ಇಲ್ಲ, ಪ್ರಧಾನಿ ಮೋದಿ ಭಾರತದ ರಾಷ್ಟ್ರಪತಿ ಮುರ್ಮು ಅವರ ಚರ್ಮದ ಬಣ್ಣದ ಬಗ್ಗೆ 'ಜನಾಂಗೀಯ ಕಾಮೆಂಟ್‌ಗಳನ್ನು' ಮಾಡಿಲ್ಲ

ಮೂಲಕ: ರಾಜೇಶ್ವರಿ ಪರಸ
ಮೇ 24 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಪ್ರಧಾನಿ ಮೋದಿ ಭಾರತದ ರಾಷ್ಟ್ರಪತಿ ಮುರ್ಮು ಅವರ ಚರ್ಮದ ಬಣ್ಣದ ಬಗ್ಗೆ 'ಜನಾಂಗೀಯ ಕಾಮೆಂಟ್‌ಗಳನ್ನು' ಮಾಡಿಲ್ಲ

ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಭಾರತದ ಪ್ರಧಾನಿ ಮೋದಿಯವರು ಜನಾಂಗೀಯ ಕಾಮೆಂಟ್‌ ಮಾಡಿದ್ದಾರೆ ಎಂದು ಹೇಳುವ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ರಾಷ್ಟ್ರಪತಿ ಮುರ್ಮು ಅವರ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ತಪ್ಪಾಗಿ ಸೂಚಿಸಲು ಮೋದಿಯವರ ಭಾಷಣದ ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ಕ್ಲೈಮ್ ಐಡಿ 689e72bf

ಹೇಳಿಕೆ ಏನು?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ೧೫ ಸೆಕೆಂಡುಗಳ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಅವರು ಭಾರತದ ಎಲ್ಲಾ ಕಪ್ಪು ಚರ್ಮದ ವ್ಯಕ್ತಿಗಳನ್ನು "ಆಫ್ರಿಕನ್ನರು" ಎಂದು ಉಲ್ಲೇಖಿಸಿದ್ದಾರೆ ಮತ್ತು ಭಾರತದ ಅಧ್ಯಕ್ಷೆ ದ್ರೌಪದಿ ಮುರ್ಮು ಅವರನ್ನು 'ಸೋಲಿಸಬೇಕಾಗಿದೆ' ಎಂದು ಹೇಳಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಕ್ಲಿಪ್ ಅನ್ನು ಶೇರ್ ಮಾಡಲಾಗುತ್ತಿದೆ. 


ವೈರಲ್ ವೀಡಿಯೋದಲ್ಲಿ, ಮೋದಿ ಅವರು ಹೇಳುತ್ತಿದ್ದಾರೆ, “ಕಪ್ಪು ಚರ್ಮದ ಜನರು, ಅವರೆಲ್ಲರೂ ಆಫ್ರಿಕನ್ನರು. ದ್ರೌಪದಿ ಮುರ್ಮು ಕೂಡ ಆಫ್ರಿಕನ್, ಆದ್ದರಿಂದಲೇ ಅವಳಂತಹ ಕಪ್ಪಗಿರುವವರನ್ನು ಸೋಲಿಸಬೇಕು.” ಪೋಷ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಮತ್ತು ಅಂತಹ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು
(ಮೂಲ: ಫೇಸ್‌ಬುಕ್/ ಯೂಟ್ಯೂಬ್/ ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಹೇಳಿಕೆ ತಪ್ಪು. ಪ್ರಶ್ನೆಯಲ್ಲಿರುವ ವೀಡಿಯೋವನ್ನು ಸಂದರ್ಭದಿಂದ ಹೊರಗಿಡಲಾಗಿದೆ. ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರ ಕೆಲವು ಟೀಕೆಗಳನ್ನು ಉಲ್ಲೇಖಿಸುವ ಮೋದಿಯವರ ಭಾಷಣದ ಭಾಗವನ್ನು ಆಯ್ದು ಎಡಿಟ್ ಮಾಡಲಾಗಿದೆ. 

ವಾಸ್ತವಾಂಶಗಳೇನು?

ವೀಡಿಯೋದ ಮೂಲವನ್ನು ತನಿಖೆ ಮಾಡಿದಾಗ, ವೈರಲ್ ಕ್ಲಿಪ್ ಅನ್ನು ಮೇ ೮, ೨೦೨೪ ರಂದು ತೆಲಂಗಾಣದ ವಾರಂಗಲ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮಾಡಿದ ಭಾಷಣದಿಂದ ಹೊರತೆಗೆಯಲಾಗಿದೆ ಎಂದು ಕಂಡುಕೊಂಡೆವು. ಸಂಪೂರ್ಣ ಭಾಷಣವು ಭಾರತೀಯ ಜನತಾ ಪಕ್ಷದ ಯೂಟ್ಯೂಬ್‌ನಲ್ಲಿ ಲಭ್ಯವಿದೆ. (ಇಲ್ಲಿ ಆರ್ಕೈವ್ ಮಾಡಲಾಗಿದೆ).

ಎಡಿಟ್ ಮಾಡದ ವೀಡಿಯೋದಲ್ಲಿ, ಮೋದಿ ಅವರು ಕಾಂಗ್ರೆಸ್ ಪಕ್ಷ ಮತ್ತು ನಾಯಕ ರಾಹುಲ್ ಗಾಂಧಿಯನ್ನು ಟೀಕಿಸಿದರು, ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಪಿತ್ರೋಡಾ ಅವರು ಮಾಡಿದ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ.

ಅವರ  ಭಾಷಣದ ಮೂಲ ವೀಡಿಯೋದಲ್ಲಿ ೪೩:೫೧ ಮಾರ್ಕ್ ನಲ್ಲಿ ಮೋದಿ ಹೀಗೆ ಹೇಳುತ್ತಾರೆ, "ಇಂದು, ರಾಜಕುಮಾರನ ಚಿಕ್ಕಪ್ಪ (ಗಾಂಧಿಯನ್ನು ಉಲ್ಲೇಖಿಸಿ) ಅಮೆರಿಕಾದಲ್ಲಿ ನೆಲೆಸಿದ್ದಾರೆ ಎಂದು ನಾನು ಕಂಡುಹಿಡಿದಿದ್ದೇನೆ. ರಾಜಕುಮಾರನ ಚಿಕ್ಕಪ್ಪ ಆತನ ತತ್ವಜ್ಞಾನಿ ಮತ್ತು ಮಾರ್ಗದರ್ಶಕನಾಗಿ ಸೇವೆ ಸಲ್ಲಿಸುತ್ತಾನೆ. ಕ್ರಿಕೆಟ್‌ನಲ್ಲಿ ಮೂರನೇ ಅಂಪೈರ್, ಅನಿಶ್ಚಿತತೆಯನ್ನು ಎದುರಿಸಿದಾಗ ಈ ಮೂರನೇ ವ್ಯಕ್ತಿಯಿಂದ ಸಲಹೆ ಪಡೆಯುತ್ತಾನೆ, ಈ ತತ್ವಜ್ಞಾನಿ ಮತ್ತು ಮಾರ್ಗದರ್ಶಕ ಚಿಕ್ಕಪ್ಪ, ಕಪ್ಪು ಚರ್ಮ ಹೊಂದಿರುವ ವ್ಯಕ್ತಿಗಳು ಆಫ್ರಿಕನ್ ಎಂದು ಪ್ರತಿಪಾದಿಸಿದರು ಚರ್ಮದ ಬಣ್ಣವನ್ನು ಆಧರಿಸಿ, ಅವರು ದ್ರೌಪದಿ ಮುರ್ಮು ಅವರನ್ನು ಆಫ್ರಿಕನ್ ಮೂಲದವರೆಂದು ಭಾವಿಸಿದರು, ಆದ್ದರಿಂದ ಅವರನ್ನು ಸೋಲಿಸಬೇಕೆಂದು ಸೂಚಿಸಿದರು. (ಕೆಳಗಿನ ವೀಡಿಯೋದಲ್ಲಿ ೪೩:೫೧ ರಿಂದ ೪೫:೨೨ ರವರೆಗೆ ಮೋದಿಯವರ ಟೀಕೆಗಳನ್ನು ಕೇಳಬಹುದು.)

೪೪:೪೦ ರಿಂದ ೪೪:೪೭ ಮತ್ತು ೪೫:೧೨ ರಿಂದ ೪೫:೨೨ ರವರೆಗಿನ ಮೋದಿ ಭಾಷಣದ ಭಾಗಗಳನ್ನು ಒಟ್ಟಿಗೆ ವಿಭಜಿಸಲಾಗಿದೆ ಮತ್ತು ತಪ್ಪುದಾರಿಗೆಳೆಯುವ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಮೇ ೮ ರಂದು ದಿ ಸ್ಟೇಟ್ಸ್‌ಮನ್‌ಗೆ ನೀಡಿದ ಸಂದರ್ಶನದಲ್ಲಿ ಪಿತ್ರೋಡಾ ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಿದರು, ಅಲ್ಲಿ ಅವರು ಭಾರತದ ವೈವಿಧ್ಯತೆಯನ್ನು ಶ್ಲಾಘಿಸಿದರು, “ನಾವು ಭಾರತವನ್ನು ವೈವಿಧ್ಯಮಯವಾಗಿ ಒಟ್ಟಿಗೆ ಹಿಡಿದಿಟ್ಟುಕೊಳ್ಳಬಹುದು, ಅಲ್ಲಿ ಪೂರ್ವದ ಜನರು ಚೀನಿಯರಂತೆ ಕಾಣುತ್ತಾರೆ, ಪಶ್ಚಿಮದಲ್ಲಿ ಜನರು ಅರಬ್‌ರಂತೆ ಕಾಣುತ್ತಾರೆ, ಉತ್ತರದಲ್ಲಿರುವ ಜನರು ಬಹುಶಃ ಬಿಳಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ. ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು. ” (ಪಿಟ್ರೋಡಾ ಅವರ ಕಾಮೆಂಟ್‌ಗಳನ್ನು ೨:೪೧ ಟೈಮ್‌ಸ್ಟ್ಯಾಂಪ್‌ನಿಂದ ಕೇಳಬಹುದು ಮತ್ತು ವೀಡಿಯೋದ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.)

ಅವರ ಕಾಮೆಂಟ್‌ಗಳಿಂದ ಹಿನ್ನಡೆಯಾದ ನಂತರ, ಪಿತ್ರೋಡಾ ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಸ್ಯಾಮ್ ಪಿತ್ರೋಡಾ ಅವರನ್ನು ಟೀಕಿಸುವ ಮೋದಿಯವರ ಟೀಕೆಗಳನ್ನು ಆಯ್ದವಾಗಿ ಸಂಪಾದಿಸಲಾಗಿದೆ ಮತ್ತು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಮೇಲಿನ ಪುರಾವೆಗಳು ಸ್ಥಾಪಿಸುತ್ತವೆ.

ತೀರ್ಪು

ಭಾರತದ ಪ್ರಧಾನಿ ಮೋದಿ ಅವರು ತೆಲಂಗಾಣದ ವಾರಂಗಲ್‌ನಲ್ಲಿ ತಮ್ಮ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಜನಾಂಗೀಯ ಟೀಕೆಗಳನ್ನು ಮಾಡಿದ್ದಾರೆ ಎಂಬ ಹೇಳಿಕೆ ತಪ್ಪು. ಸ್ಯಾಮ್ ಪಿತ್ರೋಡಾ ವಿರುದ್ಧ ಮೋದಿಯವರ ಟೀಕೆಯನ್ನು ಆಯ್ದವಾಗಿ ಸಂಯೋಜಿಸಿ ಎಡಿಟ್ ಮಾಡಲಾಗಿದೆ.  ಆದ್ದರಿಂದ, ನಾವು ಈ ಹೇಳಿಕೆಯನ್ನು  ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.