ಇಲ್ಲ, ಕೇರಳ ಸರ್ಕಾರವಾಗಲಿ ಅಥವಾ ಹಾಲು ಒಕ್ಕೊಟವಾಗಲಿ ಕರ್ನಾಟಕದ ಡೈರಿ ಬ್ರ್ಯಾಂಡ್ ನಂದಿನಿಯನ್ನು ರಾಜ್ಯದಲ್ಲಿ ನಿಷೇಧಿಸಿಲ್ಲ

ಮೂಲಕ: ವಿವೇಕ್ ಜೆ
ಜುಲೈ 6 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಕೇರಳ ಸರ್ಕಾರವಾಗಲಿ ಅಥವಾ ಹಾಲು ಒಕ್ಕೊಟವಾಗಲಿ ಕರ್ನಾಟಕದ ಡೈರಿ ಬ್ರ್ಯಾಂಡ್ ನಂದಿನಿಯನ್ನು ರಾಜ್ಯದಲ್ಲಿ ನಿಷೇಧಿಸಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಕೇರಳದಲ್ಲಿ ನಂದಿನಿ ಔಟ್ಲೆಟ್ ಗಳನ್ನು ತೆರೆಯುವ ಬಗ್ಗೆ ಕೇರಳದ ಹಾಲು ಒಕ್ಕೂಟದಿಂದ ವಿರೋಧ ವ್ಯಕ್ತವಾಗಿದ್ದರೂ, ರಾಜ್ಯದಲ್ಲಿ ನಂದಿನಿ ಮಾರಾಟಕ್ಕೆ ಯಾವುದೇ ನಿಷೇಧವಿಲ್ಲ.

ಕ್ಲೈಮ್ ಐಡಿ 6b68e367

ಸಂದರ್ಭ

ಗುಜರಾತ್ ಮೂಲದ ಅಮುಲ್ ಹಾಲು ಕರ್ನಾಟಕದಲ್ಲಿ ಮಾರಾಟ ಪ್ರಾರಂಭಿಸುವುದರ ಬಗ್ಗೆ ಚುನಾವಣೆಯ ಮುಂಚೆ
ಕರ್ನಾಟಕದಲ್ಲಿ ಭಾರೀ ರಾಜಕೀಯ ಗದ್ದಲ ಭುಗಿಲೆದ್ದಿತ್ತು. ಹಲವು ರಾಜಕೀಯ ಪಕ್ಷಗಳು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಉತ್ಪಾದಿಸಿ ಮಾರಾಟ ಮಾಡುತ್ತಿರುವ ಸರ್ಕಾರಿ ಸ್ವಾಮ್ಯದ ನಂದಿನಿ ಹಾಲಿಗೆ ಹೆಮ್ಮೆಯ ವಿಷಯವಾಗಿ ಅಮುಲ್ ನ ಆಗಮನವನ್ನು ಪರಿವರ್ತಿಸಿ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿದರು.


ನಂದಿನಿ ಕೇರಳದಲ್ಲಿ ಎರಡು ಹಾಲಿನ ಮಳಿಗೆಗಳನ್ನು ತೆರೆದಿದ್ದರು ಮತ್ತು ರಾಜ್ಯದಲ್ಲಿ ೧೦೦ ಕ್ಕೂ ಹೆಚ್ಚು ಔಟ್‌ಲೆಟ್‌ಗಳಿಗೆ ಟೆಂಡರ್‌ಗಳನ್ನು ನೀಡಿದ್ದಾರೆ. ಅಮುಲ್ ಆಗಮನದ ಬಗ್ಗೆ ಕರ್ನಾಟಕದಲ್ಲಿನ ವಿರೋಧವನ್ನು ಉಲ್ಲೇಖಿಸಿ, ಮಿಲ್ಮಾ ಎಂದು ಕರೆಯಲಾದ ಕೇರಳ ಸಹಕಾರ ಹಾಲು ಮಾರಾಟ ಒಕ್ಕೂಟ (ಕೆಸಿಎಂಎಂಎಫ್), ನಂದಿನಿಯ ಕೇರಳದ ಪ್ರವೇಶದ ಬಗ್ಗೆ ಅತೃಪ್ತಿಯನ್ನು ವ್ಯಕ್ತಪಡಿಸಿತು.

ಹೀಗಿರುವಾಗ, ಸಾಮಾಜಿಕೆ ಮಾಧ್ಯಮಗಳಲ್ಲಿ ಕಂಡುಬಂದ ಕೆಲವು ಪೋಷ್ಟ್ ಗಳು ಕರ್ನಾಟಕಕ್ಕೆ ಅಮುಲ್ ಹಾಲಿನ ಪ್ರವೇಶಕ್ಕೆ ಕಾಂಗ್ರೆಸ್ ಪಕ್ಷದ ವಿರೋಧವು ಕೇರಳದಲ್ಲಿ ನಂದಿನಿಯನ್ನು ನಿಷೇಧಿಸಲು ಕಾರಣವಾಗಿದೆ ಎಂದು ಹೇಳಿಕೊಂಡಿವೆ. ಅಂತಹ ಪೋಷ್ಟ್ ಒಂದು ಕಾಂಗ್ರೆಸ್ ಪಕ್ಷವನ್ನು ಉಲ್ಲೇಖಿಸಿ ಹೀಗೆ ಹೇಳುತ್ತದೆ "ಇವರು ಮಾಡಿದ ನಾಟಕದಿಂದ ಜಾಗೃತಗೊಂಡ ಕೇರಳ ಹಾಲು ಒಕ್ಕೂಟ ನಮ್ಮ ನಂದಿನಿಯನ್ನು ನಿರ್ಬಂಧಿಸಿದೆ." ಆದರೆ, ನಂದಿನಿಯನ್ನು ಕೇರಳದಲ್ಲಿ ನಿಷೇಧಿಸಲಾಗಿದೆ ಎಂಬ ಹೇಳಿಕೆಗಳು ಸರಿಯಲ್ಲ.

ವಾಸ್ತವವಾಗಿ

ಕೇರಳದಲ್ಲಿ ನಂದಿನಿ ಔಟ್ಲೆಟ್ ಗಳನ್ನು ತೆರೆಯುವುದಕ್ಕೆ ಕೇರಳದ ಮಿಲ್ಮಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿಯವರ ಮಾತುಗಳನ್ನು ದಿ ಹಿಂದೂ ಹೀಗೆ ಉಲ್ಲೇಖಿಸಿದೆ "ಹಾಲಿನ ಸಹಕಾರಿ ಸಂಸ್ಥೆಗಳ ನಡುವೆ ಚಾಲ್ತಿಯಲ್ಲಿರುವ ಒಪ್ಪಂದ ಮತ್ತು ಸೌಜನ್ಯಯುತ ವ್ಯಾಪಾರ ಸಂಬಂಧಗಳ ಪ್ರಕಾರ, ದ್ರವ ಹಾಲಿನ ಮಾರಾಟವನ್ನು ಒಂದು ರಾಜ್ಯದ ಗಡಿಯ ಆಚೆ ಅನುಮತಿಯಿಲ್ಲದೆ ಮಾರಾಟಮಾಡುವುದು ತಪ್ಪಿಸಬೇಕು ಏಕೆಂದರೆ ಇದು ಆಯಾ ರಾಜ್ಯದ ಮಾರಾಟ ಪ್ರದೇಶದ ಅಸ್ಪಷ್ಟ ಅತಿಕ್ರಮಣವಾಗಿದೆ."

ಏಷ್ಯಾನೆಟ್ ನ್ಯೂಸ್‌ನೊಂದಿಗೆ ಮಾತನಾಡಿದ ಮಣಿ, ಕೇರಳವು ಈಗಾಗಲೇ ಕರ್ನಾಟಕದಿಂದ ೨.೫ ಲಕ್ಷ ಲೀಟರ್ ಹಾಲನ್ನು ಖರೀದಿಸುತ್ತಿದೆ ಮತ್ತು ಈಗಿರುವ ವ್ಯವಸ್ಥೆಯನ್ನು ಹಾಳುಮಾಡುವ ಮೂಲಕ ಸುಮಾರು ೧೦,೦೦೦ ಲೀಟರ್ ಹಾಲನ್ನು ಮಾರಾಟ ಮಾಡಲು ನಂದಿನಿ ಪ್ರಯತ್ನಿಸುತ್ತಿರುವುದು ಜಾಣತನದ ನಡೆಯಂತೆ ತೋರುತ್ತಿಲ್ಲ ಎಂದು ಗಮನಿಸಿದರು. ಒಂದು ರಾಜ್ಯದ ಸಹಕಾರಿ ಸಂಸ್ಥೆಯು ಮತ್ತೊಂದು ರಾಜ್ಯಕ್ಕೆ ಹೋಗಿ ಸ್ಥಳೀಯ ಸಹಕಾರಿ ಸಂಸ್ಥೆಗಳಿಗೆ ಅಪಾಯ ತಂದೊಡ್ಡುವ ಪದ್ಧತಿ ಆರೋಗ್ಯಕರ ಅಭ್ಯಾಸವಲ್ಲ ಎಂದು ಕೂಡ ಹೇಳಿದರು.

ಮಿಲ್ಮಾ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್. ಕೊಂಡ ಅವರನ್ನು ಉಲ್ಲೇಖಿಸಿ ಮಾತೃಭೂಮಿ ನ್ಯೂಸ್ ಒಂದು ರಾಜ್ಯದ ಸಹಕಾರಿ ಸಂಘವು ತನ್ನ ಉತ್ಪನ್ನಗಳನ್ನು ಇನ್ನೊಂದು ರಾಜ್ಯದಲ್ಲಿ ಮಾರಾಟ ಮಾಡುವುದರಿಂದ ಸ್ಥಳೀಯ ಸಹಕಾರ ಸಂಘಗಳಿಂದ ಎಲ್ಲ ರೀತಿಯಿಂದಲೂ ಕಳವಳ ಉಂಟಾಗುತ್ತದೆ ಮತ್ತು ಇದು ಮಾಡಬಾರದು ಎಂದು ವರದಿ ಮಾಡಿದೆ. ವರದಿಗಳ ಪ್ರಕಾರ ಮಿಲ್ಮಾ ಕೇರಳ ಸರ್ಕಾರಕ್ಕೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ ಎಂದು ಕೂಡ ತಿಳಿದುಬಂದಿದೆ.

ಗಮನಿಸಬೇಕಾದ ಸಂಗತಿಯೆಂದರೆ, ಕೇರಳದ ಹಲವಾರು ಉನ್ನತ ಅಧಿಕಾರಿಗಳು ಕೇರಳಕ್ಕೆ ನಂದಿನಿಯ "ಒಳನುಗ್ಗುವಿಕೆಯನ್ನು" ವಿರೋಧಿಸಿದ್ದಾರೆ ಅಥವಾ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದಲ್ಲಿ ನಂದಿನಿ ಹಾಲಿನ ಮಾರಾಟವನ್ನು ಕೆಸಿಎಂಎಂಎಫ್/ಮಿಲ್ಮ ಆಗಲಿ, ಕೇರಳ ಸರ್ಕಾರದಿಂದ ಆಗಲಿ, ಯಾವುದೇ ಅಧಿಕೃತ ಘೋಷಣೆಯನ್ನು ಹೊರಡಿಸಿಲ್ಲ. ಕೇರಳದ ಯಾವುದೇ ಸಚಿವರು ಅಥವಾ ಸರ್ಕಾರಿ ಅಧಿಕಾರಿ ಅಥವಾ ಮಿಲ್ಮಾದಲ್ಲಿ ಕೆಲಸ ಮಾಡುವ ಅಧಿಕಾರಿಯಾಗಲಿ ನಂದಿನಿಯ ಕೇರಳ ಪ್ರವೇಶವನ್ನು ನಿಷೇಧಿಸುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಕೊಚ್ಚಿ ಮತ್ತು ಮಲಪ್ಪುರಂ ನ ಮಂಜೇರಿಯಲ್ಲಿ ತೆರೆಯಲಾದ ಎರಡು ನಂದಿನಿ ಔಟ್ಲೆಟ್ ಗಳು ಈ ಫ್ಯಾಕ್ಟ್ ಚೆಕ್ ಬರೆಯುವ ಸಮಯದಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತಿದ್ದವು.

ತೀರ್ಪು

ಇತ್ತೀಚಿನ ನಂದಿನಿ-ಅಮುಲ್ ವಿವಾದವು ಕೇರಳ ಸರ್ಕಾರವು ತಮ್ಮ ರಾಜ್ಯದಲ್ಲಿನ ನಂದಿನಿ ಮಳಿಗೆಗಳನ್ನು ನಿಷೇಧಿಸಲು ದಾರಿ ಮಾಡಿಕೊಟ್ಟಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಹೇಳಿಕೊಂಡಿವೆ. ಕೇರಳದ ಹಾಲು ಒಕ್ಕೂಟ ಮತ್ತು ಸಹಕಾರ ಸಂಘಗಳಿಂದ ವ್ಯಾಪಕ ವಿರೋಧ ಈ ಬಗ್ಗೆ ಇದ್ದರೂ, ಕೇರಳದಲ್ಲಿ ನಂದಿನಿ ಹಾಲಿನ ಮಾರಾಟಕ್ಕೆ ಯಾವುದೇ ಅಧಿಕೃತ ನಿಷೇಧವಿಲ್ಲ. ಆದ್ದರಿಂದ ಈ ಹೇಳಿಕೆಯನ್ನು ನಾವು ತಪ್ಪು ಎಂದು ಗುರುತಿಸಿದ್ದೇವೆ.
 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.