False: ಕರ್ನಾಟಕ ಚುನಾವಣೆಯಲ್ಲಿ ತಮ್ಮ ಪಕ್ಷವು ಗೆದ್ದರೆ ಕೆಂಪೇಗೌಡರ ಪ್ರತಿಮೆಗಳ ಬದಲಿಗೆ ಶಿವಾಜಿ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ

ಮೂಲಕ: ವಿವೇಕ್ ಜೆ
ಜುಲೈ 18 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
False: ಕರ್ನಾಟಕ ಚುನಾವಣೆಯಲ್ಲಿ ತಮ್ಮ ಪಕ್ಷವು ಗೆದ್ದರೆ ಕೆಂಪೇಗೌಡರ ಪ್ರತಿಮೆಗಳ ಬದಲಿಗೆ ಶಿವಾಜಿ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಅನಂತ್ ಕುಮಾರ್ ಹೆಗ್ಡೆ ಅವರು ಹೇಳಿರುವುದೆಂದು ತೋರಿಸುವ ನಕಲಿ ಉಲ್ಲೇಖವೊಂದು ಪ್ರಚಾರಗೊಂಡಿದೆ. ೨೦೧೯ರಲ್ಲಿಯೇ ಅಂತಹ ಹೇಳಿಕೆಯನ್ನು ನೀಡಿಲ್ಲ ಎಂದು ಹೆಗ್ಡೆ ಅವರು ಸ್ಪಷ್ಟಪಡಿಸಿದ್ದರು.

ಕ್ಲೈಮ್ ಐಡಿ d9e34dc8

ಸಂದರ್ಭ
೨೦೨೩ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನೆಡೆಯಿತು. ಮಾರ್ಚ್ ೧೯, ೨೦೨೩ ರಂದು, ಟ್ವಿಟರ್ ಬಳಕೆದಾರರೊಬ್ಬರು ಸುವರ್ಣ ನ್ಯೂಸ್ 24x7 ಲೇಖನದ ಸ್ಕ್ರೀನ್‌ಗ್ರಾಬ್ ಅನ್ನು ಹಂಚಿಕೊಂಡು "ಹೆಗ್ಡೆಗೆ ಪೂರ್ತಿ ಹುಚ್ಚು ಹಿಡಿತಾ?" ಎಂದು ಪ್ರಶ್ನಿಸಿದ್ದಾರೆ. ಸ್ಕ್ರೀನ್‌ಗ್ರಾಬ್ ನಲ್ಲಿ ಕಂಡುಬಂದ ಲೇಖನವು ಮಾಜಿ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ಸಂಸದ ಅನಂತ್ ಕುಮಾರ್ ಹೆಗ್ಡೆ ಅವರ ಚಿತ್ರವನ್ನು ಹೊಂದಿದೆ. ಆ ಲೇಖನದ ಶೀರ್ಷಿಕೆಯು "ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕೆಂಪೇಗೌಡ ಪ್ರತಿಮೆ ಉರುಳಿಸಿ ಶಿವಾಜಿ ಪ್ರತಿಮೆ? ವೈರಲ್ ಆದ ಸಚಿವರ ಹೇಳಿಕೆ" ಎಂದು ಹೇಳಿಕೊಂಡಿದೆ. ಅದಲ್ಲದೆ ಅದರೊಂದಿಗೆ #Kannadanews ಮತ್ತು #Anannthkumarhegde ಎಂಬ ಎರಡು ಹ್ಯಾಶ್‌ಟ್ಯಾಗ್ ಗಳು ಕೂಡ ಇದ್ದವು.

ಆದರೆ ಆ ಪೋಷ್ಟ್ ನಲ್ಲಿರುವ ಹೇಳಿಕೆಯು ತಪ್ಪು. ೨೦೧೮ ರಲ್ಲಿ ಪ್ರಕಟಿತಗೊಂಡು, ಆನಂತರ ತೆಗೆದುಹಾಕಲಾದ ಲೇಖನದ ಸ್ಕ್ರೀನ್‌ಶಾಟ್ ಅನ್ನು ಈ ಬರುವ ೨೦೨೩ರ ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹಂಚಿಕೊಳ್ಳಲಾಗಿದೆ.  

ವಾಸ್ತವವಾಗಿ

ರಿವರ್ಸ್ ಇಮೇಜ್ ಸರ್ಚ್ ಮೂಲಕ, ಲೇಖನದ ಈ ಸ್ಕ್ರೀನ್‌ಗ್ರಾಬ್ ೨೦೧೮ ರಿಂದ ಪ್ರಸಾರವಾಗುತ್ತಿದೆ ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ. ಡಿಸೆಂಬರ್ ೨೦೨೦ ರಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಎಂದು ಮರುಬ್ರಾಂಡ್ ಮಾಡಲಾದ ಸುವರ್ಣ ನ್ಯೂಸ್ 24X7 ಕನ್ನಡ ಸುದ್ದಿ ವಾಹಿನಿಯು ೨೦೧೮ ರಲ್ಲಿ ಈ ಶೀರ್ಷಿಕೆಯೊಂದಿಗೆ ಲೇಖನವನ್ನು ಪ್ರಕಟಿಸಿತ್ತು, ಹಾಗು ನಂತರ ಅದನ್ನು ತೆಗೆದುಹಾಕಲಾಯಿತು ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ. ಈ ಲೇಖನದ ಮುಖ್ಯಾಂಶವನ್ನು ಫೇಸ್‌ಬುಕ್‌ಗೆ ಹಂಚಿಕೊಂಡಾಗ ಡೀಫಾಲ್ಟ್ ಆಗಿ ಮೊಟಕುಗೊಳಿಸಲಾಗಿದೆ ಎಂದು ಸ್ಕ್ರೀನ್‌ಗ್ರಾಬ್ ನಲ್ಲಿ ಕಾಣಿಸಿಕೊಂಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಫೇಸ್‌ಬುಕ್ ಪೋಷ್ಟ್ ನ ಪ್ರಿವ್ಯೂ ಸ್ಕ್ರೀನ್‌ಗ್ರಾಬ್ ಅನ್ನು ತೆಗೆದುಕೊಂಡಿದ್ದಾರೆ ಮತ್ತು ಈ ಚಿತ್ರವನ್ನು ೨೦೧೮ ರ ವಿಧಾನಸಭಾ ಚುನಾವಣೆಯ ಮುಂಚೆ ಕೂಡ ತಪ್ಪಾದ ನಿರೂಪಣೆಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಕೂಡ ಕಂಡುಬಂದಿದೆ.

ಲೇಖನದ ಆರ್ಕೈವ್ ಆವೃತ್ತಿಯನ್ನು ಲಾಜಿಕಲಿ ಫ್ಯಾಕ್ಟ್ಸ್ ಪರಿಶೀಲಿಸಿದಾಗ ಈ ಲೇಖನವನ್ನು ಮಾರ್ಚ್ ೧೧, ೨೦೧೮ ರಂದು ಪ್ರಕಟಿಸಲಾಗಿತ್ತು ಎಂದು ಕಂಡುಬಂದಿದೆ. ಲೇಖನದ ಪೂರ್ಣವಾದ ಶೀರ್ಷಿಕೆಯು ಹೀಗಿದೆ: "ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಕೆಂಪೇಗೌಡ ಪ್ರತಿಮೆ ಉರುಳಿಸಿ ಶಿವಾಜಿ ಪ್ರತಿಮೆ? ವೈರಲ್ ಆದ ಸಚಿವರ ಹೇಳಿಕೆಯ FB ಸ್ಟೇಟಸ್." ಕೆಂಪೇಗೌಡರು ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ಮುಖ್ಯಸ್ಥರಾಗಿದ್ದರು ಮತ್ತು ೧೬ ನೇ ಶತಮಾನದಲ್ಲಿ ಬೆಂಗಳೂರಿನ ಸ್ಥಾಪಕರಾಗಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ‘ಪ್ರಜಾಕೀಯ’ ಹೆಸರಿನ ಫೇಸ್‌ಬುಕ್ ಖಾತೆಯು ಹೆಗ್ಡೆ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ ಎಂಬ ಆರೋಪವನ್ನು ಹೇಗೆ ಮಾಡಿತು ಮತ್ತು ಹೆಗ್ಡೆ ಅವರ ಆಪ್ತ ಸಹಾಯಕ ಸುರೇಶ್ ಶೆಟ್ಟಿ ಅವರು ಈ ಬಗ್ಗೆ ಹೇಗೆ ಪೊಲೀಸ್ ದೂರು ದಾಖಲಿಸಿದ್ದಾರೆ ಎಂಬುದರ ಬಗ್ಗೆ ಸುವರ್ಣ ಸುದ್ದಿ ವರದಿಯು ವಿವರಿಸಿದೆ.

ಪ್ರಜಾಕೀಯ ಎಂಬ ಹೆಸರಿನ ಫೇಸ್‌ಬುಕ್ ಖಾತೆಯು ಹೆಗ್ಡೆಯವರು ಹೀಗೆ ಹೇಳಿದರು ಎಂಬ ಸ್ಟೇಟಸ್ ಹಂಚಿಕೊಂಡ ನಂತರವೇ ಸುವರ್ಣ ನ್ಯೂಸ್ ಲೇಖನವನ್ನು ಬರೆಯಲಾಗಿದೆ ಎಂದು ಹೆಚ್ಚಿನ ಸಂಶೋಧನೆಯು ತೋರಿಸಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಪೋಷ್ಟ್ ನ ನಿಖರವಾದ ಪದಗಳು ಹೀಗಿದ್ದವು: "ಬಿಜೆಪಿ ಅಧಿಕಾರಕ್ಕೆ ಬಂದರೆ ಕೆಂಪೇಗೌಡರ ಪ್ರತಿಮೆಯನ್ನು ಉರುಳಿಸಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸುತ್ತೇವೆ - ಅನಂತ್ ಕುಮಾರ್ ಹೆಗ್ಡೆ." ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್ ಮತ್ತು ದಿ ಹಿಂದೂ ಪತ್ರಿಕೆಗಳು ಈ ಹೇಳಿಕೆ ಸುಳ್ಳು ಎಂದು, ಹಾಗು ಹೆಗ್ಡೆಯವರು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ವರದಿ ಮಾಡಿದ್ದಾರೆ.

೨೦೧೯ರಲ್ಲಿ ಇದೇ ರೀತಿಯ ಹೇಳಿಕೆಗಳೊಂದಿಗೆ ಈ ಲೇಖನದ ಸ್ಕ್ರೀನ್‌ಶಾಟ್‌ಗಳು ಪುನರಾವರ್ತನೆಯಾದಾಗ, ಹೆಗ್ಡೆ ಅವರು ಮತ್ತೊಂದು ದೂರನ್ನು ಸಲ್ಲಿಸಿದರು, ಈ ಬಾರಿ ಸುವರ್ಣ ನ್ಯೂಸ್ 24X7 (ಏಷ್ಯಾನೆಟ್ ಸುವರ್ಣ ನ್ಯೂಸ್) ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರ ಚಂದ್ರ ಶೇಖರ್ ಗೌಡ ಅವರನ್ನು ದೂರಿನಲ್ಲಿ ಹೆಸರಿಸಿದ್ದಾರೆ. ಮಾರ್ಚ್ ೧೯, ೨೦೧೯ ರಂದು ಅವರು ಸಲ್ಲಿಸಿದ ಪೊಲೀಸ್ ದೂರಿನ ಪ್ರತಿಯನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಆಗ ಕೂಡ ಹೆಗ್ಡೆ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದರು. ಮಾರ್ಚ್ ೨೦, ೨೦೧೯ ರಂದು ಅವರು ಹೀಗೆ ಪೋಷ್ಟ್ ಮಾಡಿದರು "ಕಳೆದ ವರ್ಷ ಫೇಸ್ ಬುಕ್ ನಲ್ಲಿ "ಬಿಜೆಪಿ ಅಧಿಕಾರಕ್ಕೆ ಬಂದರೆ ಕೆಂಪೇಗೌಡ ಪ್ರತಿಮೆಯನ್ನು ಉರುಳಿಸಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸುತ್ತೇವೆ - ಅನಂತಕುಮಾರ ಹೆಗಡೆ" ಎಂಬ ತಲೆಬರಹವುಳ್ಳ ಸುಳ್ಳು ಸಂದೇಶಗಳನ್ನು ಶ್ರೀ ಅನಂತಕುಮಾರ ಹೆಗಡೆಯವರೇ ಹೇಳಿದ್ದಾರೆನ್ನುವ ರೀತಿಯಲ್ಲಿ ಬರಹಗಳನ್ನು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಈ ರೀತಿಯ ಸುಳ್ಳು ಸುದ್ದಿಯನ್ನು ಕೆಲವರು ಪ್ರಮಾಣಿಸದೆ ಮನಬಂದಂತೆ ಸಂದೇಶಗಳನ್ನು ಪ್ರಸಾರ ಮಾಡುತ್ತಿದ್ದಾರೆ." "ನಾನು ಇದುವರೆಗೂ ಎಲ್ಲಿಯೂ ನಾಡ ಪ್ರಭು ಕೆಂಪೇಗೌಡರನ್ನು ಉದ್ದೇಶಿಸಿ ಈ ರೀತಿಯಲ್ಲಿ ಮಾತನಾಡಿಲ್ಲ" ಎಂದು ಕೂಡ ಸ್ಪಷ್ಟೀಕರಣ ನೀಡಿದ್ದರು.

ತೀರ್ಪು 

ಹೆಗ್ಡೆ ಅವರು ಈ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ ಎಂದು ೨೦೧೯ ರಲ್ಲಿಯೇ ಸ್ಪಷ್ಟಪಡಿಸಿದರು. ಆದ್ದರಿಂದ ಈ ಹೇಳಿಕೆಯನ್ನು ನಾವು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.