ಗುಜರಾತ್ ಹೈಕೋರ್ಟ್ ಮೀಸಲಾತಿಯನ್ನು ರದ್ದುಗೊಳಿಸಿರುವುದಾಗಿ ಆದೇಶ ನೀಡಿಲ್ಲ

ಮೂಲಕ: ವಿವೇಕ್ ಜೆ
ಜುಲೈ 7 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಗುಜರಾತ್ ಹೈಕೋರ್ಟ್ ಮೀಸಲಾತಿಯನ್ನು ರದ್ದುಗೊಳಿಸಿರುವುದಾಗಿ ಆದೇಶ ನೀಡಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಇಲ್ಲಿ ಹಳೆಯ ತಪ್ಪು ಮಾಹಿತಿಯನ್ನು ಮತ್ತೆ ಹೊಸದಾಗಿ ಹಂಚಿಕೊಂಡಿದ್ದಾರೆ. ಮೀಸಲಾತಿಯನ್ನು ಭಾರತೀಯ ಸಂವಿಧಾನಕ್ಕೆ ಅನುಗುಣವಾಗಿ ಅನುಸರಿಸಲಾಗಿದೆ.

ಕ್ಲೈಮ್ ಐಡಿ 367c2e8a

ಸಂದರ್ಭ

ಗುಜರಾತ್ ಹೈಕೋರ್ಟ್ ತನ್ನ ಐತಿಹಾಸಿಕ ತೀರ್ಪು ಒಂದರ ಮೂಲಕ ರಾಜ್ಯದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಲು ಆದೇಶಿಸಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಹೇಳಿಕೊಂಡಿವೆ. ಕನ್ನಡದಲ್ಲಿ ಬರೆದ ಇಂತಹ ಪೋಷ್ಟ್ ಗಳು ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಕಂಡುಬಂದಿವೆ. ಅಂತಹ ಒಂದು ಪೋಸ್ಟ್ ಹೀಗಿದೆ, "ಗುಜರಾತ್ ಹೈಕೋರ್ಟ್‌ನಿಂದ ಐತಿಹಾಸಿಕ ತೀರ್ಪು: ಸರ್ಕಾರಿ ಉದ್ಯೋಗಗಳು ಮತ್ತು ಎಲ್ಲಾ ರೀತಿಯ ಶಿಕ್ಷಣದಲ್ಲಿ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದ ದೇಶದ ಮೊದಲ ರಾಜ್ಯ ಗುಜರಾತ್ ಆಗಿದೆ."

ಆದರೆ, ಈ ಪೋಷ್ಟ್ ಗಳಲ್ಲಿ ಹೇಳಿರುವಂತೆ ಗುಜರಾತ್ ಹೈಕೋರ್ಟ್‌ನಿಂದ ಅಂತಹ ಯಾವುದೇ ತೀರ್ಪು ನೀಡಲಾಗಿಲ್ಲ. 

ವಾಸ್ತವವಾಗಿ

ಗುಜರಾತ್ ಹೈಕೋರ್ಟಿನ ಯಾವುದೇ ಇತ್ತೀಚಿನ ತೀರ್ಪುಗಳಲ್ಲಿ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವುದನ್ನು ಪಟ್ಟಿ ಮಾಡಲಾಗಿಲ್ಲ. ಇದಲ್ಲದೆ, ನಾವು ವಿಶ್ವಾಸಾರ್ಹ ಸುದ್ದಿ ವರದಿಗಳು ಮತ್ತು ಅಧಿಕೃತ ಸರ್ಕಾರಿ ಅಧಿಸೂಚನೆಗಳಿಗಾಗಿ ನೋಡಿದ್ದೇವೆ, ಆದರೆ ಅಂತಹ ತೀರ್ಪಿನ ಬಗ್ಗೆ ಯಾವುದೇ ವರದಿಗಳು ಕಂಡುಬಂದಿಲ್ಲ.

ಕೀವರ್ಡ್ ಸರ್ಚ್ ನಡೆಸುವ ಮೂಲಕ, ೨೦೧೬ ರಲ್ಲಿ ಅಸ್ತಿತ್ವದಲ್ಲಿದ್ದ ಮೀಸಲಾತಿ ವ್ಯವಸ್ಥೆಯೊಂದಿಗೆ ಶೇಕಡಾ ಹತ್ತರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ದುರ್ಬಲ ವಿಭಾಗ (ಈ.ಡಬ್ಲ್ಯೂ.ಎಸ್) ಕೋಟಾವನ್ನು ಸೇರಿಸುವ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ಗುಜರಾತ್ ಹೈಕೋರ್ಟ್ ರದ್ದುಗೊಳಿಸಿದ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ.

ನಂತರ, ಈ ಈ.ಡಬ್ಲ್ಯೂ.ಎಸ್ ಮೀಸಲಾತಿಯನ್ನು ಜನವರಿ ೨೦೧೯ ರಲ್ಲಿ ಅಂಗೀಕರಿಸಿದ ಕಾನೂನಿನ ಮೂಲಕ ಕೇಂದ್ರ ಮಟ್ಟದಲ್ಲಿ ಪರಿಚಯಿಸಲಾಯಿತು. ಅಸ್ತಿತ್ವದಲ್ಲಿರುವ ಮೀಸಲಾತಿಗಳ ಪಟ್ಟಿಯಲ್ಲಿ ಶೇಖಡಾ ಹತ್ತರಷ್ಟು ಈ.ಡಬ್ಲ್ಯೂ.ಎಸ್ ಕೋಟಾವನ್ನು ಸೇರಿಸುವ ಕಾನೂನನ್ನು ಸಾಂವಿಧಾನಿಕ ತಿದ್ದುಪಡಿಯಾಗಿ ಸಂಸತ್ತು ಅಂಗೀಕರಿಸಿತು.

ಈ ತಿದ್ದುಪಡಿಯನ್ನು ನಂತರ ಪ್ರಶ್ನಿಸಲಾಗಿದ್ದು, ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಪೀಠವು ಕಾನೂನಿನ ತಿದ್ದುಪಡೆಯ ಪರವಾಗಿ ೩:೨ ತೀರ್ಪು ನೀಡಿತು ಮತ್ತು ೨೦೨೨ ರಲ್ಲಿ ಅದರ ಸಿಂಧುತ್ವವನ್ನು ಎತ್ತಿಹಿಡಿದಿದೆ. ಆದ್ದರಿಂದ, ಮೀಸಲಾತಿಯು ಕೇಂದ್ರ ಕಾನೂನಾಗಿ ಈಗಲೂ ಜಾರಿಯಲ್ಲಿದೆ.

ಗುಜರಾತ್ ರಾಜ್ಯದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ ಎಂದು ಯಾವುದೇ ಇತರ ಸುದ್ದಿ ವರದಿಗಳು ಅಥವಾ ಅಧಿಕೃತ ಪ್ರಕಟಣೆಗಳು ಸೂಚಿಸಿಲ್ಲ. ಗುಜರಾತ್ ಹೈಕೋರ್ಟ್‌ನ ವೆಬ್‌ಸೈಟ್‌ನಲ್ಲಿ, “RC/1434/2022(II)” ಸಂಖ್ಯೆಯ ಇತ್ತೀಚಿನ ಜಾಹೀರಾತನ್ನು ನಾವು ಕಂಡುಕೊಂಡಿದ್ದೇವೆ, “ಗುಜರಾತ್ ರಾಜ್ಯದ ಅಧೀನ ನ್ಯಾಯಾಲಯಗಳಿಗೆ ಸಹಾಯಕ ಹುದ್ದೆಗೆ ಕೇಂದ್ರೀಕೃತ ನೇಮಕಾತಿಗಾಗಿ” ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಈ ಜಾಹೀರಾತು ಹೇಳುತ್ತದೆ.

ಮೀಸಲಾತಿ ವ್ಯವಸ್ಥೆಗೆ ಅನುಗುಣವಾಗಿ ಪ್ರತಿ ವರ್ಗದ ಜನರಿಗೆ ಎಷ್ಟು ಖಾಲಿ ಹುದ್ದೆಗಳು ಲಭ್ಯವಿದೆ ಎಂಬುದನ್ನು ಈ ನೇಮಕಾತಿ ಜಾಹೀರಾತು ಸ್ಪಷ್ಟವಾಗಿ ತೋರಿಸುತ್ತದೆ. ಈ.ಡಬ್ಲ್ಯೂ.ಎಸ್ ವರ್ಗದಲ್ಲಿರುವ ಜನರಿಗೆ ಕೂಡ ಕೆಲವು ಖಾಲಿ ಹುದ್ದೆಗಳು ಲಭ್ಯವಿವೆ ಎಂಬುದನ್ನು ಇಲ್ಲಿ ಗಮನಿಸಬಹುದು. ಹಾಗಾಗಿ ಮೀಸಲಾತಿ ವ್ಯವಸ್ಥೆ ಇನ್ನೂ ಜಾರಿಯಲ್ಲಿದೆ ಮತ್ತು ಅದನ್ನು ರದ್ದುಗೊಳಿಸಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ನಾವು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿಯೂ ಇದೇ ರೀತಿಯ ಹೇಳಿಕೆಗಳನ್ನು ಕಂಡುಕೊಂಡಿದ್ದೇವೆ. ದಿ ಲಾಜಿಕಲ್ ಇಂಡಿಯನ್ ೨೦೨೧ ರಲ್ಲಿ ಇದೇ ರೀತಿಯ ಹೇಳಿಕೆಗಳನ್ನು ತಪ್ಪು ಎಂದು ಕಂಡು ಹಿಡಿದಿತ್ತು.

ತೀರ್ಪು

ಗುಜರಾತ್ ಹೈಕೋರ್ಟ್ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಿದೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಯಾವುದೇ ಪೂರಕ ಪುರಾವೆಗಳನ್ನು ಒದಗಿಸಿಲ್ಲ. ಈ ವಿಷಯದ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಅಧಿಕೃತ ಹೇಳಿಕೆಗಳಿಲ್ಲ. ಇತ್ತೀಚಿನ ಮಾಹಿತಿಯ ಪ್ರಕಾರ, ಗುಜರಾತ್ ಹೈಕೋರ್ಟ್ ಸೇರಿದಂತೆ ಸಂಸ್ಥೆಗಳು ನೇಮಕಾತಿಗಾಗಿ ಮೀಸಲಾತಿ ವ್ಯವಸ್ಥೆಯನ್ನು ಅನುಸರಿಸುತ್ತಿವೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.