ಆಂಧ್ರಪ್ರದೇಶದಲ್ಲಿ ಟಿಡಿಪಿ ಗೆಲುವಿನ ಮುನ್ಸೂಚನೆ ನೀಡುವ ಟೈಮ್ಸ್ ನೌ ಎಕ್ಸಿಟ್ ಪೋಲ್ ಸ್ಕ್ರೀನ್‌ಶಾಟ್ ನ ಎಡಿಟ್ ಮಾಡಲಾದ ಆವೃತಿಯನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಇಶಿತಾ ಗೋಯಲ್ ಜೆ
ಮೇ 21 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಂಧ್ರಪ್ರದೇಶದಲ್ಲಿ ಟಿಡಿಪಿ ಗೆಲುವಿನ ಮುನ್ಸೂಚನೆ ನೀಡುವ ಟೈಮ್ಸ್ ನೌ ಎಕ್ಸಿಟ್ ಪೋಲ್  ಸ್ಕ್ರೀನ್‌ಶಾಟ್ ನ ಎಡಿಟ್ ಮಾಡಲಾದ ಆವೃತಿಯನ್ನು ಹಂಚಿಕೊಳ್ಳಲಾಗಿದೆ

ಟೈಮ್ಸ್ ನೌ ಎಕ್ಸಿಟ್ ಪೋಲ್ ಸ್ಕ್ರೀನ್‌ಶಾಟ್ ಆಂಧ್ರಪ್ರದೇಶದಲ್ಲಿ ಟಿಡಿಪಿ ಗೆಲುವಿನ ಮುನ್ಸೂಚನೆಯನ್ನು ತೋರಿಸುತ್ತದೆ ಎಂದು ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಇಸಿಐ ಮಾರ್ಗಸೂಚಿಯ ಪ್ರಕಾರ, ೨೦೨೪ರ ಚುನಾವಣೆಗಳಿಗೆ ಇದುವರೆಗೆ ಯಾವುದೇ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿಲ್ಲ. ಸ್ಕ್ರೀನ್‌ಶಾಟ್ ಅನ್ನು ಎಡಿಟ್ ಮಾಡಲಾಗಿದೆ.

ಕ್ಲೈಮ್ ಐಡಿ 7a76da45

ಹೇಳಿಕೆ ಏನು?

ಭಾರತೀಯ ಸುದ್ದಿ ವಾಹಿನಿ ಟೈಮ್ಸ್ ನೌ ಎಕ್ಸಿಟ್ ಪೋಲ್ ಅನ್ನು ತೋರಿಸುವ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಚಿತ್ರವು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷವಾದ ತೆಲುಗು ದೇಶಂ ಪಕ್ಷ (ಟಿಡಿಪಿ) ಗೆಲುವನ್ನು ಮುನ್ಸೂಚಿಸುತ್ತದೆ.

ಮೇ ೧೩, ೨೦೨೪ ರಂದು, ಆಂಧ್ರಪ್ರದೇಶ ೨೫ ಸಂಸದೀಯ ಮತ್ತು ೧೭೫ ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಿತು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದು "ಟೈಮ್ಸ್ ನೌ ಆಂಧ್ರಪ್ರದೇಶದ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಂದಿವೆ" ಎಂಬ ಶೀರ್ಷಿಕೆಯನ್ನು ಹೊಂದಿದೆ. ಮತ್ತೊಬ್ಬ ಬಳಕೆದಾರರು, “ಇದು ಸಾಕ್ಷಿ ಅಥವಾ ಟಿವಿ೯ ಅಲ್ಲ. ಇದು ಟೈಮ್ಸ್ ನೌ ಚಾನೆಲ್. ಆಂಧ್ರಪ್ರದೇಶದ ಎಕ್ಸಿಟ್ ಪೊಲ್ಸ್. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. 

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಸ್ಕ್ರೀನ್‌ಶಾಟ್ ಫೇಕ್ ಆಗಿದೆ. ಮೂಲ ಚಿತ್ರವು ೨೦೨೧ ರ ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲಿ ಟೈಮ್ಸ್ ನೌ ಪ್ರಕಟಿಸಿದ ಎಕ್ಸಿಟ್ ಪೊಲ್ಸ್ ಅನ್ನು ಚಿತ್ರಿಸುವ ಸ್ಕ್ರೀನ್‌ಶಾಟ್ ಆಗಿದೆ, ಇದನ್ನು ಈಗ ಎಡಿಟ್ ಮಾಡಿ ವೈರಲ್ ಚಿತ್ರವನ್ನು ರಚಿಸಲಾಗಿದೆ. 

ವಾಸ್ತವಾಂಶಗಳೇನು?

ನಾವು ಟೈಮ್ಸ್ ನೌನ ಸಾಮಾಜಿಕ ಮಾಧ್ಯಮ ಖಾತೆಗಳನ್ನು (ಆರ್ಕೈವ್ ಮಾಡಿದ ಲಿಂಕ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು) ಮತ್ತು ಎಕ್ಸಿಟ್ ಪೊಲ್ಸ್ ನ ಫಲಿತಾಂಶಗಳಿಗಾಗಿ ವೆಬ್‌ಸೈಟ್‌ಗಳನ್ನು ಹುಡುಕಿದೆವು ಆದರೆ ೨೦೨೪ ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗಾಗಿ ಪ್ರಕಟಿಸಲಾದ ಯಾವುದೇ ಡೇಟಾ ಕಂಡುಬಂದಿಲ್ಲ.

೨೦೨೧ ರಲ್ಲಿ ಉತ್ತರ ಪ್ರದೇಶನ ಅಭಿಪ್ರಾಯ ಸಂಗ್ರಹವನ್ನು ಪ್ರಕಟಿಸುವಾಗ ಟೈಮ್ಸ್ ನೌ ಇದೇ ರೀತಿಯ ಟೆಂಪ್ಲೇಟ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಬಳಸಿದೆ ಎಂದು ರಿವರ್ಸ್ ಇಮೇಜ್ ಸರ್ಚ್ ಮೂಲಕ ತಿಳಿದುಬಂದಿದೆ. ನವೆಂಬರ್ ೧೬, ೨೦೨೧ ರಂದು ಟೈಮ್ಸ್ ನೌ ಪ್ರಕಟಿಸಿದ ಈ ಅಭಿಪ್ರಾಯ ಸಂಗ್ರಹದ ಸ್ಲೈಡ್ ಅನ್ನು ಎಡಿಟ್ ಮಾಡಿ ವೈರಲ್ ಚಿತ್ರವನ್ನು ರಚಿಸಲಾಗಿದೆ ಎಂದು ನಾವು ಕಂಡುಕೊಂಡೆವು. ಮೂಲ ಸ್ಲೈಡ್‌ಗೆ "TIMES NOW-Polstrat #UttarPradesh Opinion Poll SEAT SHARE on India Upfront" ಎಂಬ ಶೀರ್ಷಿಕೆ ನೀಡಲಾಗಿದೆ.

ಚಿತ್ರಗಳನ್ನು ಹೋಲಿಸಿದಾಗ, ವೈರಲ್ ಸ್ಕ್ರೀನ್‌ಶಾಟ್ ಅನ್ನು ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಸಂಶೋಧನಾ ಪಾಲುದಾರರಾದ ಪೋಲ್‌ಸ್ಟ್ರಾಟ್ ಎನ್ ಚಿನ್ಹೆಯನ್ನು ಇಟಿಜಿ ಯೊಂದಿಗೆ ಬದಲಾಯಿಸಲಾಗಿದೆ  ಮತ್ತು ಉತ್ತರ ಪ್ರದೇಶ ಎಂಬ ರಾಜ್ಯದ ಹೆಸರನ್ನು ಆಂಧ್ರ ಪ್ರದೇಶ ಎಂದು ಬದಲಾಯಿಸಲಾಗಿದೆ. ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯ ಸಂದರ್ಭಕ್ಕೆ ಹೊಂದಿಕೆಯಾಗುವಂತೆ ಫಲಿತಾಂಶದ ಸಂಖ್ಯೆಗಳು ಮತ್ತು ಪಕ್ಷಗಳ ಹೆಸರನ್ನೂ ಸಹ ಬದಲಾಯಿಸಲಾಗಿದೆ.

ವೈರಲ್ ಸ್ಕ್ರೀನ್‌ಶಾಟ್ ಮತ್ತು ಟೈಮ್ಸ್ ನೌ ಚಿತ್ರದ ನಡುವಿನ ಹೋಲಿಕೆ.
(ಮೂಲ: ಎಕ್ಸ್/ಟೈಮ್ಸ್ ನೌ/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆಂಧ್ರಪ್ರದೇಶ ಚುನಾವಣೆಯ ಬಗ್ಗೆ ಟೈಮ್ಸ್ ನೌನ ಊಹೆಗಳು

ಮಾರುಕಟ್ಟೆ ಸಂಶೋಧನೆ ಮತ್ತು ಮತದಾನ ಏಜೆನ್ಸಿಯಾದ ಇಟಿಜಿ, ಟೈಮ್ಸ್ ನೌ ಜೊತೆಗೆ ನಿಜವಾಗಿಯೂ ಸಂಬಂಧವನ್ನು ಹೊಂದಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಸುದ್ದಿ ವಾಹಿನಿಯು ಏಪ್ರಿಲ್ ೪, ೨೦೨೪ ರಂದು ಆಂಧ್ರಪ್ರದೇಶದಲ್ಲಿ ೨೦೨೪ ರ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ಪ್ರಕ್ಷೇಪಗಳನ್ನು ಮಾತ್ರ ಪ್ರಕಟಿಸಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ಇದು ಭಾರತೀಯ ಚುನಾವಣಾ ಆಯೋಗವು (ಇಸಿಐ) ಎಕ್ಸಿಟ್ ಪೊಲ್ಸ್ ಮೇಲೆ ನಿಷೇಧ ಇರಿಸುವ ಮೊದಲೇ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಾಗಿದೆ. 

ಮೇ ೭, ೨೦೨೪ ರಂದು, ಇಟಿಜಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) "ಮುಂಬರುವ ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಗಳ ಮುನ್ಸೂಚನೆಗಳನ್ನು ಇಸಿಐ  ಮಾರ್ಗಸೂಚಿಗಳ ಪ್ರಕಾರ ಜೂನ್ ೧ ರಂದು ಮಾತ್ರ ಬಿಡುಗಡೆ ಮಾಡಲಾಗುತ್ತದೆ" ಎಂದು ಸ್ಪಷ್ಟಪಡಿಸಿದೆ.

ಲಾಜಿಕಲಿ ಫ್ಯಾಕ್ಟ್ಸ್ ಈ ಹಿಂದೆ ಆಂಧ್ರಪ್ರದೇಶ ಮತ್ತು ದೇಶಾದ್ಯಂತ ವಿವಿಧ ಚುನಾವಣೆಗಳ ನಕಲಿ ಸಮೀಕ್ಷೆಗಳ ಬಗ್ಗೆ ಇಂತಹ ಹಲವಾರು ಹೇಳಿಕೆಗಳ ಮೇಲೆ ಫ್ಯಾಕ್ಟ್-ಚೆಕ್ ಅನ್ನು ಪ್ರಕಟಿಸಿದೆ. 

ಎಸಿಐ ಪ್ರಕಾರ ಎಕ್ಸಿಟ್ ಪೋಲ್ ನ ಮಾರ್ಗಸೂಚಿಗಳು

ಏಪ್ರಿಲ್ ೧೯, ೨೦೨೪ ರಂದು ಬಿಡುಗಡೆ ಮಾಡಲಾದ ಎಸಿಐ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮಾರ್ಗಸೂಚಿಗಳ ಪ್ರಕಾರ, ಏಪ್ರಿಲ್ ೧೯, ೭:೦೦  ರಿಂದ ಜೂನ್ ೧, ೬:೩೦ ರವರೆಗೆ ಎಕ್ಸಿಟ್ ಪೊಲ್ಸ್ ಅನ್ನು ಬಿಡುಗಡೆ ಮಾಡುವುದನ್ನು ನಿಷೇಧಿಸಲಾಗಿದೆ. ಎಪ್ರಿಲ್ ೨, ೨೦೨೪ ರಂದು ಬಿಡುಗಡೆಯಾದ ಪ್ರೆಸ್ ನೋಟ್, ರ್.ಪಿ. ಆಕ್ಟ್ ೧೯೫೧ ರ ಸೆಕ್ಷನ್ ೧೨೬ ಎ ಅನ್ನು ಹೈಲೈಟ್ ಮಾಡಿದೆ, ಇದು ಎಕ್ಸಿಟ್ ಪೋಲ್ ನಡೆಸುವುದನ್ನು ಮತ್ತು ಅದರಲ್ಲಿ ಹೇಳಲಾದ ಅವಧಿಯಲ್ಲಿ ಅದರ ಫಲಿತಾಂಶಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸುತ್ತದೆ.

ತೀರ್ಪು

ವೈರಲ್ ಸ್ಕ್ರೀನ್‌ಶಾಟ್ ೨೦೨೧ ರ ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲಿ ಟೈಮ್ಸ್ ನೌ ಪ್ರಕಟಿಸಿದ ಎಕ್ಸಿಟ್ ಪೋಲ್‌ನ ಎಡಿಟ್ ಮಾಡಿದ ಆವೃತ್ತಿಯಾಗಿದೆ. ಈ ಚಿತ್ರವನ್ನು ೨೦೨೪ ರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳು ಎಂದು ಹಂಚಿಕೊಳ್ಳಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.