ಆಂಧ್ರಪ್ರದೇಶದಲ್ಲಿ ಟಿಡಿಪಿ ಮುನ್ನಡೆಯಲ್ಲಿದೆ ಎಂದು ಹೇಳಲು ಚುನಾವಣಾ ಪೂರ್ವ ಸಮೀಕ್ಷೆಯ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರೋಹಿತ್ ಗುಟ್ಟಾ
ಏಪ್ರಿಲ್ 1 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಂಧ್ರಪ್ರದೇಶದಲ್ಲಿ ಟಿಡಿಪಿ ಮುನ್ನಡೆಯಲ್ಲಿದೆ ಎಂದು ಹೇಳಲು ಚುನಾವಣಾ ಪೂರ್ವ ಸಮೀಕ್ಷೆಯ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ

ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಸಮೀಕ್ಷೆಯಲ್ಲಿ ಟಿಡಿಪಿಯ ಗೆಲುವನ್ನು ಊಹಿಸಲು ಸಂಖ್ಯೆಗಳನ್ನು ಬದಲಾಯಿಸಲಾಗಿದೆ. ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂದು ಕಂಪನಿಯು ಲಾಜಿಕಲಿ ಫ್ಯಾಕ್ಟ್ಸ್‌ಗೆ ದೃಢಪಡಿಸಿದೆ.

ಕ್ಲೈಮ್ ಐಡಿ 516c9d11

ಹೇಳಿಕೆ ಏನು?
ಶ್ರೀ ಆತ್ಮಸಾಕ್ಷಿ (ಎಸ್‌ಎಎಸ್) ಗುಂಪಿನ ಆಂಧ್ರಪ್ರದೇಶ ರಾಜ್ಯ ಚುನಾವಣೆಯ ಚುನಾವಣಾ ಪೂರ್ವ ಸಮೀಕ್ಷೆಯ ಫೋಟೋಗಳನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ, ಇದು ತೆಲುಗು ದೇಶಂ ಪಕ್ಷ (ಟಿಡಿಪಿ), ಜನ ಸೇನಾ ಪಕ್ಷ (ಜೆಎಸ್ ಪಿ ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ವರ್ಷ ಮೇ ೧೩ ರಂದು ನಡೆಯಲಿರುವ ಮತದಾನದಲ್ಲಿ ಮೈತ್ರಿಕೂಟವು ಗೆಲ್ಲಲು ಸಿದ್ಧವಾಗಿದೆ ಎಂದು ಹೇಳ್ಲಗಿದೆ. ಪೋಷ್ಟ್ ಪ್ರಕಾರ, ಮೈತ್ರಿಕೂಟವು ಒಟ್ಟು ೧೭೫ ರಲ್ಲಿ ೫೩.೫ ರಷ್ಟು ಮತಗಳನ್ನು ಮತ್ತು ೧೩೬ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಊಹಿಸಲಾಗಿದೆ, ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಶೇಕಡಾ ೪೧.೫ ರಷ್ಟು ಮತಗಳನ್ನು ಮತ್ತು ೨೧ ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಬಹಳ ಹತ್ತಿರದ ಮತಗಳಿಂದ ೧೮ ಕ್ಷೇತ್ರಗಳಲ್ಲಿ ಗೆಲ್ಲಲಾಗಿದೆ ಎಂದು ಹೇಳುತ್ತದೆ. ಅಂತಹ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಸಾಮಾಜಿಕ ಮಾಧ್ಯಮ  ಪೋಷ್ಟ್ ಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಇವುಗಳು ಎಸ್‌ಎಎಸ್ ಗುಂಪು ಬಿಡುಗಡೆ ಮಾಡಿದ ಮೂಲ ಚುನಾವಣಾ ಪೂರ್ವ ಸಮೀಕ್ಷೆಯ ವರದಿಯಿಂದ ಸಂಪಾದಿಸಿದ ಫೋಟೋಗಳಾಗಿವೆ. ಮೂಲ ವರದಿಯು ವೈಎಸ್‌ಆರ್‌ಸಿಪಿ ಗೆಲುವಿನ ಮುನ್ಸೂಚನೆ ನೀಡಿದೆ.

ನಾವು ಕಂಡುಹಿಡಿದದ್ದು ಹೀಗೆ?
ಮಾರ್ಚ್ ೨೩ ರಂದು ಎಸ್‌ಎಎಸ್ ಪ್ರಕಟಿಸಿದ ವರದಿಯನ್ನು  ಹಂದುಕೊಂಡೆವು. ಈ ಮೂಲ ವರದಿಯಲ್ಲಿ ವೈಎಸ್‌ಆರ್‌ಸಿಪಿಗೆ ಶೇಕಡಾ ೪೮.೫ ಮತಗಳು ಮತ್ತು ೯೩ ಸ್ಥಾನಗಳು ಮತ್ತು ಟಿಡಿಪಿ-ಜೆಎಸ್‌ಪಿ-ಬಿಜೆಪಿಗೆ ಶೇಕಡಾ ೪೬.೫ ಮತಗಳು ಮತ್ತು ೫೦ ಸ್ಥಾನಗಳು, ೩೨  ಸ್ಥಾನಗಳಲ್ಲಿ ತೀವ್ರ ಪೈಪೋಟಿ ಇದೆ ಎಂದು ಊಹಿಸಲಾಗಿದೆ. ವೈರಲ್ ಚಿತ್ರದಲ್ಲಿ ಈ ಸಂಖ್ಯೆಗಳನ್ನು ಬದಲಾಯಿಸಲಾಗಿದೆ ಎಂದು ತೋರುತ್ತದೆ.

"೨೩.೦೩.೨೦೨೪ ರಂದು ಆಂಧ್ರಪ್ರದೇಶದ ಮೂಡ್" ಎಂಬ ಶೀರ್ಷಿಕೆಯ ಎಸ್‌ಎಎಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಕುರಿತು ನಾವು ಸುದ್ದಿ ವರದಿಗಳನ್ನು ಸಹ ನೋಡಿದ್ದೇವೆ. ಸಾಕ್ಷಿ ಪೋಸ್ಟ್ ಮತ್ತು ತೆಲುಗು ಗ್ಲೋಬಲ್‌ನಂತಹ ತೆಲುಗು ಡಿಜಿಟಲ್ ಮೀಡಿಯಾ ಔಟ್‌ಲೆಟ್‌ಗಳಲ್ಲಿನ ಸಂಖ್ಯೆಗಳು ಎಸ್‌ಎಎಸ್ ವರದಿ ಮಾಡಿದ ಸಂಖ್ಯೆಗಳಿಗೆ ಹೊಂದಿಕೆಯಾಗುತ್ತವೆ, ಆದರೆ ವೈರಲ್  ಪೋಷ್ಟ್ ಗೆ ಹೊಂದಿಕೆಯಾಗುವುದಿಲ್ಲ.

ತೀವ್ರ ಸ್ಪರ್ಧೆಯ ಸ್ಥಾನಗಳ ಪೈಕಿ, ಟಿಡಿಪಿ ೧೯ ಮತ್ತು ವೈಎಸ್‌ಆರ್‌ಸಿಪಿ ೧೩ ರಲ್ಲಿ ಮುನ್ನಡೆ ಸಾಧಿಸುತ್ತಿದೆ ಎಂದು ವರದಿ ಹೇಳಿದೆ. ಮುಂಬರುವ ರಾಷ್ಟ್ರೀಯ ಚುನಾವಣೆಗಳಿಗೆ ಅವರು ಊಹೆಗಳನ್ನು ನುಡಿದಿದ್ದಾರೆ. ಸಮೀಕ್ಷೆಯು ವೈಎಸ್‌ಆರ್‌ಸಿಪಿಗೆ ೨೫ ರಲ್ಲಿ ೧೫ ಮತ್ತು ಮೈತ್ರಿಕೂಟಕ್ಕೆ ಐದು ಸ್ಥಾನಗಳನ್ನು ಹೇಳಿದೆ, ಮತ್ತು ಈ ಐದರಲ್ಲಿ ತೀವ್ರ ಪೈಪೋಟಿ ನಡೆಯಲಿದೆ. ನಿಕಟ ಸ್ಪರ್ಧೆ ಕಂಡುಬರುವ ಸ್ಥಾನಗಳಲ್ಲಿ ಟಿಡಿಪಿ ಮೂರು ಮತ್ತು ವೈಎಸ್‌ಆರ್‌ಸಿಪಿ ಎರಡರಲ್ಲಿ ಮುನ್ನಡೆ ಸಾಧಿಸಿದೆ ಎಂದು ವರದಿ ತಿಳಿಸಿದೆ.

ವೈರಲ್ ಪೋಷ್ಟ್ ಮತ್ತು ಮೂಲ ಸಮೀಕ್ಷೆ ವರದಿಯ ಹೋಲಿಕೆ (ಮೂಲ: ಎಕ್ಸ್/ಶ್ರೀ ಆತ್ಮಸಕಾಹಿ)

ಮೂಲ ವರದಿಗೆ ಹೋಲಿಸಿದರೆ ವೈರಲ್ ಫೋಟೋಗಳಲ್ಲಿ ಸಹ ವ್ಯತ್ಯಾಸಗಳನ್ನು ಹೊಂದಿವೆ. ವರದಿಯು ೧೩ ಪುಟಗಳನ್ನು ಹೊಂದಿದೆ. ವೈರಲ್ ಪೋಷ್ಟ್ ಒಂಬತ್ತು ಮತ್ತು ಹತ್ತು ಪುಟಗಳನ್ನು ಸಂಯೋಜಿಸುತ್ತದೆ, ಇದು ವಿವಿಧ ಪಕ್ಷಗಳಿಗೆ ಜಿಲ್ಲಾವಾರು ಊಹಿಸಲಾದ ಸ್ಥಾನಗಳನ್ನು ಮತ್ತು ಫಲಿತಾಂಶಗಳ ಸಾರಾಂಶವನ್ನು ಕ್ರಮವಾಗಿ ಹೊಂದಿದೆ, ಹೀಗಾಗಿ ಪುಟದ ಸಂಖ್ಯೆಗಳನ್ನು ಕೆಳಭಾಗದಲ್ಲಿ ಸ್ಥಳಾಂತರಿಸಲಾಗಿದೆ. 

ಎಸ್‌ಎಎಸ್ ನಿಯತಕಾಲಿಕವಾಗಿ ಇದೇ ರೀತಿಯ ಸಮೀಕ್ಷೆಗಳನ್ನು ನಡೆಸಿದೆ, ಇದನ್ನು ಆಂಧ್ರಪ್ರದೇಶದ ಮೂಡ್ ಎಂದು ಕರೆಯಲಾಗುತ್ತದೆ. ಇತ್ತೀಚಿನದು ಮಾರ್ಚ್ ೨೩ ರಂದು, ಮತ್ತು ಹಿಂದಿನದು ಮಾರ್ಚ್ ೫, ೨೦೨೪ ರಂದು, ಇದು ವೈಎಸ್‌ಆರ್ ಸಿಪಿ  ಗೆಲುವಿನ ಮುನ್ಸೂಚನೆಯನ್ನು ನೀಡಿತ್ತು.

ಸ್ಪಷ್ಟೀಕರಣಕ್ಕಾಗಿ ನಾವು ಎಸ್‌ಎಎಸ್ ಅನ್ನು ಸಂಪರ್ಕಿಸಿದ್ದೇವೆ. ಟಿಡಿಪಿಯ ವಿಜಯವನ್ನು ಊಹಿಸುವ ಉದ್ದೇಶಿತ ವರದಿಯು ಅವರದಲ್ಲ ಮತ್ತು ಅವರ ಮೂಲ ವರದಿಯು ವೈಎಸ್‌ಆರ್ ಸಿಪಿ ಗೆಲುವನ್ನು ಊಹಿಸುತ್ತದೆ ಎಂದು ಸ್ಪಷ್ಟಪಡಿಸಲು ಗುಂಪು ನಮಗೆ ಗ್ರಾಫಿಕ್ ಕಳುಹಿಸಿದೆ. ವೈರಲ್ ಪೋಷ್ಟ್ ಗಳಲ್ಲಿನ ಸಂಖ್ಯೆಗಳನ್ನು ಡಿಜಿಟಲಿ ಎಡಿಟ್ ಮಾಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿಆರ್ ಮೂರ್ತಿ ಲಾಜಿಕಲಿ ಫ್ಯಾಕ್ಟ್ಸ್‌ಗೆ ತಿಳಿಸಿದ್ದಾರೆ.


ಇಮೇಜ್: ಎಸ್‌ಎಎಸ್ ನಿಂದ ಲಾಜಿಕಲಿ ಫ್ಯಾಕ್ಟ್ಸ್ ಗೆ  ಕಳುಹಿಸಲಾಗಿದೆ ಸ್ಪಷ್ಟೀಕರಣ (ಮೂಲ: ಶ್ರೀ ಆತ್ಮಸಾಕ್ಷಿ)

ತೀರ್ಪು
ಮುಂಬರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್ ಸಿಪಿ  ಗೆಲುವಿನ ಭವಿಷ್ಯ ನುಡಿಯುವ ಶ್ರೀ ಆತ್ಮಸಾಕ್ಷಿ ಗುಂಪಿನ ಚುನಾವಣಾ ಪೂರ್ವ ಸಮೀಕ್ಷೆಯ ವರದಿಯನ್ನು ಅದು ಟಿಡಿಪಿಯ ಗೆಲುವಿನ ಮುನ್ಸೂಚನೆ ಎಂದು ಹೇಳಲು ಎಡಿಟ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.