ಇಲ್ಲ, ಭಾರತದಲ್ಲಿ ಶಿವಸೇನೆ (ಯುಬಿಟಿ) ಅಭ್ಯರ್ಥಿಯ ರ‍್ಯಾಲಿಯಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಲಾಗಿಲ್ಲ

ಮೂಲಕ: ತಾಹಿಲ್ ಅಲಿ
ಮೇ 21 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಭಾರತದಲ್ಲಿ ಶಿವಸೇನೆ (ಯುಬಿಟಿ) ಅಭ್ಯರ್ಥಿಯ ರ‍್ಯಾಲಿಯಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಲಾಗಿಲ್ಲ

ಚೆಂಬೂರಿನಲ್ಲಿ ಅನಿಲ್ ದೇಸಾಯಿ ಅವರ ರೋಡ್ ಶೋನಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಪ್ರಶ್ನೆಯಲ್ಲಿರುವ ಧ್ವಜವು ಪಾಕಿಸ್ತಾನದ ರಾಷ್ಟ್ರಧ್ವಜವಲ್ಲ ಆದರೆ ಸಾಮಾನ್ಯ ಇಸ್ಲಾಮಿಕ್ ಧ್ವಜವಾಗಿದೆ.

ಕ್ಲೈಮ್ ಐಡಿ 19cc1f1e

ಹೇಳಿಕೆ ಏನು?

ಕ್ರೇನ್‌ ಗೆ ಜೋಡಿಸಲಾದ ಬಿಳಿ ಅರ್ಧಚಂದ್ರ ಮತ್ತು ನಕ್ಷತ್ರದೊಂದಿಗೆ ಹಸಿರು ಧ್ವಜದ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಭಾರತದ ಸಾರ್ವತ್ರಿಕ ಚುನಾವಣೆಯ ನಡುವೆ ಇತ್ತೀಚೆಗೆ ರಾಜಕಾರಣಿ ಅನಿಲ್ ದೇಸಾಯಿ ಮುಂಬೈಯಲ್ಲಿ ನಡೆಸಿದ ರೋಡ್‌ಶೋನಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ ಎಂದು ವೀಡಿಯೋವನ್ನು ಹಂಚಿಕೊಳ್ಳುವ ಪೋಷ್ಟ್ ಗಳು ಹೇಳಿಕೊಂಡಿವೆ. ದೇಸಾಯಿ ಅವರು ಶಿವಸೇನೆ (ಯುಬಿಟಿ) ಪಕ್ಷದಿಂದ ಲೋಕಸಭೆಯ ಅಭ್ಯರ್ಥಿಯಾಗಿದ್ದಾರೆ.

ಸುಮಾರು ಎರಡು ನಿಮಿಷಗಳ ಅವಧಿಯ ವೀಡಿಯೋದಲ್ಲಿ, ಶಿವಸೇನಾ (ಯುಬಿಟಿ) ನಾಯಕರು ವಾಹನದಲ್ಲಿ ಸಂಚರಿಸುತ್ತಿದ್ದಂತೆ ಪಕ್ಷದ ವಿವಿಧ ಬೆಂಬಲಿಗರು ಪಟಾಕಿ ಸಿಡಿಸುವುದನ್ನು ಕಾಣಬಹುದು. ಶಿವಸೇನೆ (ಯುಬಿಟಿ) ಮತ್ತು ಅದರ ಮಿತ್ರಪಕ್ಷಗಳಾದ ಕಾಂಗ್ರೆಸ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಏನ್ ಸಿ ಪಿ), ಮತ್ತು ಅವರ ಒಕ್ಕೂಟವಾದ ಮಹಾ ವಿಕಾಸ್ ಅಘಾಡಿ (ಎಂ ವಿ ಎ) ನ ಚಿಹ್ನೆಗಳು ಮತ್ತು ಧ್ವಜಗಳನ್ನು ಸಹ ವೀಡಿಯೋದಲ್ಲಿ ನೋಡಬಹುದು. 

ಒಬ್ಬ ಬಳಕೆದಾರರು ಈ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ, "ಇದು ಉದ್ಧವ್ ಠಾಕ್ರೆ ಅಭ್ಯರ್ಥಿ ಅನಿಲ್ ದೇಸಾಯಿ ಅವರು ಚೆಂಬೂರಿನಲ್ಲಿ ಪಾಕಿಸ್ತಾನದ ಧ್ವಜದೊಂದಿಗೆ ಅಲ್ಪಸಂಖ್ಯಾತ ಮತದಾರರನ್ನು ಸಮಾಧಾನಪಡಿಸಲು ಪ್ರಚಾರ ಮಾಡುತ್ತಿದ್ದಾರೆ #ModiMagicInMumbai (sic)." ಈ ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿ ಮತ್ತು ಇದೇ ರೀತಿಯ ಹೇಳಿಕೆಯೊಂದಿಗೆ ಹಂಚಿಕೊಂಡ ಇತರ ಪೋಷ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.


ಮುಂಬೈನ ಚೆಂಬೂರ್‌ನಲ್ಲಿ ನಡೆದ ಶಿವಸೇನಾ (ಯುಬಿಟಿ) ರೋಡ್‌ಶೋನಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಲಾಗಿದೆ ಎಂದು ಹೇಳುವ ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಅಭ್ಯರ್ಥಿ ದೇಸಾಯಿ, ಮುಂಬೈ ದಕ್ಷಿಣ ಸೆಂಟ್ರಲ್ ಕ್ಷೇತ್ರಕ್ಕೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯಿಂದ ಹಾಲಿ ಸಂಸತ್ ಸದಸ್ಯ (ಎಂಪಿ) ರಾಹುಲ್ ಶೆಹ್ವಾಲೆ ವಿರುದ್ಧ ತಮ್ಮ ಮೊದಲ ರಾಜಕೀಯ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾರೆ. ಐದನೇ ಹಂತದ ಚುನಾವಣೆಯಲ್ಲಿ ಮಹಾರಾಷ್ಟ್ರದ ೧೩ ಲೋಕಸಭಾ ಕ್ಷೇತ್ರಗಳಲ್ಲಿ ಮೇ ೨೦ ರಂದು ಮತದಾನ ನಡೆಯಲಿದೆ.

ಅವರ ರ‍್ಯಾಲಿಯಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಹಾರಿಸಲಾಯಿತು ಎಂದು ಹೇಳುವ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರಾಕ್ಷನ್ ಗಳಿಸಿವೆ. ಆದರೆ, ದೇಸಾಯಿ ಅವರ ರೋಡ್‌ಶೋನಲ್ಲಿ ಕಂಡುಬಂದ ಧ್ವಜವು ಪಾಕಿಸ್ತಾನದ ಧ್ವಜವಲ್ಲ ಆದರೆ ಇಸ್ಲಾಮಿಕ್ ಧ್ವಜ ಎಂದು ನಾವು ಕಂಡುಕೊಂಡಿದ್ದೇವೆ.

ವಾಸ್ತವಾಂಶಗಳೇನು?

ವೈರಲ್ ವೀಡಿಯೋದಲ್ಲಿ ದೇಸಾಯಿ ಅವರನ್ನು ಫ್ರೇಮ್‌ನಲ್ಲಿ ಗುರುತಿಸಲು ನಮಗೆ ಸಾಧ್ಯವಾಯಿತು, ಅದು ಅವರು ನಡೆಸಿದ ರೋಡ್‌ಶೋ ಅನ್ನು ಚಿತ್ರಿಸುತ್ತದೆ ಎಂದು ತೋರಿಸುತ್ತದೆ. ನಂತರ ನಾವು ದೇಸಾಯಿ ಅವರ ಅಧಿಕೃತ ಫೇಸ್‌ಬುಕ್ ಖಾತೆಯನ್ನು ಪರಿಶೀಲಿಸಿದ್ದೇವೆ ಮತ್ತು ಅವರು ಮೇ ೧೫ ರಂದು ಚೆಂಬೂರಿನಲ್ಲಿ ನಡೆದ ರ‍್ಯಾಲಿಯ ಫೋಟೋಗಳನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮತ್ತು ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಷ್ಟ್ ಮಾಡಿರುವುದು ಕಂಡುಬಂದಿದೆ. 

ವೈರಲ್ ವೀಡಿಯೋವನ್ನು ಮುಂಬೈನ ಚೆಂಬೂರಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ನಾವು ನಂತರ ಸ್ಥಾಪಿಸಿದ್ದೇವೆ. ವೈರಲ್ ವೀಡಿಯೋದಲ್ಲಿ ಗೋಚರಿಸುವ ಫ್ಲೈಓವರ್ ಮತ್ತು ಕಟ್ಟಡದಿಂದ ಕ್ಯೂ ತೆಗೆದುಕೊಂಡು, ನಾವು ಸ್ಥಳವನ್ನು ಚೆಂಬೂರಿನ ಲೋಖಂಡೆ ಮಾರ್ಗಕ್ಕೆ ಜಿಯೋಲೊಕೇಟ್ ಮಾಡಲು ಸಾಧ್ಯವಾಯಿತು. ಇತ್ತೀಚಿನ ಗೂಗಲ್ ಸ್ಟ್ರೀಟ್ ವ್ಯೂ ಚಿತ್ರಗಳಲ್ಲಿ ಗೋಚರಿಸುವ ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಅದೇ ಅಂಗಡಿಗಳನ್ನು ನಾವು ಗುರುತಿಸಲು ಸಾಧ್ಯವಾಯಿತು.

ಚೆಂಬೂರಿನ ಲೋಖಂಡೆ ಮಾರ್ಗದ ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಕಂಡುಬರುವ ಹಲವಾರು ರಚನೆಗಳನ್ನು ವೈರಲ್ ಕ್ಲಿಪ್‌ನಲ್ಲಿ ಗುರುತಿಸಬಹುದು (ಮೂಲ: ಗೂಗಲ್ ಮ್ಯಾಪ್ಸ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಹಸಿರು ಧ್ವಜವನ್ನು ನೋಡಿದರೆ, ಅದು ಪಾಕಿಸ್ತಾನದ ರಾಷ್ಟ್ರಧ್ವಜ ಅಲ್ಲ ಎಂದು ಒಬ್ಬರು ಗಮನಿಸಬಹುದು. ನಿಜವಾದ ಪಾಕಿಸ್ತಾನಿ ಧ್ವಜವು ಧ್ವಜಸ್ತಂಭದ ಬದಿಯಲ್ಲಿ ದಪ್ಪ ಬಿಳಿ ಲಂಬವಾದ ಬ್ಯಾಂಡ್ ನೊಂದಿಗೆ ಹಸಿರು ಬಣ್ಣದ್ದಾಗಿದೆ. ಓರೆಯಾದ ಬಿಳಿ ಅರ್ಧಚಂದ್ರಾಕೃತಿ ಮತ್ತು ಐದು-ಬಿಂದುಗಳ ನಕ್ಷತ್ರವು ಹಸಿರು ಮೈದಾನದಲ್ಲಿ ಕೇಂದ್ರೀಕೃತವಾಗಿದೆ. 

ಆದರೆ, ವೈರಲ್ ವೀಡಿಯೋದಲ್ಲಿ ಕಂಡುಬರುವ ಧ್ವಜವು ಅರ್ಧಚಂದ್ರ ಮತ್ತು ನಕ್ಷತ್ರವನ್ನು ಹೊಂದಿದ್ದು ಅದು ಸ್ವಲ್ಪ ನೇರಗೊಳಿಸಲ್ಪಟ್ಟಿದೆ ಮತ್ತು ಸ್ವಲ್ಪ ವಿಭಿನ್ನವಾದ ಆಕಾರದಲ್ಲಿದೆ. ವೈರಲ್ ಧ್ವಜದ ಮಧ್ಯಭಾಗದಲ್ಲಿ ಐದು ಸಣ್ಣ ನಕ್ಷತ್ರಗಳನ್ನು ವಿತರಿಸಲಾಗಿದೆ, ಇದು ನಿಜವಾದ ಪಾಕಿಸ್ತಾನಿ ಧ್ವಜದಲ್ಲಿ ಇರುವುದಿಲ್ಲ. ಹೆಚ್ಚುವರಿಯಾಗಿ, ಈ ಧ್ವಜವು ಎಡಭಾಗದಲ್ಲಿ ಯಾವುದೇ ಬಿಳಿ ಪಟ್ಟಿಯನ್ನು ಹೊಂದಿಲ್ಲ. 


ವೈರಲ್ ವೀಡಿಯೋದಲ್ಲಿ ನಿಜವಾದ ಪಾಕಿಸ್ತಾನಿ ಧ್ವಜ ಮತ್ತು ಧ್ವಜದ ನಡುವಿನ ಹೋಲಿಕೆ. (ಮೂಲ: ಅನ್‌ಸ್ಪ್ಲ್ಯಾಶ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ಧ್ವಜವು ವಾಸ್ತವವಾಗಿ ಇಸ್ಲಾಮಿಕ್ ಧ್ವಜವಾಗಿದ್ದು, ಇದನ್ನು ಕೆಲವೊಮ್ಮೆ ಕೆಲವು ಮಾರ್ಪಾಡುಗಳೊಂದಿಗೆ, ಪ್ರಪಂಚದಾದ್ಯಂತ ಹಲವಾರು ಮಸೀದಿಗಳು, ಮುಸ್ಲಿಂ ಮನೆಗಳು ಮತ್ತು ಇಸ್ಲಾಮಿಕ್ ಸಂಸ್ಥೆಗಳು ಹಾರಿಸುತ್ತವೆ. ಸ್ಟಾಕ್ ಫೋಟೋ ವೆಬ್‌ಸೈಟ್ ಅಲಾಮಿಯ ಇಸ್ಲಾಮಿಕ್ ಧ್ವಜದ ಚಿತ್ರವು ಐದು ಸಣ್ಣ ನಕ್ಷತ್ರಗಳನ್ನು ಹೊರತುಪಡಿಸಿ ವೀಡಿಯೋದಲ್ಲಿ ಕಂಡುಬರುವ ಧ್ವಜಕ್ಕೆ ಹೋಲುವ ವೈಶಿಷ್ಟ್ಯಗಳನ್ನು ತೋರಿಸುತ್ತದೆ. ಇಸ್ಲಾಮಿಕ್ ಧ್ವಜಗಳು ಇಸ್ಲಾಮಿಕ್ ನಂಬಿಕೆಗಳ ಹೆಚ್ಚು ಸಾಮಾನ್ಯ ಪ್ರಾತಿನಿಧ್ಯವಾಗಿದೆ ಮತ್ತು ವೈರಲ್ ವೀಡಿಯೋದಲ್ಲಿ ಕಂಡುಬರುವಂತೆ ಹಸಿರು ಬಣ್ಣ ಮತ್ತು ಇಸ್ಲಾಮಿಕ್ ಚಿಹ್ನೆಗಳ ಮೇಲೆ ಕೇಂದ್ರೀಕರಿಸುವ ವಿನ್ಯಾಸದಲ್ಲಿ ಬದಲಾಗಬಹುದು. ಕ್ಲಿಪ್‌ನಲ್ಲಿರುವ ಧ್ವಜವನ್ನು ಹೋಲುವ ಧ್ವಜವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಲಭ್ಯವಿದೆ.

ವೈರಲ್ ಕ್ಲಿಪ್‌ನಲ್ಲಿ ಕಂಡುಬರುವಂತೆ ಇದೇ ರೀತಿಯ ಧ್ವಜವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ, ಅಲ್ಲಿ ಅದನ್ನು ಇಸ್ಲಾಮಿಕ್ ಧ್ವಜ ಎಂದು ಗುರುತಿಸಲಾಗಿದೆ. (ಮೂಲ: ಸ್ಕ್ರೀನ್‌ಶಾಟ್/ ಫ್ಲಿಪ್‌ಕಾರ್ಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಚೆಂಬೂರಿನಲ್ಲಿ ದೇಸಾಯಿ ಅವರ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಗುರುತಿಸಿರುವ ಬಗ್ಗೆ ನಮಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ.

ಪ್ರಶ್ನೆಯಲ್ಲಿರುವ ಧ್ವಜವು ಇಂಡಿಯನ್ ಯೂನಿಯನ್ ಮುಸ್ಲಿಂ ಯೂನಿಯನ್ ಲೀಗ್ (ಐಯುಎಂಎಲ್) ಎಂದು ಕೆಲವು ಔಟ್‌ಲೆಟ್‌ಗಳು (ಇಲ್ಲಿ ಆರ್ಕೈವ್ ಮಾಡಿ) ಹೇಳಿಕೊಂಡಿವೆ, ಆದರೆ ಅದು ಅವರ ಅಧಿಕೃತ ಧ್ವಜಕ್ಕೆ ಹೊಂದಿಕೆಯಾಗುವುದಿಲ್ಲ. ರ‍್ಯಾಲಿಗಳಲ್ಲಿ ಹಾರಿಸಲಾಗುತ್ತದೆ, ಐಯುಎಂಎಲ್ (IUML) ಧ್ವಜವು ಸಾಮಾನ್ಯವಾಗಿ ಧ್ವಜಸ್ತಂಭಕ್ಕೆ ಎದುರಾಗಿರುವ ಅರ್ಧಚಂದ್ರನನ್ನು ತೋರಿಸುತ್ತದೆ. ಆದರೆ, ವೈರಲ್ ಕ್ಲಿಪ್‌ನಲ್ಲಿರುವ ಧ್ವಜವು ಧ್ರುವದಿಂದ ದೂರಕ್ಕೆ ಮುಖ ಮಾಡುತ್ತಿರುವ ಚಂದ್ರನನ್ನು ತೋರಿಸುತ್ತದೆ.

ವೈರಲ್ ವೀಡಿಯೋದಲ್ಲಿ ಕಂಡುಬರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಧಿಕೃತ ಧ್ವಜ ಮತ್ತು ಧ್ವಜದ ನಡುವಿನ ಹೋಲಿಕೆ. (ಮೂಲ: ವಿಕಿಪೀಡಿಯಾ/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಲಾಜಿಕಲಿ ಫ್ಯಾಕ್ಟ್ಸ್ ಈ ಹಿಂದೆ ರ‍್ಯಾಲಿಗಳಲ್ಲಿ ಇಸ್ಲಾಮಿಕ್ ಧ್ವಜಗಳನ್ನು ಪಾಕಿಸ್ತಾನದ ರಾಷ್ಟ್ರೀಯ ಧ್ವಜ ಎಂದು ತಪ್ಪಾಗಿ ಗುರುತಿಸಿದ ಇದೇ ರೀತಿಯ ಹೇಳಿಕೆಗಳನ್ನು ನಿರಾಕರಿಸಿದೆ. ನೀವು ಇಲ್ಲಿ ಮತ್ತು ಇಲ್ಲಿ ಫ್ಯಾಕ್ಟ್-ಚೆಕ್ ಅನ್ನು ಓದಬಹುದು.

ತೀರ್ಪು

ಶಿವಸೇನಾ (ಯುಬಿಟಿ) ಲೋಕಸಭಾ ಅಭ್ಯರ್ಥಿ ಅನಿಲ್ ದೇಸಾಯಿ ಅವರು ನಡೆಸಿದ ಚುನಾವಣಾ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಎತ್ತಿ ತೋರಿಸುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೋ ತಪ್ಪು. ವೀಡಿಯೋದಲ್ಲಿರುವ ಧ್ವಜವು ವಿವಿಧ ಧಾರ್ಮಿಕ ಕೂಟಗಳಲ್ಲಿ ಬಳಸಲಾಗುವ ಸಾಮಾನ್ಯ ಇಸ್ಲಾಮಿಕ್ ಧ್ವಜವಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.