ಇರಾಕ್ ನ ರಾಜಕಾರಣಿಯ ಹಳೆಯ ವೀಡಿಯೋವನ್ನು ಇತ್ತೀಚಿನ ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ನವೆಂಬರ್ 3 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇರಾಕ್ ನ ರಾಜಕಾರಣಿಯ ಹಳೆಯ ವೀಡಿಯೋವನ್ನು ಇತ್ತೀಚಿನ ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಹಮಾಸ್ ಸೆರೆಯಿಂದ ಬಿಡುಗಡೆಯಾದ ಇಸ್ರೇಲಿ ಮಹಿಳೆ ತನ್ನ ಅನುಭವಗಳನ್ನು ವಿವರಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಎಂಬ ವೈರಲ್ ಹೇಳಿಕೆಯ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

೨೦೧೭ ರಿಂದ ಆನ್‌ಲೈನ್‌ನಲ್ಲಿ ಲಭ್ಯವಿರುವ ಈ ವೀಡಿಯೋ, ಯಾಜಿದಿ ಮಹಿಳೆಯರ ವಿರುದ್ಧ ಐಸಿಸ್ ದೌರ್ಜನ್ಯದ ಬಗ್ಗೆ ಇರಾಕಿನ ರಾಜಕಾರಣಿ ವಿಯಾನ್ ದಾಖಿಲ್ ಅವರ ಸಂದರ್ಶನ ಎಂದು ಸೂಚಿಸುತ್ತದೆ.

ಕ್ಲೈಮ್ ಐಡಿ d45e7c59

(ಪ್ರಚೋದಕ ಎಚ್ಚರಿಕೆ: ಈ ಕಥೆಯು ದುಃಖದ ದೃಶ್ಯಗಳ ವಿವರಣೆಯನ್ನು ಮತ್ತು ಹಿಂಸೆಯ ಉಲ್ಲೇಖಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗಿದೆ.)

ಅಕ್ಟೋಬರ್ ೨೩, ೨೦೨೩ ರಂದು, ಹಮಾಸ್ ಉಗ್ರಗಾಮಿಗಳು ನುರಿತ್ ಕೂಪರ್ ಮತ್ತು ಯೋಚೆವೆಡ್ ಲಿಫ್ಶಿಟ್ಜ್ ಎಂಬ ಹೆಸರಿನ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು.  ಅವರು ಅಕ್ಟೋಬರ್ ೭ ರಂದು ಹಮಾಸ್ ವಶಪಡಿಸಿಕೊಂಡ ಕಿಬ್ಬುಟ್ಜ್ ನಿರ್ ಓಜ್‌ನಲ್ಲಿ ವಾಸಿಸುತ್ತಿದ್ದರು. ಇದು ಗಡಿಯಾಚೆಗಿನ ಇಸ್ರೇಲಿ ಪ್ರದೇಶದ ಮೇಲೆ ಅಕ್ಟೋಬರ್ ೭ ರಂದು ದಾಳಿ ನಡೆದ ನಂತರದ ಹಮಾಸ್‌ ನ ಎರಡನೇ ಒತ್ತೆಯಾಳು ಬಿಡುಗಡೆಯಾಗಿದೆ. ಅಕ್ಟೋಬರ್ ೨೦ ರಂದು, ಇಬ್ಬರು ಅಮೇರಿಕನ್ ಪ್ರಜೆಗಳಾದ ಜುಡಿತ್ ರಾನನ್ ಮತ್ತು ಅವರ ಮಗಳು ನಟಾಲಿಯನ್ನು ಕತಾರ್ ಮಧ್ಯಸ್ಥಿಕೆಯ ಸಹಾಯದಿಂದ ಬಿಡುಗಡೆ ಮಾಡಲಾಯಿತು. ಬಿಡುಗಡೆಯ ನಂತರ, ಹಮಾಸ್‌ನಿಂದ ಅಪಹರಿಸಲ್ಪಟ್ಟ ಅನುಭವವನ್ನು "ನರಕ" ಎಂದು ವಿವರಿಸುವ ಒತ್ತೆಯಾಳುಗಳ ಕುರಿತು ಅನೇಕ ವರದಿಗಳು ಕಂಡುಬಂದವು.

ಇಲ್ಲಿನ ಹೇಳಿಕೆಯೇನು?

ಇದರ ಮಧ್ಯೆ, ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವೊಂದನ್ನು ಪ್ರಸಾರ ಮಾಡುತ್ತಿದ್ದಾರೆ. ಇದು ಇಸ್ರೇಲಿ ಮಹಿಳೆಯೊಬ್ಬರು ಹಮಾಸ್‌ನಿಂದ ಅಪಹರಣಕ್ಕೊಳಗಾದ ಅಗ್ನಿಪರೀಕ್ಷೆಯನ್ನು ವಿವರಿಸುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

ವೀಡಿಯೋದಲ್ಲಿ ಸುದ್ದಿ ವಾಹಿನಿಯೊಂದರ ಜೊತೆಗಿನ ಸಂದರ್ಶನದಲ್ಲಿ ಮಹಿಳೆಯೊಬ್ಬರು ಅರೇಬಿಕ್ ಭಾಷೆಯಲ್ಲಿ ಮಾತನಾಡುತ್ತಾರೆ. ಮಹಿಳೆಯ ಮಾತಿನ ಜೊತೆಗೆ ಇಂಗ್ಲಿಷ್ ಪ್ರತಿಲೇಖನವನ್ನು ಕೂಡ ಸೇರಿಸಲಾಗಿದೆ. ಇದು ಸ್ಪಷ್ಟ ಮತ್ತು ಗೊಂದಲದ ವಿವರಗಳನ್ನು ನೀಡುತ್ತದೆ. ಉದಾಹರಣೆಗೆ, ಮಹಿಳೆಯೊಬ್ಬಳು ಮೂರು ದಿನಗಳ ಕಾಲ ನೆಲಮಾಳಿಗೆಯಲ್ಲಿ ಆಹಾರ ಅಥವಾ ಯಾವುದೇ ಸಾಮಾಗ್ರಿಗಳ ವ್ಯವಸ್ಥೆಯಿಲ್ಲದೆ ಬಂಧಿತಳಾಗಿರುವ ಪ್ರಕರಣವನ್ನು ಇದು ಉಲ್ಲೇಖಿಸುತ್ತದೆ ಮತ್ತು ಆಕೆಯ ಒಂದು ವರ್ಷದ ಮಗುವನ್ನು ಆಕೆಗೆ ಬೇಯಿಸಿ ತಿನ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ವೀಡಿಯೋದಲ್ಲಿನ ಮತ್ತೊಂದು ಹೇಳಿಕೆಯು ತನ್ನ ತಂದೆ ಮತ್ತು ಸಹೋದರಿಯರ ಮುಂದೆ ಅತ್ಯಾಚಾರಕ್ಕೆ ಒಳಗಾದ ಹುಡುಗಿಯ ಬಗ್ಗೆ ಹೇಳುವುದನ್ನು ಉಲ್ಲೇಖಿಸುತ್ತದೆ.

ಕೆಲವು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಇತ್ತೀಚಿನ ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಹೀಗೆ ಹೇಳುತ್ತಾ ಲಿಂಕ್ ಮಾಡಿದ್ದಾರೆ, "ಒತ್ತೆಯಾಳುಗಳನ್ನು ಹಮಾಸ್ ಚೆನ್ನಾಗಿ ನಡೆಸಿಕೊಂಡಿದೆ ಎಂಬ ಕೆಲವು ವರದಿಗಳಿಗಿಂತ ಭಿನ್ನವಾಗಿ, ವೈರಲ್ ವೀಡಿಯೋ ವಿಭಿನ್ನ ಕಥೆಯನ್ನು ಹೇಳುತ್ತದೆ."

ಹಲವಾರು ಎಕ್ಸ್ (ಹಿಂದೆ ಟ್ವಿಟ್ಟರ್) ಬಳಕೆದಾರರು ವೀಡಿಯೋವನ್ನು ಹಿಂದಿಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ, "ಮೂರು ದಿನಗಳ ನಂತರ, ಹಮಾಸ್ ಭಯೋತ್ಪಾದಕರು ನನಗೆ ಆಹಾರವನ್ನು ನೀಡಿದರು. ನಾನು ತಿಂದ ನಂತರ, ಮಾಂಸವು ನನ್ನ ಕೈಯಿಂದ ಕಸಿದುಕೊಂಡ ಅದೇ ಮಗುವಿಗೆ ಸೇರಿದೆ ಎಂದು ಅವರು ನನಗೆ ಹೇಳಿದರು. ಅಂತಹ ರಾಕ್ಷಸರು ಮತ್ತು ಅವರ ಬೆಂಬಲಿಗರು ಬದುಕುವ ಹಕ್ಕನ್ನು ಹೊಂದಿಲ್ಲ (ಕನ್ನಡಕ್ಕೆ ಅನುವಾದಿಸಲಾಗಿದೆ)." ಆನ್‌ಲೈನ್‌ನಲ್ಲಿ ತಪ್ಪು/ತಪ್ಪು ಮಾಹಿತಿಯನ್ನು ಹರಡಿದ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಎಕ್ಸ್ ಬಳಕೆದಾರರಾದ ಪಿ.ಎನ್.ರೈ ಅವರ ಅಂತಹ ಒಂದು ಪೋಷ್ಟ್ ಇದುವರೆಗೆ ೩೮.೪ ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ಸಮಾನವಾದ ಶೀರ್ಷಿಕೆಗಳೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾದ ಇತರ ಪೋಷ್ಟ್ ಗಳ ಆರ್ಕೈವ್ ಮಾಡಲಾದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಎಕ್ಸ್ ನಲ್ಲಿ ವೈರಲ್ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋ ೨೦೧೭ ರ ಹಿಂದಿನದ್ದು ಮತ್ತು ಇರಾಕ್ ನ ರಾಜಕಾರಣಿ ವಿಯಾನ್ ದಾಖಿಲ್ ಐಸಿಸ್ ಭಯೋತ್ಪಾದಕರು ಮತ್ತು ಯಾಜಿದಿ ಮಹಿಳೆಯರನ್ನು ಒಳಗೊಂಡ ಘಟನೆಗಳನ್ನು ವಿವರಿಸುವುದನ್ನು ತೋರಿಸುತ್ತದೆ ಎಂದು ವರದಿಯಾಗಿದೆ.

ನಾವು ಕಂಡುಹಿಡಿದದ್ದು

ವೈರಲ್ ವೀಡಿಯೋವಿನ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ನಾವು ೨೦೧೭ ರ ಹಿಂದಿನ ಇಂಡಿಪೆಂಡೆಂಟ್‌ನ ಸುದ್ದಿ ವರದಿಯನ್ನು ಕಂಡುಕೊಂಡಿದ್ದೇವೆ. ವರದಿಯು ಅದೇ ಮಹಿಳೆ ಮಾತನಾಡುವ ೩೬-ಸೆಕೆಂಡ್-ದೀರ್ಘದ  ವೀಡಿಯೋವನ್ನು ಹೊಂದಿದ್ದು ವೈರಲ್ ವೀಡಿಯೋದ ೦:೦೬ ರಿಂದ ೦.೨೬ ಟೈಮ್‌ಸ್ಟ್ಯಾಂಪ್ ಗೆ ಹೊಂದಿಕೆಯಾಗುತ್ತದೆ. ಇಂಡಿಪೆಂಡೆಂಟ್‌ನ ವರದಿಯು ಆಕೆಯನ್ನು ಯಾಜಿದಿ ಸಮುದಾಯದ ಇರಾಕಿನ ಸಂಸದೆ ವಿಯಾನ್ ದಾಖಿಲ್ ಎಂದು ಹೇಳಿಕೊಂಡಿದೆ.

ನವೆಂಬರ್ ೨೦೧೭ ರ ಇಂಡಿಪೆಂಡೆಂಟ್ ಲೇಖನದ ಪ್ರಕಾರ, ಐಸಿಸ್, ತಾಯಿ ತನ್ನ ಮಗುವನ್ನು ತಿಳಿಯದೆ ತಿನ್ನುವಂತೆ ಮಾಡಿದೆ ಮತ್ತು ಹತ್ತು ವರ್ಷದ ಬಾಲಕಿಯನ್ನು ತನ್ನ ಕುಟುಂಬದ ಮುಂದೆ ಲೈಂಗಿಕವಾಗಿ ಆಕ್ರಮಣ ಮಾಡಿ ಕೊಂದಿದೆ ಎಂದು ದಾಖಿಲ್ ಹೇಳಿದ್ದಾರೆ. ದಾಖಿಲ್ ಒಬ್ಬ ಪ್ರಮುಖ ಯಾಜಿದಿ ರಾಜಕಾರಣಿಯಾಗಿದ್ದು, ತನ್ನ ಜನರ ಮೇಲೆ ಐಸಿಸ್ ನಡೆಸಿದ ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿದೆ. ಈಜಿಪ್ಟ್ ಚಾನೆಲ್ ಎಕ್ಸ್ಟ್ರಾ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ದಾಖಿಲ್ ಈ ಹೇಳಿಕೆಗಳನ್ನು ಮಾಡಿದ್ದಾರೆ ಎಂದು ವರದಿಯು ಗುರುತಿಸಿದೆ. ವರದಿಯಲ್ಲಿನ ವೀಡಿಯೋವನ್ನು ಭಾಷಾಂತರಿಸಿದ ಮಿಡಲ್ ಈಸ್ಟ್ ಮೀಡಿಯಾ ರಿಸರ್ಚ್ ಇನ್‌ಸ್ಟಿಟ್ಯೂಟ್ (ಮೆಮ್ರಿ) ಗೆ ಅದು ಮನ್ನಣೆ ನೀಡಿದೆ.

ವೈರಲ್ ವೀಡಿಯೋವಿನ ಮೇಲಿನ ಎಡ ಮೂಲೆಯಲ್ಲಿ "ಮೆಮ್ರಿ ಟಿವಿಯಿಂದ ಅನುವಾದಿಸಲಾಗಿದೆ" ಎಂದು ಹೇಳುವ ಲೋಗೋವನ್ನು ಸಹ ಕಂಡುಬಂದಿದೆ.

ಮೇಲಿನ ಎಡ ಮೂಲೆಯಲ್ಲಿ "ಮೆಮ್ರಿ ಟಿವಿಯಿಂದ ಅನುವಾದಿಸಲಾಗಿದೆ" ಎಂಬ ಲೋಗೋವನ್ನು ಒಳಗೊಂಡ ವೈರಲ್ ವೀಡಿಯೋವಿನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಮೆಮ್ರಿ ಜೂನ್ ೨೭, ೨೦೧೭ ರಂದು ವೈರಲ್ ವೀಡಿಯೋವನ್ನು ಹೋಲುವ ೧-ನಿಮಿಷ ೪೯-ಸೆಕೆಂಡ್-ಉದ್ದದ ವೀಡಿಯೋವನ್ನು ಅಪ್‌ಲೋಡ್ ಮಾಡಿದೆ ಎಂದು ನಾವು ಕಂಡುಕೊಂಡಿದ್ದೇವೆ. ಗಮನಾರ್ಹವಾಗಿ, ವೈರಲ್ ವೀಡಿಯೋವನ್ನು ಮೆಮ್ರಿ ಪೋಷ್ಟ್ ಮಾಡಿದ ಈ ತುಣುಕಿನ ೪೦-ಸೆಕೆಂಡ್ ನಿಂದ ಪ್ರಾರಂಭಿಸಿ, ಎಡಿಟ್ ಮಾಡಲಾಗಿದೆ ಮತ್ತು ಕ್ರಾಪ್ ಮಾಡಲಾಗಿದೆ.

ಜೂನ್ ೨೦೧೭ ರಲ್ಲಿ ಅದರ ಯೂಟ್ಯೂಬ್ ಚಾನೆಲ್‌ನಲ್ಲಿ ಎಕ್ಸ್ಟ್ರಾ ನ್ಯೂಸ್ ಪ್ರಕಟಿಸಿದ ಸಂದರ್ಶನವನ್ನೂ ಕೂಡ ನಾವು ಪತ್ತೆ ಮಾಡಿದ್ದೇವೆ.

ಜೂನ್ ೨೦೧೭ ರಲ್ಲಿ ಯೂಟ್ಯೂಬ್ ನಲ್ಲಿ ಪ್ರಕಟವಾದ ಸಂದರ್ಶನದ ವಿಸ್ತೃತ ಆವೃತ್ತಿ. (ಮೂಲ: ಎಕ್ಸ್ಟ್ರಾ ನ್ಯೂಸ್/ಯೂಟ್ಯೂಬ್)

ಅದೇ ತಿಂಗಳು, ದಾಖಿಲ್ ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಸಂಪೂರ್ಣ ಸಂದರ್ಶನವನ್ನು ಪೋಷ್ಟ್ ಮಾಡಿದ್ದಾರೆ - ಎಕ್ಸ್‌ಟ್ರಾ ನ್ಯೂಸ್ ಹಂಚಿಕೊಂಡ ಸಂದರ್ಶನದ ವಿಸ್ತೃತ, ಸಂಪಾದಿಸದ ಆವೃತ್ತಿ.

ತೀರ್ಪು 

ಈ ವೀಡಿಯೋ ೨೦೧೭ ರಿಂದ ಆನ್‌ಲೈನ್‌ನಲ್ಲಿ ಲಭ್ಯವಿದೆ ಮತ್ತು ಇರಾಕ್ ನ ಸಂಸದೆ ವಿಯಾನ್ ದಾಖಿಲ್ ಅವರ "ಐಸಿಸ್ ಅಪಹರಿಸಿದ ಜನರ ಅಗ್ನಿಪರೀಕ್ಷೆ" ಕುರಿತು ಚರ್ಚಿಸಲಾಗಿದೆ ಎಂದು ವರದಿಯಾದ ಸಂದರ್ಶನವನ್ನು ಒಳಗೊಂಡಿದೆ. ವೀಡಿಯೋವಿನಲ್ಲಿನ ಹೇಳಿಕೆಗಳಾಗಲಿ ಅಥವಾ ವೀಡಿಯೋವಾಗಲಿ ಅಕ್ಟೋಬರ್ ೨೦೨೩ ರಲ್ಲಿಪ್ರಾರಂಭವಾದ ಇಸ್ರೇಲ್-ಹಮಾಸ್ ಯುದ್ಧಕ್ಕೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಆದ್ದರಿಂದ, ನಾವು  ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.