ಕರ್ನಾಟಕದ ಆಭರಣ ಅಂಗಡಿಯಲ್ಲಿ ಸಂಭವಿಸಿದ ಎಸಿ ಸ್ಫೋಟವನ್ನು 'ಭಯೋತ್ಪಾದನಾ ದಾಳಿ' ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಮೇ 8 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕರ್ನಾಟಕದ ಆಭರಣ ಅಂಗಡಿಯಲ್ಲಿ ಸಂಭವಿಸಿದ ಎಸಿ ಸ್ಫೋಟವನ್ನು 'ಭಯೋತ್ಪಾದನಾ ದಾಳಿ' ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಎಸಿ ಘಟಕದಲ್ಲಿ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ಬಳ್ಳಾರಿ ಪೊಲೀಸರು ಖಚಿತಪಡಿಸಿದ್ದಾರೆ. ಅದು ‘ಭಯೋತ್ಪಾದನಾ ದಾಳಿ’ ಅಥವಾ ಐಇಡಿ ಸ್ಫೋಟವಲ್ಲ.

ಕ್ಲೈಮ್ ಐಡಿ d20ab017

ಹೇಳಿಕೆ ಏನು? 

(ಪ್ರಚೋದಕ ಎಚ್ಚರಿಕೆ: ಈ ಕಥೆಯು ಕೆಲವು ದುಃಖಕರ ದೃಶ್ಯಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)

ಆಭರಣದ ಅಂಗಡಿಯಲ್ಲಿ ಹೊಗೆ ಮತ್ತು ಗಾಯಗೊಂಡ ವ್ಯಕ್ತಿಯನ್ನು ಜನರು ಹೊರಗೆ ತೆಗೆದುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಕರ್ನಾಟಕದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಕೆಲವು ದಿನಗಳ ನಂತರವೇ (ಮಾರ್ಚ್ ೧ ರಂದು, ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು, ಕನಿಷ್ಠ ೧೦ ಜನರು ಗಾಯಗೊಂಡಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಸ್ತುತ ಸ್ಫೋಟದ ತನಿಖೆ ನಡೆಸುತ್ತಿದೆ.), ಬಳ್ಳಾರಿ ಜಿಲ್ಲೆಯ ಅಂಗಡಿಯೊಂದರಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಪೋಟಗೊಂಡಿದೆ  ಎಂದು ಹೇಳಲಾಗುತ್ತಿದೆ. 

ಒಬ್ಬ ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಈ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡಿದ್ದಾರೆ ಮತ್ತು ಅದರ ಶೀರ್ಷಿಕೆ, “ಬ್ರೇಕಿಂಗ್ ಅಲರ್ಟ್ಸ್ ಭಾರತ್: ಕರ್ನಾಟಕದ ಬಳ್ಳಾರಿಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್‌ನ ಶೋರೂಮ್‌ನಲ್ಲಿ ಐಇಡಿ ಸ್ಫೋಟ ಸಂಭವಿಸಿದೆ. ಭೀಕರ ಸ್ಫೋಟದಿಂದಾಗಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಇಸ್ಲಾಮಿಸ್ಟ್ ದಾಳಿಯೇ? (sic).” ಇದೇ ರೀತಿಯ ಹೇಳಿಕೆಯೊಂದಿಗೆ ಹಂಚಿಕೊಂಡ ಇತರ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಮಾಧ್ಯಮ ವರದಿಗಳು, ಪೊಲೀಸ್ ಹೇಳಿಕೆಗಳು ಮತ್ತು ಘಟನೆಯ ಬಗ್ಗೆ ದಾಖಲಿಸಲಾದ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ಪ್ರಕಾರ, ಹೊಗೆಯು ಐಇಡಿ ಸ್ಫೋಟದ ಪರಿಣಾಮವಲ್ಲ ಆದರೆ ಅಂಗಡಿಯಲ್ಲಿನ  ಏರ್ ಕಂಡಿಷನರ್‌ (ಎಸಿ) ಘಟಕದಿಂದ ಸ್ಫೋಟವಾಗಿದೆ.

ನಾವು ಕಂಡುಕೊಂಡಿದ್ದು ಏನು?

ಗೂಗಲ್ ಹುಡುಕಾಟ ನಡೆಸಿದಾಗ ಮೇ ೩ ರಂದು ಇಂಡಿಯಾ ಟುಡೇ ಪ್ರಕಟಿಸಿದ ವರದಿಯು ನಮಗೆ ಕಂಡುಬಂದಿತು, ಬಳ್ಳಾರಿಯ ಬ್ರೂಸ್‌ಪೀಟ್ ಪ್ರದೇಶದಲ್ಲಿ ಕಲ್ಯಾಣ್ ಜ್ಯುವೆಲರ್ಸ್ ಹೆಸರಿನ ಅಂಗಡಿಯ ಎಸಿ ಒಂದರಲ್ಲಿ ಸ್ಫೋಟ ಸಂಭವಿಸಿ ಆವರಣದಲ್ಲಿದ್ದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿತ್ತು.

ಸಂಜೆ ೬ ಗಂಟೆ ಸುಮಾರು ಸಂಭವಿಸಿದ ಸ್ಫೋಟದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಕನ್ನಡ ಪ್ರಭ, ಹಿಂದೂಸ್ತಾನ್ ಟೈಮ್ಸ್ ಮತ್ತು ಏಷ್ಯಾನೆಟ್ ನ್ಯೂಸ್‌ ನಂತಹ ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ. ಮೇ ೨ ರಂದು ಅಂಗಡಿಯ ಕೇಂದ್ರ ಎಸಿ ವ್ಯವಸ್ಥೆಯಲ್ಲಿ ಕೆಲವು ರಾಸಾಯನಿಕಗಳನ್ನು ಮರುಪೂರಣ ಮಾಡುವಾಗ ಅಸಮರ್ಪಕ ಕಾರ್ಯದಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಬಳ್ಳಾರಿಯ ಪೊಲೀಸ್ ಅಧ್ಯಕ್ಷರು ಎಕ್ಸ್‌ನಲ್ಲಿ ಸ್ಪಷ್ಟೀಕರಣವನ್ನು (ಆರ್ಕೈವ್ ಇಲ್ಲಿದೆ) ನೀಡಿದ್ದು ಅವರು ಹೀಗೆ ತಿಳಿಸಿದ್ದಾರೆ, “ಮೇ ೨ ರಂದು ಬಳ್ಳಾರಿಯ ಬ್ರೂಸ್‌ಪೇಟೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಅಂಗಡಿಯಲ್ಲಿ  ಎಸಿ ದುರಸ್ತಿ ವೇಳೆ ಅಪಘಾತ ಸಂಭವಿಸಿದೆ. ಐವರು ಗಾಯಗೊಂಡಿದ್ದಾರೆ. ನಿರ್ಲಕ್ಷ್ಯಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಈ ವಿಷಯದಲ್ಲಿ ತಪ್ಪು ಮಾಹಿತಿಯನ್ನು ಹರಡುವ ಜನರ ಮೇಲೆ ಕಾನೂನು ಕ್ರಮವನ್ನು ಪ್ರಾರಂಭಿಸಲಾಗುವುದು" ಎಂದು ಎಚ್ಚರಿಸಲಾಗಿದೆ. (sic)

ಬಳ್ಳಾರಿ ಪೊಲೀಸ್ ಅವರ ಪೋಷ್ಟ್ ಮಾಡಿದ ಸ್ಪಷ್ಟಿಕರಣದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಲಾಜಿಕಲಿ ಫ್ಯಾಕ್ಟ್ಸ್ ಬ್ರೂಸ್‌ಪೇಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂಎನ್ ಸಿಂಧೂರ್ ಅವರೊಂದಿಗೆ ಮಾತನಾಡಿ, “ಅಂಗಡಿಯಲ್ಲಿ ಕೇಂದ್ರೀಯ ಎಸಿ ವ್ಯವಸ್ಥೆಯನ್ನು ದುರಸ್ತಿ ಮಾಡಲಾಗುತ್ತಿತ್ತು ಮತ್ತು ತಂತ್ರಜ್ಞರು ಗ್ಯಾಸ್ ರೀಫಿಲ್ ಮಾಡಿ ಅದರ ವಾಲ್ವ್ ಅನ್ನು ಸರಿಯಾಗಿ ಮುಚ್ಚಿಲ್ಲದ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಪ್ರಸ್ತುತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ," ಎಂದು ಅವರು ಹೇಳಿದರು.

ಘಟನೆಯ ನಂತರ ದಾಖಲಿಸಲಾದ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಾವು ಪರಿಶೀಲಿಸಿದ್ದೇವೆ, ಕಲ್ಯಾಣ್ ಜ್ಯುವೆಲರ್ಸ್ ಅಂಗಡಿಯ ಮ್ಯಾನೇಜರ್, ಎಸಿ ಕಂಪನಿ ಬ್ಲೂ ಸ್ಟಾರ್ ಮತ್ತು ಇನ್ನೊಬ್ಬ ನಿರ್ವಹಣಾ ಕೆಲಸಗಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ದುರಸ್ತಿ ಕಾರ್ಯದ ವೇಳೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್‌ಗಳ ಅಡಿಯಲ್ಲಿ ಯಂತ್ರೋಪಕರಣಗಳ ನಿರ್ಲಕ್ಷ್ಯದ ನಡವಳಿಕೆಯನ್ನು, ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಮತ್ತು ಗಂಭೀರ ಗಾಯಗಳನ್ನು ಉಂಟುಮಾಡಿದಾಗ  ದಂಡ ವಿಧಿಸುವ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸೂಚಿಸಲಾಗಿದೆ. 

ತೀರ್ಪು

ಕರ್ನಾಟಕದ ಆಭರಣ ಅಂಗಡಿಯೊಂದರಲ್ಲಿ ಎಸಿ ಘಟಕದಲ್ಲಿ ಸಂಭವಿಸಿದ ಸ್ಫೋಟವನ್ನು "ಭಯೋತ್ಪಾದಕ ದಾಳಿ" ಎಂದು ಆರೋಪಿಸಿ ಐಇಡಿ ಸ್ಫೋಟ ಎಂದು ತಪ್ಪಾಗಿ ಪ್ರಸ್ತುತಪಡಿಸಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.