ಆಂಧ್ರದಲ್ಲಿ ಮಾಜಿ ಗ್ರಾಮ ಕಂದಾಯ ಸಹಾಯಕರ ಸಾವನ್ನು ರೈತ ಆತ್ಮಹತ್ಯೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ರಜಿನಿ ಕೆ.ಜಿ
ಜುಲೈ 24 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಂಧ್ರದಲ್ಲಿ ಮಾಜಿ ಗ್ರಾಮ ಕಂದಾಯ ಸಹಾಯಕರ ಸಾವನ್ನು ರೈತ ಆತ್ಮಹತ್ಯೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೃತರನ್ನು ಮಾಜಿ ಗ್ರಾಮ ಕಂದಾಯ ಸಹಾಯಕ ಎಂದು ಪೊಲೀಸರು ಗುರುತಿಸಿದ್ದಾರೆ. ಮೃತರು ರೈತ ಎಂಬುದನ್ನು ಕುಟುಂಬದ ಸದಸ್ಯರೂಬ್ಬರು ನಿರಾಕರಿಸಿದ್ದರು.

ಕ್ಲೈಮ್ ಐಡಿ 1bde7034

(ಪ್ರಚೋದಕ ಎಚ್ಚರಿಕೆ: ಈ ಕಥೆಯು ಆತ್ಮಹತ್ಯೆಯ ಉಲ್ಲೇಖಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)

ಸಂದರ್ಭ
ಜುಲೈ ೧೯ ರಂದು, ಟ್ವಿಟರ್ ಬಳಕೆದಾರರಾದ ಡಾ. ಸಂದೀಪ್ ಪಂಚಕರ್ಲಾ ಅವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ, ಸರ್ಕಾರಿ ಕಚೇರಿಯಲ್ಲಿ ರೈತ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಭಾವಚಿತ್ರವು ವ್ಯಕ್ತಿ ಶವವಾಗಿ ಪತ್ತೆಯಾದ ಕೋಣೆಯಲ್ಲಿ ದೊಡ್ಡದಾಗಿ ಕಾಣಿಸಿಕೊಂಡಿದೆ. ತಮ್ಮ ಟ್ವಿಟ್ಟರ್ ಬಯೋ ಪ್ರಕಾರ ಪಂಚಕರ್ಲಾ ಅವರು, ಜನಸೇನಾ ಪಕ್ಷದ (ತೆಲುಗು ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಸ್ಥಾಪಿಸಿದ) ಭೀಮಿಲಿ ಕ್ಷೇತ್ರದ ಉಸ್ತುವಾರಿಯಾಗಿರುವ ತೆಲುಗು ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದನ್ನು ಕನ್ನಡಕ್ಕೆ ಅನುವಾದಿಸಲಾಗಿದೆ - “ಇದು ಜಗನ್ ಅರಾಜಕ ಆಡಳಿತಕ್ಕೆ ಸಾಕ್ಷಿಯಾಗಿದೆ (ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ). ವೈಸಿಪಿ ನಾಯಕರ ಅರಾಜಕ ಆಡಳಿತಕ್ಕೆ ರೈತನೊಬ್ಬ ಬಲಿಯಾಗಿದ್ದಾನೆ. ಗೋವಿಂದಪ್ಪ ಎಂಬ ರೈತ ಸರ್ಕಾರಿ ಕಚೇರಿಯಲ್ಲಿ (ಆತ್ಮಹತ್ಯೆ) ಸಾವನ್ನಪ್ಪಿದ್ದಾನೆ.”

ಆಂಧ್ರಪ್ರದೇಶ ಸರ್ಕಾರವನ್ನು ಗುರಿಯಾಗಿಸಿಕೊಂಡು ಪಂಚಕರ್ಲಾ ಅವರ ಟ್ವೀಟ್ ಪ್ರಕಟಿಸುವ ಸಮಯದಲ್ಲಿ ೨,೧೫೦ ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿದೆ ಮತ್ತು ೪,೪೪೦ ಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ. 

ಜಗನ್ ನೇತೃತ್ವದ ಸರ್ಕಾರವು ರೈತ ಸಮುದಾಯದ ಬಗ್ಗೆ ನಿರಾಸಕ್ತಿ ಹೊಂದಿದೆ ಎಂದು ಹಲವಾರು ಬಳಕೆದಾರರು ಟೀಕಿಸಿದ್ದರು.

ಆದರೆ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ರೈತ ಅಲ್ಲ.

ವಾಸ್ತವವಾಗಿ
ಸ್ಥಳೀಯ ತೆಲುಗು ಪತ್ರಿಕೆ ದಿಶಾ ಡೈಲಿ ಪ್ರಕಾರ, ೭೨ ವರ್ಷದ ವ್ಯಕ್ತಿಯೊಬ್ಬರು ಜುಲೈ ೧೪ ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಪಲ್ಲಿಯಲ್ಲಿರುವ ಮಂಡಲ್ ಕಂದಾಯ ಕಚೇರಿಯಲ್ಲಿ (ಎಂ.ಆರ್.ಓ) ಆತ್ಮಹತ್ಯೆ ಮಾಡಿಕೊಂಡರು.

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಫೋಟೋ ೭೨ ವರ್ಷದ ವ್ಯಕ್ತಿಯದ್ದು ಎಂದು ಗುಡುಪಲ್ಲಿ ಪೊಲೀಸರು ಲಾಜಿಕಲಿ ಫ್ಯಾಕ್ಟ್ಸ್‌ಗೆ ಖಚಿತಪಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಅವರು, “ಆತ್ಮಹತ್ಯೆಯಿಂದ ಸಾವನ್ನಪ್ಪಿದ ವ್ಯಕ್ತಿಯನ್ನು ಗುರುತಿಸಲಾಗಿದೆ. ಅವರು ಒಮ್ಮೆ ಗ್ರಾಮ ಕಂದಾಯ ಸಹಾಯಕರಾಗಿ (ವಿಆರ್‌ಎ) ಕೆಲಸ ಮಾಡಿದ್ದರು. ಅವರು ತಮ್ಮ ಪತ್ನಿ ಮತ್ತು ಜೈವಿಕ ಕುಟುಂಬದಿಂದ ದೂರವಾಗಿದ್ದರು. ಗುಡುಪಲ್ಲಿ ಮಂಡಲದಲ್ಲಿರುವ ಎಂಆರ್‌ಒ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತನ ಕೃತ್ಯದ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ, ಮತ್ತು ನಾವು ಈ ವಿಷಯದಲ್ಲಿ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿದ್ದೇವೆ.”

 ಲಾಜಿಕಲಿ ಫ್ಯಾಕ್ಟ್ ಮೃತ ವ್ಯಕ್ತಿಯ ದತ್ತುಪುತ್ರನನ್ನು ಸಂಪರ್ಕಿಸಿದ್ದು, ಅವರು ತಮ್ಮ ಕುಟುಂಬ ಕೃಷಿಯಲ್ಲಿ ತೊಡಗಿಲ್ಲ ಮತ್ತು ಅವರು ಯಾವುದೇ ಜಮೀನನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಚಿತ್ರವು ಅವರ ತಂದೆಯದು ಎಂದು ಅವರು ಖಚಿತಪಡಿಸಿದ್ದಾರೆ. “ನನ್ನ ತಂದೆ ರೈತ ಎಂಬ ವದಂತಿಗಳಿವೆ, ಆದರೆ ಅವರು ವಿಆರ್‌ಎ ಆಗಿದ್ದರು ; ನಾವು ಯಾವುದೇ ರೀತಿಯಲ್ಲಿ ಕೃಷಿಗೆ ಸಂಬಂಧಿಸಿಲ್ಲ,”ಎಂದು ಅವರು ಹೇಳಿದರು. "ಸುಮಾರು ಐದು ವರ್ಷಗಳ ಹಿಂದೆ, ನನ್ನ ದತ್ತು ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು, ಮತ್ತು ಅಧಿಕಾರಿಗಳಿಗೆ ವಿನಂತಿಸಿ ಅವರ ಆರೋಗ್ಯ ಪ್ರಮಾಣಪತ್ರವನ್ನು ತೋರಿಸಿದ ನಂತರ, ನಾನು ತಳ್ಳಿಅಗ್ರಹಾರಂ ಗ್ರಾಮಕ್ಕೆ ಗ್ರಾಮ ಕಂದಾಯ ಸಹಾಯಕನಾಗಿ ಅವರ ಕೆಲಸವನ್ನು ಮಾಡುತ್ತಿದ್ದೇನೆ" ಎಂದು ಅವರು ಹೇಳಿದರು.

ಮಗ ನೀಡಿದ ಪೊಲೀಸ್ ದೂರು ಮತ್ತು ಗುಡುಪಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಅನ್ನು ಲಾಜಿಕಲಿ ಫ್ಯಾಕ್ಟ್ಸ್ ಕೂಡ ಪರಿಶೀಲಿಸಿದೆ. ಎಫ್‌ಐಆರ್ ಹಾಗೂ ದೂರಿನಲ್ಲಿ ಮೃತ ರೈತ ಎಂದು ನಮೂದಿಸಿಲ್ಲ.

ತೀರ್ಪು
ಗುಡುಪಲ್ಲಿ ಎಂಆರ್‌ಒ ಕಚೇರಿಯಲ್ಲಿ ಶವವಾಗಿ ಪತ್ತೆಯಾದ ವ್ಯಕ್ತಿ ಮಾಜಿ ಗ್ರಾಮ ಕಂದಾಯ ಸಹಾಯಕ, ರೈತ ಅಲ್ಲ. ಆಂಧ್ರಪ್ರದೇಶದ ಆಡಳಿತಾರೂಢ ಸರ್ಕಾರವನ್ನು ಗುರಿಯಾಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತನ ಫೋಟೋ ಎಂದು ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ, ನಾವು ಈ ಹೇಳಿಕೆ ತಪ್ಪು ಎಂದು ರೇಟ್ ಮಾಡುತ್ತೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.