪೇಟವನ್ನು ಕಟ್ಟುವ ವೀಡಿಯೋವನ್ನು ರೈತರ ಚಳುವಳಿಗೆ ಲಿಂಕ್ ಮಾಡಿ ವೈರಲ್ ಆಗಿದೆ

ರೈತರ ಪ್ರತಿಭಟನೆಗೆ ಮುಸ್ಲಿಮರು ವೇಷ ಹಾಕಿಕೊಂಡು ಪ್ರವೇಶಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಈ ವೀಡಿಯೋ ಮೂಲಕ ಹೇಳಿಕೊಳ್ಳುತ್ತಿದ್ದಾರೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋ ಜೂನ್ ೨೦೨೨ ರಲ್ಲಿ ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಅವರ 'ಆಂತಿಮ್ ಅರ್ದಾಸ್' ನಲ್ಲಿ ಎಲ್ಲಾ ಧರ್ಮಗಳ ಪಾಲ್ಗೊಳ್ಳುವವರ ತಲೆಯ ಮೇಲೆ ಪೇಟವನ್ನು ಕಟ್ಟುವುದನ್ನು ತೋರಿಸುತ್ತದೆ

ಕ್ಲೈಮ್ ಐಡಿ 39c78fb9

ಹೇಳಿಕೆ ಏನು?

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಟೋಪಿಯನ್ನು ತೆಗೆದು ಪೇಟವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಪ್ರಸ್ತುತ ರೈತರ ಚಳವಳಿಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ರೈತರ ಪ್ರತಿಭಟನೆಗೆ ಮುಸ್ಲಿಮರು ವೇಷ ಹಾಕಿಕೊಂಡು ಪ್ರವೇಶಿಸುತ್ತಿದ್ದಾರೆ ಎಂದು ಈ ವೀಡಿಯೋ ಮೂಲಕ ಹೇಳಲಾಗುತ್ತಿದೆ.

ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು "ಶೂಟಿಂಗ್ ಸಮಯದಲ್ಲಿ, ಎಲ್ಲಾ ನಟರು ಸೆಟ್‌ಗೆ ಹೋಗುವ ಮೊದಲು ಸಿದ್ಧರಾಗುತ್ತಾರೆ !! ಆದರೆ ಅವರಿಗೆ ಯಾವುದೇ ಹಿಂದೂ ಕಲಾವಿದರು ಸಿಗುತ್ತಿಲ್ಲ, ಈ ರೋಹಿಂಗ್ಯಾ ಕಲಾವಿದರು ಪಗ್‌ಗಳನ್ನು ಧರಿಸಬೇಕೇ?? ಇವೆರೆಲ್ಲರೂ ಈ ನಕಲಿ ರೈತ ಚಳವಳಿಯಲ್ಲಿ ದೇಶವಿರೋಧಿ ಮರಗಳು.” ಈ ಪೋಷ್ಟ್ ಇಲ್ಲಿಯವರೆಗೆ ೩೩೮,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ೭೫೦೦ ಕ್ಕೂ ಹೆಚ್ಚು ಮರುಪೋಷ್ಟ್ ಗಳನ್ನು ಸ್ವೀಕರಿಸಿದೆ. ಪೋಷ್ಟ್‌ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ವೀಕ್ಷಿಸಿ. ಇದೇ ರೀತಿಯ ಹಕ್ಕುಗಳನ್ನು ಹೊಂದಿರುವ ಇತರ ಪೋಷ್ಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಪೋಷ್ಟ್‌ನ ಸ್ಕ್ರೀನ್‌ಶಾಟ್‌ಗಳು (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಆದರೆ, ಈ ವೀಡಿಯೋಗೂ ಪ್ರಸ್ತುತ ರೈತರ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಈ ವೀಡಿಯೋ ಜೂನ್ ೨೦೨೨ ರಲ್ಲಿ, ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಅವರ "ಆಂತಿಮ್ ಅರ್ದಾಸ್" ನಲ್ಲಿ ಎಲ್ಲಾ ವಿವಿಧ ಧರ್ಮಗಳ ಪಾಲ್ಗೊಳ್ಳುವವರ ತಲೆಯ ಮೇಲೆ ಪೇಟವನ್ನು (ದಸ್ತಾರ್) ಕಟ್ಟುವುದನ್ನು ತೋರಿಸುತ್ತದೆ.

ನಾವು ಸತ್ಯವನ್ನು ಹೇಗೆ ಕಂಡುಕೊಂಡೆವು?

ನಾವು ರಿವರ್ಸ್ ಇಮೇಜ್ ಸರ್ಚ್ ಮೂಲಕ ವೈರಲ್ ವೀಡಿಯೋವನ್ನು ಹುಡುಕಿದೆವು ಮತ್ತು 'ಸರ್ದಾರಿಯನ್ ಟ್ರಸ್ಟ್ ಪಂಜಾಬ್' ಹೆಸರಿನ ಫೇಸ್‌ಬುಕ್ ಪುಟದಲ್ಲಿ ಜೂನ್ ೧೦, ೨೦೨೨ ರ ಪೋಷ್ಟ್‌ನಲ್ಲಿ ನಿಖರವಾದ ದೃಶ್ಯವನ್ನು ತೋರಿಸುವ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಅದೇ ವ್ಯಕ್ತಿ ತನ್ನ ಬಿಳಿ ಟೋಪಿಯನ್ನು ತೆಗೆದು ನೀಲಿ ಪೇಟವನ್ನು ಕಟ್ಟಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ವೈರಲ್ ವೀಡಿಯೋದಲ್ಲಿ ಹಿನ್ನೆಲೆಯಲ್ಲಿ ಕಂಡುಬರುವ ಪೋಷ್ಟರ್ ಗಳು ಈ ವೀಡಿಯೋದಲ್ಲೂ ಗೋಚರಿಸುತ್ತವೆ.

ಈ ಪೋಷ್ಟ್‌ನ ಶೀರ್ಷಿಕೆಯು ಹೀಗೆ ಬರೆಯಲಾಗಿದೆ, "ಮೂಸೆವಾಲಾ ಅವರ ಕೊನೆಯ ಪ್ರಾರ್ಥನೆ. 'ಸರ್ದರಿಯನ್ ಟ್ರಸ್ಟ್' ಪೇಟವನ್ನು ಹಾಕಿತು, ಮುಸ್ಲಿಂ ಮತ್ತು ಹಿಂದೂ ಸಹೋದರರು ಪೇಟವನ್ನು ಅಲಂಕರಿಸಿದರು."

ಇದಲ್ಲದೆ, ಅದೇ ಸಂದರ್ಭದ ಚಿತ್ರಗಳನ್ನು ಜೂನ್ ೧೨, ೨೦೨೨ ರಂದು ಅದೇ ಪುಟದಲ್ಲಿ ಹಂಚಿಕೊಳ್ಳಲಾಗಿದೆ, ಅದರಲ್ಲಿ ಅದೇ ಮುಸ್ಲಿಂ ವ್ಯಕ್ತಿಯನ್ನು ಕಾಣಬಹುದು.

ವಾಸ್ತವವಾಗಿ, ಮೇ ೨೯, ೨೦೨೨ ರಂದು, ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಕೊಲೆಯಾದರು. ಜೂನ್ ೮ ರಂದು, ಪಂಜಾಬ್‌ನ ಮಾನ್ಸಾ ಜಿಲ್ಲೆಯ ಧಾನ್ಯ ಮಾರುಕಟ್ಟೆಯಲ್ಲಿ ಅವರ 'ಆಂತಿಮ್ ಅರ್ದಾಸ್' ಪ್ರದರ್ಶನಗೊಂಡಿತು. (ಆಂತಿಮ್ ಅರ್ದಾಸ್ ಒಂದು ರೀತಿಯ ಕೊನೆಯ ಪ್ರಾರ್ಥನೆಯಾಗಿದೆ, ಇದು ಮನೆಯಲ್ಲಿ ಅಥವಾ ಗುರುದ್ವಾರದಲ್ಲಿ ಗುರು ಗ್ರಂಥ ಸಾಹಿಬ್‌ನ ಸಂಪೂರ್ಣ ಪಠಣವನ್ನು ಒಳಗೊಂಡಿರುತ್ತದೆ.) ಈ ಸಂದರ್ಭದಲ್ಲಿ ಅವರ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು.

ಇದೇ ವೀಡಿಯೋವನ್ನು 'ಸರ್ದರಿಯನ್ ಟ್ರಸ್ಟ್ ಪಂಜಾಬ್' ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

ಸರ್ದಾರಿಯನ್ ಟ್ರಸ್ಟ್ ಪಂಜಾಬ್‌ನ ಇನ್‌ಸ್ಟಾಗ್ರಾಮ್‌ನಲ್ಲಿ ಲಭ್ಯವಿರುವ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಇನ್ಸ್ಟಾಗ್ರಾಮ್/ಸ್ಕ್ರೀನ್‌ಶಾಟ್)

ಜೂನ್ ೬, ೨೦೨೨ ರ ಮತ್ತೊಂದು ಪೋಷ್ಟ್‌ನಲ್ಲಿ, ಸಿದ್ದು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಅವರ ವೀಡಿಯೋವಿದೆ, ಇದರಲ್ಲಿ ಸಿದ್ದು ಮೂಸೆವಾಲಾ ಅವರನ್ನು ಪ್ರೀತಿಸುವ ಎಲ್ಲಾ ಯುವಕರು ಪೇಟವನ್ನು ಧರಿಸಿ 'ಆಂತಿಮ್ ಅರ್ದಾಸ್'ನಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ 'ಸರ್ದರಿಯನ್ ಟ್ರಸ್ಟ್' ಟರ್ಬನ್ ಲಂಗರ್ ಆಯೋಜಿಸಲಿದೆ ಎಂದು ಪೋಷ್ಟ್‌ನಲ್ಲಿ ತಿಳಿಸಲಾಗಿದೆ.

ಸರ್ದಾರಿಯನ್ ಟ್ರಸ್ಟ್ ಪಂಜಾಬ್‌ನ ಇನ್‌ಸ್ಟಾಗ್ರಾಮ್‌ನಲ್ಲಿ ಲಭ್ಯವಿರುವ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಇನ್ಸ್ಟಾಗ್ರಾಮ್/ಸ್ಕ್ರೀನ್‌ಶಾಟ್)

ವೈರಲ್ ವೀಡಿಯೋ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಾವು 'ಸರ್ದರಿಯನ್ ಟ್ರಸ್ಟ್ ಪಂಜಾಬ್' ಸಂಘಟನೆಯ ಹರ್‌ಪ್ರೀತ್ ಸಿಂಗ್ ಅವರನ್ನು ಸಂಪರ್ಕಿಸಿದ್ದೇವೆ, ಅವರು ವೀಡಿಯೋ ಸಿದ್ದು ಮೂಸೆವಾಲಾ ಅವರ ಆಂತಿಮ್ ಅರ್ದಾಸ್ ಎಂದು ಖಚಿತಪಡಿಸಿದ್ದಾರೆ.

“ನಾವು ಸಿದ್ದು ಮೂಸೆವಾಲಾ ಅವರ ಕೊನೆಯ ಅರ್ದಾಸ್‌ನಲ್ಲಿ ದಸ್ತರ್ ಲಂಗರ್ ಆಯೋಜಿಸಿದ್ದೆವು, ಅವರ ತಂದೆ ನಮಗೆ ಕರೆ ಮಾಡಿದ್ದರು ಮತ್ತು ಅರ್ದಾಸ್‌ಗೆ ಬಂದವರು ದಸ್ತರ್ ಧರಿಸಿ ಬರಬೇಕೆಂದು ಅವರು ಬಯಸಿದ್ದರು. ನಾವು ಅಲ್ಲಿ ಶಿಬಿರವನ್ನು ಸ್ಥಾಪಿಸಿದೆವು. ನಾವು ಸುಮಾರು ೫೦೦-೭೦೦ ದಸ್ತಾರ್‌ಗಳನ್ನು ಸಿದ್ಧಪಡಿಸಿದ್ದೇವೆ. ಅದರಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ಇದ್ದರು. ನಾವು ಎಲ್ಲರ ತಲೆಯನ್ನು ದಸ್ತಾರ್‌ಗಳಿಂದ ಅಲಂಕರಿಸಿದ್ದೇವೆ” ಎಂದು ಹರ್‌ಪ್ರೀತ್ ಸಿಂಗ್ ಲಾಜಿಕಲ್ ಫ್ಯಾಕ್ಟ್ಸ್‌ಗೆ ತಿಳಿಸಿದರು.

ವಾಸ್ತವವಾಗಿ, 'ಸರ್ದರಿಯನ್ ಟ್ರಸ್ಟ್ ಪಂಜಾಬ್' ಪಂಜಾಬ್‌ನ ಹಳ್ಳಿಗಳು ಮತ್ತು ನಗರಗಳಲ್ಲಿ ದಸ್ತರ್ ತರಬೇತಿ ಶಿಬಿರಗಳನ್ನು ಆಯೋಜಿಸುತ್ತದೆ, ಅಲ್ಲಿ ಜನರಿಗೆ ಪೇಟವನ್ನು ಹೇಗೆ ಕಟ್ಟಬೇಕೆಂದು ಕಲಿಸಲಾಗುತ್ತದೆ.

ತೀರ್ಪು

ನಮ್ಮ ಈವರೆಗಿನ ತನಿಖೆಯಿಂದ ರೈತರ ಪ್ರತಿಭಟನೆಗೂ ವೈರಲ್ ವೀಡಿಯೋಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ, ಇದು ಜೂನ್ ೨೦೨೨ ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ 'ಆಂತಿಮ್ ಅರ್ದಾಸ್' ನ ವೀಡಿಯೋ ಆಗಿದೆ, ಇದು ಎಲ್ಲಾ ಧರ್ಮಗಳ ಪಾಲ್ಗೊಳ್ಳುವವರು ತಮ್ಮ ತಲೆಯ ಮೇಲೆ ಪೇಟವನ್ನು (ದಸ್ತರ್) ಕಟ್ಟುತ್ತಿರುವುದನ್ನು ತೋರಿಸುತ್ತದೆ. ಆದ್ದರಿಂದ, ವೈರಲ್ ಹೇಳಿಕೆ ತಪ್ಪು ಎಂದು ನಾವು ಪರಿಗಣಿಸುತ್ತೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.