ಬೆಂಗಳೂರು ಟ್ರಾಫಿಕ್ ಪೊಲೀಸ್ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಾರಾಷ್ಟ್ರದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರಜಿನಿ ಕೆ.ಜಿ
ಫೆಬ್ರವರಿ 28 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬೆಂಗಳೂರು ಟ್ರಾಫಿಕ್ ಪೊಲೀಸ್ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಾರಾಷ್ಟ್ರದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೇ ೨೦೨೩ ರಲ್ಲಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಬೈಕ್ ಸವಾರನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ.

ಕ್ಲೈಮ್ ಐಡಿ c30eb3d8

ಹೇಳಿಕೆ ಏನು?

ಪೊಲೀಸ್ ಅಧಿಕಾರಿಯೊಬ್ಬರು ಫ್ಲೈಓವರ್ ಕೆಳಗೆ ವ್ಯಕ್ತಿಯೊಬ್ಬನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ತಳ್ಳುತ್ತಿರುವ ದೃಶ್ಯವನ್ನು ಸೆರೆಹಿಡಿಯುವ ವೀಡಿಯೋವನ್ನು ಈ ಘಟನೆಯು ದಕ್ಷಿಣ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಬೆಂಗಳೂರು ಪೊಲೀಸರು "ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ" ಮತ್ತು "ರೌಡಿ" ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಪೋಷ್ಟ್ ಸೂಚಿಸುತ್ತದೆ. ಈ ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು. 

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಹೇಳಿಕೆ ತಪ್ಪು. ವೀಡಿಯೋ ಹಳೆಯದಾಗಿದ್ದು, ಈ ದೃಶ್ಯಗಳು ಮಹಾರಾಷ್ಟ್ರದಿಂದ ಬಂದಿದ್ದು, ಬೆಂಗಳೂರಿನಿಂದಲ್ಲ.

ವಾಸ್ತವಾಂಶಗಳು ಇಲ್ಲಿವೆ

ರಿವರ್ಸ್ ಇಮೇಜ್ ಹುಡುಕಾಟವು ಮೇ ೨೧, ೨೦೨೩ ರಂದು ಮಹಾರಾಷ್ಟ್ರ ಮೂಲದ ಸುದ್ದಿ ಔಟ್‌ಲೆಟ್ ಸಕಾಲ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ದೃಶ್ಯಕ್ಕೆ ನಮ್ಮನ್ನು ಕರೆದೊಯ್ಯಿತು. ಮೇ ೨೦, ೨೦೨೩ ರಂದು ಔರಂಗಾಬಾದ್ ಎಂದು ಕರೆಯಲ್ಪಡುವ ಛತ್ರಪತಿ ಸಂಭಾಜಿ ನಗರದ ಕ್ರಾಂತಿ ಚೌಕ್ ಬಳಿ ಪ್ರದೀಪ್ ಚವಾಣ್ ಎಂದು ಗುರುತಿಸಲಾದ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಯುವಕನೊಂದಿಗೆ ವಾಗ್ವಾದದಲ್ಲಿ ತೊಡಗಿದ್ದರು ಎಂದು ಮರಾಠಿ ವಿವರಣೆಯು ಬಹಿರಂಗಪಡಿಸುತ್ತದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ) ಅಧಿಕಾರದಲ್ಲಿದ್ದಾಗ ಈ ಘಟನೆ ನಡೆದಿದೆ.

ಮೇ ೨೦, ೨೦೨೩ ರ ಎಬಿಪಿ ಮಜಾ ವರದಿಯು ಈಗ ವೈರಲ್ ಆಗಿರುವ ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಉಲ್ಲೇಖಿಸಿದೆ, “ಬೈಕ್ ಸವಾರನನ್ನು ಟ್ರಾಫಿಕ್ ಪೋಲೀಸರು ಕ್ರೂರವಾಗಿ ಥಳಿಸಿದ್ದಾರೆ; ಸಂಭಾಜಿನಗರದ ವೀಡಿಯೋ ವೈರಲ್ ಆಗಿದೆ (sic).” ಘಟನೆ ಇದೀಗ ವೈರಲ್ ಆಗಿದ್ದು, ಕ್ರಾಂತಿ ಚೌಕ್ ಪೊಲೀಸ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದಲ್ಲದೆ, ಮುಂಬೈ ಟ್ರಾಫಿಕ್ ಪೊಲೀಸರು ತಮ್ಮ ಎಕ್ಸ್ ಖಾತೆಯ ಮೂಲಕ ಮೇ ೨೧, ೨೦೨೩ ರಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ದೃಢಪಡಿಸಿದರು.

ಹೆಚ್ಚುವರಿಯಾಗಿ, ಲಾಜಿಕಲಿ ಫ್ಯಾಕ್ಟ್ಸ್ ದೃಶ್ಯವನ್ನು ಜಿಯೋಲೊಕೇಟ್ ಮಾಡಿತು ಮತ್ತು ಘಟನೆಯು ಮಹಾರಾಷ್ಟ್ರದ ಔರಂಗಾಬಾದ್‌ನ ಕ್ರಾಂತಿ ಚೌಕ್‌ನಲ್ಲಿ ನಡೆದಿದೆ ಎಂದು ಕಂಡುಕೊಂಡಿದೆ. ಫ್ಲೈಓವರ್‌ನ ರಚನೆ ಮತ್ತು ಬ್ಯಾರಿಕೇಡ್‌ಗಳು ವೈರಲ್ ವೀಡಿಯೋದಲ್ಲಿ ನೋಡಿದಂತೆಯೇ ಇರುತ್ತವೆ.


ವೈರಲ್ ವೀಡಿಯೋ ಮತ್ತು ಗೂಗಲ್ ನಕ್ಷೆಗಳಲ್ಲಿ ಸ್ಥಳದ ಹೋಲಿಕೆ. (ಮೂಲ: ಎಕ್ಸ್/ಗೂಗಲ್  ಮ್ಯಾಪ್ಸ್)

ತೀರ್ಪು

೨೦೨೩ ರ ಹಿಂದಿನ ವೀಡಿಯೋ, ಛತ್ರಪತಿ ಸಂಭಾಜಿ ನಗರದಲ್ಲಿ (ಹಿಂದಿನ ಔರಂಗಾಬಾದ್) ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಟ್ರಾಫಿಕ್ ಸಿಗ್ನಲ್ ಉಲ್ಲಂಘನೆಯ ನಂತರ ಬೈಕ್ ಸವಾರನ ಮೇಲೆ ಹಲ್ಲೆ ಮಾಡುವುದನ್ನು ಚಿತ್ರಿಸುತ್ತದೆ. ಘಟನೆಯ ಸ್ಥಳವನ್ನು ಕರ್ನಾಟಕದ ಬೆಂಗಳೂರು ಎಂದು ತಪ್ಪಾಗಿ ಬಿಂಬಿಸಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

Read our fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.