ಇಲ್ಲ, ರಾಮಮಂದಿರದ ಪ್ರತಿಷ್ಠಾಪನೆಗಾಗಿ ಇಸ್ರೇಲ್ ಜನವರಿ ೨೨ ರಂದು ರಜೆ ಘೋಷಿಸಿಲ್ಲ

ಮೂಲಕ: ಉಮ್ಮೆ ಕುಲ್ಸುಮ್
ಜನವರಿ 23 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ರಾಮಮಂದಿರದ ಪ್ರತಿಷ್ಠಾಪನೆಗಾಗಿ ಇಸ್ರೇಲ್ ಜನವರಿ ೨೨ ರಂದು ರಜೆ ಘೋಷಿಸಿಲ್ಲ

ಆನ್‌ಲೈನ್‌ನಲ್ಲಿ ಕಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರರು ಅಧಿಕೃತ ಕ್ಯಾಲೆಂಡರ್ ಪ್ರಕಾರ ಮುಂದಿನ ರಜಾದಿನವು ಜನವರಿ ೨೫ ರಂದು ಇದೆ, ಅದಕ್ಕಿಂತ ಮೊದಲು ಅಲ್ಲ ಎಂದು ಖಚಿತಪಡಿಸಿದ್ದಾರೆ.

ಕ್ಲೈಮ್ ಐಡಿ c2d59cef

ಹೇಳಿಕೆ ಏನು?
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಗೆ ಮುಂಚಿತವಾಗಿ, ಭಾರತ ಸರ್ಕಾರವು ದೇವಾಲಯದ ಶಂಕುಸ್ಥಾಪನೆ (ಪ್ರಾಣ ಪ್ರತಿಷ್ಠಾ ಸಮಾರಂಭ) ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ಅಧಿಕಾರಿಗಳಿಗೆ ಜನವರಿ ೨೨ ರಂದು ಅರ್ಧ ದಿನದ ರಜೆಯನ್ನು ಘೋಷಿಸಿತು. ಛತ್ತೀಸಗಢ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಆ ದಿನ ಮಧ್ಯಾಹ್ನ ೨.೩೦ ರವರೆಗೆ ರಜೆ ಘೋಷಿಸಿವೆ.

ಇದರ ನಡುವೆ, ರಾಮ ಮಂದಿರದ ಪ್ರತಿಷ್ಠಾಪನೆಗಾಗಿ ಇಸ್ರೇಲ್ ಜನವರಿ ೨೨ ರಂದು ರಜೆ ಘೋಷಿಸಿದೆ ಎಂದು ಹೇಳುವ ನಿರೂಪಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂತಹ ಹೇಳಿಕೆಗಳನ್ನು ಹಲವಾರು ಬಳಕೆದಾರರು ಎಕ್ಸ್ (ಹಿಂದೆ ಟ್ವಿಟ್ಟರ್) ಮತ್ತು ಫೇಸ್‌ಬುಕ್‌ ನಲ್ಲಿ ಹಂಚಿಕೊಂಡಿದ್ದಾರೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಆನ್‌ಲೈನ್‌ನಲ್ಲಿ  ಕಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಫೇಸ್‌ಬುಕ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ನಾವು ಕಂಡು ಹಿಡಿದದ್ದು ಏನು?
ನಾವು ಮುಖ್ಯವಾಹಿನಿಯ ಮಾಧ್ಯಮಗಳ ವರದಿಗಳನ್ನು ಪರಿಶೀಲಿಸಿದ್ದೇವೆ ಆದರೆ ಜನವರಿ ೨೨ ರಂದು ಇಸ್ರೇಲ್ ಘೋಷಿಸಿದ ರಾಷ್ಟ್ರವ್ಯಾಪಿ ರಜೆಯ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಯಾವುದೇ ಅಧಿಕೃತ ಪ್ರಕಟಣೆ ಇಲ್ಲ. ಇಸ್ರೇಲಿ ರಾಯಭಾರ ಕಚೇರಿಯಿಂದ ನೀಡಲಾದ ರಜಾದಿನಗಳ ಪಟ್ಟಿಯನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಭಾರತದಲ್ಲಿ ರಜಾದಿನವಾಗಿ ಉಲ್ಲೇಖಿಸಲಾದ ಏಕೈಕ ದಿನಾಂಕವೆಂದರೆ ಜನವರಿ ೨೬, ೨೦೨೪, ಭಾರತದ ಗಣರಾಜ್ಯೋತ್ಸವ.

ಜನವರಿ ೨೨ ರಂದು ಇಸ್ರೇಲ್ ರಾಷ್ಟ್ರವ್ಯಾಪಿ ರಜೆಯನ್ನು ಘೋಷಿಸಿದೆಯೇ ಎಂದು ಪರಿಶೀಲಿಸಲು ನಾವು ಇಸ್ರೇಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆವು. ಇಸ್ರೇಲಿ ರಾಯಭಾರ ಕಚೇರಿಯ ಅಧಿಕೃತ ವಕ್ತಾರರಾದ ಗೈ ನಿರ್ ಅವರು ಜನವರಿ ೨೨ ರಂದು ಯಾವುದೇ ರಜೆಯಿಲ್ಲ ಎಂದು ಲಾಜಿಕಲಿ ಫ್ಯಾಕ್ಟ್ಸ್ ಗೆ ದೃಢಪಡಿಸಿದರು. ಅವರು ನಮ್ಮನ್ನು ಅಧಿಕೃತ ಪಟ್ಟಿಗೆ ಮರುನಿರ್ದೇಶಿಸಿದರು. ಇಸ್ರೇಲ್‌ನ ಸಾರ್ವಜನಿಕ ರಜಾದಿನಗಳಲ್ಲಿ, ಮುಂದಿನ ರಜಾದಿನವನ್ನು ಜನವರಿ ೨೫ ರಂದು ನಿಗದಿಪಡಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜನವರಿ ೨೨ಕ್ಕೆ ಯಾವುದೇ ರಜಾದಿನವನ್ನು ಪಟ್ಟಿ ಮಾಡಲಾಗಿಲ್ಲ.

ಭಾರತದಲ್ಲಿ ಇಸ್ರೇಲಿ ರಾಯಭಾರ ಕಚೇರಿಗಯ ರಜಾದಿನಗಳ ಪಟ್ಟಿ ಮತ್ತು ಇಸ್ರೇಲ್‌ನಲ್ಲಿ ರಜಾದಿನಗಳ ಅಧಿಕೃತ ಪಟ್ಟಿ. (ಮೂಲ: ಸ್ಕ್ರೀನ್‌ಶಾಟ್‌ಗಳು/embassies.gov.il/www.timeanddate.com)

ಅಕ್ಟೋಬರ್ ೭, ೨೦೨೩ ರಂದು ಹಮಾಸ್ ನಡೆಸಿದ ದಾಳಿಯ ನಂತರ, ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಷ್ಟ್ ಮಾಡಿದ ಇಸ್ರೇಲ್ ಪರ ವಿಷಯಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ. ಭಾರತೀಯ ಧ್ವಜದ ಎಮೋಜಿಯ ಜೊತೆಗೆ ಇಸ್ರೇಲ್ ಫ್ಲ್ಯಾಗ್ ಎಮೋಜಿಯನ್ನು ಸೇರಿಸಿ ಅನೇಕ ಭಾರತೀಯ ಬಳಕೆದಾರರು ಎಕ್ಸ್  (ಹಿಂದೆ ಟ್ವಿಟ್ಟರ್) ನಲ್ಲಿ ತಮ್ಮ ಬಳಕೆದಾರಹೆಸರನ್ನು ನವೀಕರಿಸಿದ್ದಾರೆ ಮತ್ತು ಇಸ್ರೇಲ್ ಅನ್ನು ಬೆಂಬಲಿಸುವ ಹ್ಯಾಶ್‌ಟ್ಯಾಗ್‌ಗಳನ್ನು ಹಂಚಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಇಸ್ರೇಲ್ ಅನ್ನು ಬೆಂಬಲಿಸುವ ೨೦%  ಹ್ಯಾಶ್‌ಟ್ಯಾಗ್‌ಗಳು ಭಾರತದಿಂದ ಹೊರಹೊಮ್ಮಿವೆ ಎಂದು ನಾವು ಕಂಡುಕೊಂಡಿದ್ದೇವೆ. ನಮ್ಮ ವಿಶ್ಲೇಷಣೆಯನ್ನು ಇಲ್ಲಿ ಓದಿ. 

ಅಂತೆಯೇ, ಇಸ್ರೇಲ್ ಗೆ ಬೆಂಬಲವನ್ನು ವ್ಯಕ್ತಪಡಿಸುತ್ತಾ, ಜನವರಿ ೨೨ ರಂದು ಇಸ್ರೇಲ್ ರಜಾದಿನವನ್ನು ಘೋಷಿಸುವ ಈ ನಿರೂಪಣೆಯನ್ನು ಭಾರತೀಯ ಸಾಮಾಜಿಕ ಮಾಧ್ಯಮ ಖಾತೆಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆದರೆ ಈ ಹೇಳಿಕೆ ನಿರಾಧಾರವಾಗಿದೆ.

ತೀರ್ಪು
ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆಯನ್ನು ಆಚರಿಸಲು ಇಸ್ರೇಲ್ ಜನವರಿ ೨೨ ರಂದು ರಜೆ ಘೋಷಿಸಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.