ರಾಹುಲ್ ಗಾಂಧಿಯನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ 'ರಾಹುಲ್ ರಾಜೀವ್ ಫಿರೋಜ್' ಎಂದು ಗುರುತಿಸಲಾಗಿದೆ ಎಂದು ಎಡಿಟ್ ಮಾಡಿರುವ ಚಿತ್ರ ತೋರುತ್ತದೆ

ಮೂಲಕ: ರಜಿನಿ ಕೆ.ಜಿ
ಜುಲೈ 14 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ರಾಹುಲ್ ಗಾಂಧಿಯನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ 'ರಾಹುಲ್ ರಾಜೀವ್ ಫಿರೋಜ್' ಎಂದು ಗುರುತಿಸಲಾಗಿದೆ ಎಂದು ಎಡಿಟ್ ಮಾಡಿರುವ ಚಿತ್ರ ತೋರುತ್ತದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಫೋಟೋದಲ್ಲಿರುವ ನಾಮಫಲಕವನ್ನು ಎಡಿಟ್ ಮಾಡಲಾಗಿದೆ. ಸಮಾರಂಭದಲ್ಲಿ ಮೂಲ ನಾಮಫಲಕವನ್ನು ಖಾಲಿ ಬಿಡಲಾಗಿತ್ತು.

ಕ್ಲೈಮ್ ಐಡಿ e295aacc

ಸಂದರ್ಭ
ಜುಲೈ ೧೦ ರಂದು ಟ್ವಿಟ್ಟರ್ ಬಳಕೆದಾರರು ತತ್ವಮ್-ಆಸಿ (Tathvam-asi) ಅವರು ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಾಮಫಲಕ ಹೊಂದಿರುವ ಮೇಜಿನ ಹಿಂದೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಾಮಫಲಕದ ಮೇಲೆ ಹೀಗೆ ಬರೆಯಲಾಗಿತ್ತು, "ರಾಹುಲ್ ರಾಜೀವ್ ಫಿರೋಜ್, ಆಲೂಗಡ್ಡೆ ತಜ್ಞರಿಂದ ಚಿನ್ನ, ವಯನಾಡ್, ಕೇರಳ. (ಆಂಗ್ಲ ಭಾಷೆಯಿಂದ ಅನುವಾದಿಸಲಾಗಿದೆ)." ಬಳಕೆದಾರರು ಈ ಚಿತ್ರವನ್ನು “ಈ ನಾಮಫಲಕ ಸರಿಯಾಗಿದೆ. ಪ್ರತಿಯೊಬ್ಬರೂ ಅವರ ಮೂಲ ಹೆಸರನ್ನು ಬಳಸಬೇಕು. ರಾಹುಲ್ ರಾಜೀವ್ ಫಿರೋಜ್" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಬರೆಯುವ ಸಮಯದಲ್ಲಿ, ಟ್ವೀಟ್ ೯,೦೧೯ ವೀಕ್ಷಣೆಗಳು, ೩೬೨ ಟ್ವೀಟ್‌ಗಳು ಮತ್ತು ೯೭೨ ಲೈಕ್ ಗಳನ್ನು ಹೊಂದಿತ್ತು. ಇದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, "ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಸ್ಪಷ್ಟತೆ ಇದೆ, ನಾವು ಪಂಡಿತ್ ಮತ್ತು ಗಾಂಧಿ ಎಂದು ಹೇಳುತ್ತಿದ್ದೇವೆ (ಅನುವಾದಿಸಲಾಗಿದೆ)" ಎಂದು ತೆಲುಗಿನಲ್ಲಿ ಪೋಷ್ಟ್ ಮಾಡಲಾಗಿದೆ.

ಆದರೆ, ಈ ಹೇಳಿಕೆ ತಪ್ಪು.

ವಾಸ್ತವವಾಗಿ
ಚಿತ್ರವನ್ನು ಹತ್ತಿರದಿಂದ ನೋಡಿದಾಗ, ನಮಫಲಕದಲ್ಲಿರುವ ಪಠ್ಯವನ್ನು ಚಿತ್ರದ ಮೇಲೆ ಸೇರಿಸಿರಬಹುದು ಅಥವಾ ಎಡಿಟ್ ಮಾಡಿರಬಹುದು ಎಂದು ತಿಳಿದು ಬರುತ್ತದೆ, ಏಕೆಂದರೆ ಪದನಾಮವು ಗಾಂಧಿಯನ್ನು ಗೇಲಿ ಮಾಡುವಂತಿದೆ. ವೈರಲ್ ಫೋಟೋಗಾಗಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ವರ್ಷದ ಮಾರ್ಚ್ ೨ ರಂದು ಪ್ರಕಟಿಸಿದ ಎಬಿಪಿ (ABP) ಯ ಸುದ್ದಿ ವರದಿಯಲ್ಲಿ ಗಾಂಧಿಯವರ ಮೂಲ ಫೋಟೋ ಇರುವುದನ್ನು ಕಂಡುಕೊಂಡೆವು. ಲೇಖನವು ಮಾರ್ಚ್ ೨೦೨೩ ರಲ್ಲಿ ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಾಂಧಿಯವರ ಭಾಷಣವನ್ನು ವರದಿ ಮಾಡಿದೆ. ಈ ಫೋಟೋದಲ್ಲಿ, ಮೇಜಿನ ಮೇಲೆ ಇರಿಸಲಾದ ನಾಮಫಲಕವು ಖಾಲಿ ಇದೆ.

ಗಾಂಧಿಯವರ ಚಿತ್ರಗಳು ಮತ್ತು ಸಮ್ಮೇಳನದ ಪ್ರಸ್ತುತಿಯನ್ನು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ( Indian Overseas Congress) ಅಧ್ಯಕ್ಷರಾದ ಸ್ಯಾಮ್ ಪಿತ್ರೋಡಾ ಅವರು ಮಾರ್ಚ್ ೧, ೨೦೨೩ ರಂದು ಹಂಚಿಕೊಂಡಿದ್ದಾರೆ. "ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಹವರ್ತಿಯೊಬ್ಬರಿಗೆ "೨೧ ನೇ ಶತಮಾನದಲ್ಲಿ ಕೇಳಲು ಕಲಿಯುವುದು" ಎಂಬ ವಿಷಯದ ಕುರಿತು ರಾಹುಲ್ ಗಾಂಧಿಯವರು ಕೇಂಬ್ರಿಡ್ಜ್ ಎಂಬಿಎಯಲ್ಲಿ ನೀಡಿದ ಉತ್ತಮ ಉಪನ್ಯಾಸದ ಕೆಲವು ಚಿತ್ರಗಳು" ಎಂದು ಪಿತ್ರೋಡಾ ಅವರು ಬರೆದಿದ್ದಾರೆ. ಅವರು ಹಂಚಿಕೊಂಡ ಚಿತ್ರಗಳು, ನಾಮಫಲಕ ಖಾಲಿ ಇರುವುದು ಮತ್ತು ಯಾವುದೇ ಹೆಸರನ್ನು ಹೊಂದಿಲ್ಲ ಎಂದು ತೋರಿಸುತ್ತದೆ.

ಮುಂದಿನ ಟ್ವೀಟ್‌ನಲ್ಲಿ, ಪಿತ್ರೋಡಾ ಅವರು ಗಾಂಧಿ ನೀಡಿದ ಪ್ರಸ್ತುತಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಅಲ್ಲಿ "೨೧ ನೇ ಶತಮಾನದಲ್ಲಿ ಕೇಳಲು ಕಲಿಯುವುದು, ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ರಾಹುಲ್ ಗಾಂಧಿಯವರ ಉಪನ್ಯಾಸ" ಸ್ಲೈಡ್ ಒಂದು ತೋರುತ್ತದೆ. ಉಪನ್ಯಾಸದಲ್ಲಿ ಗಾಂಧಿ ತಮ್ಮ ಹೆಸರನ್ನು 'ರಾಹುಲ್ ಗಾಂಧಿ' ಎಂದು ಉಲ್ಲೇಖಿಸಿದ್ದಾರೆ ಎಂದು ಇದು ಸೂಚಿಸುತ್ತದೆ. 

ಈ ಕಾರ್ಯಕ್ರಮದ ನಿರಂತರ ಪ್ರಸಾರವನ್ನು ಮಾರ್ಚ್ ೩ ರಂದು ಪತ್ರಕರ್ತೆ ಬರ್ಖಾ ದತ್ ನೇತೃತ್ವದ ಸುದ್ದಿವಾಹಿನಿ ಮೊಜೊ ಸ್ಟೋರಿ (MoJo Story) ಅಪ್‌ಲೋಡ್ ಮಾಡಿದೆ. ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆತನ ಮುಂದೆ ಇಟ್ಟಿದ್ದ ನಾಮಫಲಕಗಳು ಖಾಲಿಯಾಗಿವೆ.

ತೀರ್ಪು
ರಾಹುಲ್ ಗಾಂಧಿಯವರ ನಾಮಫಲಕದಲ್ಲಿ "ರಾಹುಲ್ ರಾಜೀವ್ ಫಿರೋಜ್" ಎಂದು ಓದುವ ಚಿತ್ರವನ್ನು ಡಿಜಿಟಲಿ ಎಡಿಟ್ ಮಾಡಲಾಗಿದೆ. ಮೂಲ ಚಿತ್ರವು ಅವರ ಮುಂದೆ ಇಟ್ಟಿರುವ ನಾಮಫಲಕ ಖಾಲಿ ಇದೆ ಎಂದು ತೋರುತ್ತದೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.