ಕಲ್ಯಾಣ್ ಜ್ಯುವೆಲರ್ಸ್‌ನ ೩೦ ನೇ ವಾರ್ಷಿಕೋತ್ಸವದಂದು ೨೨-ಕ್ಯಾರೆಟ್ ಚಿನ್ನವನ್ನು ಉಡುಗೊರೆಯಾಗಿ ನೀಡುವ ಸಂದೇಶವು ಒಂದು ಹಗರಣವಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 12 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕಲ್ಯಾಣ್ ಜ್ಯುವೆಲರ್ಸ್‌ನ ೩೦ ನೇ ವಾರ್ಷಿಕೋತ್ಸವದಂದು ೨೨-ಕ್ಯಾರೆಟ್ ಚಿನ್ನವನ್ನು ಉಡುಗೊರೆಯಾಗಿ ನೀಡುವ ಸಂದೇಶವು ಒಂದು ಹಗರಣವಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಕಲ್ಯಾಣ್ ಜ್ಯುವೆಲರ್ಸ್ ಕಂಪನಿಯು ಉಚಿತವಾಗಿ ಕೊಡುಗೆಯನ್ನು ನೀಡುವ ಆಯೋಜನೆಗಳನ್ನು ಹೊಂದಿಲ್ಲವೆಂದು ಸ್ಪಷ್ಟಪಡಿಸಿದೆ. ಉಚಿತ ಕೊಡುಗೆಯ ಪೋಷ್ಟ್ ಗಳು ಆನ್‌ಲೈನ್ ವಂಚನೆಯ ಭಾಗವಾಗಿದೆ.

ಕ್ಲೈಮ್ ಐಡಿ 9baa7acb

ಸಂದರ್ಭ

ಭಾರತೀಯ ಆಭರಣ ಕಂಪನಿ ಕಲ್ಯಾಣ್ ಜ್ಯುವೆಲರ್ಸ್‌ನ ೩೦ ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಳಕೆದಾರರು ೨೨-ಕ್ಯಾರೆಟ್ ಚಿನ್ನವನ್ನು ಉಡುಗೊರೆಯಾಗಿ ಗೆಲ್ಲಬಹುದೆಂದು ಹೇಳುವ ಸಂದೇಶವು ವಾಟ್ಸ್ಆಪ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವೈರಲ್ ಆದ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, "ಅಭಿನಂದನೆಗಳು! ಕಲ್ಯಾಣ್ ಜ್ಯುವೆಲರ್ಸ್‌ನ ೩೦ ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ, ಅದ್ಭುತವಾದ ೨೨ ಕ್ಯಾರಟ್ ಚಿನ್ನದ ಉಡುಗೊರೆಗಳನ್ನು ಗೆಲ್ಲಲು ಪ್ರತಿಯೊಬ್ಬರಿಗೂ ಅವಕಾಶವಿದೆ. ಬಹುಮಾನವನ್ನು ಪಡೆಯಲು (sic) 'ಓಕೆ' ಕ್ಲಿಕ್ ಮಾಡಿ." ಎಂದು ಓದುವ ಪಾಪ್-ಅಪ್ ಅನ್ನು ತೋರಿಸುತ್ತದೆ. ಒಮ್ಮೆ ಓಕೆ ಎಂದು ಒತ್ತಿದ ನಂತರ ಬಳಿಕೆದಾರರ ವಯಸ್ಸು, ಲಿಂಗ ಮತ್ತು ಇತರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಲು ನಿರ್ದೇಶಿಸುತ್ತದೆ.

ಆನಂತರ ಮೆನುವಿನಿಂದ ಒಂದು ಬಾಕ್ಸ್ ಅನ್ನು ಆಯ್ಕೆ ಮಾಡಲು ಸೂಚಿಸುತ್ತದೆ. ಅದರ ನಂತರ ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ, "ನೀವು ಚಿನ್ನದ ಜೋಡಿ ಉಂಗುರಗಳನ್ನು ಗೆದ್ದಿದ್ದೀರಿ ಅಭಿನಂದನೆಗಳು. ಇದನ್ನು ಸ್ವೀಕರಿಸಲು ಸೂಚನೆಗಳನ್ನು ಅನುಸರಿಸಿ!" ಎಂದು ಹೇಳುತ್ತದೆ ಅಥವಾ ಆಯ್ದ ಬಾಕ್ಸ್ ನ ಅನುಸಾರ ಬೇರೆ ಉಡುಗೋರಿಗಳನ್ನು ತೋರಿಸುತ್ತದೆ. ಇದಾದಮೇಲೆ, ಮೇಲ್ಕಂಡ ಸಂದೇಶವನ್ನು ವಾಟ್ಸ್ಆಪ್ ನಲ್ಲಿ ಹಂಚಿಕೊಳ್ಳಲು ಕೇಳುತ್ತದೆ. ಆದ್ರೆ ಲಿಂಕ್ ನಕಲಿಯಾಗಿದೆ ಮತ್ತು ಕಲ್ಯಾಣ್ ಜ್ಯುವೆಲರ್ಸ್‌ನಿಂದ ಅಧಿಕೃತವಾಗಿ ಕಳುಹಿಸಲಾಗಿಲ್ಲ.

ವಾಸ್ತವವಾಗಿ

ಏಪ್ರಿಲ್ ೧೩, ೨೦೨೩ ರಂದು ಕಲ್ಯಾಣ್ ಜ್ಯುವೆಲರ್ಸ್‌ನ ಅಧಿಕೃತ ಫೇಸ್‌ಬುಕ್ ಪೇಜ್ ನಲ್ಲಿ ಈ ಕೊಡುಗೆಯೊಂದಿಗೆ ಕಲ್ಯಾಣ್ ಜ್ಯುವೆಲರ್ಸ್‌ ಯಾವುದೇ ಸಂಬಂಧವನ್ನು ಹೊಂದಿಲ್ಲ ಮತ್ತು ಸಂದೇಶವು ಹಗರಣವಾಗಿದೆ ಎಂದು ಸ್ಪಷ್ಟೀಕರಣವನ್ನು ನೀಡಿದೆ. ಪೋಷ್ಟ್ ನಲ್ಲಿ, "ಕಲ್ಯಾಣ್ ಜ್ಯುವೆಲರ್ಸ್‌ನ ೩೦ನೇ ವಾರ್ಷಿಕೋತ್ಸವದ ಉಡುಗೊರೆಯ ಕುರಿತು ವಾಟ್ಸ್ಆಪ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಲಿಂಕ್ ಅನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ನಮ್ಮ ಗಮನಕ್ಕೆ ತರಲಾಗಿದೆ. ಇದು ಕಲ್ಯಾಣ್ ಜ್ಯುವೆಲರ್ಸ್‌ನಿಂದ ಪರಿಶೀಲಿಸಲ್ಪಟ್ಟ ಅಥವಾ ಅಧಿಕೃತ ಸಂವಹನವಲ್ಲ ಎಂದು ನಾವು ನಿಮಗೆ ಎಂದು ತಿಳಿಸಲು ಆಶಿಸುತ್ತೇವೆ. ಈ ಲಿಂಕ್ ಅನ್ನು ಓಪನ್ ಮಾಡಿ ವೈಯಕ್ತಿಕ ಮಾಹಿತಿಯನ್ನು ನೀಡಬಾರದೆಂದು ನಾವು ಸಲಹೆ ನೀಡುತ್ತೇವೆ," ಎಂದು ಬರೆಯಲಾಗಿದೆ.

ಲಿಂಕ್ ನಕಲಿ ಎಂದು ಸೂಚಿಸುವ ಹಲವಾರು ವ್ಯತ್ಯಾಸಗಳು ಸಹ ಇದ್ದವು. ಆಫರ್ ಅನ್ನು ತೋರುವ ವೆಬ್ ವಿಳಾಸವು "fkmainsvarsadtrands.blogpost.com" ಎಂದು ಓದುತ್ತದೆ ಮತ್ತು ಮೊಬೈಲ್ ಫೋನ್‌ಗಳಲ್ಲಿ ಮಾತ್ರ ಇದನ್ನು ನಾವು ನೋಡಬಹುದು, ಬ್ರೌಸರ್‌ಗಳಲ್ಲಿ ತೋರುವಿದಿಲ್ಲ ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ. ಕಂಪನಿಯ ವೆಬ್‌ಸೈಟ್ "kalyanjewellers.net" ನಲ್ಲಿ ಅಧಿಕೃತವಾಗಿ ಪ್ರಕಟಣೆಯನ್ನು ಕಾಣಬಹುದು. ಹಾಗೂ ವೆಬ್‌ಸೈಟ್ ಅಥವಾ ಕಂಪನಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಅಂತಹ ಕೊಡುಗೆಯ ಯಾವುದೇ ಪ್ರಕಟಣೆಗಳು ನಮಗೆ ಕಂಡುಬಂದಿಲ್ಲ. ಅದಲ್ಲದೆ ವಾಸ್ತವವಾಗಿ, ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ, ಈ ಆನ್‌ಲೈನ್ ವಂಚನೆಯ ವಿರುದ್ಧ ಎಚ್ಚರಿಕೆಯನ್ನು ಸಹ ನೀಡಲಾಗಿದೆ.

ಕೇರಳ ಮೂಲದ ಸ್ಥಳೀಯ ಸುದ್ದಿವಾಹಿನಿಗಳಾದ ಅನ್ವೇಷನಂ ಮತ್ತು ಕೇರಳ ಆನ್‌ಲೈನ್ ನ್ಯೂಸ್ ವರದಿಗಳು, ಕೇರಳದ ತ್ರಿಶೂರ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ ಈ ಆನ್‌ಲೈನ್ ಹಗರಣದ ವಿರುದ್ಧ ತ್ರಿಶೂರ್‌ನಲ್ಲಿರುವ ಸೈಬರ್ ಕ್ರೈಮ್ ಇಲಾಖೆಗೆ ದೂರು ಸಲ್ಲಿಸಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ವರದಿಮಾಡಿವೆ.

ತೀರ್ಪು

ಕಲ್ಯಾಣ್ ಜ್ಯುವೆಲರ್ಸ್‌ ನಿಂದ ಉಚಿತ ಚಿನ್ನವನ್ನು ನೀಡುವುದಾಗಿ ಹೇಳುವ ವಾಟ್ಸ್ಆಪ್ ಲಿಂಕ್ ನಕಲಿಯಾಗಿದೆ. ಕಂಪನಿಯು ಅಂತಹ ಕೊಡುಗೆಯನ್ನು ಹಗರಣವೆಂದು ಸ್ಫಷ್ಟಪಡಿಸುತ್ತ ಲಿಂಕ್ ಅನ್ನು ಆನ್‌ಲೈನ್ ವಂಚನೆ ಎಂದು ಕರೆದಿದೆ. ಆದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.