ಪ್ರಿಯಾಂಕಾ ಗಾಂಧಿಯವರ ಬೆಂಗಳೂರು ರ್‍ಯಾಲಿಯಲ್ಲಿ ತಲೆಕೆಳಗಾದ ತ್ರಿವರ್ಣ? ಇಲ್ಲ, ವೀಡಿಯೋ ಹಳೆಯದು

ಮೂಲಕ: ಅಂಕಿತಾ ಕುಲಕರ್ಣಿ
ಏಪ್ರಿಲ್ 26 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪ್ರಿಯಾಂಕಾ ಗಾಂಧಿಯವರ ಬೆಂಗಳೂರು ರ್‍ಯಾಲಿಯಲ್ಲಿ ತಲೆಕೆಳಗಾದ ತ್ರಿವರ್ಣ? ಇಲ್ಲ, ವೀಡಿಯೋ  ಹಳೆಯದು

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ನಾವು ವೀಡಿಯೋ ೨೦೨೩ ರದ್ದು ಎಂದು ಪತ್ತೆಹಚ್ಚಿದೆವು ಮತ್ತು ಅದನ್ನು ಮಧ್ಯಪ್ರದೇಶದ ಜಬಲ್ಪುರದಲ್ಲಿ ಚಿತ್ರೀಕರಿಸಲಾಗಿದೆ ಎಂದು ಕಂಡುಬಂದಿದೆ.

ಕ್ಲೈಮ್ ಐಡಿ adf799d2

ಹೇಳಿಕೆ ಏನು?

ದಕ್ಷಿಣ ಭಾರತದ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರ್‍ಯಾಲಿಗಾಗಿ ಹಾಕಲಾದ ಬ್ಯಾನರ್‌ಗಳನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ರಸ್ತೆಯ ವಿಭಜಕದಲ್ಲಿ ವಿದ್ಯುತ್ ಕಂಬಗಳ ಮೇಲೆ ಚುನಾವಣಾ ಪೋಸ್ಟರ್‌ಗಳನ್ನು ತೋರಿಸುವ ೨೭ ಸೆಕೆಂಡುಗಳ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ.  

ವೀಡಿಯೋವಿನ ಆಡಿಯೋ ಹೀಗೆ ವಿವರಿಸುತ್ತದೆ, "ಪ್ರಿಯಾಂಕಾ ಗಾಂಧಿ ಅವರ ಬ್ಯಾನರ್‌ಗಳು ಅವಳ ಪಾದಗಳಲ್ಲಿ ತಲೆಕೆಳಗಾದ ತ್ರಿವರ್ಣ ಧ್ವಜವನ್ನು ತೋರಿಸುತ್ತವೆ. ಇದು ಉದ್ದೇಶಪೂರ್ವಕವಾಗಿ ಮಾಡಲ್ಪಟ್ಟಿದೆಯೇ ಅಥವಾ ಇದು ಕೇವಲ ಮೂರ್ಖತನವೇ? ಸಾರ್ವಜನಿಕರು ಕೇಳುತ್ತಿದ್ದಾರೆ - ತ್ರಿವರ್ಣ ಧ್ವಜವನ್ನು ಅರ್ಥಮಾಡಿಕೊಳ್ಳದ ಈ ಜನರು ದೇಶವನ್ನು ನಡೆಸುತ್ತಾರೆ ಎಂದು ನಾವು ಹೇಗೆ ನಿರೀಕ್ಷಿಸಬಹುದು."

ಅಂತಹ ಬಳಕೆದಾರರೊಬ್ಬರು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಬರೆದಿದ್ದಾರೆ, "ಬೆಂಗಳೂರಿನಲ್ಲಿ ಮುಂಬರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ರ್‍ಯಾಲಿ ಪೋಷ್ಟರ್ ಗಳು ಭಾರತದ ಧ್ವಜವನ್ನು ತಲೆಕೆಳಗಾಗಿ ತೋರಿಸುತ್ತವೆ, ಮೇಲ್ಭಾಗದಲ್ಲಿ ಹಸಿರು, ವೀಡಿಯೋ ವೈರಲ್ ಆಗಿದೆ (sic)." ಈ ಕಥೆಯನ್ನು ಬರೆಯುವ ಸಮಯದಲ್ಲಿ ಪೋಷ್ಟ್ ಸುಮಾರು ೮೨,೦೦೦ ವೀಕ್ಷಣೆಗಳನ್ನು ಗಳಿಸಿದೆ. ಬಹು ಬಳಕೆದಾರರು ಕ್ಲಿಪ್ ಅನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ ಮತ್ತು ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಏಪ್ರಿಲ್ ೨೬ ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ಎರಡನೇ ಹಂತದ ಮತದಾನಕ್ಕೆ ಮುಂಚಿತವಾಗಿ, ಏಪ್ರಿಲ್ ೨೩, ೨೦೨೪ ರಂದು ಬೆಂಗಳೂರಿನಲ್ಲಿ ಪ್ರಿಯಾಂಕಾ ಗಾಂಧಿ ಅವರ ರ್‍ಯಾಲಿಯ ಒಂದು ದಿನದ ಮೊದಲು ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಂಡ ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೀಡಿಯೋ ಹಳೆಯದು ಮತ್ತು ಮಧ್ಯ ಭಾರತದ ಮಧ್ಯಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರಿಯಾಂಕಾ ಗಾಂಧಿ ರ್‍ಯಾಲಿಗೂ ಇದಕ್ಕೂ ಸಂಬಂಧವಿಲ್ಲ.

ನಾವು ಏನು ಕಂಡುಕೊಂಡಿದ್ದೇವೆ?

ರಿವರ್ಸ್ ಇಮೇಜ್ ಸರ್ಚ್ ಜೂನ್ ೧೨, ೨೦೨೩ ರ ದಿನಾಂಕದಂದು ಎಕ್ಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಲ್ಲಿ ಹಂಚಿಕೊಂಡ ಪೋಷ್ಟ್‌ಗೆ ನಮ್ಮನ್ನು ಕರೆದೊಯ್ಯಿತು. ಏಪ್ರಿಲ್ ೨೩, ೨೦೨೪ ರಂದು ನಡೆದ ಬೆಂಗಳೂರು ರ್‍ಯಾಲಿಗಿಂತ ಹಳೆಯ ವೀಡಿಯೋ ಎಂದು ಇದು ತೋರಿಸುತ್ತದೆ.

ಜೂನ್ ೧೨, ೨೦೨೩ ರಂದು ಮಧ್ಯಪ್ರದೇಶದ ಕಾರ್ಮಿಕ ಇಲಾಖೆಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಫೇಸ್‌ಬುಕ್‌ನಲ್ಲಿ ಪೋಷ್ಟ್ ಮಾಡಿದ (ಇಲ್ಲಿ ಆರ್ಕೈವ್ ಮಾಡಲಾಗಿದೆ) ವೀಡಿಯೋವನ್ನು ಸಹ ನಾವು ಕಾಣಬಹುದು. ಹಿಂದಿಯಲ್ಲಿ ಶೀರ್ಷಿಕೆಯ ಅನುವಾದವು, "ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಮಧ್ಯಪ್ರದೇಶವು ತಲೆಕೆಳಗಾದ ತ್ರಿವರ್ಣದೊಂದಿಗೆ ಚುನಾವಣೆಯನ್ನು ಪ್ರಾರಂಭಿಸುತ್ತದೆಯೇ?" ಮಧ್ಯಪ್ರದೇಶದಲ್ಲಿ ನವೆಂಬರ್ ೨೦೨೩ ರಲ್ಲಿ ಚುನಾವಣೆಗಳು ನಡೆದವು.

ಈ ವೀಡಿಯೋದಲ್ಲಿ ಒಬ್ಬ ವ್ಯಕ್ತಿ 'ಗ್ವಾರಿಘಾಟ್ ರಸ್ತೆ' ಎಂದು ಹೇಳುವುದನ್ನು ನಾವು ಕೇಳಬಹುದು. ಇದನ್ನು ಸುಳಿವಾಗಿ ತೆಗೆದುಕೊಂಡು, ನಾವು ಗ್ವಾರಿಘಾಟ್ ರಸ್ತೆಯನ್ನು ಜಿಯೋಲೊಕೇಟ್ ಮಾಡಿದ್ದೇವೆ ಮತ್ತು ಅದು ಮಧ್ಯಪ್ರದೇಶದ ಜಬಲ್‌ಪುರ ನಗರದಲ್ಲಿದೆ ಎಂದು ಕಂಡುಕೊಂಡೆವು.

ನಾವು ಗೂಗಲ್  ಮ್ಯಾಪಿನಲ್ಲಿ "ELISA" ಹೆಸರಿನ ಕಟ್ಟಡವನ್ನು ಕಂಡುಕೊಂಡಿದ್ದೇವೆ, ಅದನ್ನು ವೈರಲ್ ಕ್ಲಿಪ್‌ನಲ್ಲಿ ೦:೦೬ ಸೆಕೆಂಡುಗಳಲ್ಲಿ ನೋಡಬಹುದು.

ಕ್ಲಿಪ್ ಮತ್ತು ಗೂಗಲ್ ಮ್ಯಾಪ್ಸ್ ನಡುವಿನ ಹೋಲಿಕೆ. (ಮೂಲ: ಎಕ್ಸ್/ಗೂಗಲ್  ಮ್ಯಾಪ್ಸ್/ಸ್ಕ್ರೀನ್‌ಶಾಟ್)

ವೈರಲ್ ಕ್ಲಿಪ್‌ನಲ್ಲಿ ೦:೧೫ ಸೆಕೆಂಡುಗಳಲ್ಲಿ, ನಾವು ಕೆಂಪು ಸೈನ್‌ಬೋರ್ಡ್‌ನೊಂದಿಗೆ ಮತ್ತೊಂದು ಕಟ್ಟಡವನ್ನು ವೀಕ್ಷಿಸಬಹುದು. ನಾವು ಈ ಅಂಗಡಿಯನ್ನು ಜಿಯೋಲೊಕೇಟ್ ಮಾಡಿದ್ದೇವೆ ಮತ್ತು ಇದು ಜಬಲ್‌ಪುರದ ಗ್ವಾರಿಘಾಟ್ ರಸ್ತೆಯಲ್ಲಿರುವ "ಓಂ ಮೆನ್ಸ್ ವೇರ್ (ಹಿಂದಿಯಲ್ಲಿ ಬರೆಯಲಾಗಿದೆ)" ಹೆಸರಿನ ಅಂಗಡಿ ಎಂದು ಕಂಡುಬಂದಿದೆ.

ಕ್ಲಿಪ್ ಮತ್ತು ಗೂಗಲ್ ಮ್ಯಾಪ್ಸ್ ನಡುವಿನ ಹೋಲಿಕೆ. (ಮೂಲ: ಎಕ್ಸ್/ಗೂಗಲ್  ಮ್ಯಾಪ್ಸ್/ಸ್ಕ್ರೀನ್‌ಶಾಟ್)

ಇದಲ್ಲದೆ, ಮೂಲ ಕ್ಲಿಪ್‌ನಲ್ಲಿ, ನಾವು ಟ್ರಾಫಿಕ್ ಅನ್ನು ಕೇಳಬಹುದು, ಆದರೆ ವೈರಲ್ ಕ್ಲಿಪ್ ಕನ್ನಡದಲ್ಲಿ ಸ್ಪಷ್ಟವಾದ ನಿರೂಪಣೆಯನ್ನು ಹೊಂದಿದೆ. ಆಡಿಯೊವನ್ನು ಸೇರಿಸಲಾಗಿದೆ ಎಂದು ಇದು ಸೂಚಿಸುತ್ತದೆ.

ಜೂನ್ ೧೨, ೨೦೨೩ ರಂದು ಮಧ್ಯಪ್ರದೇಶದ ಸ್ಥಳೀಯ ಮಾಧ್ಯಮವಾದ ನಾಯ್ ದುನಿಯಾ ಪ್ರಕಟಿಸಿದ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ, ಇದರಲ್ಲಿ ವೈರಲ್ ಕ್ಲಿಪ್‌ನಲ್ಲಿ ಕಂಡುಬರುವಂತೆ ಬ್ಯಾನರ್‌ನ ಸ್ಕ್ರೀನ್‌ಶಾಟ್ ಸೇರಿದೆ. ಹೋರ್ಡಿಂಗ್‌ಗಳು ತ್ರಿವರ್ಣ ಧ್ವಜವನ್ನು ಅವಮಾನಿಸಿದೆ ಎಂದು ಆರೋಪಿಸಿ ಬಿಜೆಪಿಯು ಕಾಂಗ್ರೆಸ್ ಪಕ್ಷದ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ವರದಿಯಲ್ಲಿ ಸೇರಿಸಲಾಗಿದೆ.

ತೀರ್ಪು

ಮಧ್ಯಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಅವರ ಬ್ಯಾನರ್‌ಗಳನ್ನು ತೋರಿಸುವ ಹಳೆಯ ವೀಡಿಯೋವನ್ನು ಬೆಂಗಳೂರಿನಲ್ಲಿ ಅವರ ಇತ್ತೀಚಿನ ರ್‍ಯಾಲಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ಆದ್ದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.