ಪ್ರಧಾನಿ ನರೇಂದ್ರ ಮೋದಿಯವರಂತೆ ಕಾಣಿಸುವ ಮತ್ತೊಬ್ಬ ವ್ಯಕ್ತಿ ಗರ್ಬಾ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ

ಮೂಲಕ: ರಾಜೇಶ್ವರಿ ಪರಸ
ನವೆಂಬರ್ 15 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪ್ರಧಾನಿ ನರೇಂದ್ರ ಮೋದಿಯವರಂತೆ ಕಾಣಿಸುವ ಮತ್ತೊಬ್ಬ ವ್ಯಕ್ತಿ ಗರ್ಬಾ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿರುವುದನ್ನು ವೀಡಿಯೋ ತೋರಿಸುತ್ತದೆ

ಆನ್‌ಲೈನ್‌ನಲ್ಲಿ ಮಾಡಿದ ವೈರಲ್ ಹೇಳಿಕೆಗಳ ಸ್ಕ್ರೀನ್‌ಶಾಟ್‌ಗಳು (ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವಿಕಾಸ್ ಮಹಾಂತೇ ಅವರ ಮಗ ಪ್ರಣಯ್ ಮಹಾಂತೇ, ಇದು ಅವರ ತಂದೆಯವರ ವೀಡಿಯೋ ಎಂದು ಲಾಜಿಕಲಿ ಫ್ಯಾಕ್ಟ್ಸ್‌ಗೆ ಖಚಿತಪಡಿಸಿದ್ದಾರೆ.

ಕ್ಲೈಮ್ ಐಡಿ ce43b7d9

ಇಲ್ಲಿನ ಹೇಳಿಕೆಯೇನು?

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿನ ಬಳಕೆದಾರರೊಬ್ಬರು "ನವರಾತ್ರಿ ಗರ್ಭಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನೃತ್ಯ ಮಾಡುತ್ತಾರೆ. ಬಹಳ ಆಕರ್ಷಕವಾದ @narendramodi ji (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂಬ ಶೀರ್ಷಿಕೆಯೊಂದಿಗೆ ಒಬ್ಬ ವ್ಯಕ್ತಿಯ ನೃತ್ಯದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ನವೆಂಬರ್ ೮, ೨೦೨೩ ರಂದು ಹಂಚಿಕೊಳ್ಳಲಾದ ವೀಡಿಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಈ ಲೇಖನವನ್ನು ಬರೆಯುವ ಸಮಯದಲ್ಲಿ ೩೮,೦೦೦ ವೀಕ್ಷಣೆಗಳನ್ನು ಹೊಂದಿತ್ತು. ಇತರ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಆದರೆ, ವೀಡಿಯೋದಲ್ಲಿರುವ ವ್ಯಕ್ತಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಲ್ಲ, ಆದರೆ ಅವರಂತೆ ಕಾಣುವ ಮತ್ತೊಬ್ಬ ವ್ಯಕ್ತಿ.

ಸತ್ಯಂಶಗಳೇನು?

ಕೆಲವು ಎಕ್ಸ್ ಬಳಕೆದಾರರು ಕಾಮೆಂಟ್‌ಗಳ ವಿಭಾಗದಲ್ಲಿ ಡ್ಯಾನ್ಸ್ ಮಾಡುವ ವ್ಯಕ್ತಿ ಮೋದಿ ಅಲ್ಲ, ಆದರೆ ಅವರಂತೆ ಕಾಣುವ ವಿಕಾಸ್ ಮಹಾಂತೇ ಎಂದು ಹೇಳಿಕೊಂಡಿದ್ದಾರೆ. ನಂತರ ನಾವು ಮಹಾಂತೇ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಕಂಡುಕೊಂಡಿದ್ದೇವೆ. ಅಲ್ಲಿ ಅವರು ತಮ್ಮನ್ನು ನಟ, ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಎಂದು ವಿವರಿಸುತ್ತಾರೆ. ಅವರ ಇನ್‌ಸ್ಟಾಗ್ರಾಮ್ ಪೋಷ್ಟ್ ಗಳನ್ನು ನೋಡಿದರೆ ಅವರು ಸಾಮಾನ್ಯವಾಗಿ ನರೇಂದ್ರ ಮೋದಿಯಂತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ತಿಳಿಯುತ್ತದೆ.

ಮಹಾಂತೇ ನವೆಂಬರ್ ೮ ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "ಲಂಡನ್ ದೀಪಾವಳಿ ಮೇಳದಲ್ಲಿ ಮುಖ್ಯ ಅತಿಥಿ" ಎಂಬ ಶೀರ್ಷಿಕೆಯೊಂದಿಗೆ ಈಗ ವೈರಲ್ ಆಗಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ತುಣುಕಿನಲ್ಲಿ, ಈವೆಂಟ್‌ನಲ್ಲಿ ನಟರು ತಮ್ಮ ಅಂಗರಕ್ಷಕರಂತೆ ನಟಿಸುವುದನ್ನು ಕಾಣಬಹುದು. ವೈರಲ್ ವೀಡಿಯೋದಲ್ಲಿ ಕಂಡುಬರುವ ಅದೇ ಉಡುಗೆಯನ್ನು ಅವರು ಧರಿಸಿದ್ದಾರೆ.

ವಿಕಾಸ್ ಮಹಾಂತೇ ಅವರ ಪುತ್ರ ಪ್ರಣಯ್ ಮಹಾಂತೇ, ವೈರಲ್ ವೀಡಿಯೋದಲ್ಲಿ ನೃತ್ಯ ಮಾಡುತ್ತಿರುವ ವ್ಯಕ್ತಿ ತನ್ನ ತಂದೆ ಎಂದು ಲಾಜಿಕಲ್ ಫ್ಯಾಕ್ಟ್ಸ್‌ಗೆ ಖಚಿತಪಡಿಸಿದ್ದಾರೆ.

ನವೆಂಬರ್ ೪ ಮತ್ತು ೫ ರಂದು ಲಂಡನ್‌ನಲ್ಲಿ ನಡೆದ ದೀಪಾವಳಿ ಸಮಾರಂಭದಲ್ಲಿ ಮಹಂತೆಯನ್ನು ಅತಿಥಿಯಾಗಿ ಆಹ್ವಾನಿಸಿದ ವೀಡಿಯೋವನ್ನು ವಿಕಾಸ್ ಮಹಾಂತೇ ಅವರ ಮ್ಯಾನೇಜರ್ ಅತುಲ್ ಪಾರಿಖ್ ಅವರು ದೃಢಪಡಿಸಿದ್ದಾರೆ.

ತೀರ್ಪು 

ವೈರಲ್ ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಂತೆ ಕಾಣುವ ವಿಕಾಸ್ ಮಹಾಂತೇ ಆಗಿದ್ದು, ಅವರು ಸಾಮಾನ್ಯವಾಗಿ ಪ್ರಧಾನ ಮಂತ್ರಿಯಂತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.

(ಅನುವಾದಿಸಿದವರು:ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.