ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಗೆಲುವನ್ನು ಸೂಚಿಸಲು ಚುನಾವಣಾ ಪೂರ್ವ ಸಮೀಕ್ಷೆಯ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಮಾರ್ಚ್ 20 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಗೆಲುವನ್ನು ಸೂಚಿಸಲು ಚುನಾವಣಾ ಪೂರ್ವ ಸಮೀಕ್ಷೆಯ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಸೌತ್ ಫಸ್ಟ್ ಮತ್ತು ವೇ೨ನ್ಯೂಸ್ ಅಂತಹ ಸಮೀಕ್ಷೆಯ ಯಾವುದೇ ವರದಿಯನ್ನು ಪ್ರಕಟಿಸಿಲ್ಲ. ವೈರಲ್ ಚಿತ್ರವನ್ನು ನಿರ್ಮಿಸಲಾಗಿದೆ ಮತ್ತು ವೇ೨ನ್ಯೂಸ್ ಟೆಂಪ್ಲೇಟ್ ಬಳಸಿ ರಚಿಸಲಾಗಿದೆ.

ಕ್ಲೈಮ್ ಐಡಿ 67c2f88b

ಮಾರ್ಚ್ ೧೬, ಶನಿವಾರದಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ೨೦೨೪ ರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿತು, ಇದನ್ನು ಲೋಕಸಭೆ ಚುನಾವಣೆಯ ಜೊತೆಗೆ ನಡೆಸಲಾಗುವುದು. ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಮೇ ೧೩ ರಂದು ೧೭೫  ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ ೪ ರಂದು ಮತ ಎಣಿಕೆ ನಡೆಯಲಿದೆ.

ಹೇಳಿಕೆ ಏನು?

ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ತೆಲುಗಿನಲ್ಲಿ ಪ್ರಕಟವಾದ ವೇ೨ನ್ಯೂಸ್ ಎಂಬ ಮಾಧ್ಯಮದ ಸುದ್ದಿ ವರದಿಯೊಂದರ ಸ್ಕ್ರೀನ್‌ಶಾಟ್ ಅನ್ನು ಪ್ರಸಾರ ಮಾಡಲಾಗಿತ್ತು. ರಾಜ್ಯ ವಿಧಾನಸಭಾ ಚುನಾವಣೆಗಾಗಿ ಪೀಪಲ್ಸ್ ಪಲ್ಸ್ ಎಂಬ ಸಮೀಕ್ಷೆಯ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸುದ್ದಿ ವೆಬ್‌ಸೈಟ್ ಸೌತ್ ಫಸ್ಟ್ ಬಿಡುಗಡೆ ಮಾಡಿದೆ ಎಂದು ಈ ಸ್ಕ್ರೀನ್‌ಶಾಟ್ ಸೂಚಿಸಿದೆ. ಈ ಸಮೀಕ್ಷೆಯ ಪ್ರಕಾರ, ಯುವಜನ ಶ್ರಮಿಕ ರೈತ  ಕಾಂಗ್ರೆಸ್  ಪಾರ್ಟಿ (ವೈಎಸ್‌ಆರ್‌ಸಿಪಿ) ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದು ಹೇಳಲಾಗಿದೆ.

ಮಾರ್ಚ್ ೧೧, ೨೦೨೪ ರಂದು ವ್ಯಾಪಕವಾಗಿ ಹಂಚಿಕೊಂಡ ಪೋಷ್ಟ್ ನಲ್ಲಿನ ಗ್ರಾಫಿಕ್ ರಾಜ್ಯ ವಿಧಾನಸಭೆಯಲ್ಲಿ ಸೀಟುಗಳ ಹಂಚಿಕೆಯನ್ನು ಈ ಕೆಳಗಿನಂತೆ ಮುನ್ಸೂಚಿಸುತ್ತದೆ: ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ೧೨೧-೧೩೪ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ, ತೆಲುಗು ದೇಶಂ ಪಕ್ಷ (ಟಿಡಿಪಿ) ೨೧-೩೫ ಸ್ಥಾನಗಳು, ಜನಸೇನಾ ಪಕ್ಷ (ಜೆಎಸ್ಪಿ) ೨-೫ ಸ್ಥಾನಗಳು ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಒಂದು ಸ್ಥಾನ. ಅದಲ್ಲದೆ, ವೈಎಸ್‌ಆರ್‌ಸಿಪಿ ಶೇಕಡಾ ೫೧ ರಷ್ಟು ಮತಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಸ್ಕ್ರೀನ್‌ಶಾಟ್ ಸೂಚಿಸುತ್ತದೆ, ಆದರೆ ಬಿಜೆಪಿ ಶೇಕಡಾ ೩೮ ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿಕೊಂಡಿದೆ.

ತೆಲುಗಿನ ವರದಿಯಲ್ಲಿ, “ಸೌತ್ ಫಸ್ಟ್ ನ್ಯಾಶನಲ್ ಸರ್ವೆಯಲ್ಲಿ ಮೂರು ಪಕ್ಷಗಳ ಮೈತ್ರಿ ವೈಸಿಪಿಗೆ ಲಾಭದಾಯಕವಾಗಿದೆ ಎಂದು ಉಲ್ಲೇಖಿಸಿದೆ. ಈಗ ಎಪಿಯಲ್ಲಿ ಚುನಾವಣೆ ನಡೆದರೆ ವೈಸಿಪಿಗೆ ೧೨೧-೧೩೪ ಸ್ಥಾನಗಳು, ಮೈತ್ರಿಕೂಟಕ್ಕೆ ೨೩-೪೧ ಸ್ಥಾನಗಳು ಬರಲಿವೆ ಎಂದು ಅಂದಾಜಿಸಲಾಗಿದೆ. ಮೈತ್ರಿಯಿಂದಾಗಿ ಜಗನ್ ಬಗ್ಗೆ ಜನರ ಅಭಿಮಾನ ಹೆಚ್ಚಿದೆ ಮತ್ತು ಕಳೆದ ತಿಂಗಳಿಗೆ ಹೋಲಿಸಿದರೆ ವೈಸಿಪಿ ಗ್ರಾಫ್ ೧೦ ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ. ಈ ಚುನಾವಣೆ ಎಲ್ಲರ ವಿರುದ್ಧ ಒಬ್ಬರು ಎಂಬಂತಾಗಿದೆ ಎಂದು ಅದು ಹೇಳಿದೆ."

ಹಲವಾರು ಬಳಕೆದಾರರು ಅದೇ ಹೇಳಿಕೆಯನ್ನು ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ (ಹಿಂದೆ ಟ್ವಿಟರ್) . ವೈರಲ್ ಪೋಷ್ಟ್ ಗಳಲ್ಲಿ ಒಂದರ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. 

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಸೌತ್ ಫಸ್ಟ್ ಅಥವಾ ವೇ೨ನ್ಯೂಸ್ ಅಂತಹ ಯಾವುದೇ ವರದಿಯನ್ನು ಪ್ರಕಟಿಸಿಲ್ಲ. ವೈರಲ್ ಚಿತ್ರವನ್ನು ವೇ೨ನ್ಯೂಸ್ ಟೆಂಪ್ಲೇಟ್ ಬಳಸಿ ನಿರ್ಮಿಸಲಾಗಿದೆ.

ನಾವು ಕಂಡುಹಿಡಿದದ್ದು ಏನು?

ವೈರಲ್ ಚಿತ್ರವನ್ನು ಪರಿಶೀಲಿಸಿದಾಗ, ನಾವು ಹಲವಾರು ಅಸಂಗತತೆಗಳನ್ನು ಗುರುತಿಸಬಹುದು. ಗಮನಾರ್ಹವಾಗಿ, ಗ್ರಾಫಿಕ್‌ನ ತಲೆಬರಹವನ್ನು ''South First"  ಬದಲಿಗೆ ''South Frist - People’s Pulse" ಎಂದು ತಪ್ಪಾಗಿ ಬರೆಯಲಾಗಿದೆ, ಈ ದೋಷವು ಪ್ರಕಟಣೆಯ ಮೊದಲೇ  ಸಾಮಾನ್ಯವಾಗಿ ಕಂಡುಬರುತ್ತದೆ.

ಅದಲ್ಲದೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಶೇಕಡಾ ೩೮ ರಷ್ಟು ಮತ ಹಂಚಿಕೆಯನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ ಆದರೆ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲುತ್ತದೆ ಎಂದು ಪೋಷ್ಟ್ ಸೂಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ತೆಲುಗು ದೇಶಂ ಪಕ್ಷ (ಟಿಡಿಪಿ) ಕೇವಲ ೪ ಪ್ರತಿಶತದಷ್ಟು ಮತಗಳೊಂದಿಗೆ ೨೧-೩೫  ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದೆ. ಮತ ಹಂಚಿಕೆಯ ಪ್ರಕ್ಷೇಪಣವು ಸೈದ್ಧಾಂತಿಕವಾಗಿ ಕಾರ್ಯಸಾಧ್ಯವಾಗಿದ್ದರೂ, ೩೮ ಪ್ರತಿಶತದಷ್ಟು ಎರಡನೇ ಅತಿ ಹೆಚ್ಚು ಮತ ಪಾಲನ್ನು ಪಡೆಯುವ ಪಕ್ಷವು ಕೇವಲ ಒಂದು ಸ್ಥಾನವನ್ನು ಪಡೆದುಕೊಳ್ಳುವುದು ಹೆಚ್ಚು ಅಸಂಭವವೆಂದು ತೋರುತ್ತದೆ. ಈ ವ್ಯತ್ಯಾಸವು ಪೋಷ್ಟ್ ನಲ್ಲಿ ಪ್ರಸ್ತುತಪಡಿಸಲಾದ ಸಮೀಕ್ಷೆಯ ಫಲಿತಾಂಶಗಳ ಅಂಕಿಅಂಶಗಳ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ವೈರಲ್ ಪೋಷ್ಟ್ ನಲ್ಲಿನ ವ್ಯತ್ಯಾಸಗಳು. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ

ಸೌತ್ ಫಸ್ಟ್, ವೇ೨ನ್ಯೂಸ್ ಹೇಳಿಕೆಗಳು

ಸೌತ್ ಫಸ್ಟ್ ಪೀಪಲ್ಸ್ ಪಲ್ಸ್ ಸಹಯೋಗದೊಂದಿಗೆ ಹಲವಾರು ಸಮೀಕ್ಷೆಗಳನ್ನು ನಡೆಸಿದ್ದರೂ, ಮುಂಬರುವ ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಸರ್ಕಾರ ರಚಿಸುತ್ತದೆ ಎಂದು ಸೌತ್ ಫಸ್ಟ್‌ನ ಚುನಾವಣಾ ಪೂರ್ವ ಸಮೀಕ್ಷೆಯ ಯಾವುದೇ ವರದಿಗಳು ನಮ್ಮ ತನಿಖೆಯಲ್ಲಿ ಕಂಡುಬರಲಿಲ್ಲ. ಪೀಪಲ್ಸ್ ಪಲ್ಸ್ ಮತ್ತು ಸೌತ್ ಫಸ್ಟ್‌ನ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳೆರಡರಲ್ಲೂ ವ್ಯಾಪಕ ಹುಡುಕಾಟಗಳು ಅಂತಹ ಚುನಾವಣಾ ಪೂರ್ವ ಸಮೀಕ್ಷೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ.

ಬದಲಿಗೆ, ಸೌತ್ ಫಸ್ಟ್ ಎಕ್ಸ್‌ನಲ್ಲಿ ಸ್ಪಷ್ಟೀಕರಣವನ್ನು ನೀಡಿದ್ದು, "ಸೌತ್ ಫಸ್ಟ್, ಪೀಪಲ್ಸ್ ಪಲ್ಸ್ ಆಂಧ್ರಕ್ಕೆ ಇದುವರೆಗೆ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿಲ್ಲ" ಎಂದು ಹೇಳಿರುವುದನ್ನು ನಾವು ಕಂಡುಕೊಂಡಿದ್ದೇವೆ. ಪೀಪಲ್ಸ್ ಪಲ್ಸ್ ಕೂಡ ಸ್ಪಷ್ಟೀಕರಣವನ್ನು ಮರು ಪೋಷ್ಟ್  ಮಾಡಿದೆ.

ಅದರೊಂದಿಗೆ, ವೇ೨ನ್ಯೂಸ್ ನ ಫ್ಯಾಕ್ಟ್- ಚೆಕ್  ಘಟಕವಾದ ವೇ೨ನ್ಯೂಸ್ ಮೂಲಕ ಎಕ್ಸ್  ನಲ್ಲಿ ಅಂತಹ ವರದಿಯ ಸಂದರ್ಭದಲ್ಲಿ ಅವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹೇಳಿದೆ. ಅವರ ಹೇಳಿಕೆಯು, “ಇದು #Way2News ಕಥೆಯಲ್ಲ. #MetaGroups ನಲ್ಲಿ ನಮ್ಮ ಲೋಗೋವನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ತಪ್ಪು ಮಾಹಿತಿ ಹರಡುತ್ತಿದ್ದಾರೆ ಮತ್ತು 'ಲಗತ್ತಿಸಲಾದ ಪೋಷ್ಟ್' ವೈರಲ್ ಆಗಿದೆ. ಇದನ್ನು ಪ್ರಕಟಿಸಲಾಗಿಲ್ಲ ಎಂದು ನಾವು ಖಚಿತಪಡಿಸುತ್ತೇವೆ. (ಕನ್ನಡಕ್ಕೆ ಅನುವಾದಿಸಲಾಗಿದೆ)"

ಲಾಜಿಕಲಿ ಫ್ಯಾಕ್ಟ್ಸ್ ಹಿಂದೆ ವೇ೨ನ್ಯೂಸ್ ಟೆಂಪ್ಲೇಟ್ ಅನ್ನು ಅನುಕರಿಸುವ ಎಡಿಟ್ ಮಾಡಿದ ಸುದ್ದಿ ವರದಿಗಳ ಮೂಲಕ ಪ್ರಚಾರ ಮಾಡಲಾದ ಹಲವಾರು ತಪ್ಪು ಮಾಹಿತಿಗಳ ಬಗ್ಗೆ ಬರೆದಿದೆ. 

ತೀರ್ಪು

ಆಂಧ್ರಪ್ರದೇಶದ ಸೌತ್ ಫಸ್ಟ್ ಚುನಾವಣಾ ಪೂರ್ವ ಸಮೀಕ್ಷೆಯು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಸರ್ಕಾರ ರಚಿಸಲಿದೆ ಎಂದು ಊಹಿಸಿದೆ ಎಂಬ ತಪ್ಪಾದ ಹೇಳಿಕೆಯೊಂಗಿದೆ ವೇ೨ನ್ಯೂಸ್ ವರದಿಯ ಟೆಂಪ್ಲೇಟ್ ಅನ್ನು ಹೋಲುವ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ವಿಶ್ಲೇಷಣೆಯ ನಂತರ, ನಾವು ಹಲವಾರು ಅಸಂಗತತೆಗಳನ್ನು ಕಂಡುಕೊಂಡಿದ್ದೇವೆ ಮತ್ತು ಎರಡೂ ಪ್ರಕಟಣೆಗಳು ಅಂತಹ ಯಾವುದೇ ವರದಿಯನ್ನು ಪ್ರಕಟಿಸಿಲ್ಲ ಎಂದು ಸ್ಪಷ್ಟೀಕರಣಗಳನ್ನು ನೀಡಿರುವುದನ್ನು ಗಮನಿಸಿದ್ದೇವೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಫೇಕ್  ಎಂದು ಗುರುತಿಸಿದ್ದೇವೆ.

 (ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.