ಇಲ್ಲ, ದಿ ನ್ಯೂಯಾರ್ಕ್ ಟೈಮ್ಸ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಹಾಸ್ಯ ಮಾಡುವ ಕಾರ್ಟೂನ್ ಅನ್ನು ಪ್ರಕಟಿಸಲಿಲ್ಲ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಮಾರ್ಚ್ 22 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ದಿ ನ್ಯೂಯಾರ್ಕ್ ಟೈಮ್ಸ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಹಾಸ್ಯ ಮಾಡುವ ಕಾರ್ಟೂನ್ ಅನ್ನು ಪ್ರಕಟಿಸಲಿಲ್ಲ

ವೈರಲ್ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಪ್ರಕಟಣೆಯು ವೈರಲ್ ಕಾರ್ಟೂನ್ ಅಥವಾ ಮೋದಿಯನ್ನು ಅಪಹಾಸ್ಯ ಮಾಡುವ ಯಾವುದೇ ಇತ್ತೀಚಿನ ಲೇಖನಗಳನ್ನು ಪ್ರಕಟಿಸಲಿಲ್ಲ. ವೈರಲ್ ಆಗಿರುವ ಮುಖಪುಟ ನಕಲಿಯಾಗಿದೆ.

ಕ್ಲೈಮ್ ಐಡಿ 4fa5d60e

ಹೇಳಿಕೆ ಏನು?

ಹಲವಾರು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ದಿ ನ್ಯೂಯಾರ್ಕ್ ಟೈಮ್ಸ್ ಮುಖಪುಟದ ಸ್ಕ್ರೀನ್‌ಶಾಟ್ ಅನ್ನು ವ್ಯಾಪಕವಾಗಿ ಹಂಚಿಕೊಂಡಿವೆ, ಇದು ಭಾರತದ ಪ್ರಧಾನಿ ಮೋದಿ ಅವರನ್ನು ಅಪಹಾಸ್ಯ ಮಾಡಿದೆ. ಅಮೆರಿಕದ ದಿನ ಪತ್ರಿಕೆಯು ಮೋದಿಯನ್ನು ಅವಹೇಳನ ಮಾಡುವ ಕಾರ್ಟೂನ್ ಮತ್ತು ಲೇಖನವನ್ನು ಪ್ರಕಟಿಸಿದೆ ಎಂದು ಈ ಪೋಷ್ಟ್ ಗಳು ಹೇಳುತ್ತವೆ.

ಪ್ರಶ್ನೆಯಲ್ಲಿರುವ ಸ್ಕ್ರೀನ್‌ಶಾಟ್ ಸಿಂಹಾಸನದ ಮೇಲೆ ಬೆತ್ತಲೆಯಾಗಿ ಕುಳಿತಿರುವ ರಾಜನನ್ನು ಚಿತ್ರಿಸುವ ವ್ಯಂಗ್ಯಚಿತ್ರವನ್ನು ಒಳಗೊಂಡಿದೆ. ಚುನಾವಣಾ ಬಾಂಡ್ ದತ್ತಾಂಶದ ಕುರಿತು ನಡೆಯುತ್ತಿರುವ ವಿವಾದದ ನಡುವೆ ಭಾರತದ ಸುಪ್ರೀಂ ಕೋರ್ಟ್ ಮೋದಿಯನ್ನು 'ಬೆತ್ತಲೆ' ಎಂದು ಘೋಷಿಸಿದೆ ಎಂದು ಜೊತೆಯಲ್ಲಿರುವ ಪಠ್ಯವು ಹೇಳುತ್ತದೆ. ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಆಪಾದಿತ ಸ್ಕ್ರೀನ್‌ಶಾಟ್ ಅನ್ನು ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ, ದಿ ನ್ಯೂಯಾರ್ಕ್ ಟೈಮ್ಸ್‌ನಂತಹ ಅಂತರರಾಷ್ಟ್ರೀಯ ಮಾಧ್ಯಮಗಳು ಚುನಾವಣಾ ಬಾಂಡ್ ವಿವಾದವು ಮೋದಿಯನ್ನು 'ಬೆತ್ತಲೆಯಾಗಿ' ಮಾಡಿದೆ ಎಂದು ವರದಿ ಮಾಡಿವೆ. (೨೦೧೭ ರಲ್ಲಿ ಪರಿಚಯಿಸಲಾಯಿತು, ಚುನಾವಣಾ ಬಾಂಡ್‌ಗಳು ಭಾರತದಲ್ಲಿನ ರಾಜಕೀಯ ಸಂಸ್ಥೆಗಳಿಗೆ ಅನಾಮಧೇಯ ದೇಣಿಗೆಗಳನ್ನು ಅನುಮತಿಸುತ್ತವೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು ಹಲವಾರು ದೊಡ್ಡ ಕಂಪನಿಗಳನ್ನು ರಾಜಕೀಯ ನಿಧಿದಾರರೆಂದು ಎತ್ತಿ ತೋರಿಸಲು ಕಾರಣವಾಯಿತು.)

ವೈರಲ್ ಕ್ಲಿಪ್ಪಿಂಗ್ ಅನ್ನು ಹಂಚಿಕೊಳ್ಳುವ ಒಂದು ಪೋಷ್ಟ್ ಈ ಫ್ಯಾಕ್ಟ್-ಚೆಕ್ ಅನ್ನು  ಬರೆಯುವ ಸಮಯದಲ್ಲಿ ೧೨೧,೦೦೦  ವೀಕ್ಷಣೆಗಳನ್ನು ಗಳಿಸಿತು. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಗಳು ಮತ್ತು ಅಂತಹುದೇ ಇತರವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ವೈರಲ್ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ದಿ ನ್ಯೂಯಾರ್ಕ್ ಟೈಮ್ಸ್‌ಗೆ ಕಾರಣವಾದ ಪತ್ರಿಕೆಯ ಮುಖಪುಟವು ನಕಲಿಯಾಗಿದೆ. ಈ ಔಟ್‌ಲೆಟ್ ಇತ್ತೀಚೆಗೆ ಪ್ರಧಾನಿ ಮೋದಿಯವರನ್ನು ಅಪಹಾಸ್ಯ ಮಾಡುವ ಯಾವುದೇ ಲೇಖನಗಳನ್ನು ಪ್ರಕಟಿಸಿಲ್ಲ.

ವೈರಲ್ ಕಾರ್ಟೂನ್ ಅನ್ನು ದಿನಪತ್ರಿಕೆ ಪ್ರಕಟಿಸಿದೆಯೇ?
ಉದ್ದೇಶಿತ ಪತ್ರಿಕೆಯ ಮುಖಪುಟದಲ್ಲಿ ಮುದ್ರಿಸಲಾದ ದಿನಾಂಕವು ಮಾರ್ಚ್ ೧೫, ೨೦೨೪ ಎಂದು ನಾವು ಗಮನಿಸಿದ್ದೇವೆ. ನಂತರ ನಾವು ನ್ಯೂಯಾರ್ಕ್ ಟೈಮ್ಸ್ ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ ಮತ್ತು ಅದೇ ದಿನಾಂಕದ ಆವೃತ್ತಿಯ ಮೊದಲ ಪುಟವನ್ನು ಪರಿಶೀಲಿಸಿದ್ದೇವೆ. ಆದರೆ, ಮೂಲ ಆವೃತ್ತಿಯ ಈ ಪುಟವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೈರಲ್ ಪತ್ರಿಕೆ ಕ್ಲಿಪ್‌ನಿಂದ ಅಗಾಧವಾಗಿ ಭಿನ್ನವಾಗಿದೆ.

ವೈರಲ್ ಮತ್ತು ಅಧಿಕೃತ ವೃತ್ತಪತ್ರಿಕೆ ತುಣುಕುಗಳ ನಡುವಿನ ಹೋಲಿಕೆ.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಸಂಪಾದಿಸಲಾಗಿದೆ)

ದಿನ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಪ್ರಧಾನಿ ಮೋದಿಯನ್ನು ಅಪಹಾಸ್ಯ ಮಾಡುವ ವೈರಲ್ ಚಿತ್ರ ಅಥವಾ ವರದಿಯೂ ನಮಗೆ ಕಂಡುಬಂದಿಲ್ಲ.

ವೈರಲ್ ಸ್ಕ್ರೀನ್‌ಶಾಟ್ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ಅಧಿಕೃತ ವಿಷಯವನ್ನು ಪ್ರತಿನಿಧಿಸುವುದಿಲ್ಲ ಎಂದು ಇದು ಸಾಬೀತುಪಡಿಸುತ್ತದೆ.

ವೈರಲ್ ಕ್ಲಿಪ್ಪಿಂಗ್ ಬಗ್ಗೆ ಏನು?
ವೈರಲ್ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾದ ಕ್ಲಿಪ್ಪಿಂಗ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಕಾಣುವ ಹಲವಾರು ತಪ್ಪುಗಳು ಪ್ರಮುಖ ಸೂಚಕಗಳನ್ನು ಬಹಿರಂಗಪಡಿಸುತ್ತದೆ. ಮೊದಲನೆಯದಾಗಿ, ವೃತ್ತಪತ್ರಿಕೆಯ ಮೇಲ್ಭಾಗದಲ್ಲಿ "Satire edition" ಎಂಬ ಪದಗಳನ್ನು ಪ್ರಕಾಣಬಹುದು. ಎರಡು ಕಡೆ 'Reported By- @Educated Billa' ಎಂಬ ಪದಗಳನ್ನು ಗಮನಿಸಬಹುದು. 

ಇದಲ್ಲದೆ, ನ್ಯೂ ಯಾರ್ಕ್ ಟೈಮ್ಸ್ ಇಂಗ್ಲಿಷ್ ಪ್ರಕಟಣೆಯಾಗಿದ್ದರೂ ಸಹ, ವೃತ್ತಪತ್ರಿಕೆಯ ಕ್ಲಿಪ್‌ನ ಕೆಳಗಿನ ಬಲ ಮೂಲೆಯಲ್ಲಿ ಹಿಂದಿ ಲೇಖನವನ್ನು ನಾವು ಗಮನಿಸಿದ್ದೇವೆ. ಹೆಚ್ಚುವರಿಯಾಗಿ, ಕ್ಲಿಪ್‌ನಲ್ಲಿ ಪಿಎಂ ಮೋದಿಯನ್ನು 'ಫೆಕು' ಎಂದು ಉಲ್ಲೇಖಿಸಲಾಗಿದೆ, ಇದು ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಇರುವ ಸಾಧ್ಯತೆಯಿಲ್ಲ. 'Modiji' ಅನ್ನು 'Moiji' ಎಂದು ತಪ್ಪಾಗಿ ಬರೆಯುವುದು ಪತ್ರಿಕೆಯಲ್ಲಿ ಬರುವ ಸಾಧ್ಯತೆಯಿಲ್ಲ.

"ವಿಡಂಬನೆ ಆವೃತ್ತಿ" ಲೇಬಲ್ ಮತ್ತು ಕೆಳಗಿನ ಬಲ ಮೂಲೆಯಲ್ಲಿ ಹಿಂದಿ ಲೇಖನವನ್ನು ಒಳಗೊಂಡ ವೈರಲ್ ಪತ್ರಿಕೆಯ ಮೊದಲ ಪುಟದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಸಂಪಾದಿಸಲಾಗಿದೆ)

ಇದಲ್ಲದೆ, ಫಾರ್ಮ್ಯಾಟಿಂಗ್, ಫಾಂಟ್ ಗಾತ್ರ ಮತ್ತು ವೃತ್ತಪತ್ರಿಕೆ ಕ್ಲಿಪ್‌ನಲ್ಲಿನ ಚಿತ್ರಗಳಲ್ಲಿ ಹಲವಾರು ಅಸಂಗತತೆಗಳಿವೆ. ಪತ್ರಿಕೆ ಕ್ಲಿಪ್ ನಕಲಿ ಎಂದು ಈ ಅಂಶಗಳು ಬಲವಾಗಿ ಸೂಚಿಸುತ್ತವೆ.

ಮುಂದೆ, ವೈರಲ್ ಕ್ಲಿಪ್ಪಿಂಗ್‌ನಲ್ಲಿ ಉಲ್ಲೇಖಿಸಲಾದ 'ಎಜುಕೇಟೆಡ್ ಬಿಲ್ಲಾ' ನ ಎಕ್ಸ್ ಖಾತೆಯು ಮಾರ್ಚ್ ೧೫ ರಂದು ಈ ನಕಲಿ ಪತ್ರಿಕೆಯ ಪುಟವನ್ನು ಹಂಚಿಕೊಂಡಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಅವರ ಪೋಷ್ಟ್ ನಲ್ಲಿನ ಹಲವಾರು ಕಾಮೆಂಟ್‌ಗಳಿಗೆ ಪ್ರತಿಕ್ರಿಯೆಯಾಗಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಕ್ಲಿಪ್ಪಿಂಗ್ ಅನ್ನು ವಿಡಂಬನೆ ಎಂದು ಹೇಳಿದ್ದಾರೆ ಮತ್ತು ಅವರು ಎಡಿಟಿಂಗ್ ಸಾಫ್ಟ್‌ವೇರ್ ಎಂಎಸ್ ಪೇಂಟ್ ಬ್ರಷ್ ಅನ್ನು ಬಳಸಿಕೊಂಡು ಅದನ್ನು ರಚಿಸಿದ್ದಾರೆ ಎಂದು ಹೇಳಿದ್ದಾರೆ.

ತೀರ್ಪು
ನ್ಯೂಯಾರ್ಕ್ ಟೈಮ್ಸ್ ಈ ವೈರಲ್ ಲೇಖನ ಮತ್ತು ಪ್ರಧಾನಿ ಮೋದಿಯನ್ನು ಅಪಹಾಸ್ಯ ಮಾಡುವ ಕಾರ್ಟೂನ್ ಅನ್ನು ಪ್ರಕಟಿಸಲಿಲ್ಲ. ಇದು ಸಾಮಾಜಿಕ ಮಾಧ್ಯಮದ ಬಳಕೆದಾರರಿಂದ ರಚಿಸಲಾದ ವಿಡಂಬನಾತ್ಮಕ ಚಿತ್ರ ಎಂದು ನಮ್ಮ ಸಂಶೋಧನೆಯು ಸಾಬೀತುಪಡಿಸಿದೆ. ಆದ್ದರಿಂದ, ವೈರಲ್ ಪತ್ರಿಕೆ ಕ್ಲಿಪ್ ನಕಲಿಯಾಗಿದೆ.


(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.