ಇಲ್ಲ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ವಿಶ್ವ ಆರ್ಥಿಕ ಸಂಸ್ಥೆಯ ಸದಸ್ಯರಲ್ಲ

ಮೂಲಕ:
ನವೆಂಬರ್ 28 2022

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ವಿಶ್ವ ಆರ್ಥಿಕ ಸಂಸ್ಥೆಯ ಸದಸ್ಯರಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ರಿಷಿ ಸುನಾಕ್ ಅವರು ವಿಶ್ವ ಆರ್ಥಿಕ ವೇದಿಕೆಯ ಸದಸ್ಯರಲ್ಲ. ಅಲ್ಲಿ ಕೇವಲ ಕಂಪನಿಗಳಿಗೆ ಮಾತ್ರ ಸದಸ್ಯತ್ವ ಕೊಡಲಾಗುತ್ತದೆ.

ಕ್ಲೈಮ್ ಐಡಿ 8acc1d7e


ಸಂದರ್ಭ

ರಿಷಿ ಸುನಾಕ್ ಅವರು ಬ್ರಿಟನ್ ದೇಶದ ಪ್ರಧಾನ ಮಂತ್ರಿಯಾಗಿ ಅಕ್ಟೋಬರ್ ೨೫ ೨೦೨೨ ರಂದು ಆಯ್ಕೆ ಆಗಿರುವರು. ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತ ಮೇಲೆ ಅವರು ವಿಶ್ವ ಆರ್ಥಿಕ ವೇದಿಕೆಯ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಅನೇಕ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.


ವಾಸ್ತವವಾಗಿ

ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂ. ಈ. ಎಫ್ – WEF ) ಎಂಬ ಸಂಸ್ಥೆಯ ರಚನೆ ಬಗ್ಗೆ ತಿಳಿದಾಗ ರಿಷಿ ಸುನಾಕ್ ಅವರು ಅದರ ಸದಸ್ಯ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸಂಸ್ಥೆಯ ಸದಸ್ಯತ್ವವನ್ನು ಕೇವಲ ಕಂಪನಿಗಳಿಗೆ ಮಾತ್ರವೇ ಕೊಡಲಾಗುವುದು. ಅಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹೂಡಿಕೆದಾರರು, ರಾಜಕಾರಣಿಗಳು, ಉದ್ಯಮಿಗಳು, ಅರ್ಥಶಾಸ್ತ್ರಜ್ಞರು ಮತ್ತು ಪ್ರಭಾವಿ ವ್ಯಕ್ತಿಗಳನ್ನು ಆಹ್ವಾನ ಮಾಡಲಾಗುತ್ತದೆ.


ಈ ಸಂಸ್ಥೆಯ ಬಗ್ಗೆ ಟೀಕೆಗಳು ನ್ಯಾಯಯುತ ನೆಲೆಯಲ್ಲಿ ಸರಿ ಎನಿಸಿದರೂ ಅದು ರಹಸ್ಯವಾಗಿ ಸಾಮಾಜಿಕ ದಂಗೆಯನ್ನು ಪ್ರಚೋದಿಸುತ್ತದೆ ಎಂಬ ಆರೋಪವು ಆಧಾರರಹಿತವಾಗಿದೆ. ಡಬ್ಲ್ಯೂ. ಈ. ಎಫ್ (WEF) ಸಂಸ್ಥೆಯು ಸರ್ಕಾರಗಳು ಮತ್ತು ಖಾಸಗಿ ಉದ್ಯಮಗಳ ನಡುವೆ ಸಹಕಾರವನ್ನು ಗಟ್ಟಿಗೊಳಿಸಲು ಪ್ರೋತ್ಸಾಹ ಮಾಡುತ್ತದೆ.


ಈ ಹಿಂದೆ ಬ್ರಿಟಿಷ್ ಸರ್ಕಾರದ ಮಂತ್ರಿಗಳು ಡಬ್ಲ್ಯೂ. ಈ. ಎಫ್ (WEF) ಶೃಂಗಸಭೆಯಲ್ಲಿ ಭಾಗವಹಿಸಿರುವುದು ಉಂಟು. ಆದರೆ ೨೦೧೯ ರಲ್ಲಿ ಮಾಜಿ ಪ್ರಧಾನಿಯಾದ ಬೋರಿಸ್ ಜಾನ್ಸನ್ ರವರು ಇದಕ್ಕೆ ಅನೌಪಚಾರಿಕವಾಗಿ ನಿಷೇಧ ಹೇರಿದ್ದರು. ತದನಂತರ ಯಾವುದೇ ಬ್ರಿಟಿಷ್ ಮಂತ್ರಿಯು ಸಭೆಯಲ್ಲಿ ಪಾಲ್ಗೊಂಡಿಲ್ಲ. ಈ ಬಗ್ಗೆ ಸರ್ಕಾರದ ಅಧಿಕಾರಿಯೊಬ್ಬರು ಹೇಳಿಕೆ ನೀಡಿ ತಮ್ಮ ಗಮನ ಜನರ ಹಿತ ಕಾಯುವುದು ಹೊರತು ಕೋಟ್ಯಧಿಪತಿಗಳೊಂದಿಗೆ ಶಾಂಪೇನ್ ಹಂಚಿಕೊಳ್ಳುವುದಲ್ಲ ಎಂದಿದ್ದರು.


ತೀರ್ಪು

ರಿಷಿ ಸುನಾಕ್ ರವರು ಡಬ್ಲ್ಯೂ. ಈ. ಎಫ್ ನ ಸದಸ್ಯರಲ್ಲ. ಸಂಸ್ಥೆಯು ಕಂಪನಿಗಳನ್ನು ಮಾತ್ರವೇ ಸದಸ್ಯರಾಗಿ ನೇಮಕ ಮಾಡಿಕೊಳ್ಳುತ್ತದೆ. ಅದ್ದರಿಂದ ಮೇಲಿನ ಹೇಳಿಕೆಯು ತಪ್ಪು ಎಂದು ಹೇಳಬಹುದು. 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.