ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ದೃಶ್ಯಾವಳಿಯನ್ನು ಅರುಣಾಚಲ ಪ್ರದೇಶದ ದೋನಿ ಪೋಲೋ ವಿಮಾನ ನಿಲ್ದಾಣ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಮೂಲಕ:
ನವೆಂಬರ್ 29 2022

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ದೃಶ್ಯಾವಳಿಯನ್ನು ಅರುಣಾಚಲ ಪ್ರದೇಶದ ದೋನಿ ಪೋಲೋ ವಿಮಾನ ನಿಲ್ದಾಣ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನ ಒಳಭಾಗದ ವೀಡಿಯೊವನ್ನು ಅರುಣಾಚಲ ಪ್ರದೇಶದ ದೋನಿ ಪೋಲೋ ವಿಮಾನ ನಿಲ್ದಾಣ ಎಂದು ತಪ್ಪಾಗಿ ಬಿಂಬಿಸಲಾಗಿದೆ.

ಕ್ಲೈಮ್ ಐಡಿ 8dfa1c71


ಸಂದರ್ಭ

ವಿಮಾನ ನಿಲ್ದಾಣದ ಆಂತರಿಕ ನೋಟದ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಜೊತೆಗೆ ಅದು ದೋನಿ ಪೋಲೋ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ. ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊವಂದು, "ಅರುಣಾಚಲ ಪ್ರದೇಶ ರಾಜ್ಯದ ದೋನಿ ಪೋಲೋ ವಿಮಾನ ನಿಲ್ದಾಣವನ್ನು ಹೆಚ್ಚಾಗಿ *ಬಿದಿರು* ನಿಂದ ಮಾಡಲಾಗಿದೆ, ಶೀಘ್ರದಲ್ಲೇ ನಮ್ಮ ಪ್ರಧಾನಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ. ವಾವ್... *ಅದ್ಭುತ ಭಾರತ*” ಎಂಬ ಶೀರ್ಷಿಕೆ ಹೊಂದಿದೆ. ಟ್ವೀಟ್ ೩೦೦ ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ ಮತ್ತು ಇಂಡಿಯನ್ ಆರ್‌.ಪಿ.ಜಿ ಗ್ರೂಪ್ ಕಾಂಗ್ಲೋಮರೇಟ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರಿಗೆ ಟ್ಯಾಗ್ ಮಾಡಲಾಗಿದೆ. ಆದರೆ ಈ ವೀಡಿಯೊ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸೇರಿದ್ದು, ಇಟಾನಗರದ ದೋನಿ ಪೋಲೋ ವಿಮಾನ ನಿಲ್ದಾಣದಲ್ಲ.


ವಾಸ್ತವವಾಗಿ

ನಾವು InVID ಟೂಲ್ ಅನ್ನು ಬಳಸಿಕೊಂಡು ವೀಡಿಯೊವಿನ ಒಂದು ಕೀಫ್ರೇಮ್‌ನ ಮೇಲೆ ರಿವರ್ಸ್ ಇಮೇಜ್ ಶೋಧವನ್ನು ನೆಡೆಸಿದೆವು. ಆಗ ವೀಡಿಯೊವು ಬೆಂಗಳೂರು ವಿಮಾನ ನಿಲ್ದಾಣದಿಂದ ಬಂದಿದೆ ಎಂದು ಕಂಡುಬಂದಿದೆ. ಟೈಮ್ಸ್ ಆಫ್ ಇಂಡಿಯಾ (TOI) ಬೆಂಗಳೂರು ಟರ್ಮಿನಲ್-೨ ರ ಚಿತ್ರಗಳನ್ನು ಪೋಸ್ಟ್ ಮಾಡಿರಿವುದು ಕಂಡುಬಂದಿದೆ. ಅವು ಪ್ರಶ್ನೆಯಲ್ಲಿರುವ ವೀಡಿಯೊದ ದೃಶ್ಯಗಳಿಗೆ ಹೊಂದಿಕೆಯಾಗುತ್ತದೆ. ಬೆಲ್-ಆಕಾರದ ಹ್ಯಾಂಗಿಂಗ್‌ಗಳ ವಿನ್ಯಾಸವನ್ನು 0:೨೭ ಸೆಕೆಂಡುಗಳಲ್ಲಿ ನಾವು ಪ್ರಶ್ನೆಯಲ್ಲಿರುವ ವೀಡಿಯೊದಲ್ಲಿ ನೋಡಬಹುದು. ಅದೇ ಚಿತ್ರವನ್ನು TOI ವರದಿಯಲ್ಲಿ "ಟರ್ಮಿನಲ್-೨ ರ ದೊಡ್ಡ ಡ್ರಾ ಅದರ ಹ್ಯಾಂಗಿಂಗ್ ಗಾರ್ಡನ್ ಆಗಿರುತ್ತದೆ” ಎಂದು ಶೀರ್ಷಿಕೆಯ ಮೂಲಕ ಪೋಸ್ಟ್ ಮಾಡಲಾಗಿದೆ. ನವೆಂಬರ್ ೧೧, ೨೦೨೨ ರಂದು ನರೇಂದ್ರ ಮೋದಿಯವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ನ ೧ ನೇ ಹಂತವನ್ನು ಉದ್ಘಾಟಿಸಲಿದ್ದಾರೆ ಎಂದು ವರದಿ ಉಲ್ಲೇಖಿಸುತ್ತದೆ. ಟರ್ಮಿನಲ್-೧ ಅಂತರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಅವಕಾಶ ಕಲ್ಪಿಸುವುದನ್ನು ಮುಂದುವರಿಸುತ್ತದೆ ಮತ್ತು ಟರ್ಮಿನಲ್-೨ ರ ಹಂತ ೧ ಆರಂಭದಲ್ಲಿ ದೇಶೀಯ ವಿಮಾನಗಳಿಗೆ ಟರ್ಮಿನಲ್ ಆಗಿರುತ್ತದೆ. ಡಿಸೆಂಬರ್ ಅಂತ್ಯದಲ್ಲಿ ಟರ್ಮಿನಲ್- ೨ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ವರದಿ ಹೇಳುತ್ತದೆ.

 

ನವೆಂಬರ್ ೯ ರಂದು ಅಪ್‌ಲೋಡ್ ಮಾಡಲಾದ ಸಿಎನ್ ಬಿಸಿ-ಟಿವಿ ೧೮ (CNBC-TV 18) ಯೂಟ್ಯೂಬ್ ವೀಡಿಯೊ ಸಹ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-೨ ರ ದೃಶ್ಯಗಳನ್ನು ತೋರಿಸುತ್ತದೆ. “ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-೨ ರ ತ್ವರಿತ ನೋಟ” ಎಂದು ಶೀರ್ಷಿಕೆ ನೀಡಲಾಗಿದೆ. ವೀಡಿಯೊ “ಟರ್ಮಿನಲ್-೨ ಅನ್ನು ಗಾರ್ಡನ್ ಸಿಟಿಗೆ ಗೌರವವಾಗಿ ವಿನ್ಯಾಸಗೊಳಿಸಲಾಗಿದೆ" ಎಂದು ವಿವರಿಸುತ್ತದೆ. ಹೆಚ್ಚಿನ ಆಂತರಿಕ ವಿನ್ಯಾಸಗಳನ್ನು ಬಿದಿರಿನಿಂದಲೇ ಮಾಡಿರುವುದನ್ನು ನಾವು ಗಮನಿಸಬಹುದು.


ನವೆಂಬರ್ ೧೧ ರಂದು ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-೨ ಹೆಚ್ಚಿನ ಸಾಮರ್ಥ್ಯ ಮತ್ತು ಮತ್ತಷ್ಟು ಅನುಕೂಲವನ್ನು ಹೊಂದಿದೆ. ಇದು ನಮ್ಮ ನಗರ ಕೇಂದ್ರಗಳಿಗೆ ಉನ್ನತ ದರ್ಜೆಯ ಮೂಲಸೌಕರ್ಯಗಳನ್ನು ಒದಗಿಸುವ ನಮ್ಮ ಪ್ರಯತ್ನಗಳ ಒಂದು ಭಾಗವಾಗಿದೆ. ಟರ್ಮಿನಲ್ ಸುಂದರವಾಗಿದೆ ಮತ್ತು ಪ್ರಯಾಣಿಕರ ಸ್ನೇಹಿಯಾಗಿದೆ! ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ.”


ನವೆಂಬರ್ ೧೮, ೨೦೨೨ ರಂದು ಪ್ರಕಟವಾದ ಎನ್‌ಡಿಟಿವಿ (NDTV) ವರದಿಯು ನವೆಂಬರ್ ೧೯ ರಂದು ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾದ ದೋನಿ ಪೋಲೋ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಹೇಳುತ್ತದೆ. ಹೆಚ್ಚುವರಿಯಾಗಿ, ಇದು ಅರುಣಾಚಲ ಪ್ರದೇಶದ ಮೂರನೇ ಕಾರ್ಯಾಚರಣಾ ವಿಮಾನ ನಿಲ್ದಾಣವಾಗಿದೆ ಮತ್ತು ಇಟಾನಗರದಲ್ಲಿ ಮೊದಲನೆಯದು ಎಂದು ವಿವರಿಸಿದೆ. ಎನ್‌ಡಿಟಿವಿ ವರದಿಯಲ್ಲಿ ಪೋಸ್ಟ್ ಮಾಡಿರುವ ದೋನಿ ಪೋಲೋ ನಿಲ್ದಾಣದ ಚಿತ್ರಗಳು ಪ್ರಶ್ನೆಯಲ್ಲಿರುವ ವೀಡಿಯೊದಲ್ಲಿನ ದೃಶ್ಯಗಳಿಗೆ ಹೊಂದಿಕೆಯಾಗುತ್ತಿಲ್ಲ ಮತ್ತು ವಿಮಾನ ನಿಲ್ದಾಣದ ಒಳಾಂಗಣ ವಿನ್ಯಾಸದಲ್ಲಿ ಬಿದಿರನ್ನು ಹೆಚ್ಚು ಬಳಸಲಾಗಿಲ್ಲ ಎಂಬುದನ್ನು ನಾವು ಗಮನಿಸಬಹುದು. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ದೋನಿ ಪೋಲೋ ವಿಮಾನ ನಿಲ್ದಾಣದ ಗ್ರೇಟ್ ಹಾರ್ನ್‌ಬಿಲ್ ಗೇಟ್ ಬಿದಿರಿನಿಂದ ಮಾಡಲ್ಪಟ್ಟಿದೆ.


ತೀರ್ಪು

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ವೀಡಿಯೊವನ್ನು ದೋನಿ ಪೋಲೋ ವಿಮಾನ ನಿಲ್ದಾಣ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಆದ್ದರಿಂದ ನಾವು ಈ ಪ್ರತಿಪಾದನೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.