ಕೋ-ಆರ್ಡರ್ ಸೆಟ್‌ನಲ್ಲಿ ನಟಿ ಆಲಿಯಾ ಭಟ್ ಕ್ಯಾಮೆರಾಗೆ ಪೋಸ್ ನೀಡಿದ ವೈರಲ್ ಕ್ಲಿಪ್ ಒಂದು ಡೀಪ್‌ಫೇಕ್ ಆಗಿದೆ

ಮೂಲಕ: ಉಮ್ಮೆ ಕುಲ್ಸುಮ್
ನವೆಂಬರ್ 28 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕೋ-ಆರ್ಡರ್ ಸೆಟ್‌ನಲ್ಲಿ ನಟಿ ಆಲಿಯಾ ಭಟ್ ಕ್ಯಾಮೆರಾಗೆ ಪೋಸ್ ನೀಡಿದ ವೈರಲ್ ಕ್ಲಿಪ್ ಒಂದು ಡೀಪ್‌ಫೇಕ್ ಆಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಅಸಲಿ ವೀಡಿಯೋವನ್ನು ಮೊದಲು ಮೇ ೨೦೨೩ ರಲ್ಲಿ ಇಂಡೋನೇಷ್ಯಾ ಮೂಲದ ಎಂದೆನಿಸುವ ಪುಟದಿಂದ ಪೋಷ್ಟ್ ಮಾಡಲಾಗಿದೆ.

ಕ್ಲೈಮ್ ಐಡಿ b6ba8647

ಇಲ್ಲಿನ ಹೇಳಿಕೆ ಏನು?

ಭಾರತೀಯ ನಟಿ ಆಲಿಯಾ ಭಟ್ ಅವರನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಲೈಟ್ ಕಲರ್ ಕೋ-ಆರ್ಡ್ ಸೆಟ್ ಧರಿಸಿದ ಮಹಿಳೆಯೊಬ್ಬರು ಹಾಸಿಗೆಯ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್ ನೀಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಹಂಚಿಕೊಳ್ಳಲಾದ ವೀಡಿಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಇತ್ತೀಚೆಗೆ ಮತ್ತೆ ಕಾಣಿಸಿಕೊಂಡಿದೆ ಹಾಗು ಅದರಲ್ಲಿ ಕಾಣುವ ಮಹಿಳೆಯನ್ನು ಆಲಿಯಾ ಭಟ್ ಎಂದು ಗುರುತಿಸುತ್ತದೆ. ವೀಡಿಯೋವನ್ನು ಹಂಚಿಕೊಂಡ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಡೀಪ್‌ಫೇಕ್ ವೀಡಿಯೋವನ್ನು ಹಂಚಿಕೊಳ್ಳುವ ಪೋಷ್ಟ್ ಗಳ  ಸ್ಕ್ರೀನ್‌ಶಾಟ್‌ಗಳು.
(ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ವೀಡಿಯೋ ಡೀಪ್‌ಫೇಕ್ ಆಗಿದೆ.

ವಾಸ್ತವಾಂಶಗಳು

ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದನ್ನು ಎಡಿಟ್ ಮಾಡಲಾಗಿದೆ ಎಂದು ಸೂಚಿಸುವ ಕೆಲವು ವ್ಯತ್ಯಾಸಗಳನ್ನು ನೋಡಬಹುದು. ವೀಡಿಯೋದಲ್ಲಿ ಅಲಿಯಾ ಭಟ್ ಅವರ ತುಟಿಗಳ ಚಲನೆ ಸಹಜವಾಗಿ ಕಾಣುತ್ತಿಲ್ಲ. ಅಲ್ಲದೆ, ವೀಡಿಯೋದ ಹಲವಾರು ಹಂತಗಳಲ್ಲಿ, ಮಹಿಳೆಯ ಮುಖದ ಅಂಚುಗಳ ಸುತ್ತಲೂ ಕೆಲವು ವಿರೂಪಗಳು ಗೋಚರಿಸುತ್ತವೆ, ಇವೆಲ್ಲವೂ ವೀಡಿಯೋವನ್ನು ಡಿಜಿಟಲಿ ಟ್ಯಾಂಪರ್ ಮಾಡಲಾಗಿದೆ ಎಂದು ಸೂಚಿಸುತ್ತದೆ.

ವೈರಲ್ ಕ್ಲಿಪ್‌ನಲ್ಲಿ ಆಲಿಯಾ ಭಟ್ ಅವರ ಸುತ್ತಲಿನ ಅಸ್ಪಷ್ಟ ಲೈನ್ ಗಳು ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಸೂಚಿಸುತ್ತದೆ. (ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್)

ರಿವರ್ಸ್-ಇಮೇಜ್ ಸರ್ಚ್ ಮೂಲಕ ಅಸಲಿ ವೀಡಿಯೋವನ್ನು ಹಂಚಿಕೊಂಡ ಹಲವಾರು ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಾವು ಕಂಡುಕೊಂಡೆವು. ಆದರೆ, ಅದರಲ್ಲಿ ಕಾಣಿಸಿಕೊಂಡಿರುವ ಮಹಿಳೆ ಆಲಿಯಾ ಭಟ್ ಅಲ್ಲ. ಮೂಲ ವೀಡಿಯೋದಲ್ಲಿ ಕಾಣುವ ಮಹಿಳೆ ಅದನ್ನು ಮೇ ತಿಂಗಳಲ್ಲಿ ತನ್ನ ಫೇಸ್‌ಬುಕ್‌ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಅದೇ ಉಡುಪಿನಲ್ಲಿ ಮತ್ತೊಂದು ವೀಡಿಯೋವನ್ನೂ ಸಹ ಅವರು ಪುಟದಲ್ಲಿ ನೋಡಬಹುದು. ಫೇಸ್‌ಬುಕ್ ಪುಟವನ್ನು 'ವೈಯಕ್ತಿಕ ಬ್ಲಾಗ್' ಎಂದು ಪಟ್ಟಿ ಮಾಡಲಾಗಿದೆ ಮತ್ತು ಇಂಡೋನೇಷಿಯನ್ ಭಾಷೆಯಲ್ಲಿ ಬರೆದ ಹಲವಾರು ಪೋಷ್ಟ್ ಗಳನ್ನು ಹಂಚಿಕೊಳ್ಳಲಾಗಿದೆ. ಪುಟದಲ್ಲಿ ಪಟ್ಟಿ ಮಾಡಲಾದ ಫೋನ್ ಸಂಖ್ಯೆಯು ಇಂಡೋನೇಷಿಯನ್ ಕಾಲರ್ ಕೋಡ್ ಅನ್ನು ಸಹ ಹೊಂದಿದೆ. ನಮ್ಮ ವಿಶ್ಲೇಷಣೆ ಮತ್ತು ಸಂಶೋಧನೆಯು ಈ ಫೇಸ್‌ಬುಕ್ ಪುಟದಲ್ಲಿ ಬೇರೊಬ್ಬ ಮಹಿಳೆ ಹಂಚಿಕೊಂಡ ವೀಡಿಯೋದಲ್ಲಿ ಆಲಿಯಾ ಭಟ್ ಅವರ ಮುಖವನ್ನು ಸೂಪರ್‌ಪೋಸ್ ಮಾಡಲಾಗಿದೆ ಎಂದು ತೋರಿಸುತ್ತದೆ.

ಕಳೆದ ಒಂದು ತಿಂಗಳಿನಿಂದ ಭಾರತೀಯ ನಟರಾದ ರಶ್ಮಿಕಾ ಮಂದಣ್ಣ ಮತ್ತು ಕಾಜೋಲ್ ಅವರ ಫೇಕ್ ವೀಡಿಯೋಗಳು ವೈರಲ್ ಆದ ನಂತರ ಡೀಪ್‌ಫೇಕ್‌ಗಳಿಗೆ ಬಲಿಯಾದ ಇತ್ತೀಚಿನ ಸೆಲೆಬ್ರಿಟಿ ಆಲಿಯಾ ಭಟ್.  ಈ ತಿಂಗಳ ಆರಂಭದಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗಾರ್ಬಾ ಕಾರ್ಯಕ್ರಮವೊಂದರಲ್ಲಿ ಅವರಂತೆ ಕಾಣುವ ನೃತ್ಯದ  ವೀಡಿಯೋವನ್ನು ಜನರು ತಪ್ಪಾಗಿ ಗ್ರಹಿಸಿದ ನಂತರ ಡೀಪ್‌ಫೇಕ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಡೀಪ್‌ಫೇಕ್‌ಗಳನ್ನು ಸಾಮಾನ್ಯವಾಗಿ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ತಾವು ಇಂದಿಗೂ ಮಾಡದ ಕೆಲಸಗಳನ್ನು ಅಥವಾ ನೀಡದ ಹೇಳಿಕೆಗಳನ್ನು ನೈಜ-ಘಟನೆ ಎಂದು ಕಾಣುವ ವೀಡಿಯೋಗಳನ್ನು ರಚಿಸಲು ಬಳಸಲಾಗುತ್ತದೆ, ಇದು ತಪ್ಪು ಮಾಹಿತಿಯ ಹರಡುವಿಕೆಗೆ ಮತ್ತು ಸಾರ್ವಜನಿಕ ಅಭಿಪ್ರಾಯದ ಕುಶಲತೆಗೆ ಕಾರಣವಾಗುತ್ತದೆ. ಲಾಜಿಕಲಿ ಫ್ಯಾಕ್ಟ್ಸ್ ಇಲ್ಲಿ, ಇಲ್ಲಿ ಮತ್ತು ಇಲ್ಲಿ ಇದೇ ರೀತಿಯ ವೈರಲ್ ಡೀಪ್‌ಫೇಕ್ ವೀಡಿಯೋಗಳನ್ನು ಫೇಕ್ ಎಂದು ವ್ಯಕ್ತಪಡಿಸಿದೆ. ಡೀಪ್‌ಫೇಕ್‌ ಮತ್ತು ಎಐ-ರಚಿಸಿದ ದೃಶ್ಯಗಳನ್ನು ಗುರುತಿಸುವ ಮಾರ್ಗದರ್ಶಿ ಇಲ್ಲಿದೆ

ತೀರ್ಪು
ಭಾರತೀಯ ನಟಿ ಆಲಿಯಾ ಭಟ್ ಕೋ-ಆರ್ಡರ್ ಸೆಟ್‌ನಲ್ಲಿ ಕ್ಯಾಮೆರಾಗೆ ಪೋಸ್ ನೀಡುತ್ತಿರುವ ವೈರಲ್ ವೀಡಿಯೋ ಕ್ಲಿಪ್ ಡೀಪ್‌ಫೇಕ್ ಆಗಿದೆ.

(ಅನುವಾದಿಸಿದವರು: ಅಂಕಿತ ಕುಲಕರ್ಣಿ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.