ಕರ್ನಾಟಕ ಚುನಾವಣೆಗೆ ಮುನ್ನ 'ಮೋದಿ ಹಟಾವೋ, ದೇಶ್ ಬಚಾವೋ' ಘೋಷಣೆಯನ್ನು ಸೇರಿಸಲು ಜಾಹಿರಾತೊಂದನ್ನು ಡಿಜಿಟಲಿ ಎಡಿಟ್ ಮಾಡಲಾಗಿದೆ

ಮೂಲಕ: ರಜಿನಿ ಕೆ.ಜಿ
ಜುಲೈ 13 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕರ್ನಾಟಕ ಚುನಾವಣೆಗೆ ಮುನ್ನ 'ಮೋದಿ ಹಟಾವೋ, ದೇಶ್ ಬಚಾವೋ' ಘೋಷಣೆಯನ್ನು ಸೇರಿಸಲು ಜಾಹಿರಾತೊಂದನ್ನು ಡಿಜಿಟಲಿ ಎಡಿಟ್ ಮಾಡಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಟೈರ್ ಕಂಪನಿಯೊಂದರ ೨೦೧೭ ರ ಜಾಹೀರಾತನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಎಡಿಟ್ ಮಾಡಲಾಗಿದೆ ಮತ್ತು ಅದನ್ನು ಕಾಂಗ್ರೆಸ್ ಬೆಂಬಲಿಗರು ಹಂಚಿಕೊಂಡಿದ್ದಾರೆ.

ಕ್ಲೈಮ್ ಐಡಿ d9f89af0

ಸಂಧರ್ಭ

ಮೇ ೧೦ ರಂದು ನಡೆಯಲಿರುವ ಕರ್ನಾಟಕ ಚುನಾವಣೆಯ ಪೂರ್ವಭಾವಿಯಾಗಿ, “ಒಂದು ರಾಷ್ಟ್ರ, ಒಂದು ಪರಿಹಾರ. ಕರ್ನಾಟಕದಲ್ಲಿ ವೈರಲ್ ಆಗಿರುವ ಈ ‘ಮೋದಿ ಹಟಾವೋ’ ವೀಡಿಯೋ ನೋಡಿ. (sic)” ಎಂಬ ಶೀರ್ಷಿಕೆಯೊಂದಿಗೆ ಜಾಹೀರಾತಿನ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಕಾಂಗ್ರೆಸ್ ಬೆಂಬಲಿಗನೆಂದು ಹೇಳಿಕೊಳ್ಳುವ ಶಾಂತನು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಸೂಪರ್ ಮಾರ್ಕೆಟ್‌ನಲ್ಲಿ ದಿನಸಿ ಸಾಮಾನುಗಳನ್ನು ನಗದೀಕರಿಸುತ್ತಿರುವುದು ಮತ್ತು ಕ್ಯಾರಿ ಬ್ಯಾಗ್‌ನ ಖರೀದಿಸುವುದರ ಬಗ್ಗೆ ಕ್ಯಾಷಿಯರ್‌ನ ಪ್ರಸ್ತಾಪವನ್ನು ನಿರಾಕರಿಸುವುದನ್ನು ವೀಡಿಯೋ ತೋರಿಸುತ್ತದೆ. ಆ ವ್ಯಕ್ತಿ ತನ್ನ ಎಲ್ಲಾ ಖರೀದಿಗಳನ್ನು ತನ್ನ ಕೈಯಲ್ಲಿ ಮತ್ತು ಅವನ ಬಾಯಿಯಲ್ಲಿ ತುಂಬಿಕೊಳ್ಳುವುದನ್ನು ಕಾಣಬಹುದು, ಆ ವೇಳೆ ಕ್ಯಾಷಿಯರ್ ಬ್ಯಾಗ್‌ನ ಬೆಲೆ ಕೇವಲ ನಾಲ್ಕು ರೂಪಾಯಿ ಎಂದು ಅವರಿಗೆ ಹೇಳುತ್ತಾರೆ. ಅವನು ಮಾರ್ಕೆಟ್‌ನ ಪಾರ್ಕಿಂಗ್ ಪ್ರದೇಶವನ್ನು ತಲುಪುತ್ತಾನೆ ಮತ್ತು ಸಾಮಾನುಗಳಲ್ಲಿ ಒಂದನ್ನು ಬೀಳಿಸುತ್ತಾನೆ ಮತ್ತು ಪರದೆಯ ಮೇಲಿನ ಪರಿವರ್ತನೆಯು ಈ ಕೆಳಗಿನ ಪಠ್ಯವನ್ನು ಪರಿಚಯಿಸುತ್ತದೆ: “ಪೈಸೆ ಬಚಾನೆ ಹೈ? (ಹಣ ಉಳಿಸಲು ಬಯಸುವಿರಾ?) ಮೋದಿ ಹಟಾವೋ, ಪೈಸೆ ಬಚಾವೋ, ನೌಕ್ರಿ ಬಚಾವೋ, ಬೇಟಿ ಬಚಾವೋ, ಡೆಮಾಕ್ರಸಿ ಬಚಾವೋ, ದೇಶ್ ಬಚಾವೋ (ಮೋದಿಯನ್ನು ತೆಗೆದುಹಾಕಿ, ಹಣವನ್ನು ಉಳಿಸಿ, ಉದ್ಯೋಗಗಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ, ದೇಶವನ್ನು ಉಳಿಸಿ).”

ಈ ವೀಡಿಯೋ ವ್ಯಾಪಕವಾಗಿ ಶೇರ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ೧,೦೦೦ ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಮತ್ತು ೫,೦೦೦ ಕ್ಕೂ ಹೆಚ್ಚು ಲೈಕ್ ಅನ್ನು ಹೊಂದಿದೆ. ಇದು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಅಭಿಯಾನದಂತೆ ಮೂಲ ಸೃಷ್ಟಿಯಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ಆದರೆ, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮೋದಿ ವಿರುದ್ಧ ಪಠ್ಯ ಸೇರಿಸುವ ಜಾಹೀರಾತನ್ನು ಡಿಜಿಟಲಿ ಎಡಿಟ್ ಮಾದಲಾಗಿದೆ.

ವಾಸ್ತವವಾಗಿ

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಲವು ಟ್ವಿಟರ್ ಬಳಕೆದಾರರು ಜಾಹೀರಾತನ್ನು ಎಡಿಟ್ ಮಾಡಿರಬಹುದು ಎಂದು ಸೂಚಿಸಿದ್ದಾರೆ. ೩೫ ಸೆಕೆಂಡುಗಳ ವೀಡಿಯೋದ ಮೊದಲ ೨೪ ಸೆಕೆಂಡುಗಳು ೨೦೧೭ ರಲ್ಲಿ ಮೊದಲು ಪ್ರಸಾರವಾದ ವಿಭಿನ್ನ ಜಾಹೀರಾತಿನ ಭಾಗವಾಗಿದೆ ಎಂದು ಹಲವರು ಗುರುತ್ತಿಸಿದ್ದಾರೆ. ಜೂನ್ ೮, ೨೦೧೭ ರಂದು, ಮೂಲ ಜಾಹೀರಾತನ್ನು ಸಿಯೆಟ್ (CEAT) ಟೈರುಗಳು ತಮ್ಮ ಅಧಿಕೃತ ಯೂ ಟ್ಯೂಬ್ (YouTube) ಚಾನಲ್‌ನಲ್ಲಿ "ಸೂಪರ್‌ಮಾರ್ಕೆಟ್‌ನಲ್ಲಿ ಉಳಿತಾಯ - ಸಿಯೆಟ್ (CEAT) ಫ್ಯೂಲ್ಸ್‌ಮಾರ್ಟ್ ಟೈರುಗಳು" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ. ಮೂಲ ಜಾಹೀರಾತನ್ನು ನೋಡಬಹುದು, ವಾಸ್ತವವಾಗಿ, ಸಿಯೆಟ್ ಟೈರ್‌ಗಳನ್ನು ವಿವರಿಸುವ ಪಠ್ಯದೊಂದಿಗೆ ಕೊನೆಗೊಳ್ಳುತ್ತದೆ ಮತ್ತು ವಾಯ್ಸ್‌ಓವರ್ ಹಿಂದಿಯಲ್ಲಿ ಹೀಗೆ ಹೇಳುತ್ತದೆ: “ಹಣವನ್ನು ಉಳಿಸಲು ಬಯಸುವಿರಾ? ಸಿಯೆಟ್ ಫ್ಯೂಲ್ಸ್‌ಮಾರ್ಟ್ ಟೈರ್‌ಗಳನ್ನು ಪಡೆಯಿರಿ (ಅನುವಾದಿಸಲಾಗಿದೆ).” ಪಠ್ಯದ ಫಾಂಟ್ ಕೂಡ ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಕಾಣುವ ಪಠ್ಯಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ವೀಡಿಯೋದ ಅಡಿಯಲ್ಲಿರುವ ವಿವರಣೆಯು ಹೀಗೆ ಹೇಳುತ್ತದೆ, “ಸೂಪರ್‌ಮಾರ್ಕೆಟ್‌ಗೆ ಎಷ್ಟು ಬಾರಿ ಪ್ರವಾಸವು, ಕೆಲವು ಕಿಲೋಗಳಲ್ಲಿ ದೊಡ್ಡ ಖರ್ಚು ಮಾಡುವುದನ್ನು ಒಳಗೊಂಡಿರುತ್ತದೆ? ಪ್ರತಿ ಬಾರಿ, ಸರಿ? ಅಂತಹ ಸಂದರ್ಭದಲ್ಲಿ, ಯಾವುದೇ ಉಳಿತಾಯವು ಮುಗುಳ್ನಗೆಯನ್ನು ತರುತ್ತದೆ! ನಿಮ್ಮ ಕಿರಾಣಿ ಬಿಲ್‌ಗಳನ್ನು ಸರಿದೂಗಿಸಲು ನೀವು ಹೆಚ್ಚಿನದನ್ನು ಉಳಿಸಬಹುದಾದಾಗ ಕೆಲವೇ ನಾಣ್ಯಗಳನ್ನು ಉಳಿಸಲು ಏಕೆ ಆಯ್ಕೆ ಮಾಡಿಕೊಳ್ಳಬೇಕು? ಸಿಯೆಟ್ ಫ್ಯೂಲ್ಸ್‌ಮಾರ್ಟ್ ಟೈರ್‌ಗಳೊಂದಿಗೆ, ನೀವು ಯಾವಾಗಲೂ ರಕ್ಷಣೆ ಪಡೆಯುತ್ತೀರಿ!”

೨೦೧೭ ರಲ್ಲಿ, ಸಿಯೆಟ್ ಟೈರ್‌ಗಳು ಫ್ಯೂಲ್ಸ್‌ಮಾರ್ಟ್ ಟೈರ್‌ಗಳನ್ನು ಪರಿಚಯಿಸಿತು, ತಮ್ಮ ಡಿಜಿಟಲ್ ಜಾಹೀರಾತು ಸರಣಿಯನ್ನು ಗ್ರಾಹಕರನ್ನು ಸೆಳೆಯಲು ಹಾಸ್ಯಮಯ ಸ್ಪಿನ್ ಅನ್ನು ನೀಡಿತು. “ಪೈಸೆ ಬಚನಾ ಹೈ!?” ಅನುವಾದ - ಹಣವನ್ನು ಉಳಿಸಲು ಬಯಸುವಿರ? ಎಂಬ ಅಡಿಬರಹದೊಂದಿಗೆ ಅಭಿಯಾನವನ್ನು ಪ್ರಾರಂಭಿಸಲಾಯಿತು. 

ಜಾಹೀರಾತು ಪ್ರಚಾರವನ್ನು ಜಾಹೀರಾತು ಸಂಸ್ಥೆ 'ಒಗಿಲ್ವಿ ಮತ್ತು ಮಾಥರ್' ಪರಿಕಲ್ಪನೆ ಮಾಡಿದೆ. ಈ ಜಾಹೀರಾತನ್ನು ಈಗ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಗಮನ ಸೆಳೆಯಲು ರಾಜಕೀಯ ತಿರುವುಗಳೊಂದಿಗೆ ಎಡಿಟ್ ಮಾಡಲಾಗಿದೆ.

ತೀರ್ಪು

ಸಿಯೆಟ್ನ (CEAT) ಫ್ಯೂಲ್ಸ್‌ಮಾರ್ಟ್ ಟೈರ್‌ಗಳ ಕುರಿತು ೨೦೧೭ ರ ಜಾಹೀರಾತನ್ನು ಎಡಿಟ್ ಮಾಡಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಮೋದಿ ಸರ್ಕಾರದ ವಿರುದ್ಧದ ಘೋಷಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆ ತಪ್ಪು
ಎಂದು ಗುರುತಿಸುತ್ತೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.