೨೦೨೦ರಲ್ಲಿ ಕೋಲ್ಕತ್ತಾದಲ್ಲಿ ಕಂಡುಬಂದ "ಗೋ ಬ್ಯಾಕ್ ಮೋದಿ" ಎಂದು ಓದುವ ಗೀಚುಬರಹವನ್ನು ಏಪ್ರಿಲ್ ೨೦೨೩ರಲ್ಲಿ ತಮಿಳುನಾಡಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ವಿವೇಕ್ ಜೆ
ಜುಲೈ 10 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೦ರಲ್ಲಿ ಕೋಲ್ಕತ್ತಾದಲ್ಲಿ ಕಂಡುಬಂದ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಈ ಫೋಟೋ ೨೦೨೦ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಸಿಎಎ ಪ್ರತಿಭಟನೆಯದ್ದು. ಇದು ಏಪ್ರಿಲ್ ೨೦೨೩ರಲ್ಲಿ ಮೋದಿಯವರು ಚೆನ್ನೈಗೆ ಭೇಟಿ ನೀಡಿದ್ದಾಗ ನಡೆದ ಪ್ರತಿಭಟನೆಯದ್ದಲ್ಲ.

ಕ್ಲೈಮ್ ಐಡಿ c7c52cf5

ಸಂದರ್ಭ

 ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ೮, ೨೦೨೩ ರಂದು ತಮಿಳುನಾಡಿನ ಚೆನ್ನೈಗೆ ಭೇಟಿ ನೀಡಿ, ಅಲ್ಲಿನ ಚೆನ್ನೈ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡದ ಉದ್ಘಾಟನೆ, ಚೆನ್ನೈ ಮತ್ತು ಕೊಯಮತ್ತೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಫ್ಲ್ಯಾಗ್ ಆಫ್ ಮಾಡುವುದು ಮತ್ತು ಹಲವಾರು ಇತರ ಮೂಲಸೌಕರ್ಯ ಕಾಮಗಾರಿಗಳನ್ನು ಉದ್ಘಾಟಿಸಿದರು. ಅವರ ಭೇಟಿಯು #GoBackModi ಮೊದಲಾದ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಆನ್‌ಲೈನ್ ಅಭಿಯಾನ ಹಾಗು ತಮಿಳುನಾಡಿನ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಕೆಲವರು "ಗೋ ಬ್ಯಾಕ್ ಮೋದಿ" ಎಂದು ಬರೆದಿರುವ ಕಪ್ಪು ಬಣ್ಣದ ಬಲೂನ್‌ಗಳನ್ನು ಸಹ ಪ್ರದರ್ಶಿಸಿದ್ದರು. ವರದಿಗಳ ಪ್ರಕಾರ, ತಮಿಳುನಾಡಿನಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿದ್ದಕ್ಕಾಗಿ ೧೧೫೦ ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇತ್ತೀಚಿನ ಪ್ರತಿಭಟನೆಯಿಂದ ಬಂದಿದೆ ಎಂದು ಸೂಚಿಸುವಂತೆ "ಗೋ ಬ್ಯಾಕ್ ಮೋದಿ" ಎಂಬ ಬರಹದೊಂದಿಗೆ ಫಲಕಗಳು ಮತ್ತು ಗೀಚುಬರಹದೊಂದಿಗೆ ಹಲವಾರು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಅಂತಹ ಚಿತ್ರವೊಂದು ರಸ್ತೆಯ ಮೇಲೆ ಅದೇ ಪಠ್ಯವನ್ನು ಬರೆದಿರುವುದಾಗಿ ತೋರಿಸಿದೆ. ಮೋದಿಯವರ ಭೇಟಿಯನ್ನು ವಿರೋಧಿಸಿ ಹಲವಾರು ಈ ಬರಹವನ್ನು ಹೊಂದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದರೆ, ರಸ್ತೆಯ ಮೇಲಿನ ಗೀಚುಬರಹದ ಈ ಚಿತ್ರವು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪ್ರತಿಭಟನೆಯದ್ದಲ್ಲ. 

ವಾಸ್ತವವಾಗಿ

ವೈರಲ್ ಚಿತ್ರಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, "ಗೋ ಬ್ಯಾಕ್ ಮೋದಿ" ಎಂದು ಬರೆದಿರುವ ಗೀಚುಬರಹವು ೨೦೨೩ಕ್ಕಿಂತ ಮೊದಲೇ ಆನ್‌ಲೈನ್‌ನಲ್ಲಿದೆ ಎಂದು ನಾವು ಕಂಡುಕೊಂಡಿದ್ದೇವೆ. ಸುಮಾರು ಎರಡು ವರ್ಷಗಳ ಹಿಂದೆ ಫೆಬ್ರವರಿ ೨೦೨೧ ರಲ್ಲಿ ಮೋದಿಯವರು ಚೆನ್ನೈಗೆ ಭೇಟಿ ನೀಡಿದ್ದಾಗ ಕೂಡ ಇದೇ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

ಅಕ್ಟೋಬರ್ ೨೦೨೦ ರಲ್ಲಿ ಕೂಡ ಅದೇ ಚಿತ್ರವು ಬಿಹಾರ ರಾಜ್ಯ ಚುನಾವಣೆಯ ಸಮಯದಲ್ಲಿ ಬಿಹಾರದಲ್ಲಿ ನಡೆದ ಪ್ರತಿಭಟನೆಯದ್ದೆಂದು ಕೂಡಾ ಹಂಚಿಕೊಳ್ಳಲಾಗಿತ್ತು. ಆದರೆ, ಈ ಗೀಚುಬರಹವನ್ನು ತೋರಿಸುವ ಮೊದಲ ಚಿತ್ರವನ್ನು ಕೋಲ್ಕತ್ತಾ ಮೂಲದ ಪತ್ರಕರ್ತರಾದ ಮಯೂಖ್ ರಂಜನ್ ಘೋಷ್ ಅವರು ಜನವರಿ ೧೧, ೨೦೨೦ ರಂದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಆ ಪೋಷ್ಟ್ ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, "ಇದು ಕೋಲ್ಕತ್ತಾದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾಗಿದೆ. #Esplanade. ಲಕ್ಷಗಟ್ಟಲೆ ಜನರು ಪ್ರಯಾಣಿಸುತ್ತಾರೆ, ದಟ್ಟಣೆಯಿಂದ ತುಂಬಿದ ದಟ್ಟಣೆ ಕಂಡುಬಂತು. ಇಂದು ರಾತ್ರಿ ಈ ಸ್ಥಳವನ್ನು ನೋಡಿ. ರಸ್ತೆಗಳು ಗೀಚುಬರಹವಾಗಿ ಮಾರ್ಪಟ್ಟಿವೆ, ಸಂಚಾರವಿಲ್ಲ, ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಲಾಗಿದೆ, ವಿದ್ಯಾರ್ಥಿಗಳು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದರು." 

ಪ್ರಧಾನಿ ಮೋದಿ ಅವರು ೨೦೨೦ರ ಜನವರಿಯಲ್ಲಿ ಎರಡು ದಿನಗಳ ಭೇಟಿಗಾಗಿ ಕೋಲ್ಕತ್ತಾಗೆ ಬಂದಿದ್ದಾಗ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸೇರಿದಂತೆ ಹಲವಾರು ವಿದ್ಯಾರ್ಥಿ ಸಂಘಟನೆಗಳು ಪಶ್ಚಿಮ ಬಂಗಾಳ ರಾಜ್ಯ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಹಲವಾರು ಪ್ರತಿಭಟನೆಗಳನ್ನು ನಡೆಸಿದರು. ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯನ್ನು ಪ್ರತಿಭಟಿಸುತ್ತ ಅವರು ಮೋದಿಯವರ ವಿರುದ್ಧ ಫಲಕಗಳು ಮತ್ತು ಗೀಚುಬರಹಗಳನ್ನು ಬಳಸಿದರು.

ಮೋದಿಯವರ ಭೇಟಿಯ ವಿರುದ್ಧದ ಪ್ರತಿಭಟನೆಗಳನ್ನು ವರದಿ ಮಾಡಿದ ಕೆಲವು ಲೇಖನಗಳಲ್ಲಿ ಹಗಲು ಸಮಯದಲ್ಲಿ ತೆಗೆದ ಅದೇ ಗೀಚುಬರಹದ ಚಿತ್ರವನ್ನು ಬೇರೆ ಆಂಗಲ್ ನಲ್ಲಿ ನೋಡಬಹುದು. ಟೈಮ್ಸ್ ಆಫ್ ಇಂಡಿಯಾದಲ್ಲಿನ ಲೇಖನವೊಂದರ ಚಿತ್ರದ ಶೀರ್ಷಿಕೆಯು "ಶನಿವಾರದ ಪ್ರತಿಭಟನೆಯಿಂದ ಬಿಟ್ಟುಹೋದ ಗೀಚುಬರಹ" ಎಂದು ಬರೆಯಲಾಗಿದೆ.

ವೈರಲ್ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದರೆ, "ಮೆಟ್ರೋ ಚಾನೆಲ್ ಕಂಟ್ರೋಲ್ ಪೋಸ್ಟ್. ಹರೇ ಪೊಲೀಸ್ ಸ್ಟೇಷನ್" ಎಂದು ಬರೆದಿರುವುದನ್ನು ಕಂಡುಬರುತ್ತದೆ. ಜನವರಿ ೨೦೨೦ ರಲ್ಲಿ ಪೌರತ್ವ ಕಾನೂನಿನ ವಿರುದ್ಧ ಕೊಲ್ಕತ್ತಾದಲ್ಲಿ ಪ್ರತಿಭಟನೆಗಳು ನಡೆದ ಸ್ಥಳಗಳಲ್ಲಿ ಇದೂ ಕೂಡ ಒಂದಾಗಿದೆ.

ತೀರ್ಪು

ಪ್ರಧಾನ ಮಂತ್ರಿಯವರ ಭೇಟಿಯ ಕುರಿತು ಚೆನ್ನೈನಲ್ಲಿ ನಡೆದ ಪ್ರತಿಭಟನೆಗಳ ನಂತರ "ಗೋ ಬ್ಯಾಕ್ ಮೋದಿ" ಎಂದು ಬರೆದಿರುವ ಗೀಚುಬರಹದ ಚಿತ್ರವನ್ನು ಏಪ್ರಿಲ್ ೨೦೨೩ ರಲ್ಲಿ ಚೆನ್ನೈ ನಲ್ಲಿ ನಡೆದ ಪ್ರತಿಭಟನೆಯದ್ದು ಎಂದು ಸೂಚಿಸುವಂತೆ ವ್ಯಾಪಕವಾಗಿ ಹಂಚಿಕೊಳ್ಳಲಾಯಿತು. ಚೆನ್ನೈ ಮತ್ತು ಬಿಹಾರದಲ್ಲಿ ನಡೆದ ವಿವಿಧ ಪ್ರತಿಭಟನೆಗಳದ್ದೆಂದು ಈ ಚಿತ್ರವನ್ನು ಹಲವಾರು ಬಾರಿ ಹಂಚಿಕೊಳ್ಳಲಾಗಿದೆ. ಆದರೆ, ಇದು ವಾಸ್ತವವಾಗಿ ಜನವರಿ ೨೦೨೦ ರಲ್ಲಿ ಕೋಲ್ಕತ್ತಾದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಚಿತ್ರೀಕರಿಸಿದ ಫೋಟೋ. ಆದ್ದರಿಂದ ಈ ಹೇಳಿಕೆಯನ್ನು ನಾವು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.