ನಟರಾದ ಹೃತಿಕ್ ರೋಷನ್ ಮತ್ತು ಸಲ್ಮಾನ್ ಖಾನ್ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿ ಮಾತನಾಡಿರುವ ವೀಡಿಯೋ ಎಡಿಟ್ ಮಾಡಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 11 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ನಟರಾದ ಹೃತಿಕ್ ರೋಷನ್ ಮತ್ತು ಸಲ್ಮಾನ್ ಖಾನ್ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿ ಮಾತನಾಡಿರುವ ವೀಡಿಯೋ ಎಡಿಟ್ ಮಾಡಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಪಾಕಿಸ್ತಾನದ ಮಾಜಿ ಪ್ರಧಾನಿಗೆ ಭಾರತದ ನಟರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳುವ ವೀಡಿಯೋಗಳು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.

ಕ್ಲೈಮ್ ಐಡಿ d9b23274

ಸಂದರ್ಭ

ಮೇ ೯, ೨೦೨೩ ರಂದು, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು. ಆಪಾದಿತ ಭ್ರಷ್ಟಾಚಾರದ ತನಿಖೆಗೆ ಸಹಕರಿಸದ ಕಾರಣ ಖಾನ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿತ್ತು. ಪಾಕಿಸ್ತಾನದಲ್ಲಿ ಅಲ್ ಖಾದಿರ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವಲ್ಲಿ ಲ್ಯಾಂಡ್ ಡೆವಲಪರ್‌ನಿಂದ ಆಪಾದಿತ ಹಣಕಾಸಿನ ಸಹಾಯಕ್ಕೆ ಸಂಬಂಧಿಸಿದಂತೆ ಖಾನ್ ಅವರನ್ನು ಬಂಧಿಸಿದಾಗಿನಿಂದ ಮತ್ತೊಂದು ಅಕ್ರಮ ಹಣಕಾಸಿನ ಪ್ರಕರಣದಲ್ಲಿ ಆರೋಪಣೆ ಮಾಡಲಾಗಿದೆ. ಖಾನ್ ಎರಡು ವಾರಗಳ ಕಾಲ ಜಾಮೀನಿನ ಮೇಲೆ ಹೊರಗಿದ್ದಾರೆ.

ಬಂಧನದ ನಂತರ ರಾಷ್ಟ್ರದಂತ್ಯ ಪ್ರತಿಭಟನೆಗಳನ್ನು ನಡೆಸಲಾಗಿತ್ತು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ತಪ್ಪಾದ ಚಿತ್ರಗಳು, ವೀಡಿಯೋಗಳು ಮತ್ತು ನಿರೂಪಣೆಗಳು ವೈರಲ್ ಆಗಿದ್ದವು. ಮಾಜಿ ಪ್ರಧಾನಿಗೆ ಬೆಂಬಲ ವ್ಯಕ್ತಪಡಿಸುವ ಅನೇಕ ವೀಡಿಯೋಗಳೂ ಸಹ ಪ್ರಚಾರಮಾಡಲಾಗಿತ್ತು. ಇದರಲ್ಲಿ ಅನೇಕ ಭಾರತದ ನಟರು ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.

ಅಂತಹ ಒಂದು ಫೇಸ್‌ಬುಕ್ ವೀಡಿಯೋ ಖಾನ್ ಬಂಧನದ ಹಿನ್ನಲೆಯಲ್ಲಿ ಭಾರತೀಯ ನಟ ಹೃತಿಕ್ ರೋಷನ್ ಅವರನ್ನು ತೋರಿಸುತ್ತದೆ. ನಟನ ಅದೇ ಕ್ಲಿಪ್ ನ ದೀರ್ಘವಾದ ವೀಡಿಯೋದಲ್ಲಿ ಇನ್ನಿತರ ನಟರಾದ ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರ ತುಣುಕುಗಳನ್ನು ಸಹ ಒಳಗೊಂಡಿದೆ.

ಆದರೆ ಈ ವೀಡಿಯೋಗಳು ಎಡಿಟ್ ಮಾಡಲಾಗಿವೆ .

ವಾಸ್ತವವಾಗಿ

ವೈರಲ್ ಕ್ಲಿಪ್‌ನಲ್ಲಿ, ಯಾವುದೇ ನಟರ ತುಟಿ ಚಲನೆಗಳು ಆಡಿಯೊಗೆ ಹೊಂದಿಕೆಯಾಗಿಲ್ಲವೆಂದು ನಾವು ಗಮನಿಸಿದೆವು. ಹಾಗು, ಅವರ ಧ್ವನಿ ಮತ್ತು ಉಚ್ಚಾರಣೆಗಳು ವಿಭಿನ್ನವಾಗಿವೆ.

ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಹೃತಿಕ್ ಅವರ ಕ್ಲಿಪ್‌ನ ದೀರ್ಘ ಆವೃತ್ತಿಯ ವೀಡಿಯೋವನ್ನು ಕಂಡುಕೊಂಡೆವು. ಇದು ಜನವರಿ ೧೦, ೨೦೨೩ ರಂದು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿತ್ತು ಮತ್ತು ಇದರ ಶೀರ್ಷಿಕೆ, "ಹೃತಿಕ್ ರೋಷನ್ ಜನ್ಮದಿನದ ವಿಶೇಷ ಅಭಿಮಾನಿಗಳ ಸಂವಹನ," ಎಂದು ಬರೆಯಲಾಗಿದೆ. ಯೂಟ್ಯೂಬ್ ಬಳಕೆದಾರರಾದ 'ಹೃತಿಕ್ ರೂಲ್ಸ್' ಎಂಬ ಚಾನೆಲ್ ನಲ್ಲಿ ನಟ ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಿರುವ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಆದರೆ ವೀಡಿಯೋದ ಯಾವುದೇ ಹಂತದಲ್ಲಿ ನಟ ಖಾನ್ ಬಗ್ಗೆ ಮಾತನಾಡಲಿಲ್ಲ. ಅದೇ ರೀತಿ, ಮತ್ತೊಬ್ಬ ಯೂಟ್ಯೂಬ್ ಬಳಕೆದಾರರು ಯೂಟ್ಯೂಬ್ ಚಾನೆಲ್ 'ಹೃತಿಕ್ ರೋಷನ್ ಎಕ್ಸ್‌ಪ್ರೆಶನ್ಸ್' ನಲ್ಲಿ ಅದೇ ವೀಡಿಯೋ ಅನ್ನು ಹಂಚಿಕೊಂಡಿದ್ದಾರೆ. ಅದು ವೈರಲ್ ವೀಡಿಯೋಗೆ ಹೊಂದಿಕೆಯಾಗುತ್ತದೆ. ಮತ್ತು, "ಅಭಿಮಾನಿಗಳೊಂದಿಗೆ ಜೂಮ್ ಮೀಟಿಂಗ್‌ಗೆ ಸಂಪರ್ಕಿಸುವಾಗ ಹೃತಿಕ್ ರೋಷನ್ ಅವರ ಅಭಿವ್ಯಕ್ತಿಗಳು" ಎಂದು ಬರೆದಿದ್ದಾರೆ.

ಜನವರಿ ೨೦೨೩ರಲ್ಲಿ ರೋಷನ್ ತಮ್ಮ ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಿರುವ ವೀಡಿಯೋವನ್ನು ಅವರು ಖಾನ್ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ ಎಂದು ಹೇಳಲು ಬಳಸಲಾಗಿದೆ.

ಏಪ್ರಿಲ್ ೨೧, ೨೦೨೩ ರಂದು ಸಲ್ಮಾನ್ ಖಾನ್ ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅವರ ಕ್ಲಿಪ್‌ನ ಮೂಲ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಅವರು "ಏಪ್ರಿಲ್ ೨೪ ರಂದು ಫ್ಲೋಟ್ ದುಬೈನಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ, ವಿಕೆಆರ್ ಎಂಟರ್‌ಟೈನ್‌ಮೆಂಟ್‌ ವತಿಯಿಂದ ಆಯೋಜಿಸಲಾದ ಅತೀ ದೊಡ್ಡ ಈದ್ ಆಚರಣೆಯನ್ನು ನೀವು ಕಳೆದುಕೊಳ್ಳಲು ಸಾಧ್ಯವಿಲ್ಲ," ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ ಮತ್ತು ಅವರು ಕೂಡ ಖಾನ್ ಬಗ್ಗೆ ಮಾತನಾಡಿಲ್ಲ.

ಲಾಜಿಕಲಿ ಫ್ಯಾಕ್ಟ್ಸ್ ಈ ಹಿಂದೆ ಅಕ್ಷಯ್ ಕುಮಾರ್ 'ಬೆಂಬಲ ವ್ಯಕ್ತಪಡಿಸುವ' ವೈರಲ್ ವೀಡಿಯೋವನ್ನು ವಿಶ್ಲೇಷಿಸಿದೆ. ೨೦೧೯ರಲ್ಲಿ ಪೋಷ್ಟ್ ಮಾಡಲಾದ ಮೂಲ ವೀಡಿಯೋದಲ್ಲಿ ಕುಮಾರ್ ಅವರು GOQii ಎಂಬ ಫಿಟ್‌ನೆಸ್ ಕಂಪನಿಯನ್ನು ಅನುಮೋದಿಸುತ್ತಿದ್ದರು.

ಪ್ರತಿಯೊಬ್ಬ ನಟನ ವೈರಲ್ ವೀಡಿಯೋದ ಹಿಂದಿನ ಪರದೆ ಮತ್ತು ಉಡುಪನ್ನು ಅವರ ಮೂಲ ವೀಡಿಯೋಗಳಿಗೆ ಹೊಂದಾಣಿಕೆಯಾಗುತ್ತದೆ. ಆದರೆ ವೈರಲ್ ವೀಡಿಯೋದಲ್ಲಿ ನಟರ ಆಡಿಯೊಗೆ ವಾಯ್ಸ್‌ಓವರ್‌ಗಳನ್ನು ಆವರಿಸಲಾಗಿದೆ.

ತೀರ್ಪು
ನಟರ ಸಂಬಂಧವಿಲ್ಲದ ವೀಡಿಯೋಗಳ ಕ್ಲಿಪ್‌ಗಳನ್ನು ಅವರು ಪಾಕಿಸ್ತಾನದ ಮಾಜಿ ಪ್ರಧಾನಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಲು ಎಡಿಟ್ ಮಾಡಿದ ವಾಯ್ಸ್‌ಓವರ್‌ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಅವರು ಸಾರ್ವಜನಿಕವಾಗಿ ಖಾನ್ ಅವರನ್ನು ಬೆಂಬಲಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ. 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.