ಆಯುರ್ವೇದ ದೋಷ ಪರಿಹಾರಗಳು ಮದ್ಯಪಾನದ ಋಣಾತ್ಮಕ ಪರಿಣಾಮಗಳನ್ನು ತಡೆಯಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ

ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 17 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಯುರ್ವೇದ ದೋಷ ಪರಿಹಾರಗಳು ಮದ್ಯಪಾನದ ಋಣಾತ್ಮಕ ಪರಿಣಾಮಗಳನ್ನು ತಡೆಯಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಆಯುರ್ವೇದದ ರಸಧಾತು ಪರಿಹಾರಗಳು ಮದ್ಯದ ಸೇವನೆಯನ್ನು ಸುರಕ್ಷಿಸುವುದಿಲ್ಲ ಮತ್ತು ಮದ್ಯದ ಹಾನಿಕಾರಕ ಪರಿಣಾಮಗಳನ್ನು ತಡೆಯುಲು ಸಾಧ್ಯವಿಲ್ಲ.

ಕ್ಲೈಮ್ ಐಡಿ 323b7c4d

ಸಂದರ್ಭ

"ಆಯುರ್ವೇದದ ಪ್ರಕಾರ ಮದ್ಯಪಾನವನ್ನು ಹೇಗೆ ಸೇವಿಸುವುದು" ಎಂಬ ಶೀರ್ಷಿಕೆಯ ಇನ್‌ಸ್ಟಾಗ್ರಾಮ್‌ನಲ್ಲಿನ ರೀಲ್ ೬೯,೦೦೦ ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಆಯುರ್ವೇದ ದೋಷ ಸಿದ್ಧಾಂತದ ಪ್ರಕಾರ ಮದ್ಯವನ್ನು ಹೇಗೆ ಸೇವಿಸಬೇಕು ಎಂಬುದನ್ನು ವೀಡಿಯೋ ವಿವರಿಸುತ್ತದೆ. ಈ ಖಾತೆ ಮದ್ಯಪಾನಕ್ಕೆ ಸಂಬಂಧಿಸಿದ ಇತರ ವೀಡಿಯೋಗಳನ್ನೂ ಸಹ ಹೊಂದಿದೆ ಹಾಗು ಅದರ ಶೀರ್ಷಿಕೆ, "ಆಯುರ್ವೇದದ ಪ್ರಕಾರ ಮದ್ಯಪಾನದ ಧನಾತ್ಮಕ ಗುಣಗಳು" ಮತ್ತು "ಮದ್ಯಪಾನವನ್ನು ಕುರಿತು ಆಯುರ್ವೇದ ದೃಷ್ಟಿಕೋನ" ಎಂದು ಹೇಳುತ್ತದೆ.

ಆಯುರ್ವೇದವು ಭಾರತದಲ್ಲಿ ಜನಪ್ರಿಯವಾಗಿರುವ ಪರ್ಯಾಯ ಔಷಧಿ ಪದ್ಧತಿಯಾಗಿದೆ. ಆಯುರ್ವೇದ ಸಿದ್ದಾಂತದ ಪ್ರಕಾರ ಮಾನವ ದೇಹವು ಮೂರು ದೋಷಗಳನ್ನು/ ರಸಧಾತುಗಳನ್ನು ಹೊಂದಿದೆ ಎಂದು ಹೇಳಲ್ಪಟ್ಟಿದೆ. ಅವುಗಳಲ್ಲಿ ಅಸಮತೋಲನ ಉಂಟಾದಾಗ ರೋಗಗಳು ಮತ್ತು ದೇಹದಲ್ಲಿ ಸಮಸ್ಯೆಗಳು ಶುರುವಾಗಬಹುದು ಎಂದು ವಿವರಿಸಲಾಗಿದೆ. ಆದರೆ, ಈ ಸಿದ್ಧಾಂತಗಳಿಗೆ ಇನ್ನೂ ಯಾವುದೇ ವೈಜ್ಞಾನಿಕ ಮಾನ್ಯತೆ ಇಲ್ಲ. 

ರಸಧಾತುಗಳ ನೀತಿಯು ೧೯ ನೇ ಶತಮಾನದವರೆಗೂ ಪ್ರಪಂಚದಾದ್ಯಂತ ಜನಪ್ರಿಯವಾದ ಔಷಧದ ವ್ಯವಸ್ಥೆಯಾಗಿತ್ತು. ಪಾಶ್ಚಾತ್ಯ ರಸಧಾತು ನೀತಿಯು ಮಾನವ ದೇಹದ ಮೇಲೆ ಪರಿಣಾಮ ಬೀರುವ ನಾಲ್ಕು ರಸಧಾತುಗಳನ್ನು(ರಕ್ತ, ಕಫ, ಹಳದಿ ಪಿತ್ತರಸ, ಕಪ್ಪು ಪಿತ್ತರಸ) ವಿವರಿಸುತ್ತದೆ, ಆದರೆ ಆದರೆ ಆಯುರ್ವೇದ ಸಿದ್ಧಾಂತವು ಮೂರು ದೋಷಗಳನ್ನು (ವಾತ, ಪಿತ, ಕಫ) ಉಲ್ಲೇಖಿಸುತ್ತದೆ. ಜರ್ಮ ಥಿಯರಿ ಅಭಿವೃದ್ಧಿಗೊಂಡ ನಂತರ ರಸಧಾತುಗಳ ನೀತಿಯನ್ನು ನಿರಾಕರಿಸಲಾಯಿತು.

ಮದ್ಯಪಾನ ಸೇವನೆಯು ದೇಹಕ್ಕೆ ಹಾನಿಕಾರಕ ಎಂದು ಹೇಳುವ ಮೂಲಕ ವೀಡಿಯೋ ಪ್ರಾರಂಭವಾಗುತ್ತದೆ. ನಂತರ "ಚರಕ್ ಸಮಿತಯಾ ೨೪ನೇ ಅಧ್ಯಾಯನದಲ್ಲಿ, ನಮ್ಮ ದೇಹದ ಮೇಲೆ ಯಾವುದೇ ಋಣಾತ್ಮಕ ಪರಿಣಾಮಗಳನ್ನು ಬೀರದಂತೆ ಮದ್ಯಪಾನವನ್ನು ಹೇಗೆ ಸೇವಿಸಬೇಕು ಎಂದು ವಿವರಿಸಿದೆ." ಎಂದು ವೀಡಿಯೋ ತಿಳಿಸುತ್ತದೆ. ಇದಲ್ಲದೆ, ಈ ವೀಡಿಯೋ, ವಿಭಿನ್ನ ದೋಶ ಸಮಸ್ಯೆಗಳಿರುವ ಜನರಿಗೆ ಮದ್ಯಪಾನ ಸೇವಿಸುವ ಮೊದಲು ಮಾಡಬೇಕಾದ ವಿವಿಧ ವಿಧಾನಗಳನ್ನು ಒದಗಿಸುತ್ತದೆ, ಅದರಿಂದ ಮದ್ಯಪಾನದಿಂದ ಉಂಟಾಗುವ ಋಣಾತ್ಮಕ ಪರಿಣಾಮಗಳನ್ನು ತಡೆಯ ಬಹುದು ಎಂದು ಹೇಳಲಾಗಿದೆ.

ಆದರೆ, ಮದ್ಯಪಾನದ ಸೇವನೆಯು ಸುರಕ್ಷಿತವೆಂದು ಪರಿಗಣಿಸಲು ವೈಜ್ಞಾನಿಕ ಆಧಾರವು ಅಸ್ತಿತ್ವದಲ್ಲಿಲ್ಲ.

ವಾಸ್ತವವಾಗಿ

ಜನವರಿ ೪, ೨೦೨೩ರಂದು, ವಿಶ್ವ ಆರೋಗ್ಯ ಸಂಸ್ಥೆ (WHO) ಯಾವುದೇ ಮಟ್ಟದ ಮದ್ಯಪಾನ ಸೇವನೆಯು ಮಾನವನ ಆರೋಗ್ಯಕ್ಕೆ ಸುರಕ್ಷಿತವಲ್ಲ ಎಂದು ಘೋಷಿಸಿತು. WHO ಹೇಳಿದೆ, "ಮದ್ಯಪಾನ ಸೇವನೆಯ ವಿಷಯಕ್ಕೆ ಬಂದಾಗ, ಆರೋಗ್ಯದ ಮೇಲೆ ಪರಿಣಾಮ ಬೀರದ ಯಾವುದೇ ಸುರಕ್ಷಿತ ಪ್ರಮಾಣವಿಲ್ಲ." ಮದ್ಯಪಾನವು ಮೊದಲನೇ ಗುಂಪಿನ ಕಾರ್ಸಿನೋಜೆನ್ ಆಗಿದ್ದು, ತಂಬಾಕು ಮತ್ತು ಕಲ್ನಾರಿನಂತಹ ಪದಾರ್ಥಗಳು ಜೀವಂತ ಅಂಗಾಂಶಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅದು ಉಲ್ಲೇಖಿಸಿದೆ.  

ಯುನೈಟೆಡ್ ಸ್ಟೇಟ್ಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ತನ್ನ ವೆಬ್‌ಸೈಟ್‌ನಲ್ಲಿ ಹೀಗೆ ಹೇಳುತ್ತದೆ, "ಮದ್ಯಪಾನ ಕುಡಿಯುವುದರಿಂದ ಬಾಯಿ ಮತ್ತು ಗಂಟಲು, ಯಕೃತ್ತು, ಸ್ತನ (ಮಹಿಳೆಯರಲ್ಲಿ), ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್ ಸೇರಿದಂತೆ ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಬಲವಾದ ವೈಜ್ಞಾನಿಕ ಪುರಾವೆಗಳಿವೆ, ಮತ್ತು ಕೆಲವು ವಿಧದ ಕ್ಯಾನ್ಸರ್‌ಗಳಿಗೆ, ಕಡಿಮೆ ಮಟ್ಟದ ಮದ್ಯಪಾನ ಸೇವನೆಯಲ್ಲೂ ಅಪಾಯವು ಹೆಚ್ಚಾಗುತ್ತದೆ (ದಿನದಲ್ಲಿ ೧ ಪಾನೀಯಕ್ಕಿಂತ ಕಡಿಮೆ)."

ಲಾಜಿಕಲಿ ಫ್ಯಾಕ್ಟ್ಸ್ ನವ ದೆಹೆಲಿಯಲ್ಲಿನ ಅಪೋಲೊ ಇಂದ್ರಪ್ರಸ್ಥ ಆಸ್ಪತ್ರೆಯ ಹಿರಿಯ ಸಲಹೆಗಾರ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸುದೀಪ್ ಖನ್ನಾ ಅವರನ್ನು ಸಂಪರ್ಕಿಸಿ, ವೀಡಿಯೋದಲ್ಲಿನ ಹೇಳಿಕೆಯನ್ನು ಕುರಿತು ಚರ್ಚಿಸಿತು. ಅವರು ಹೀಗೆ ಹೇಳಿದರು, "ಈ ಹೇಳಿಕೆಗಳಿಗೆ ಯಾವುದೇ ಮಾನ್ಯತೆ ಇಲ್ಲ. ಮದ್ಯಪಾನವನ್ನು ಸಮರ್ಥಿಸಲು ಎಲ್ಲರಿಗೂ ಸುಲಭವಾದ ದಾರಿ ಬೇಕು, ಆದ್ದರಿಂದ ಅವರು ಈ ವೀಡಿಯೋವನ್ನು ವೀಕ್ಷಿಸುತ್ತಾರೆ ಮತ್ತು ನಂಬುತ್ತಾರೆ. ಈ ವೀಡಿಯೋಗಳನ್ನು ಮಾಡುವ ಜನರು ಪ್ಲಾಟ್‌ಫಾರ್ಮ್‌ಗಳಿಂದ ಬಹಳಷ್ಟು ಹಣವನ್ನು ಪಡೆಯುತ್ತಾರೆ ಮತ್ತು ಸಾಮಾನ್ಯ ಜನರು ಜೀವಕ್ಕೆ ಅಪಾಯವಿರುತ್ತದೆ."

@theliverdr ಖಾತೆಯ ಹೆಸರಿನಲ್ಲಿರುವ ಡಾ. ಅಬ್ಬಿ ಫಿಲಿಪ್ಸ್, ಟ್ವಿಟ್ಟರ್‌ನಲ್ಲಿ ಈ ಹೇಳಿಕೆಯನ್ನು ತಪ್ಪು ಎಂದು ಹೇಳಿದ್ದಾರೆ. ವಾತ, ಪಿತಾ ಮತ್ತು ಕಫದ ರಸಧಾತುವಿನ ನೀತಿಯನ್ನು "ತಾತ್ವಿಕ ಮತ್ತು ಅವೈಜ್ಞಾನಿಕ" ಎಂದು ಬರೆದಿದ್ದಾರೆ. "ಮದ್ಯಪಾನವನ್ನು ಸೇವಿಸಲು ಯಾವುದೇ ಸುರಕ್ಷಿತ ಮಟ್ಟವಿಲ್ಲ ಮತ್ತು ಅದನ್ನು ಕುಡಿಯಲು ಆರೋಗ್ಯಕರ ಅಥವಾ ಸುರಕ್ಷಿತ ಮಾರ್ಗವಿಲ್ಲ" ಎಂದು ಅವರು ಹೇಳಿದ್ದಾರೆ. 

ಅವರು ಕೂಡ ಕಂಟೆಂಟ್ ರಚನೆಕಾರರ ಬಗ್ಗೆ ಇದೇ ರೀತಿಯ ಕಾಮೆಂಟ್‌ಗಳನ್ನು ಮಾಡಿದ್ದಾರೆ, "ಆರೋಗ್ಯಕರ ಮದ್ಯಪಾನ ಸೇವನೆ'ಯನ್ನು ಸಾಮಾನ್ಯೀಕರಿಸುವುದು ಮತ್ತು ವೈಭವೀಕರಿಸುವುದು ಯುವ ಕಂಟೆಂಟ್ ತಯಾರಕರು, ಮಾಹಿತಿಯಿಲ್ಲದ ಸಾರ್ವಜನಿಕರನ್ನು ಶೋಷಿಸುತ್ತಾ ಹಣ ಸಂಪಾದನೆ ಮಾಡುತ್ತಿದ್ದಾರೆ, ಅದು ಅತಿದೊಡ್ಡ ಸಾಮಾಜಿಕ ಮಾಧ್ಯಮ ಸಾಧನವಾಗಿದೆ ಎಂದು ತಿಳಿಸಿದ್ದಾರೆ.

ವಾಯುಪಡೆಯ ನಿವೃತ್ತ ವೈದ್ಯ ಮತ್ತು ವಿಮಾನ ಶಸ್ತ್ರಚಿಕಿತ್ಸಕ ಹ್ಯಾರಿಯೆಟ್ ಹಾಲ್, ಅವರು ತಮ್ಮ ಸ್ಕೆಪ್ಟಿಕಲ್ ಇನ್ಕ್ವೈರರ್‌ ಎಂಬ ಬ್ಲಾಗ ನಲ್ಲಿ ಆಯುರ್ವೇದ ದೋಷ ಸಿದ್ಧಾಂತದ ಬಗ್ಗೆ ಹೀಗೆ ಹೇಳಿದ್ದಾರೆ, "ಈ ದೋಷದ ವಿಷಯವು ಜೋತಿಷ್ಯದಂತೆ ಧ್ವನಿಸುತ್ತದೆ ಮತ್ತು ಅದರಷ್ಟೇ ವಿಶ್ವಾಸಾರ್ಹವಾಗಿದೆ."

ಈ ರೀಲನ್ನು ಪೋಷ್ಟ್ ಮಾಡಿದ ಮಾಬಳೆದರರಿಗೆ ನಾವು ಸಂಪರ್ಕಿಸಿದ್ದೇವೆ ಅವರ ಪ್ರತ್ಯುತ್ತರವನ್ನು ನೀಡಿದ್ದಲ್ಲಿ ಈ ಲೇಖನವನ್ನು ನವೀಕರಿಸಲಾಗುತ್ತದೆ.

ತೀರ್ಪು

ಮಾನವನ ದೇಹದ ಮೇಲೆ ಮದ್ಯಪಾನ ಬೀರುವ ಹಾನಿಕಾರಕ ಪರಿಣಾಮಗಳನ್ನು ಆಯುರ್ವೇದದ ದೋಷಗಳಿಂದ ಪರಿಹರಿಸಬಹುದು ಎಂದು ಹೇಳಲು ಯಾವುದೇ ಪುರಾವೆಗಳಿಲ್ಲದ ಕಾರಣ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ. ಯಾವುದೇ ಮಟ್ಟದ ಮದ್ಯಪಾನ ಸೇವನೆಯನ್ನು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ.

ಈ ವಾಸ್ತವಾಂಶವನ್ನು ಪರಿಶೀಲಿಸಿ

ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.