ಅದಾನಿ ಮತ್ತು ಅಂಬಾನಿ ಬಗ್ಗೆ ರಾಹುಲ್ ಗಾಂಧಿಯವರ "ಧಿಡೀರ್ ಮೌನದ" ಬಗ್ಗೆ ಪ್ರಧಾನಿ ಮೋದಿಯವರ ಹೇಳಿಕೆ ತಪ್ಪು

ಮೂಲಕ: ಅಂಕಿತಾ ಕುಲಕರ್ಣಿ
ಮೇ 10 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಅದಾನಿ ಮತ್ತು ಅಂಬಾನಿ ಬಗ್ಗೆ ರಾಹುಲ್ ಗಾಂಧಿಯವರ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಪೋಸ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ರಾಹುಲ್ ಗಾಂಧಿಯವರು ಮಾರ್ಚ್ ೧೭, ೨೦೨೪ ರಿಂದ ತಮ್ಮ ಚುನಾವಣಾ ರ‍್ಯಾಲಿಗಳಲ್ಲಿ ಕನಿಷ್ಠ ೨೫ ಬಾರಿ ಕೈಗಾರಿಕೋದ್ಯಮಿಗಳಾದ ಅದಾನಿ ಮತ್ತು ಅಂಬಾನಿಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಕ್ಲೈಮ್ ಐಡಿ 868c4a7c

ಹೇಳಿಕೆ ಏನು?

ಮೇ ೮, ೨೦೨೪ ರಂದು ತೆಲಂಗಾಣದ ಕರೀಂನಗರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ೨೦೨೪ ರ ಭಾರತೀಯ ಲೋಕಸಭೆ ಚುನಾವಣೆಯ ಘೋಷಣೆಯ ನಂತರ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರ ಬಗ್ಗೆ ಮಾತನಾಡುವುದನ್ನು "ಇದ್ದಕ್ಕಿದ್ದಂತೆ" ನಿಲ್ಲಿಸಿದ್ದಾರೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಉದ್ಯಮಿಗಳಿಂದ ಕಾಂಗ್ರೆಸ್  'ಟ್ರಕ್ ಇಂದ ತುಂಬಿದ' ಹಣವನ್ನು ಪಡೆದಿದೆ ಎಂದು ಆರೋಪಿಸಿದರು.

ವೀಡಿಯೋದಲ್ಲಿ, ಮೋದಿ ಹೀಗೆ ಹೇಳಿದ್ದಾರೆ , “ಸ್ನೇಹಿತರೇ, ಕಳೆದ ಐದು ವರ್ಷಗಳಿಂದ, ಕಾಂಗ್ರೆಸ್‌ನ ಯುವರಾಜ (ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ) ಅವರು ಎದ್ದ ತಕ್ಷಣ ಒಂದೇ ಜಪವನ್ನು ಪುನರಾವರ್ತಿಸುವುದನ್ನು ನೀವು ಗಮನಿಸಿರಬೇಕು. ಆದರೆ ಈ ರಫೇಲ್ ವಿವಾದವು ನೆಲಕಚ್ಚಿದಾಗಿನಿಂದ, ಅವರು ಹೊಸ ಪ್ರಾರ್ಥನೆಯನ್ನು ಪಠಿಸುತ್ತಿದ್ದರು. ವರ್ಷಗಳ ಕಾಲ ಅವರು - ಕೈಗಾರಿಕೋದ್ಯಮಿಗಳು, ಕೈಗಾರಿಕೋದ್ಯಮಿಗಳು, ಕೈಗಾರಿಕೋದ್ಯಮಿಗಳು - ಮತ್ತು ನಂತರ ನಿಧಾನವಾಗಿ ಅಂಬಾನಿ-ಅದಾನಿ, ಅಂಬಾನಿ-ಅದಾನಿ, ಅಂಬಾನಿ-ಅದಾನಿ ಎಂದು ಹೇಳಲು ಪ್ರಾರಂಭಿಸಿದರು. ಆದರೆ ಚುನಾವಣೆ ಘೋಷಣೆಯಾದಾಗಿನಿಂದ ಅವರು ಅಂಬಾನಿ-ಅದಾನಿಯನ್ನು ನಿಂದಿಸುವುದನ್ನು ನಿಲ್ಲಿಸಿದ್ದಾರೆ."

(ಪ್ರಧಾನಿ ಮೋದಿಯವರ ಹೇಳಿಕೆಗಳನ್ನು ಈ ಯೂಟ್ಯೂಬ್ ವೀಡಿಯೋದಲ್ಲಿ ೩೯:೦೦-೪೧:೨೪ ರವರೆಗೆ ಕೇಳಬಹುದು)

ಹಲವಾರು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಮೋದಿಯವರ ವೀಡಿಯೋವನ್ನು ಇದೇ ರೀತಿಯ ಹೇಳಿಕೆಗಳೊಂಗಿದೆ ಹಂಚಿಕೊಂಡಿವೆ, ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಸ್ಟ್‌ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಪ್ರಧಾನಿ ಮೋದಿ ಅವರ ಹೇಳಿಕೆ ತಪ್ಪಾಗಿದೆ. ಲಾಜಿಕಲಿ ಫ್ಯಾಕ್ಟ್ಸ್ ಮಾರ್ಚ್ ೧೭ ರಿಂದ ಮೇ ೮ ರವರೆಗಿನ ರಾಹುಲ್ ಗಾಂಧಿಯವರ ಚುನಾವಣಾ ಭಾಷಣಗಳನ್ನು ವೀಕ್ಷಿಸಿದ್ದು ಮತ್ತು ಕಾಂಗ್ರೆಸ್ ನಾಯಕರು ಕನಿಷ್ಠ ೨೫ ರ‍್ಯಾಲಿಗಳಲ್ಲಿ ಅದಾನಿ ಮತ್ತು ಅಂಬಾನಿಯನ್ನು ಉಲ್ಲೇಖಿಸಿದ್ದಾರೆ ಎಂದು ಕಂಡುಬಂದಿದೆ.

ನಾವು ಕಂಡುಹಿಡಿದದ್ದು ಏನು?

ಮಾರ್ಚ್ ೧೭ ರಿಂದ ಮೇ ೮, ೨೦೨೪ ರವರೆಗೆ ಚುನಾವಣಾ ರ‍್ಯಾಲಿಗಳು ಮತ್ತು ರಾಹುಲ್ ಗಾಂಧಿಯವರ ಭಾಷಣಗಳ ವೀಡಿಯೋಗಳನ್ನು ಲಾಜಿಕಲಿ ಫ್ಯಾಕ್ಟ್ಸ್ ಪರಿಶೀಲಿಸಿತು. ಚುನಾವಣಾ ವೇಳಾಪಟ್ಟಿಯನ್ನು ಮಾರ್ಚ್ ೧೬, ೨೦೨೪ ರಂದು ಪ್ರಕಟಿಸಲಾಗಿತ್ತು. ಅವರ ಭಾಷಣಗಳ ವೀಡಿಯೋಗಳು ಮತ್ತು ಪ್ರತಿಗಳು ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್‌ ಮತ್ತು ಯೂಟ್ಯೂಬ್ ಚಾನಲ್ ನಲ್ಲಿ ಸಾರ್ವಜನಿಕವಾಗಿ ಲಭ್ಯವಿವೆ. ಮೇ ತಿಂಗಳೊಂದರಲ್ಲೇ ರಾಹುಲ್ ಗಾಂಧಿಯವರು ಆರು ಚುನಾವಣಾ ರ‍್ಯಾಲಿಗಳಲ್ಲಿ ಇಬ್ಬರೂ ಉದ್ಯಮಿಗಳನ್ನು ಉಲ್ಲೇಖಿಸಿದ್ದಾರೆ.

ಮೇ ೬ ರಂದು, ಜಾರ್ಖಂಡ್‌ನ ಸಿಂಗ್‌ಭೂಮ್‌ನಲ್ಲಿ ನಡೆದ ರ‍್ಯಾಲಿಯಲ್ಲಿ, ಗಾಂಧಿಯವರು ಅದಾನಿ ಮತ್ತು ಅಂಬಾನಿ ಬಗ್ಗೆ ಮಾತನಾಡುತ್ತಾ, “ಅದಾನಿ ಹೆಸರು. ನಿಮಗೆ ಗೊತ್ತು, ಅವರು ನಿಮ್ಮ ನೀರು, ಕಾಡು ಮತ್ತು ಭೂಮಿಯ ಮೇಲೆ ಕಣ್ಣಿಟ್ಟಿದ್ದಾರೆ ಮತ್ತು ನರೇಂದ್ರ ಮೋದಿ ಅವರಿಗಾಗಿ ಕೆಲಸ ಮಾಡುತ್ತಾರೆ. ಅದಾನಿ ಜಿ ಮತ್ತು ನರೇಂದ್ರ ಮೋದಿ ಜಿ ಈ ಪುಸ್ತಕ (ಸಂವಿಧಾನವನ್ನು ಉಲ್ಲೇಖಿಸಿ) ಕೊನೆಗೊಳ್ಳಬೇಕೆಂದು ಬಯಸುತ್ತಾರೆ ಮತ್ತು ಈ ಪುಸ್ತಕವಿಲ್ಲದೆ ನಾವು ಅವರ ಆಡಳಿತವನ್ನು ಎಂದಿಗೂ ಮುಂದುವರಿಸಲು ಬಿಡುವುದಿಲ್ಲ. ಈ ಭಾಗವನ್ನು ವೀಡಿಯೋದಲ್ಲಿ ೩:೦೯ ರಿಂದ ೩:೪೦ ನಿಮಿಷಗಳವರೆಗೆ ನೋಡಬಹುದು. ಆರ್ಕೈವ್ ಅನ್ನು ಇಲ್ಲಿ ನೋಡಿ.

ಮೇ ೭ ರಂದು, ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, "ಭಾರತದ ಸಂವಿಧಾನವನ್ನು ರದ್ದುಗೊಳಿಸಿದರೆ, ದೇಶ ಮತ್ತು ಅರಣ್ಯದಲ್ಲಿನ ಎಲ್ಲಾ ಹಕ್ಕುಗಳನ್ನು ಅದಾನಿಗಳಂತಹ "ಕೋಟ್ಯಾಧಿಪತಿಗಳಿಗೆ" ಶರಣಾಗಿಸಲಾಗುತ್ತದೆ ಎಂದು ಹೇಳಿದರು." ಅದಾನಿ ಕುರಿತ ಅವರ ಟೀಕೆಗಳನ್ನು ಈ ವೀಡಿಯೋದಲ್ಲಿ ೧೪:೩೫ ರಿಂದ ೧೫:೫೫ ರವರೆಗೆ ಕೇಳಬಹುದು. ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಅದೇ ದಿನ ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖೇಶ್ ಅಂಬಾನಿ ಅವರ ಮಗನ ಮದುವೆಯನ್ನು ಹೆಚ್ಚಾಗಿ ಪ್ರಸಾರ ಮಾಡಿದ ಮಾಧ್ಯಮಗಳ ಬಗ್ಗೆ ಪ್ರಸ್ತಾಪಿಸಿದರು. ಕಾಂಗ್ರೆಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೋದಲ್ಲಿ ೩:೦೦ ರಿಂದ ೩:೨೦ ರವರೆಗೆ ಅವರ ಹೇಳಿಕೆಗಳನ್ನು ಕೇಳಬಹುದು. ನೀವು ಇಲ್ಲಿ ಆರ್ಕೈವ್ ಅನ್ನು ನೋಡಬಹುದು.

ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಅವರು ಭಾಷಣ ಮಾಡಿದ ಇತರ ಅನೇಕ ಚುನಾವಣಾ ರ‍್ಯಾಲಿಗಳಲ್ಲಿ, ರಾಹುಲ್ ಗಾಂಧಿ ಬಿಜೆಪಿ ಅದಾನಿ ಮತ್ತು ಅಂಬಾನಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಏಪ್ರಿಲ್ ೨೯, ೨೦೨೪ ರಂದು, ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, “ಸಾರ್ವಜನಿಕ ವಲಯದ ಘಟಕಗಳನ್ನು ಖಾಸಗೀಕರಣ ಮಾಡುವುದಿಲ್ಲ, ನಾವು ಗುತ್ತಿಗೆ ವ್ಯವಸ್ಥೆಯನ್ನು ನಿಲ್ಲಿಸುತ್ತೇವೆ, ನಾವು ರೈತರ ಸಾಲವನ್ನು ಮನ್ನಾ ಮಾಡುತ್ತೇವೆ  ಎಂದು ಹೇಳಲು ಯಾವುದೇ ಬಿಜೆಪಿ ನಾಯಕರಿಗೆ ನಾನು ಸವಾಲು ಹಾಕುತ್ತೇನೆ. ಆ ಜನರು ಇದನ್ನು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅವರ ವಿಚಾರಧಾರೆ ಅಂಬೇಡ್ಕರ್ ಜೀ, ನೆಹರೂ ಜೀ ಅಥವಾ ಗಾಂಧೀಜಿಯವರದ್ದಲ್ಲ. ಆಯ್ದ ಜನರಿಗೆ ಸಹಾಯ ಮಾಡುವುದು ಅವರ ಸಿದ್ಧಾಂತವಾಗಿದೆ. ಅದಾನಿ ಮತ್ತು ಅಂಬಾನಿಯಂತಹವರಿಗೆ ಭಾರತದ ಎಲ್ಲಾ ಸಂಪತ್ತು, ಭೂಮಿ, ಕಾಡು ಮತ್ತು ಜಲವನ್ನು ನೀಡುವುದು ಅವರ ಸಿದ್ಧಾಂತವಾಗಿದೆ. ಈ ವೀಡಿಯೋದಲ್ಲಿ ೬:೩೩ ರಿಂದ ೭:೨೨ ರವರೆಗೆ ಟೀಕೆಗಳನ್ನು ಕೇಳಬಹುದು ಮತ್ತು ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಗುಜರಾತ್ (ಈ ವೀಡಿಯೋದಲ್ಲಿ ೨:೧೮-೩:೪೪ ರಲ್ಲಿ ನೋಡಬಹುದು), ಕರ್ನಾಟಕ (೪:೦೦- ೪:೪೦), ಮಹಾರಾಷ್ಟ್ರ (೨೨:೪೦-೨೪:೩೭), ಉತ್ತರ ಪ್ರದೇಶ (೧:೧೬- ೪:೦೨), ಬಿಹಾರ (೨:೦೩-೩:೦೫), ಒಡಿಶಾ (೫:೧೭-೬:೨೦), ಮತ್ತು ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ದಿಯು (೮:೫೭-೯:೫೬) ನಲ್ಲಿ ಗಾಂಧಿ ಅವರು ಮಾಡಿದ ಇತರ ಭಾಷಣೆಗಳಲ್ಲಿ  ಅದಾನಿ ಮತ್ತು ಅಂಬಾನಿ ಅವರ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ. ಅವರ ಭಾಷಣಗಳಲ್ಲಿ, ‘ಸಮಾಜದ ಬಡವರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗದವರನ್ನು ಸುಲಿಗೆ ಮಾಡುತ್ತಾ ಬಿಜೆಪಿಯು ರಸ್ತೆ, ವಾಯು ಶಕ್ತಿ, ವಿದ್ಯುತ್, ಶಸ್ತ್ರಾಸ್ತ್ರ ತಯಾರಿಕೆ ಮತ್ತು ಎಲ್ಲವನ್ನೂ ಅದಾನಿ ಮತ್ತು ಅಂಬಾನಿ ಸೇರಿದಂತೆ ೨೦ ರಿಂದ ೨೫ ಜನರಿಗೆ ನೀಡುತ್ತಿದೆ’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಭಾಷಣಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಮೋದಿಯವರು ಹೇಳಿಕೊಂಡಂತೆ ರಾಹುಲ್ ಗಾಂಧಿ ಇಬ್ಬರು ಉದ್ಯಮಿಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿಲ್ಲ ಎಂಬುದನ್ನು ಮೇಲಿನ ಸಾಕ್ಷ್ಯಗಳು ಸ್ಥಾಪಿಸುತ್ತವೆ.

ತೀರ್ಪು

ಚುನಾವಣೆ ಘೋಷಣೆಯಾದ ನಂತರ ನಡೆದ ಬಹುತೇಕ ಚುನಾವಣಾ ರ‍್ಯಾಲಿಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಂತರವಾಗಿ ಅದಾನಿ ಮತ್ತು ಅಂಬಾನಿ ಬಗ್ಗೆ ಮಾತನಾಡಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.