ಇಲ್ಲ, ನಟ ಕಾರ್ತಿಕ್ ಆರ್ಯನ್ ೨೦೨೩ರ ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅನುಮೋದಿಸಿಲ್ಲ

ಮೂಲಕ: ಮೊಹಮ್ಮದ್ ಸಲ್ಮಾನ್
ನವೆಂಬರ್ 16 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ನಟ ಕಾರ್ತಿಕ್ ಆರ್ಯನ್ ೨೦೨೩ರ ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅನುಮೋದಿಸಿಲ್ಲ

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನಟ ಕಾರ್ತಿಕ್ ಆರ್ಯನ್ ಅವರು ಕಾಂಗ್ರೆಸ್ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ ಎಂದು ಹೇಳುವ ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ಇಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ವೀಡಿಯೋ ಕುರಿತು ಮಾಡಲಾಗುತ್ತಿರುವ ಹೇಳಿಕೆಗಳು ತಪ್ಪು. ಅದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಉಚಿತ ಪ್ರದರ್ಶನಗಳ ಜಾಹೀರಾತಿನ ಚಿಕ್ಕ ಆವೃತ್ತಿಯಾಗಿದೆ.

ಕ್ಲೈಮ್ ಐಡಿ 607a4729

ಇಲ್ಲಿನ ಹೇಳಿಕೆ ಏನು?

ನವೆಂಬರ್ ೧೭ ರಂದು  ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ  ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಅವರ ವೀಡಿಯೋ ಒಂದು ವೈರಲ್ ಆಗುತ್ತಿದೆ.

ಆರ್ಯನ್ ವಿಮಾನ ನಿಲ್ದಾಣದ ಹೊರಗೆ ಪ್ರಯಾಣಿಕರ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೋ ತೋರಿಸುತ್ತದೆ, ಪ್ರಯಾಣಿಕರಿಗೆ ಕಾರ್ತಿಕ್ ಅವರೊಂದಿಗೆ ಫೋಟೋ ತೆಗೆದುಕೊಳ್ಳಬೇಕಾಗಿದೆ ಎಂಬ ಯೋಚನೆಯೊಂದಿಗೆ ಅವರು ಅಲ್ಲಿ ತೆರೆಳುತ್ತಿರುವುದನ್ನು ನೋಡಬಹುದು. ಆದರೆ ಬದಲಿಗೆ, ಪ್ರಯಾಣಿಕರು ಕಾರ್ತಿಕ್ ಅವರ ಹಿಂದೆ ಇರುವ ಜಾಹೀರಾತು ಫಲಕವನ್ನು ನೋಡಿ ಆಶ್ಚರ್ಯಪಡುತ್ತಿದ್ದಾರೆ. ಮತ್ತು ಅಲ್ಲಿಂದ ಎಡಿಟ್ ಆದ ವೀಡಿಯೋ ಮಧ್ಯಪ್ರದೇಶ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯ ಬಗ್ಗೆ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಚಿತ್ರವನ್ನು ಒಳಗೊಂಡಿರುವ ಕಾಂಗ್ರೆಸ್ ಜಾಹಿರಾತುವಿನ ಫಲಕವನ್ನು ಕಾಣಬಹುದು. ಅದೇ ರೀತಿ, ಸರ್ಕಾರಿ ಉದ್ಯೋಗಗಳು, ಸಾಲಗಳು, ಮಹಿಳೆಯರಿಗೆ ಉಚಿತ ಬಸ್ ಸೇವೆ ಮತ್ತು ಇತರ ಯೋಜನೆಗಳನ್ನು ಜಾಹೀರಾತು ನೀಡುತ್ತಿರುವ  ಮತ್ತೊಂದು ಫಲಕವನ್ನು ನೋಡಲು ಇನ್ನೊಬ್ಬ ಪ್ರಯಾಣಿಕ ಕಾರ್ತಿಕ್ ಅವರನ್ನು ನಿರ್ಲಕ್ಷಿಸುವುದನ್ನು ನಾವು ವೀಡಿಯೋದಲ್ಲಿ ನೋಡಬಹುದು. 

ಈ ವೀಡಿಯೋವನ್ನು ಕಾಂಗ್ರೆಸ್ ಸದಸ್ಯರು, ಬೆಂಬಲಿಗರು ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಆದರೆ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಜಾಹೀರಾತನ್ನು ಎಡಿಟ್ ಮಾಡಿ ವೀಡಿಯೋ ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ತೋರಿಸಲಾಗಿದೆ. 

ವಾಸ್ತವಾಂಶಗಳು ಇಲ್ಲಿವೆ

ರಿವರ್ಸ್ ಇಮೇಜ್ ಸರ್ಚ್ ಮೂಲಕ, ಈ ವೀಡಿಯೋವನ್ನು ಸೆಪ್ಟೆಂಬರ್ ೨೭, ೨೦೨೩ ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡೆವು. ಈ ವೀಡಿಯೋ ಉಚಿತ ವೆಬ್ ಸೀರೀಸ್, ಚಲನಚಿತ್ರಗಳು ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್‌ನಂತಹ ಲೈವ್ ಕ್ರೀಡಾಕೂಟಗಳನ್ನು ಜಾಹೀರಾತು ಮಾಡುತ್ತದೆ. ಅದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ನ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ನಲ್ಲಿ ಲಭ್ಯವಿದೆ.

ಮೂಲ ವೀಡಿಯೋ, ಐಸಿಸಿ ೨೦೨೩ ವಿಶ್ವಕಪ್ ಅನ್ನು ಜಾಹಿರಾತಿಸುವ ಫಲಕವನ್ನು ನೋಡುತ್ತಿರುವ ಇಬ್ಬರು ವ್ಯಕ್ತಿಗಳು ನಟನನ್ನು ನಿರ್ಲಕ್ಷಿಸುತ್ತಿರುವುದನ್ನು ನೋಡಬಹುದು ಮತ್ತು "ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಅದು ಸಂಪೂರ್ಣವಾಗಿ ಉಚಿತವಾಗಿದೆ" ಎಂದು ಇರುವುದನ್ನು ನೋಡಿ ಆಶ್ಚರ್ಯಪಡುತ್ತಿರುವುದನ್ನು ಕಾಣಬಹುದು. "ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ, ಈಗ ಪ್ರಥಮ ದರ್ಜೆ ಮನರಂಜನೆಯೂ ಉಚಿತವಾಗಿದೆ, ಸುಪ್ರಸಿದ್ಧವಾದ ಚಲನಚಿತ್ರಗಳು ಮತ್ತು ವೆಬ್ ಸೀರೀಸ್ ಗಳನ್ನೂ ನೋಡಬಹುದು" ಎಂದು ಮತ್ತೊಬ್ಬ ಯುವತಿ ಕಾಮೆಂಟ್ ಮಾಡುವುದನ್ನು ಮೂಲ ವೀಡಿಯೋ ತೋರಿಸುತ್ತದೆ. ವೈರಲ್ ಪೋಷ್ಟ್ ಹೇಳುವಂತೆ ಮೂಲ ವೀಡಿಯೋದಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಉಲ್ಲೇಖವಿಲ್ಲ.  

ಸೆಪ್ಟೆಂಬರ್ ೨೩ ರಂದು, ಆರ್ಯನ್ ಈ ಜಾಹೀರಾತನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಅದರ ಶೀರ್ಷಿಕೆ, "ವೆನ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಲ್ ಗಿವೆ ಇತ್ನಾ ಸಬ್ ಫ್ರೀ ಕಾ, ಬಾಕಿ ಸಬ್ ತೊ ಪಡೆಗಾ ಪಡೇಗಾ ಹಿ ಫೀಕಾ. (ಡಿಸ್ನಿ ಉಚಿತವಾಗಿ ಇಷ್ಟೆಲ್ಲಾ ನೀಡುತ್ತಿರುವಾಗ, ಉಳಿದೆಲ್ಲವೂ ಮಂದವಾಗಿ ಕಾಣಿಸುತ್ತದೆ.) "

ಅದಲ್ಲದೆ, ವೀಡಿಯೋದಲ್ಲಿರುವ ಯುವತಿ ಆರ್ಯನ್ ನಟಿಸಿದ ‘ಫ್ರೆಡ್ಡಿ’ ಚಿತ್ರದ ಹೆಸರನ್ನು ಉಚ್ಚರಿಸಿದಾಗ, ನಟ "ನಾನು ಫ್ರೆಡ್ಡಿ" ಎಂದು ಹೇಳುವುದು ಕೇಳಿಬರುತ್ತದೆ. ವೈರಲ್ ಆದ ವೀಡಿಯೋದಲ್ಲಿ ಈ ಡೈಲಾಗ್ ಅನ್ನು "ಹೇ, ನಾನು ಕೂಡ ಕಾಂಗ್ರೆಸ್ಸಿಗ" ಎಂದು ಬದಲಾಯಿಸಲಾಗಿದೆ. ಮೂಲ ಜಾಹೀರಾತಿನಲ್ಲಿ, ಆರ್ಯನ್ ಕಾಂಗ್ರೆಸ್ ಪಕ್ಷದ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ.

ಆರ್ಯನ್ ಕಾಂಗ್ರೆಸ್ ಅನ್ನು ಬೆಂಬಲಿಸುವ ವೀಡಿಯೋ ವೈರಲ್ ಆಗುತ್ತಿದ್ದಂತೆ, ಈ ವೀಡಿಯೋ 'ಫೇಕ್' ಎಂದು ಅವರ ಎಕ್ಸ್‌ ಪೋಷ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರು ಮೂಲ ವೀಡಿಯೋವನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ, "ಇದು ನಿಜವಾದ ಜಾಹೀರಾತು @DisneyPlusHS ರೆಸ್ಟ್ ಆಲ್ ಈಸ್ ಫೇಕ್."

ಆರ್ಯನ್ ೨೦೧೯ ರಲ್ಲಿ ಮಧ್ಯಪ್ರದೇಶ ಚುನಾವಣಾ ಆಯೋಗದ ರಾಜ್ಯ ಐಕಾನ್ ಆಗಿದ್ದರು

೨೦೧೯ ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತದಾನವನ್ನು ಉತ್ತೇಜಿಸಲು ಮಧ್ಯಪ್ರದೇಶದ ಮುಖ್ಯ ಚುನಾವಣಾ ಕಚೇರಿಯು ಆರ್ಯನ್ ಅವರನ್ನು 'ರಾಜ್ಯ ಐಕಾನ್' ಆಗಿ ನೇಮಿಸಲಾಗಿತ್ತು ಎಂದು ಗಮನಿಸಬೇಕಾದ ಅಂಶವಾಗಿದೆ.

ತೀರ್ಪು

ಮುಂಬರುವ ಮಧ್ಯಪ್ರದೇಶ ಚುನಾವಣೆಗೆ ನಟ ಕಾರ್ತಿಕ್ ಆರ್ಯನ್ ಕಾಂಗ್ರೆಸ್‌ಗೆ ಬೆಂಬಲ ನೀಡಿದ ವೀಡಿಯೋ ಫೇಕ್. ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ವಿಭಿನ್ನ ಆಡಿಯೋ ಮತ್ತು ಡಿಜಿಟಲ್ ಆಗಿ ಮಾರ್ಪಡಿಸಿದ ಜಾಹೀರಾತು ಫಲಕಗಳನ್ನು ವೀಡಿಯೋಗೆ ಸೇರಿಸಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.