೨೦೧೭ ರ ಸುದ್ದಿ ಕ್ಲಿಪ್ ಅನ್ನು ಭಾರತೀಯ ಚುನಾವಣೆಗು ಮುನ್ನ 'ಬಿಜೆಪಿಯಿಂದ ಇವಿಎಂ ಟ್ಯಾಂಪರಿಂಗ್' ಮಾಡಲಾಗಿದೆ ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಏಪ್ರಿಲ್ 3 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೧೭ ರ ಸುದ್ದಿ ಕ್ಲಿಪ್ ಅನ್ನು ಭಾರತೀಯ ಚುನಾವಣೆಗು ಮುನ್ನ 'ಬಿಜೆಪಿಯಿಂದ ಇವಿಎಂ ಟ್ಯಾಂಪರಿಂಗ್' ಮಾಡಲಾಗಿದೆ ಎಂದು ಹಂಚಿಕೊಳ್ಳಲಾಗಿದೆ

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಇನ್‌ಸ್ಟಾಗ್ರಾಮ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಪ್ರಶ್ನೆಯಲ್ಲಿರುವ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ, ಆಪಾದಿತ ಇವಿಎಂ ಟ್ಯಾಂಪರಿಂಗ್ ಕ್ಲಿಪ್ ವೈರಲ್ ಆದ ನಂತರ ಹಲವಾರು ಅಧಿಕಾರಿಗಳಿಗೆ ದಂಡ ವಿಧಿಸಲಾಯಿತು.

ಕ್ಲೈಮ್ ಐಡಿ cae746b9

ಹೇಳಿಕೆ ಏನು?
ಮುಂಬರುವ ೨೦೨೪ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಗಳನ್ನು (ಇವಿಎಂ) ಹೇಗೆ "ಟ್ಯಾಂಪರ್" ಮಾಡಿದೆ ಎಂಬುದನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಹಿಂದಿ ಸುದ್ದಿವಾಹಿನಿಯ  ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೈರಲ್ ವೀಡಿಯೋದಲ್ಲಿ ಎಬಿಪಿ ನ್ಯೂಸ್ ಚಾನೆಲ್‌ನ ವರದಿಯಿದೆ, ಹಿಂದಿಯಲ್ಲಿ ಬರೆದ ಶೀರ್ಷಿಕೆ ಹೀಗಿದೆ, "ಆನೆಗಾಗಿ ಬಟನ್ ಒತ್ತಿದರೆ ಸ್ಲಿಪ್ ನಲ್ಲಿ ಕಮಲ ಬಂದಿದೆ" ಮತ್ತು "ಮೊದಲ ಬಟನ್ ಒತ್ತಿದರೆ ಕಮಲದ ಸ್ಲಿಪ್ ಹೊರಬಂದಿತು" ಎಂದು ಹೇಳುತ್ತದೆ.

ಎಬಿಪಿ ನ್ಯೂಸ್ ಆಂಕರ್ ಚಿತ್ರಾ ತ್ರಿಪಾಠಿ ಅವರು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಡಮ್ಮಿ ಪರೀಕ್ಷೆಯ ಸಮಯದಲ್ಲಿ ಇವಿಎಂಗಳು ಅಸಮರ್ಪಕವಾದ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಅನುಸರಣೆಯ ಮೇರೆಗೆ ಹಲವಾರು ಅಧಿಕಾರಿಗಳನ್ನು ತಮ್ಮ ಸ್ಥಾನಗಳಿಂದ ತೆಗೆದುಹಾಕಲಾಗಿದೆ ಎಂದು ಸುದ್ದಿ ಕ್ಲಿಪ್ ಪ್ರಾರಂಭವಾಗುತ್ತದೆ. ತ್ರಿಪಾಠಿ ಅವರು ಅಟರ್ ಅಸೆಂಬ್ಲಿ ಕ್ಷೇತ್ರದಲ್ಲಿ (ಭಿಂಡ್) ಚುನಾವಣೆಗೆ ಮುಂಚಿತವಾಗಿ ಇದು ಸಂಭವಿಸಿದೆ ಎಂದು ಹೈಲೈಟ್ ಮಾಡಿದ್ದಾರೆ, ಅಲ್ಲಿ ಮತದಾರರ-ಪರಿಶೀಲಿಸಿದ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಇವಿಎಂ ಮೇಲೆ ಬಟನ್ ಒತ್ತಿದಾಗ ಮತ ಬಿಜೆಪಿಗೆ ಹೋಗುತ್ತಿದೆ ಎಂದು ತೋರಿಸಲಾಗಿದೆ.

ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವೈರಲ್ ಪೋಸ್ಟ್ ನ  ಶೀರ್ಷಿಕೆ ಹೀಗಿದೆ "ಬಿಗ್ ನ್ಯೂಸ್..ಚುನಾವಣೆಯಲ್ಲಿ ಕಂಡುಬಂದ ದೊಡ್ಡ ಅಕ್ರಮಗಳು" ಮತ್ತು "ಇವಿಎಂ ಅಸಮರ್ಪಕವಾಗಿದೆ(ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ಬರೆಯಲಾಗಿದೆ "#loksabha" ಮತ್ತು "#election2024" ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಅಂತಹ ಪೋಸ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ವೈರಲ್ ಇನ್‌ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಇನ್‌ಸ್ಟಾಗ್ರಾಮ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್), ಈ ವೀಡಿಯೋವನ್ನು ಹಂಚಿಕೊಂಡ ಶೀರ್ಷಿಕೆಯು, "ಮತ್ತೊಮ್ಮೆ, ಇವಿಎಂ ಅವ್ಯವಹಾರಗಳು ಸಾಬೀತಾಗಿದೆ. ಮೋದಿಯವರು ಪತ್ರಿಕೆಗಳ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ, ಮೋದಿ ಅವರು ಇವಿಎಂ ಇಲ್ಲದೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಇವಿಎಂ ಮೋದಿಗೆ ಪ್ರತಿ ಮತ. (sic)" ಎಂದು ಹೇಳುತ್ತದೆ.  ಈ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಎಕ್ಸ್  ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಘಟನೆಯು ಏಳು ವರ್ಷಗಳ ಹಿಂದೆ ಸಂಭವಿಸಿದ್ದು ಮತ್ತು ಇದು ಯಾವುದೇ ಇತ್ತೀಚಿನ ಅಥವಾ ಮುಂಬರುವ ಚುನಾವಣೆಗಳಿಗೆ ಸಂಬಂಧಿಸಿಲ್ಲ.

ನಾವು ಕಂಡುಹಿಡಿದದ್ದು ಏನು?
"ಇವಿಎಂ ವಿವಾದ: ಭಿಂಡ್‌ನ ಎಸ್‌ಪಿ ಕಲೆಕ್ಟರ್ ತೆಗೆದುಹಾಕಲಾಗಿದೆ" ಎಂಬ ಶೀರ್ಷಿಕೆಯ ವೈರಲ್ ಸುದ್ದಿ ಕ್ಲಿಪ್‌ನ ದೀರ್ಘ ಆವೃತ್ತಿಯನ್ನು ಏಪ್ರಿಲ್ ೧, ೨೦೧೭ ರಂದು ಅಧಿಕೃತ ಎಬಿಪಿ ನ್ಯೂಸ್ ನ ಯೂಟ್ಯೂಬ್ (ಇಲ್ಲಿ ಆರ್ಕೈವ್) ಚಾನಲ್‌ ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಗೂಗಲ್ ಹುಡುಕಾಟವು ತೋರಿಸುತ್ತದೆ.

ಈ ಮೂಲ ಸುದ್ದಿ ಕ್ಲಿಪ್ ೧೦ ನಿಮಿಷಗಳು ಮತ್ತು ೩೨ ಸೆಕೆಂಡುಗಳದ್ದಾಗಿದೆ, ಆದರೆ ವೈರಲ್ ವೀಡಿಯೋ ೧:೩೦ ಮಾರ್ಕ್‌ವರೆಗಿನ ತುಣುಕನ್ನು ಮಾತ್ರ ಒಳಗೊಂಡಿದೆ. ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಇವಿಎಂ ವಿವಾದದ ನಡುವೆಯೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ಪದಚ್ಯುತಗೊಳಿಸಿದ ಬಗ್ಗೆ ಮೂಲ ಸುದ್ದಿ ವರದಿ ಮಾಡಿದೆ.

ಅನೇಕ ಇತರ ಮುಖ್ಯವಾಹಿನಿಯ ಮಾಧ್ಯಮಗಳು ಅದೇ ಸಮಯದಲ್ಲಿ ಈ ಸುದ್ದಿಯನ್ನು ವರದಿ ಮಾಡಿದ್ದವು.

ಇದಲ್ಲದೆ, ವೈರಲ್ ಕ್ಲಿಪ್ ನಲ್ಲಿ ಕಾಣುವ ಚಿತ್ರಾ ತ್ರಿಪಾಠಿ ಅವರು ಸೆಪ್ಟೆಂಬರ್ ೨೦೨೨ ರಲ್ಲಿ ಎಬಿಪಿ ನ್ಯೂಸ್ ಬಿಟ್ಟು ಆಜ್ ತಕ್ ಹಿಂದಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತೋರಿಸಿವೆ.

೨೦೧೭ ರ ಇವಿಎಂ ವಿವಾದ ಏನು?
ಭಿಂಡ್ ಜಿಲ್ಲೆಯ ಅಟರ್ ಅಸೆಂಬ್ಲಿ ಕ್ಷೇತ್ರ ಮತ್ತು ಉಮಾರಿಯಾ ಜಿಲ್ಲೆಯ ಬಾಂಧವ್‌ಗಢ್ ಅಸೆಂಬ್ಲಿ ವಿಭಾಗದಲ್ಲಿ ಉಪಚುನಾವಣೆಗಳು ಏಪ್ರಿಲ್ ೯, ೨೦೧೭ ರಂದು ನಡೆಯಿತು. ಚುನಾವಣೆಯ ಮೊದಲು, ಭಿಂಡ್‌ನಿಂದ ಬಂದ ವೀಡಿಯೋವೊಂದರಲ್ಲಿ ಇವಿಎಂ-ಸಂಯೋಜಿತ ಮತದಾರರ-ಪರಿಶೀಲಿಸಿದ ಪೇಪರ್ ಆಡಿಟ್ ಟ್ರಯಲ್ ಅನ್ನು ತೋರಿಸುತ್ತದೆ. ( ವಿವಿಪಿಎಟಿ ) ಮತಯಂತ್ರದಲ್ಲಿ ಒತ್ತಿದ ಬಟನ್‌ಗಳನ್ನು ಲೆಕ್ಕಿಸದೆ ಬಿಜೆಪಿಯ ಕಮಲದ ಚಿಹ್ನೆಯನ್ನು ಹೊಂದಿದ ಸ್ಲಿಪ್‌ಗಳು ಹೊರಬಂದಿದ್ದವು.

ಈ ಘಟನೆಯು ಭಾರತದ ಚುನಾವಣಾ ಆಯೋಗವು ಭಿಂಡ್ ಜಿಲ್ಲೆಯ ೨೧ ಅಧಿಕಾರಿಗಳಿಂದ ವರದಿಯನ್ನು ಕೋರಲು ಕಾರಣವಾಗಿತ್ತು, ಕಾಂಗ್ರೆಸ್ ಮತ್ತು ಎಎಪಿ ಮಧ್ಯಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಶಾಲಿನಾ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿದ್ದವು . ನಂತರ ಮಧ್ಯಪ್ರದೇಶ ಸರ್ಕಾರವು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ಅವರನ್ನು ತೆಗೆದುಹಾಕಿತು ಮತ್ತು ಇತರ ೧೯ ಜನರ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಆದರೆ, ಅಂತಿಮ ತನಿಖಾ ವರದಿಯು ಆರೋಪಗಳನ್ನು ತಳ್ಳಿಹಾಕಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ತೀರ್ಪು
ಏಳು ವರ್ಷಗಳ ಹಿಂದಿನ ಸುದ್ದಿ ವರದಿಯ ವೀಡಿಯೋ ತುಣುಕನ್ನು ಮುಂಬರುವ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಇತ್ತೀಚಿನ ಇವಿಎಂ ಟ್ಯಾಂಪರಿಂಗ್  ಅನ್ನು ತೋರಿಸುತ್ತದೆ ಎಂದು ಹಂಚಿಕೊಳ್ಳಲಾಗಿದೆ. ಆದರಿಂದ, ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೇವೆ. 

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )

Read our fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.