ಡಿಜಿಟಲಿ ಎಡಿಟ್ ಮಾಡಿರುವ ೨೦೧೮ ರ ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ೨೦೨೩ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಎಂದು ಹಂಚಿಕೊಳ್ಳಲಾಗಿದೆ

ಮೂಲಕ:
ಫೆಬ್ರವರಿ 10 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಡಿಜಿಟಲಿ ಎಡಿಟ್ ಮಾಡಿರುವ ೨೦೧೮ ರ ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ೨೦೨೩ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಎಂದು ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

೨೦೧೮ ರ ಚುನಾವಣಾ ದಿನಾಂಕಗಳ ಛಾಯಾ ಚಿತ್ರವನ್ನು ಎಡಿಟ್ ಮಾಡಿ ೨೦೨೩ ರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕ್ಲೈಮ್ ಐಡಿ 282d49b4


ಸಂದರ್ಭ

ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಗಳು ವದಂತಿಗಳಿಗೆ ಕಾರಣವಾಗಿವೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅದರ ಬಗ್ಗೆ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಚಿತ್ರವು ಕನ್ನಡ ಪಠ್ಯವನ್ನು ಹೊಂದಿದೆ ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ ಎಂದು ಭಾವಿಸಿ ಬಳಕೆದಾರರು #ಕರ್ನಾಟಕ ಚುನಾವಣೆ ೨೦೨೩ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ವೈರಲ್ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.


ಈಗ ವೈರಲ್ ಆಗುತ್ತಿರುವ ಚಿತ್ರವೂ ಹೀಗಿದೆ: ಮಾರ್ಚ್ ೨೭ ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಏಪ್ರಿಲ್ ೧೭ ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ ೨೪ ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ, ಏಪ್ರಿಲ್ ೨೫ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ ೨೭ ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಮೇ ೧೨ ರಂದು ಮತದಾನ ನಡೆಯಲಿದ್ದು, ಮೇ ೧೫ ರಂದು ಮತ ಎಣಿಕೆ ನಡೆಯಲಿದೆ.


ಆದರೆ, ೨೦೧೮ ರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಹೊಂದಿರುವ ಚಿತ್ರವನ್ನು ಡಿಜಿಟಲೀ ಬದಲಾಯಿಸಿ, ೨೦೨೩ ರ ಚುನಾವಣಾ ವೇಳಾಪಟ್ಟಿಯಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ


ವಾಸ್ತವವಾಗಿ 

೨೦೨೩ ರ ವಿಧಾನಸಭಾ ಚುನಾವಣೆಯ ನಿಗದಿತ ದಿನಾಂಕಗಳ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಲಾಜಿಕಲಿ (Logically) ಕರ್ನಾಟಕ ಚುನಾವಣಾ ಆಯೋಗವನ್ನು ಸಂಪರ್ಕಿಸಿತು. ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ರಾಜಶೇಖರ್, ಲಾಜಿಕಲಿ (Logically) ಯೊಂದಿಗೆ ಮಾತನಾಡುತ್ತ, "೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲ, ನಿಗದಿತ ದಿನಾಂಕಗಳನ್ನು ಭಾರತೀಯ ಚುನಾವಣಾ ಆಯೋಗವು ಅಧಿಕೃತವಾಗಿ ಘೋಷಿಸುತ್ತದೆ" ಎಂದು ಹೇಳಿದ್ದಾರೆ.


ಇದೀಗ ವೈರಲ್ ಆಗಿರುವ ಚಿತ್ರವನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ. ರಿವರ್ಸ್ ಇಮೇಜ್ ಸರ್ಚ್ ಮೂಲಕ, ಕರ್ನಾಟಕ ವಿಧಾನಸಭಾ ಚುನಾವಣೆ ೨೦೧೮ ರ ವೇಳಾಪಟ್ಟಿಯನ್ನು ಎಡಿಟ್ ಮಾಡಲಾಗಿದೆ ಮತ್ತು ೨೦೨೩ ರ ಚುನಾವಣಾ ವೇಳಾಪಟ್ಟಿಯಂತೆ ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಮಾರ್ಚ್ ೨೭, ೨೦೧೮ ರಂದು, ಆನ್‌ಲೈನ್ ಕನ್ನಡ ಸುದ್ದಿ ವೆಬ್‌ಸೈಟ್ ಒನ್ಇಂಡಿಯಾ ಕನ್ನಡ (Oneindia Kannada) ತನ್ನ ಅಧಿಕೃತ ಟ್ವಿಟ್ಟರ್ ಪುಟದಲ್ಲಿ ನಿಖರವಾದ ಚಿತ್ರವನ್ನು ಪೋಷ್ಟ್ ಮಾಡಿದೆ. ಪೋಷ್ಟರ್ ನ ಶೀರ್ಷಿಕೆ ಹೀಗಿದೆ, "ಕರ್ನಾಟಕದಲ್ಲಿ ಏಕ-ಹಂತದ ಮತದಾನ. ಏಪ್ರಿಲ್ ೨೪ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ ೨೫ ರಂದು ನಾಮಪತ್ರಗಳ ಪರಿಶೀಲನೆ."


ಮೂಲ ಚಿತ್ರವು 'ಒನ್ಇಂಡಿಯಾ ಕನ್ನಡ' ಎಂದು ಹೇಳುವ ವಾಟರ್‌ಮಾರ್ಕ್ ಅನ್ನು ಹೊಂದಿದೆ. ೨೦೧೮ ರ ಮುದ್ರೆ ಹೊಂದಿರುವ ಕನ್ನಡ ಪಠ್ಯವನ್ನು ಹಳದಿ ಬಣ್ಣದಲ್ಲಿ ಹೈಲೈಟ್ ಮಾಡಲಾಗಿದೆ. ಆದರೆ, ವೈರಲ್ ಚಿತ್ರದಲ್ಲಿ, ಹಳದಿ ಬಾಕ್ಸ್ ಅನ್ನು ಎಡಿಟ್ ಮಾಡಲಾಗಿದೆ. ವರ್ಷ ೨೦೧೮ ರ ಜೊತೆಗೆ ಹೈಫನ್ ಅನ್ನು ತೆಗೆದುಹಾಕಿ ವರ್ಷ೨೦೨೩ ಅನ್ನು ಸೇರಿಸಲಾಗಿದೆ.


ಮಾರ್ಚ್ ೨೭, ೨೦೧೮ ರಂದು ಭಾರತೀಯ ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಪತ್ರಿಕಾ ಟಿಪ್ಪಣಿಯನ್ನು ಲಾಜಿಕಲಿ (Logically) ಪರಿಶೀಲಿಸಿದೆ ಮತ್ತು ಪ್ರಶ್ನೆಯಲ್ಲಿರುವ ಚಿತ್ರದಲ್ಲಿ ಉಲ್ಲೇಖಿಸಿರುವ ದಿನಾಂಕಗಳು ೨೦೧೮ ರ ಕರ್ನಾಟಕ ವಿಧಾನಸಭಾ ಚುನಾವಣೆ ಎಂದು ದೃಢಪಡಿಸಿದೆ. ಪತ್ರಿಕಾ ಟಿಪ್ಪಣಿಯ ಪುಟ ೨೦, ೨೦೧೮ ರ ಚುನಾವಣೆಯ ನಿಗದಿತ ದಿನಾಂಕಗಳನ್ನು ಹೊಂದಿತ್ತು.


೨೦೧೮ ರ ವಿಧಾನಸಭಾ ಚುನಾವಣೆಯು ಮೇ ೧೨, ೨೦೧೮ ರಂದು ನಡೆದಿದ್ದು, ಪ್ರಸ್ತುತ ವಿಧಾನಸಭೆಯ ಅವಧಿಯು ಮೇ ೨೪, ೨೦೨೩ ರಂದು ಮುಕ್ತಾಯಗೊಳ್ಳುತ್ತದೆ ಎಂದು ದಿ ಹಿಂದೂ ವರದಿ ಮಾಡಿದೆ. ಚುನಾವಣೆಯು ಮೇ ೨೪ ರ ಮೊದಲು ನಡೆಯುವ ಸಾಧ್ಯತೆಯಿದೆ, ಆದರೆ ಚುನಾವಣಾ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ. ದಿನಾಂಕಗಳನ್ನು ಬಿಡುಗಡೆ ಮಾಡುವ ಮೊದಲು ಮತದಾರರ ಪಟ್ಟಿಗಳ ಸರಿಯಾದ ಸಿದ್ಧತೆ ಮತ್ತು ಪರಿಶೀಲನೆ ಪೂರ್ಣಗೊಂಡಿದೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಚುನಾವಣಾ ಆಯೋಗವು ಕಾರ್ಯನಿರ್ವಹಿಸುತ್ತಿದೆ ಎಂದು ಲೇಖನದಲ್ಲಿ ಸೇರಿಸಲಾಗಿದೆ.


ತೀರ್ಪು 

೨೦೧೮ ರ ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ. ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲ. ಆದ್ದರಿಂದ, ನಾವು ಈ ಹಕ್ಕನ್ನು ಸುಳ್ಳು ಎಂದು ಗುರುತಿಸಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.