೨೦೨೧ರ ಮರೀನಾ ಬೀಚ್ ನ ವೀಡಿಯೋವನ್ನು ೨೦೨೨ರಲ್ಲಿನ ಮಾಂಡೌಸ್ ಚಂಡಮಾರುತದ ಸಮಯದ್ದೆಂದು ವೈರಲ್ ಮಾಡಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಡಿಸೆಂಬರ್ 21 2022

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೧ರ ಮರೀನಾ ಬೀಚ್ ನ  ವೀಡಿಯೋವನ್ನು ೨೦೨೨ರಲ್ಲಿನ ಮಾಂಡೌಸ್ ಚಂಡಮಾರುತದ ಸಮಯದ್ದೆಂದು ವೈರಲ್ ಮಾಡಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮರೀನಾ ಬೀಚ್‌ನಲ್ಲಿ ಸಂಭವಿಸಿದ ೨೦೨೧ರ ಪ್ರವಾಹದ ವೀಡಿಯೋವನ್ನು ೨೦೨೨ರ ಮಾಂಡೌಸ್ ಚಂಡಮಾರುತದ್ದು ಎಂದು ತಪ್ಪಾಗಿ ಹೇಳಲಾಗಿದೆ.

ಕ್ಲೈಮ್ ಐಡಿ 41594995


ಸಂದರ್ಭ

ಮಾಂಡೌಸ್ ಚಂಡಮಾರುತವು ಡಿಸೆಂಬರ್ ೯, ೨೦೨೨ರ ರಾತ್ರಿ ತಮಿಳುನಾಡಿಗೆ ಅಪ್ಪಳಿಸಿತು. ಕರಾವಳಿ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶವು ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾದವು. ಚಂಡಮಾರುತದ ಅಬ್ಬರಕ್ಕೆ ತಮಿಳುನಾಡಿನ ಜನತೆ ತತ್ತರಿಸಿ ಹೋಗಿದ್ದು; ಹಲವೆಡೆ ಭೂಕುಸಿತ, ಭಾರೀ ಗಾಳಿ, ಮಳೆಯಿಂದ ಪ್ರಕೃತಿ ವಿಕೋಪಗಳು ಸಂಭವಿಸಿದೆ. ಅಲ್ಲದೇ ದಿ ಹಿಂದೂ ವರದಿಯ ಪ್ರಕಾರ ಭಾರೀ ಮಳೆಗೆ ಐದು ಮಂದಿ ಸಾವನ್ನಪ್ಪಿದ್ದಾರೆ, ಜೊತೆಗೆ ವಸತಿ ಮತ್ತು ವಿದ್ಯುತ್ ಮೂಲಸೌಕರ್ಯಕ್ಕೆ ಗಮನಾರ್ಹ ಹಾನಿಉಂಟಾಗಿದೆ ಎಂದು ಹೇಳುತ್ತದೆ. ಹಲವಾರು ನಗರಗಳು ಬಹು ದಿನಗಳವರೆಗೆ ವಿಪರೀತ ಪ್ರವಾಹ ಮತ್ತು ಬಲವಾದ ಗಾಳಿಯಿಂದ ತತ್ತರಿಸಿದವು, ಡಿಸೆಂಬರ್ ೧೦ರಂದು ಚಂಡಮಾರುತವು ದುರ್ಬಲಗೊಂಡಿತು. 


ಈ ಸಮಯದಲ್ಲಿ ಚಂಡಮಾರುತದ ಬಗ್ಗೆ ಹಲವಾರು ತಪ್ಪು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ. ಹೀಗೆ ಡಿಸೆಂಬರ್ ೧೦ ರಂದು ಹಂಚಿಕೊಳ್ಳಲಾದ ಯೂಟ್ಯೂಬ್ ವೀಡಿಯೋ ನಲ್ಲಿ ಸಮುದ್ರದ ನೀರಿನ ಮಟ್ಟವು ಕಡಲತೀರವನ್ನು ಅತಿಕ್ರಮಿಸುತ್ತಿದ್ದು ಸುತ್ತಲಿನ ರಸ್ತೆಯ ಮೇಲೆಯೂ ಸಹ ಆವರಿಸುತ್ತಿರುವ ದೃಶ್ಯವನ್ನು ನಾವು ನೋಡಬಹುದು. ಹಾಗೆ ಹಿನ್ನಲೆಯಲ್ಲಿ ಒಬ್ಬ ವ್ಯಕ್ತಿಯು ಪರಿಸ್ಥಿತಿಯ ಬಗ್ಗೆ ನಿರೂಪಣೆ ನೀಡುತ್ತಿರುವುದನ್ನು ಕೇಳಬಹುದು. ವೀಡಿಯೋದಲ್ಲಿ ಕೇಳಿಬರುವ ನಿರೂಪಣೆಯ ಅನುಸಾರ ಪ್ರವಾಹವು  ಮಾಂಡೌಸ್ ಚಂಡಮಾರುತದಿಂದ ಸಂಭವಿಸಿದೆ ಎಂದು ಹೇಳಿಕೆ ನೀಡಿದೆ. ಇದೇ ಕ್ಲಿಪ್ ಹಿನ್ನೆಲೆ ವ್ಯಾಖ್ಯಾನವಿಲ್ಲದೆ ಫೇಸ್‌ಬುಕ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ.


ವಾಸ್ತವವಾಗಿ

ವೈರಲ್ ಯೂಟ್ಯೂಬ್ ವೀಡಿಯೋದಿಂದ ತೆಗೆದುಕೊಂಡ ಸ್ಕ್ರೀನ್‌ಶಾಟ್ಗಳೊಂದಿಗೆ ಕೀಫ್ರೇಮ್ ಸರ್ಚ್ ಮಾಡಿದಾಗ ನವೆಂಬರ್ ೧೨, ೨೦೨೧ರಂದು ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೋದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಅದರ ಶೀರ್ಷಿಕೆಯ ಪ್ರಕಾರ ಅದು ಭಾರೀ ಮಳೆಯ ನಂತರ ಚೆನ್ನೈನ ಮರೀನಾ ಬೀಚ್ ರಸ್ತೆಯಲ್ಲಿ ನೀರ ಹರಿಯುವುದನ್ನು ತೋರಿಸುತ್ತದೆ ಎಂದು ಹೇಳುತ್ತದೆ. ಇಂಡಿಯಾ ಟುಡೇ ಮತ್ತು ಹಿಂದೂಸ್ತಾನ್ ಟೈಮ್ಸ್‌ನ ವರದಿಗಳು ಚೆನ್ನೈನಲ್ಲಿ ಧಾರಾಕಾರ ಮಳೆಯಿಂದಾಗಿ ಮರೀನಾ ಬೀಚ್ ಸೇರಿದಂತೆ ನಗರದಾದ್ಯಂತ ಹಲವಾರು ಸ್ಥಳಗಳಲ್ಲಿ ಪ್ರವಾಹ ಮತ್ತು ಜಲಾವೃತವಾಗಿತ್ತು ಎಂದು ದೃಢಪಡಿಸಿದೆ.


ಬೇ ಆಫ್ ಬಂಗಾಳನಲ್ಲಿ ಕಡಿಮೆ ಒತ್ತಡದ ಪ್ರದೇಶದಿಂದ ಉಂಟಾದ ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ಹಲವಾರು ವಸತಿ ಪ್ರದೇಶಗಳು ನೀರಿನಿಂದ ಮುಳುಗಿವೆ. ನಗರದ ನಾಗರಿಕ ಸಂಸ್ಥೆಯು ೨೩,೦೦೦ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿ ನೀರಿನಿಂದ ತುಂಬಿಕೊಂಡಂತಹ ಮಾರ್ಗಗಳನ್ನು ಸರಿಪಡಿಸಿತು. ಧಾರಾಕಾರ ಮಳೆಯ ನಂತರ ಮರೀನಾ ಬೀಚ್‌ನ ದೃಶ್ಯವನ್ನು ತೋರಿಸುವ ಚಿತ್ರ ಒಂದು ಇಂಡಿಯಾ ಟುಡೇ ವರದಿಯಲ್ಲಿ ಪ್ರಕಟವಾಗಿದೆ. ಹಾಗೆಯೇ ಎಎನ್‌ಐ (ANI) ಪ್ರಕಟಿಸಿದಂತಹ ಪ್ರವಾಹದ ಕಿರು ತುಣುಕುಗಳನ್ನು ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ ಕಾಣಬಹುದು. ಇವೆರಡೂ ಇತ್ತೀಚೆಗೆ ಹಂಚಿಕೊಂಡ ವೈರಲ್ ಯೂಟ್ಯೂಬ್ ವೀಡಿಯೋವನ್ನು ಹೋಲುತ್ತವೆ.  


ಸ್ಕ್ರಾಲ್‌ನ ಲೇಖನ ಪತ್ರಕರ್ತ ಸೆಲ್ವರಾಜ್ ರವರ ಟ್ವೀಟ್ ಅನ್ನು ಒಳಗೊಂಡಿದೆ. ಇದು ನವೆಂಬರ್ ೧೨, ೨೦೨೧ರಂದು ಹಂಚಿಕೊಳ್ಳಲಾಗಿದ್ದು, ಅದರ ಶೀರ್ಷಿಕೆ, "ಮರೀನಾ ಬೀಚ್ ಸಮುದ್ರ ತೀರವನ್ನು ಸರ್ವೀಸ್ ರಸ್ತೆಯವರೆಗೆ ವಿಸ್ತರಿಸಲಾಗಿದೆ" ಎಂದು ಓದುತ್ತದೆ. ತಮ್ಮ ಟ್ವಿಟ್ಟರ್ ಥ್ರೆಡ್‌ನಲ್ಲಿ ಸೆಲ್ವರಾಜ್ ಅವರು ಮರೀನಾ ಬೀಚ್‌ನ ಕೆಲವು ಫೋಟೋಗಳನ್ನೂ ಸಹ ಪೋಷ್ಟ್ ಮಾಡಿದ್ದಾರೆ.


ತೀರ್ಪು 

ನವೆಂಬರ್ ೨೦೨೧ರಲ್ಲಿ ಧಾರಾಕಾರ ಮಳೆಯ ಸಮಯದಲ್ಲಿ ಚೆನ್ನೈನ ಮರೀನಾ ಬೀಚ್‌ನಲ್ಲಿರುವ ಸಮುದ್ರದ ನೀರು ರಸ್ತೆಗಳನ್ನು ತಲುಪುತ್ತಿರುವ ಹಳೆಯ ವೀಡಿಯೋವನ್ನು ಡಿಸೆಂಬರ್ ೨೦೨೨ ರಂದು ಕಂಡುಬಂದ ಮಾಂಡೌಸ್ ಚಂಡಮಾರುತಕ್ಕೆ ತಪ್ಪಾಗಿ ಸಂಭಂದಿಸಿ ಹೇಳಿಕೊಳ್ಳಲಾಗಿದೆ. ಹಾಗಾಗಿ ಈ ಹೇಳಿಕೆಯು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.