ಇಲ್ಲ, ಆಂಧ್ರಪ್ರದೇಶದಲ್ಲಿ ಮುಸ್ಲಿಂ ಮೀಸಲಾತಿಯನ್ನು ಬಿಜೆಪಿ ಕೊನೆಗೊಳಿಸುತ್ತದೆ ಎಂದು ಪಕ್ಷದ ನಾಯಕರು ಹೇಳಿಲ್ಲ

ಮೂಲಕ: ರೋಹಿತ್ ಗುಟ್ಟಾ
ಏಪ್ರಿಲ್ 19 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಆಂಧ್ರಪ್ರದೇಶದಲ್ಲಿ ಮುಸ್ಲಿಂ ಮೀಸಲಾತಿಯನ್ನು ಬಿಜೆಪಿ ಕೊನೆಗೊಳಿಸುತ್ತದೆ ಎಂದು ಪಕ್ಷದ ನಾಯಕರು ಹೇಳಿಲ್ಲ

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ಸುದ್ದಿ ವರದಿಗಳು ಫೇಕ್ ಎಂದು ಸಂಬಂಧಪಟ್ಟ ಮಾಧ್ಯಮಗಳು ಸ್ಪಷ್ಟಪಡಿಸಿವೆ. ಆಂಧ್ರದ ಬಿಜೆಪಿ ಮುಖ್ಯಸ್ಥೆ ಪುರಂದೇಶ್ವರಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ.

ಕ್ಲೈಮ್ ಐಡಿ 2b8231f4

ಹೇಳಿಕೆ ಏನು?

ಆಂಧ್ರಪ್ರದೇಶನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥರು ಒಮ್ಮೆ ಅಧಿಕಾರಕ್ಕೆ ಬಂದರೆ, ಅವರ ಪಕ್ಷ ಮತ್ತು ಅದರ ಮಿತ್ರಪಕ್ಷಗಳು, ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗ ಕ್ಷೇತ್ರದಲ್ಲಿ ಮುಸ್ಲಿಮರ ನಾಲ್ಕು ಪ್ರತಿಶತ ಮೀಸಲಾತಿ ಸೀಟುಗಳನ್ನು ತೆಗೆದುಹಾಕುತ್ತಾರೆ ಎಂದು ಹೇಳಲು ಸುದ್ದಿ ಲೇಖನೆಗಳ  ಉದ್ದೇಶಿತ ತುಣುಕುಗಳನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು  ಹಂಚಿಕೊಂಡಿದ್ದಾರೆ.

ಎಬಿಎನ್ ಆಂಧ್ರಜ್ಯೋತಿ ಅವರ ವೀಡಿಯೋ ವರದಿ ಮತ್ತು ದಿಶಾ ಹಾಗು ವೇ ೨ ನ್ಯೂಸ್‌ನಂತಹ ಸುದ್ದಿ ಅಪ್ಲಿಕೇಶನ್‌ಗಳ ಲೇಖನಗಳನ್ನು ತೋರಿಸುವ ಉದ್ದೇಶಿತ ವೈರಲ್  ಕ್ಲಿಪ್, ಆಂಧ್ರಪ್ರದೇಶದ ಬಿಜೆಪಿ ಮುಖ್ಯಸ್ಥ ದಗ್ಗುಬಾಟಿ ಪುರಂದೇಶ್ವರಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ತೋರಿಸುತ್ತದೆ. ಹಾಗು ಇದು ಅವರ ಪ್ರಣಾಳಿಕೆಯ ಭಾಗವಾಗಲಿದೆ ಎಂದು ಹೇಳಿಕೊಂಡಿವೆ. ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಆಂಧ್ರಪ್ರದೇಶ ರಾಜ್ಯವು ಪ್ರಸ್ತುತ ಮುಸ್ಲಿಂ ಸಮುದಾಯಕ್ಕೆ ಸೇರಿದ ೧೫ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಗುಂಪುಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ನಾಲ್ಕು ಪ್ರತಿಶತ ಮೀಸಲಾತಿಯನ್ನು ಒದಗಿಸುತ್ತದೆ. ಈ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು, ಆಂಧ್ರಪ್ರದೇಶ ಹೈಕೋರ್ಟ್‌ನಿಂದ ಮೊದಲ ಬಾರಿಗೆ ತಳ್ಳಿಹಾಕಲ್ಪತ್ತಿದ್ದು ಇದು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಪರಿಶೀಲನೆಯಲ್ಲಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಮುಸ್ಲಿಮರಿಗೆ ಮೀಸಲಾತಿಯನ್ನು ಕೊನೆಗೊಳಿಸಲು ವಿರೋಧ ಪಕ್ಷಗಳ ಮೈತ್ರಿ ಯೋಜನೆ ಬಗ್ಗೆ ತಪ್ಪಾದ ಹೇಳಿಕೆ ನೀಡಲು ಸುಳ್ಳು ಸುದ್ದಿಗಳನ್ನು ಮತ್ತು ವರದಿಗಳನ್ನು ಹಂಚಿಕೊಳ್ಳಲಾಗಿದೆ. ಪುರಂದೇಶ್ವರಿಯವರು ಅಂತಹ ಯಾವುದೇ ಹೇಳಿಕೆ ನೀಡಿಲ್ಲ.

ಸತ್ಯಾಂಶಗಳು

ನಾವು ಈ ಹೇಳಿಕೆಯ ಸುತ್ತ ಸುದ್ದಿಗಳನ್ನು ಹುಡುಕಿದೆವು ಆದರೆ ಯಾವುದೂ ಕಂಡುಬಂದಿಲ್ಲ.

ನಾವು ಆಪಾದಿತ ಹೇಳಿಕೆಯ ಕುರಿತು ದಿಶಾ ಪತ್ರಿಕೆಯ ವೈರಲ್ ವರದಿಯನ್ನು ನೋಡಿದೆವು. ಉಲ್ಲೇಖಿಸಲಾದ ಸುದ್ದಿ ಕ್ಲಿಪ್‌ನಲ್ಲಿ ದಿನಾಂಕವು ಏಪ್ರಿಲ್ ೯, ೨೦೨೪ ಎಂದು ತೋರಿಸುತ್ತದೆ, ಆದರೆ ನಾವು ಆ ನಿರ್ದಿಷ್ಟ ದಿನದ ಆವೃತ್ತಿಯನ್ನು ಪರಿಶೀಲಿಸಿದಾಗ, ಅಂತಹ ಯಾವುದೇ ವರದಿಯು ಕಂಡುಬಂದಿಲ್ಲ.

ದಿಶಾ ಪ್ರತಿಕೆಯ ವರದಿ ಎಂದು ಹಂಚಿಕೊಳ್ಳಲಾದ ವೈರಲ್ ಪುಟದ ಕೆಳಭಾಗದಲ್ಲಿ ಉಲ್ಲೇಖಿಸಲಾದ ಹೈಪರ್‌ಲಿಂಕ್ ಅನ್ನು ಸಹ ನಾವು ಪರಿಶೀಲಿಸಿದೆವು, ಅದು ನಮ್ಮನ್ನು ಕರ್ನೂಲ್ ಜಿಲ್ಲಾ ಟಿಡಿಪಿ ಸಮಿತಿಯಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ವರದಿ ಮಾಡಲಾದ ಪುಟಕ್ಕೆ ಕರೆದೊಯಿತು. ಈ ಕಥೆಯನ್ನು ದಿಶಾ 'ಡೈನಾಮಿಕ್' ಆವೃತ್ತಿಯ ಪುಟದಲ್ಲಿ ಪ್ರಕಟಿಸಲಾಗಿದೆ.

ದಿಶಾ 'ಡಯಾನ್ಮಿಕ್' ಆವೃತ್ತಿಯು ವೈರಲ್ ಹೇಳಿಕೆಯನ್ನು ಉಲ್ಲೇಖಿಸುವ ಯಾವುದೇ ಕಥೆಯನ್ನು ಹೊಂದಿಲ್ಲ. ವೈರಲ್ ಲೇಖನದ ಫಾಂಟ್ ಕೂಡ ಪತ್ರಿಕೆ ಬಳಸುವ ಫಾಂಟ್‌ಗಿಂತ ಭಿನ್ನವಾಗಿದೆ.

ವೈರಲ್ ಚಿತ್ರ ಮತ್ತು ದಿಶಾ ಪತ್ರಿಕೆ ಪ್ರಕಟಿಸಿದ ಮೂಲ ಪುಟದ ನಡುವಿನ ಹೋಲಿಕೆ.
(ಮೂಲ: ಫೇಸ್‌ಬುಕ್/ದಿಶಾ ಇ-ಪೇಪರ್/ಸ್ಕ್ರೀನ್‌ಶಾಟ್‌ಗಳು)

ಅದೇ ರೀತಿ, ವೇ ೨ ನ್ಯೂಸ್‌ನ  ಲೇಖನವೂ ಕೂಡ ನಕಲಿಯಾಗಿದೆ. ತೆಲುಗು ಸುದ್ದಿ ಸಂಗ್ರಾಹಕವಾದ ವೇ ೨ನ್ಯೂಸ್‌ನ ಲೇಖನಗಳು ಮೇಲಿನ ಬಲಭಾಗದಲ್ಲಿ ಲಿಂಕ್ ಅನ್ನು ಹೊಂದಿವೆ, ಇದು ಬೇರೆ ಲೇಖನಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಅದು, ತುನಿ ಕ್ಷೇತ್ರದ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ಸ್ಪರ್ಧಿಗಳ ಬಗ್ಗೆ ವರದಿಯನ್ನು ಹೊಂದಿದೆ. ವೇ ೨ನ್ಯೂಸ್‌ ನ ಸ್ಕ್ರೀನ್‌ಶಾಟ್‌ಗಳನ್ನು ಸಾಮಾನ್ಯವಾಗಿ ತಪ್ಪುದಾರಿಗೆಳೆಯುವ ಅಥವಾ ತಪ್ಪಾದ ಹೇಳಿಕೆಗಳೊಂದಿಗೆ ಈ ಹಿಂದೆ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ ಎಂಬುದನ್ನು ಗಮನಿಸಬೇಕು.

ಲಾಜಿಕಲಿ ಫ್ಯಾಕ್ಟ್ಸ್  ಈ ಹಿಂದೆ ವೇ ೨ನ್ಯೂಸ್‌ ನ ಟೆಂಪ್ಲೇಟ್‌ನಲ್ಲಿ ಹಂಚಿಕೊಂಡಿರುವ ಇಂತಹ ಹಲವಾರು ಹೇಳಿಕೆಗಳ ಮೇಲೆ ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸಿದೆ, ಅದನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ವಾಸ್ತವವಾಗಿ, ಅವರ ಟೆಂಪ್ಲೇಟ್ ಅನ್ನು ಪದೇ ಪದೇ ದುರುಪಯೋಗಪಡಿಸಿಕೊಂಡ ನಂತರ, ಅಧಿಕೃತ ಲೇಖನಗಳು ಮತ್ತು ಲಿಂಕ್‌ಗಳನ್ನು ಖಚಿತಪಡಿಕೊಳ್ಳಲು ಸುದ್ದಿ ಔಟ್‌ಲೆಟ್ ಈಗ ವೆಬ್‌ಪುಟವನ್ನು ಪ್ರಾರಂಭಿಸಿದೆ.

ವೈರಲ್ ಲೇಖನೆ ಮತ್ತು ವೇ೨ನ್ಯೂಸ್ ಹಂಚಿಕೊಂಡ ಮೂಲ ಲೇಖನದ ನಡುವಿನ ಹೋಲಿಕೆ.
(ಮೂಲ: ಫೇಸ್‌ಬುಕ್‌/ವೇ೨ನ್ಯೂಸ್/ಸ್ಕ್ರೀನ್‌ಶಾಟ್)

ಮುಂಬರುವ ಚುನಾವಣೆಯಲ್ಲಿ ಪುರಂದೇಶ್ವರಿ ಅವರು ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಅವರ ಪಕ್ಷ ಮತ್ತು ಮಿತ್ರಪಕ್ಷಗಳು ಮೀಸಲಾತಿಯನ್ನು ಕೊನೆಗೊಳಿಸುವುದರ ಬಗ್ಗೆ  ಹಂಚಿಕೊಳ್ಳಲಾದ ವೈರಲ್ ವೀಡಿಯೋ ವರದಿ ನಕಲಿ ಎಂದು ಎಬಿಎನ್ ಆಂಧ್ರಜ್ಯೋತಿ ಅವರು ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. 

ಪುರಂದೇಶ್ವರಿ ಮತ್ತು ಬಿಜೆಪಿ ಆಂಧ್ರಪ್ರದೇಶ ಕೂಡ ಎಕ್ಸ್‌ನಲ್ಲಿ ಸ್ಪಷ್ಟನೆಯನ್ನು ನೀಡಿದ್ದು, ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಸೋಲಿನ ಭಯದಿಂದ ಮತ್ತು ಕಲಬೆರಕೆ ಮದ್ಯದ ಅಮಲಿನಲ್ಲಿ ಅವರು ಸರಬರಾಜು ಮಾಡುತ್ತಿದ್ದಾರೆ, ನೀಲಿ ಪಕ್ಷ (ಆಡಳಿತ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಬಣ್ಣವನ್ನು ಉಲ್ಲೇಖಿಸಿ" ) ಇಂತಹ ನಕಲಿ ಪ್ರಚಾರ ಮತ್ತು ಪತ್ರಗಳನ್ನು ಆಶ್ರಯಿಸುತ್ತಿದ್ದಾರೆ.

ಲಾಜಿಕಲಿ ಫ್ಯಾಕ್ಟ್ಸ್ ಈ ಹಿಂದೆ ನಕಲಿ ಸುದ್ದಿ ಲೇಖನಗಳು ಮತ್ತು ಕ್ಲಿಪ್‌ಗಳ ಮೇಲೆ ಅವಲಂಬಿತವಾದ ಅನೇಕ ಹೇಳಿಕೆಗಳನ್ನು ಫ್ಯಾಕ್ಟ್ -ಚೆಕ್ ಮಾಡಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

೨೦೨೩ ರಲ್ಲಿ, ನೆರೆಯ ತೆಲಂಗಾಣದ ವಿಧಾನಸಭಾ ಚುನಾವಣೆಯ ಮುನ್ನ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನೀಡಲಾದ ನಾಲ್ಕು ಶೇಕಡಾ ಮೀಸಲಾತಿಯನ್ನು ರದ್ದುಪಡಿಸುತ್ತದೆ ಮತ್ತು ಅದನ್ನು ಪರಿಶಿಷ್ಟ ಜಾತಿಗಳಿಗೆ (SC), ಪರಿಶಿಷ್ಟ ಪಂಗಡಗಳಿಗೆ (ST) ಮತ್ತು ಇತರೆ ಹಿಂದುಳಿದ ವರ್ಗಗಳಿಗೆ (OBC) ಮರುಹಂಚಿಕೆ ಮಾಡುತ್ತದೆ ಎಂದು ಹೇಳಿದ್ದರು. ನವೆಂಬರ್ ೨೦, ೨೦೨೩ ರಂದು ತೆಲಂಗಾಣದ ಕೊರಾಟ್ಲಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಷಾ ಹೇಳಿಕೆ ನೀಡಿದ್ದರು, ಅದರ ನೇರ ಪ್ರಸಾರವನ್ನು ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದ್ದು. ಅವರ ಹೇಳಿಕೆಯನ್ನು ೯:೧೨ ಟೈಮ್‌ಕೋಡ್‌ನಿಂದ ವೀಕ್ಷಿಸಬಹುದು.

ತೀರ್ಪು

ಅಂಧ್ರ ಪ್ರದೇಶದಲ್ಲಿ ಬಿಜೆಪಿ-ಜೆಎಸ್‌ಪಿ-ಟಿಡಿಪಿ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಯನ್ನು ಕೊನೆಗೊಳಿಸಲಿದೆ ಎಂದು ರಾಜ್ಯದ ಬಿಜೆಪಿ ಮುಖ್ಯಸ್ಥೆ ಡಿ ಪುರಂದೇಶ್ವರಿ ಹೇಳಿಕೆ ನೀಡಿದ್ದಾರೆ ಎಂದು ತಪ್ಪಾಗಿ ಹೇಳಲು ವಿವಿಧ ಸುದ್ದಿವಾಹಿನಿಗಳ, ಎಡಿಟ್ ಮಾಡಿ ತಯಾರಿಸಿದ ಕ್ಲಿಪ್‌ಗಳು ಮತ್ತು ವರದಿಗಳನ್ನು ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.  

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.