ರಾಹುಲ್ ಗಾಂಧಿ ಅವರು ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ ಎಂದು ತೋರಿಸಲು ಕ್ರಾಪ್ ಮಾಡಿದ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಅಕ್ಟೋಬರ್ 6 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ರಾಹುಲ್ ಗಾಂಧಿ ಅವರು ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ ಎಂದು ತೋರಿಸಲು ಕ್ರಾಪ್ ಮಾಡಿದ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ರಾಹುಲ್ ಗಾಂಧಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ದೀರ್ಘಾವಧಿಯ ವೀಡಿಯೋದಲ್ಲಿ ರಾಹುಲ್ ಗಾಂಧಿಯವರು ನಿಜವಾಗಿಯೂ ಪ್ರಧಾನಿಯವರನ್ನು ಗೇಲಿ ಮಾಡುತ್ತಾರೆ. ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ.

ಕ್ಲೈಮ್ ಐಡಿ 969d426b

ಇಲ್ಲಿನ ಹೇಳಿಕೆಯೇನು?
ಕಾಶ್ಮೀರದ ಜನರು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು ನೋಡಿದ ನಂತರ ಭಾರತದ ರಾಜಕಾರಣಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರನ್ನು ಹೊಗಳಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ೫೪ ಸೆಕೆಂಡ್‌ಗಳ ವೈರಲ್ ವೀಡಿಯೋದಲ್ಲಿ ಕಾಂಗ್ರೆಸ್ ನಾಯಕ ಗಾಂಧಿ, "ಭಾರತದ ಅತ್ಯಂತ ಭಯೋತ್ಪಾದಕ ಮುತ್ತಿಗೆ ಜಿಲ್ಲೆಯಲ್ಲಿ, ಎಲ್ಲಿ ನೋಡಿದರೂ ತ್ರಿವರ್ಣ - ತ್ರಿವರ್ಣ, ತ್ರಿವರ್ಣ. ಎಲ್ಲೆಲ್ಲೂ ತ್ರಿವರ್ಣ. ತ್ರಿವರ್ಣ ಧ್ವಜವನ್ನು ಯಾರು ಎತ್ತಿದರು? ನಮ್ಮೊಂದಿಗೆ ಕೇವಲ ೧೨೫ ಪ್ರಯಾಣಿಕರಿದ್ದರು. ತ್ರಿವರ್ಣ ಧ್ವಜವನ್ನು ಹಾರಿಸಿದ್ದು ಕಾಶ್ಮೀರದ ಜನರು, ಒಬ್ಬ ವ್ಯಕ್ತಿ ಮಾತ್ರವಲ್ಲ, ಸಾವಿರಾರು ಜನರು ಧ್ವಜಗಳನ್ನು ಹಾರಿಸಿದರು, ಇಡೀ ಕಾಶ್ಮೀರಕ್ಕೆ ಒಂದೇ ಕಥೆ. ಅನಂತನಾಗ್, ಪುಲ್ವಾಮಾ - ಭಯೋತ್ಪಾದಕ-ಪೀಡಿತ ಜಿಲ್ಲೆಗಳು ಎಂದು ಕರೆಯಲ್ಪಡುವ - ಪ್ರತಿ ಜಿಲ್ಲೆಯಲ್ಲಿ, ಪರ್ವತಗಳು, ರಸ್ತೆಗಳಲ್ಲಿ , ಮುಂದೆ ಮತ್ತು ಹಿಂದೆ, ನೀವು ತ್ರಿವರ್ಣ ಧ್ವಜವನ್ನು ನೋಡಬಹುದು. ಯಾರ ಕೈಯಲ್ಲಿ? ಕಾಶ್ಮೀರಿ ಯುವಕರ ಕೈಯಲ್ಲಿ (ಕನ್ನಡಕ್ಕೆ ಅನುವಾದಿಸಲಾಗಿದೆ)," ಎಂದು ಹೇಳುವುದನ್ನು ತೋರಿಸುತ್ತದೆ.

ವೈರಲ್ ಕ್ಲಿಪ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಮೇಲಿನ ಭಾಗವು ಗಾಂಧಿ ಮಾತನಾಡುತ್ತಿರುವುದನ್ನು ತೋರಿಸುತ್ತದೆ, ಮತ್ತು ಕೆಳಭಾಗದಲ್ಲಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಫೋನ್ ನೋಡುತ್ತಾ ನಗುತ್ತಿರುವ ಚಿತ್ರವನ್ನು ತೋರಿಸುತ್ತದೆ. "ರಾಹುಲ್ ಗಾಂಧಿ ಕೂಡ ಪ್ರಧಾನಿ ಮೋದಿಯವರ ನೀತಿಗಳನ್ನು ಶ್ಲಾಘಿಸುತ್ತಿದ್ದಾರೆ. ಭಯೋತ್ಪಾದನೆ ಪೀಡಿತ ಪ್ರದೇಶಗಳಲ್ಲಿಯೂ ತ್ರಿವರ್ಣ ಧ್ವಜ ಹಾರಾಡುತ್ತಿದೆ" ಎಂಬ ಶೀರ್ಷಿಕೆಯೊಂದಿಗೆ ಹಲವಾರು ಬಳಕೆದಾರರು ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಅಂತಹ ಒಂದು ಪೋಷ್ಟ್ ೨೭೧ ಲೈಕ್ ಗಳು ಮತ್ತು ೨೫೯ ರೀಪೋಷ್ಟ್ ಗಳನ್ನು ಗಳಿಸಿದೆ. ವೈರಲ್ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು (ಮೂಲ: ಏಕ್ಸ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ಫೆಬ್ರವರಿಯಲ್ಲಿ ರಾಯ್‌ಪುರದಲ್ಲಿ ನಡೆದ ರಾಲಿಯಲ್ಲಿ ರಾಹುಲ್ ಗಾಂಧಿ ಮಾತನಾಡುವ ಎಡಿಟ್ ಮಾಡಿದ ವೀಡಿಯೋವನ್ನು ತಪ್ಪು ಹೇಳಿಕೆಗಳೊಂದಿಗೆ ಇಲ್ಲಿ ಹಂಚಿಕೊಳ್ಳಲಾಗುತ್ತಿದೆ.

ನಾವು ಕಂಡುಹಿಡಿದದ್ದೇನು?
ವೈರಲ್ ವೀಡಿಯೋವಿನ ಕೀಫ್ರೇಮ್‌ಗ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಕ್ಲಿಪ್ ಅನ್ನು ಫೆಬ್ರವರಿ ೨೬ ರಂದು ರಾಹುಲ್ ಗಾಂಧಿಯವರು ಮಾಡಿದ ಭಾಷಣದಿಂದ ತೆಗೆದುಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ೫೦ ನಿಮಿಷಗಳಿಗಿಂತ ಹೆಚ್ಚು ಕಾಲ ನಡೆದ ಮೂಲ ಭಾಷಣವನ್ನು ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗಿದೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ ಫೆಬ್ರವರಿ ೨೪ ಮತ್ತು ಫೆಬ್ರವರಿ ೨೬ ರ ನಡುವೆ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ೮೫ ನೇ ಸರ್ವಸದಸ್ಯ ಅಧಿವೇಶನವನ್ನು ಕಾಂಗ್ರೆಸ್ ನಾಯಕರು ಉದ್ದೇಶಿಸಿ ಮಾತನಾಡುತ್ತಿರುವುದು ನಮಗೆ ಕಂಡುಬಂದಿದೆ. ಪ್ರಶ್ನೆಯಲ್ಲಿರುವ ವೈರಲ್ ಕ್ಲಿಪ್ ಅನ್ನು ೨೯:೫೦-ನಿಮಿಷಗಳ ಮಾರ್ಕ್‌ನಿಂದ ೩೦:೫೩-ನಿಮಿಷಗಳ ಮಾರ್ಕ್‌ ವರೆಗೆ ಕ್ರಾಪ್ ಮಾಡಲಾಗಿದೆ ಮತ್ತು ಕಾಶ್ಮೀರದಲ್ಲಿ ಜನರು ಭಾರತೀಯ ತ್ರಿವರ್ಣ ಧ್ವಜವನ್ನು ಬೀಸುತ್ತಿರುವುದನ್ನು ನೋಡಿದ ನಂತರ ಗಾಂಧಿಯವರು ಮೋದಿ ಮತ್ತು ಬಿಜೆಪಿಯನ್ನು ಹೊಗಳಿದರು ಎಂದು ಹೇಳಲು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ವಾಸ್ತವವಾಗಿ, ವೈರಲ್ ವೀಡಿಯೋದಲ್ಲಿ ಸೆರೆಹಿಡಿಯಲಾದ ಹೇಳಿಕೆಗಳ ನಂತರ ಕಾಂಗ್ರೆಸ್ ನಾಯಕರು ತಮ್ಮ ಭಾಷಣದಲ್ಲಿ ಮೋದಿಯವರನ್ನು ಗೇಲಿ ಮಾಡಿದರು. "ನಾನು ಸಂಸತ್ತಿನಲ್ಲಿ ಪ್ರಧಾನಿ ಭಾಷಣವನ್ನು ಕೇಳಿದೆ. ಅವರು ಲಾಲ್ ಚೌಕ್ (ಶ್ರೀನಗರ, ಕಾಶ್ಮೀರ) ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು ಎಂದು ಹೇಳಿದರು. ನಾನು ಕೇಳುತ್ತಿದ್ದೇನೆ, ಭಾರತದ ಪ್ರಧಾನಿಗೆ ಅರ್ಥವಾಗಲಿಲ್ಲ ಎಂದು ನಾನು ಭಾವಿಸುತ್ತೇನೆ. ನರೇಂದ್ರ ಮೋದಿ ಅವರೊಂದಿಗೆ ೧೫ರಿಂದ ೨೦ ಬಿಜೆಪಿ ನಾಯಕರು ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಭಾರತ್ ಜೋಡೋ ಯಾತ್ರೆಯು ಕಾಶ್ಮೀರದ ಲಕ್ಷಾಂತರ ಯುವಕರ ಕೈಗಳಿಂದ ಧ್ವಜಾರೋಹಣಕ್ಕೆ ಕಾರಣವಾಯಿತು. ಪ್ರಧಾನಿಗೆ ವ್ಯತ್ಯಾಸ ಅರ್ಥವಾಗಲಿಲ್ಲ. ನಾವು ಹಿಂದೂಸ್ತಾನದ ಪ್ರೀತಿಯನ್ನು, ಮತ್ತು ಹುಂದುಸ್ತಾನದ ತ್ರಿವರ್ಣ ಧ್ವಜದ ಪ್ರೀತಿಯನ್ನು ಜಮ್ಮು ಮತ್ತು ಕಾಶ್ಮೀರದ ಯುವಕರಲ್ಲಿ ಹುಟ್ಟುಹಾಕಿದ್ದೇವೆ. ನೀವು ಜಮ್ಮು ಮತ್ತು ಕಾಶ್ಮೀರದ ಯುವಕರಿಂದ ತ್ರಿವರ್ಣ ಧ್ವಜದ ಮೇಲಿನ ಪ್ರೀತಿಯನ್ನು ಕಿತ್ತುಕೊಂಡಿದ್ದೀರಿ. ಅದು ನಿಮ್ಮ ಮತ್ತು ನಮ್ಮ ನಡುವಿನ ವ್ಯತ್ಯಾಸವಾಗಿದೆ (ಕನ್ನಡಕ್ಕೆ ಅನುವಾದಿಸಲಾಗಿದೆ).” ಎಂದು ಹೇಳಿದರು.

ರಾಹುಲ್ ಗಾಂಧಿಯವರ ಭಾಷಣದ ಈ ಭಾಗವನ್ನು ಫೆಬ್ರವರಿ ೨೬ ರಂದು ಕಾಂಗ್ರೆಸ್‌ನ ಅಧಿಕೃತ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.

ಗಾಂಧಿಯವರ ಟೀಕೆಗಳ ಸಂದರ್ಭ ಏನಾಗಿತ್ತು?
ಫೆಬ್ರವರಿ ೨೬ ರ ಇಂಡಿಯಾ ಟುಡೇ ವರದಿಯ ಪ್ರಕಾರ, ಛತ್ತೀಸ್‌ಗಢದ ರಾಲಿಯಲ್ಲಿ, ಫೆಬ್ರವರಿ ೮ ರಂದು ಭಾರತ್ ಜೋಡೋ ಯಾತ್ರೆಯನ್ನು ಪೂರ್ಣಗೊಳಿಸಿದ ಕಾಂಗ್ರೆಸ್ ನಾಯಕನ ಮೇಲೆ ಅದೇ ದಿನ ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರು ಸೂಕ್ಷ್ಮವಾಗಿ ಗೇಲಿ ಮಾಡಿದ ನಂತರ ರಾಹುಲ್ ಗಾಂಧಿಯವರು ಮೋದಿಯವರನ್ನು ಕಟುವಾಗಿ ಟೀಕಿಸಿದರು. ೧೯೯೧ ರ ಏಕತಾ ಯಾತ್ರೆಯನ್ನು ನೆನಪಿಸಿಕೊಂಡ ಮೋದಿ, "ನಾನು ಕಳೆದ ಶತಮಾನದ ಬಗ್ಗೆ ಮಾತನಾಡುತ್ತಿದ್ದೇನೆ, ನಾನು ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದೇನೆ" ಎಂದು ಹೇಳಿದರು. ಏಕತಾ ಯಾತ್ರೆ ೧೯೯೧ ರಲ್ಲಿ ಬಿಜೆಪಿ ಆಯೋಜಿಸಿದ್ದ ರಾಜಕೀಯ ಮೆರವಣಿಗೆಯಾಗಿತ್ತು.

ನ್ಯೂಸ್ ಔಟ್ಲೆಟ್ ಹಿಂದೂಸ್ತಾನ್ ಟೈಮ್ಸ್ ಕೂಡ ಇದೇ ರೀತಿಯ ವಿವರಗಳನ್ನು ವರದಿ ಮಾಡಿದೆ ಮತ್ತು "ಮೋದಿ ಅವರು ಧ್ವಜಾರೋಹಣ ಮಾಡುವುದನ್ನು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿಯವರು ಹೋಲಿಸಿದ್ದಾರೆ. ಅಲ್ಲಿ ಅವರು ಕಾರ್ಯಕ್ರಮದ ಸಮಯದಲ್ಲಿ ಲಕ್ಷಾಂತರ ಯುವಕರು ತಮ್ಮೊಂದಿಗೆ ಸೇರಿಕೊಂಡರು ಎಂದು ಹೇಳಿದರು," ಎಂದು ವರದಿ ಮಾಡಿದೆ.

ತೀರ್ಪು 
ಕಾಶ್ಮೀರದಲ್ಲಿ ಭಾರತದ ಧ್ವಜವನ್ನು ಹಾರಿಸಿದಕ್ಕಾಗಿ ರಾಹುಲ್ ಗಾಂಧಿಯವರು ಮೋದಿ ಮತ್ತು ಬಿಜೆಪಿ ನಾಯಕರನ್ನು ಹೊಗಳುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೋವನ್ನು ತಪ್ಪಾದ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಛತ್ತೀಸ್‌ಗಢದಲ್ಲಿ ಗಾಂಧಿಯವರ ಭಾಷಣದ ಎಡಿಟ್ ಮಾಡಿದ ಆವೃತ್ತಿಯನ್ನು ತಪ್ಪು ಕೋನದೊಂದಿಗೆ ಪ್ರಸಾರ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.