ಇಲ್ಲ, ಆಂಧ್ರಪ್ರದೇಶದ ರಾಜಕಾರಣಿ ನಾರಾ ಲೋಕೇಶ್ ಅವರ ಕಾರಿನಿಂದ ೮ ಕೋಟಿ ರೂಪಾಯಿ ಮೌಲ್ಯದ ನಗದು ವಶಪಡಿಸಲಾಗಿಲ್ಲ

ಮೂಲಕ: ರೋಹಿತ್ ಗುಟ್ಟಾ
ಮಾರ್ಚ್ 27 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ,  ಆಂಧ್ರಪ್ರದೇಶದ ರಾಜಕಾರಣಿ ನಾರಾ ಲೋಕೇಶ್ ಅವರ ಕಾರಿನಿಂದ ೮ ಕೋಟಿ ರೂಪಾಯಿ ಮೌಲ್ಯದ ನಗದು ವಶಪಡಿಸಲಾಗಿಲ್ಲ

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ವಾಟ್ಸಾಪ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಕಾರನ್ನು ಪರಿಶೀಲಿಸಿದ ತಂಡದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಟಿಡಿಪಿ ನಾಯಕನ ವಾಹನದಲ್ಲಿ ಯಾವುದೇ ನಗದು ಪತ್ತೆಯಾಗಿಲ್ಲ ಎಂದು ಖಚಿತಪಡಿಸಿದ್ದಾರೆ.

ಕ್ಲೈಮ್ ಐಡಿ 6f4b023e

ಹೇಳಿಕೆ ಏನು?
ಪೊಲೀಸ್ ಸಿಬ್ಬಂದಿ ಕಾರುಗಳ ಬೆಂಗಾವಲು ಪಡೆಯನ್ನು ಪರಿಶೀಲಿಸುತ್ತಿರುವ ೧೩ ಸೆಕೆಂಡುಗಳ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ತೆಲುಗು ದೇಶಂ ಪಕ್ಷದ (ಟಿಡಿಪಿ) ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ವಾಹನದಿಂದ ಎಂಟು ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.  ಕ್ಲಿಪ್ ಅನ್ನು ಹಂಚಿಕೊಳ್ಳುವ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ವಾಟ್ಸ್‌ಆ್ಯಪ್‌ನಲ್ಲೂ ಈ ವೀಡಿಯೋವನ್ನು  ಹಂಚಿಕೆಯಾಗುತ್ತಿದೆ.

ಭಾರತದ ದಕ್ಷಿಣ ರಾಜ್ಯವಾದ ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ  ವೀಡಿಯೋ ಶೇರ್ ಮಾಡಲಾಗಿದೆ. ಮೇ ೧೩ ರಂದು ಚುನಾವಣೆ ನಡೆಯಲಿದ್ದು, ಜೂನ್ ೪ ರಂದು ಫಲಿತಾಂಶವನ್ನು ಪ್ರಕಟಿಸಲಾಗುವುದು. ಚುನಾವಣಾ ದಿನಾಂಕಗಳ ಘೋಷಣೆಯೊಂದಿಗೆ, ಮಾದರಿ ನೀತಿ ಸಂಹಿತೆ (ಎಂಸಿಸಿ) - ಭಾರತೀಯ ಚುನಾವಣಾ ಆಯೋಗ (ಇಸಿಐ) ನಿಗದಿಪಡಿಸಿದ ರಾಜಕೀಯ ಪಕ್ಷಗಳ ನಡವಳಿಕೆಯನ್ನು ನಿಯಂತ್ರಿಸುವ ಮಾರ್ಗಸೂಚಿಗಳ ಒಂದು ಸೆಟ್ - ಮಾರ್ಚ್ ೧೬ ರಂದು ಜಾರಿಗೆ ಬಂದಿತು.

ಎಂಸಿಸಿ ಆಯಾ ರಾಜ್ಯಗಳ ಚುನಾವಣಾ ಆಯೋಗಗಳಿಗೆ ಸ್ಪರ್ಧಿಸುವ ಅಭ್ಯರ್ಥಿಯ ವಾಹನದಲ್ಲಿ ಪತ್ತೆಯಾದ ರೂ. ೫೦ ೦೦೦ ಗಿಂತ ಹೆಚ್ಚಿನ ಹಣವನ್ನು ವಶಪಡಿಸಿಕೊಳ್ಳಲು ಅವಕಾಶ ನೀಡುತ್ತದೆ.

ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ವಾಟ್ಸಾಪ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ನಾವು ಕಂಡುಹಿಡಿದದ್ದು ಏನು?
ಲೋಕೇಶ್ ಅವರ ವಾಹನಗಳಿಂದ ನಗದು ವಶಪಡಿಸಿಕೊಂಡ ಸುದ್ದಿ ವರದಿಗಳನ್ನು ನಾವು ನೋಡಿದೆವು ಮತ್ತು ಅಂತಹ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ. ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು, ವೈರಲ್ ವೀಡಿಯೋ ಮಾರ್ಚ್ ೨೦ ರಂದು ಉಂಡವಳ್ಳಿ ಗ್ರಾಮದಲ್ಲಿ ಲೋಕೇಶ್ ಅವರ ವಾಹನವನ್ನು ಪೊಲೀಸರು ಪರಿಶೀಲಿಸುವ ಸುದೀರ್ಘವೀಡಿಯೋದ ಚಿಕ್ಕ ಆವೃತ್ತಿಯಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಉಂಡವಳ್ಳಿ ಗ್ರಾಮವು ಆಂಧ್ರಪ್ರದೇಶದ ಗುಂಟೂರಿನ ತಾಡೆಪಲ್ಲಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ.

ಎಬಿಎನ್ ಮತ್ತು ಮಹಾ ನ್ಯೂಸ್‌ನಂತಹ ವಿವಿಧ ತೆಲುಗು ಸುದ್ದಿ ವಾಹಿನಿಗಳು ಘಟನೆಯ ಕುರಿತು ತಮ್ಮ ವರದಿಗಳಲ್ಲಿ ಈ ವೀಡಿಯೋವನ್ನು ಒಳಗೊಂಡಿದೆ. ನಾರಾ ಲೋಕೇಶ್ ಐದು ವಾಹನಗಳ ಬೆಂಗಾವಲು ಪಡೆಯಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ರಾಜಕೀಯ ಮುಖಂಡ ಪ್ರಚಾರ ಸಭೆಗೆ ತೆರಳುತ್ತಿದ್ದಾಗ ಪೊಲೀಸರು ಅವರನ್ನು ಮತ್ತು ಅವರ ತಂಡವನ್ನು ತಪಾಸಣೆಗಾಗಿ ತಡೆದರು ಎಂದು ಎಬಿಎನ್ ವರದಿ ಹೇಳಿದೆ. ಪೊಲೀಸರು ತಮ್ಮ ಹುಡುಕಾಟದಲ್ಲಿ ಏನನ್ನೂ ಕಂಡುಹಿಡಿಯಲಿಲ್ಲ ಎಂದು ವರದಿ ಹೇಳಿದೆ. ಎಂಸಿಸಿ ಜಾರಿಗೆ ಬಂದ ನಂತರ ಚುನಾವಣೆಗೆ ಮುನ್ನ ಇಂತಹ ಪೊಲೀಸ್ ತಪಾಸಣೆಗಳನ್ನು ನಡೆಸುವುದು ವಾಡಿಕೆ.

ಲಾಜಿಕಲಿ ಫ್ಯಾಕ್ಟ್ಸ್ ಸಹ ತಾಡೆಪಲ್ಲಿ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿದೆ, ಅವರು ಮಾರ್ಚ್ ೨೦ ರಂದು ತಪಾಸಣೆ ನಡೆಸಿದ್ದರು. ಸಬ್ ಇನ್ಸ್‌ಪೆಕ್ಟರ್ ಎ ಶ್ರೀನಿವಾಸ್ ಅವರು ಪೊಲೀಸರು ರೂ ೮ ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂಬ ಹೇಳಿಕೆಯನ್ನು ತಳ್ಳಿಹಾಕಿದರು. ತಾವು ಮತ್ತು ಅವರ ತಂಡ ಕಸರತ್ತು ನಡೆಸಿದ್ದು, ತಪಾಸಣೆ ವೇಳೆ ಲೋಕೇಶ್ ಅವರ ವಾಹನಗಳಲ್ಲಿ ಯಾವುದೇ ಕರೆನ್ಸಿ ನೋಟುಗಳು ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.

ತೀರ್ಪು
ರಾಜ್ಯದಲ್ಲಿ ಎಂಸಿಸಿ ಜಾರಿಗೊಳಿಸಿದ ನಂತರ  ನಾರಾ ಲೋಕೇಶ್ ಅವರ ವಾಹನಗಳನ್ನು ಪರಿಶೀಲಿಸಿದಾಗ, ಅವರಲ್ಲಿ ಯಾವುದೇ ಕಾರುಗಳಿಂದ ಇಲ್ಲಿಯವರೆಗೆ ಯಾವುದೇ ಹಣವನ್ನು ವಶಪಡಿಸಿಕೊಳ್ಳಲಾಗಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.