ಈ ಛಾಯಾಚಿತ್ರದಲ್ಲಿ ರಾಹುಲ್ ಗಾಂಧಿಯವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಇಂಗ್ಲಿಷ್ ಆವೃತ್ತಿಯನ್ನು ಓದುತ್ತಿರುವುದು, ಕನ್ನಡ ಪತ್ರಿಕೆಯನ್ನಲ್ಲ

ಮೂಲಕ: ಅಂಕಿತಾ ಕುಲಕರ್ಣಿ
ಜನವರಿ 20 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಈ ಛಾಯಾಚಿತ್ರದಲ್ಲಿ ರಾಹುಲ್ ಗಾಂಧಿಯವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಇಂಗ್ಲಿಷ್ ಆವೃತ್ತಿಯನ್ನು  ಓದುತ್ತಿರುವುದು, ಕನ್ನಡ ಪತ್ರಿಕೆಯನ್ನಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ರಾಹುಲ್ ಗಾಂಧಿಯವರು ೨೦೧೭ ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಇಂಗ್ಲಿಷ್ ಪುಟಗಳನ್ನುಓದುತ್ತಿರುವ ಚಿತ್ರವನ್ನು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಕ್ಲೈಮ್ ಐಡಿ 58b92901

ಸಂದರ್ಭ

ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಆರಂಭಗೊಂಡ ಕಾಂಗ್ರೆಸ್ ಪಕ್ಷದ "ಭಾರತ್ ಜೋಡೋ ಯಾತ್ರೆ" ಜನವರಿ ೧೬, ೨೦೨೩ ರಂದು ಪಂಜಾಬ್‌ನ ಅದಾಂಪುರ್ ನಿಂದ ಪ್ರಯಾಣವನ್ನು ಪುನರಾರಂಭಿಸಿದೆ. ಕಾಂಗ್ರೆಸ್‌ನಿಂದ ಸಾಮೂಹಿಕ ಚಳುವಳಿ ಎಂದು ಕರೆಯಲ್ಪಡುವ ಈ ಯಾತ್ರೆಯು ಭಾರತದ ದಕ್ಷಿಣ ನಗರದ ಕನ್ಯಾಕುಮಾರಿಯಿಂದ ಸೆಪ್ಟೆಂಬರ್ ೭, ೨೦೨೨ ರಂದು ಪ್ರಾರಂಭವಾಗಿತ್ತು ಮತ್ತು ಜನವರಿ ೩೦, ೨೦೨೩ ರಂದು ಭಾರತದ ಕೇಂದ್ರಾಡಳಿತ ಪ್ರದೇಶವಾದ ಶ್ರೀನಗರದಲ್ಲಿ ಗಾಂಧಿಯವರು ರಾಷ್ಟ್ರಧ್ವಜವನ್ನು ಹಾರಿಸುವುದರೊಂದಿಗೆ ಮುಕ್ತಾಯಗೊಳ್ಳಲಿದೆ.

ರಾಹುಲ್ ಗಾಂಧಿ ಹಾಗೂ ಈ ಯಾತ್ರೆಯ ಬಗ್ಗೆಯೂ ಹಲವಾರು ತಪ್ಪು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ, ಡಿಸೆಂಬರ್ ೧೨, ೨೦೨೨ ರಂದು ಹಂಚಿಕೊಂಡಿರುವ ಫೇಸ್‌ಬುಕ್ ಪೋಷ್ಟ್ "ರಾಹುಲ್ ಗಾಂಧಿಯವರು ಕನ್ನಡ ದಿನಪತ್ರಿಕೆಯನ್ನು ಓದುತ್ತಿದ್ದರು" ಎಂದು ಟೀಕಿಸಿದೆ. ಚಿತ್ರದೊಳಗೆ ಹಿಂದಿಯಲ್ಲಿ ಬರೆದಿರುವ ಶೀರ್ಷಿಕೆ (ಕನ್ನಡಕ್ಕೆ ಅನುವಾದಿಸಲಾಗಿದೆ) ಹೀಗಿದೆ, "ಹಿಂದಿಯನ್ನು ಸರಿಯಾಗಿ ತಿಳಿಯದ ವ್ಯಕ್ತಿ ಕನ್ನಡದಲ್ಲಿ ಪತ್ರಿಕೆಯನ್ನು ಓದುತ್ತಿದ್ದಾನೆ."

ಆದರೆ ಚಿತ್ರವನ್ನು ತಪ್ಪಾಗಿ ಗ್ರಹಿಸಲಾಗಿದೆ.

ವಾಸ್ತವವಾಗಿ

ಕೀವರ್ಡ್ಸ್ ಸರ್ಚ್ ನ ಮೂಲಕ, ಚಿತ್ರವು ೨೦೧೭ ರಿಂದ ಇದೇ ರೀತಿಯ ಹೇಳಿಕೆಗಳೊಂದಿಗೆ ಚಲಾವಣೆಯಲ್ಲಿದೆ ಎಂದು ನಾವು ಕಂಡುಕೊಂಡೆವು. ಬೆಂಗಳೂರಿನಲ್ಲಿ ನಡೆದ ನ್ಯಾಷನಲ್ ಹೆರಾಲ್ಡ್ ಇಂಗ್ಲಿಷ್ ಪತ್ರಿಕೆಯ ಪುನರಾರಂಭ ಸಮಾರಂಭದಲ್ಲಿ ಗಾಂಧಿ ಭಾಗವಹಿಸಿದ್ದ ಸಮಯದಲ್ಲಿ ತೆಗೆದ ಚಿತ್ರವಿದು.

ಜೂನ್ ೧೨, ೨೦೧೭ ರಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್, ನ್ಯಾಷನಲ್ ಹೆರಾಲ್ಡ್ ಇಂಗ್ಲಿಷ್ ಪತ್ರಿಕೆಯ ಪುನರಾರಂಭ ಸಮಾರಂಭದ ವರದಿಯನ್ನು ಪ್ರಕಟಿಸಿತು ಮತ್ತು ವೈರಲ್ ಪೋಷ್ಟ್ ನಲ್ಲಿ ಕಂಡುಬರುವ ಗಾಂಧಿಯವರ ಅದೇ ಛಾಯಾಚಿತ್ರವನ್ನು ಹೊಂದಿದೆ. ಚಿತ್ರದ ಶೀರ್ಷಿಕೆ, "ಬೆಂಗಳೂರಿನಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ “ಕಮ್ಮೆಮ್ಮೊರೇಟ್ ಎಡಿಷನ್” ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ." ಎಂದು ಹೇಳುತ್ತದೆ.

ಪತ್ರಿಕೆಯ ಅಧಿಕೃತ ಆರ್ಕೈವ್‌ಗಳನ್ನು ಪರಿಶೀಲಿಸಿದಾಗ ನಮಗೆ ಚಿತ್ರದಲ್ಲಿ ರಾಹುಲ್ ಗಾಂಧಿ ಓದುತ್ತಿರುವ ಪತ್ರಿಕೆ, ೨೦೧೭ ರಲ್ಲಿ ಪ್ರಕಟಗೊಂಡ ನ್ಯಾಷನಲ್ ಹೆರಾಲ್ಡ್ ನ 'ಕಮ್ಮೆಮ್ಮೊರೇಟ್ ಬ್ಯಾಂಗ್ಲೋರ್' ಎಡಿಷನ್ ಎಂದು ತಿಳಿದುಬಂದಿದೆ. ಪತ್ರಿಕೆಯ ಮುಂಭಾಗ ಮತ್ತು ಕೊನೆಯ ಪುಟಗಳಲ್ಲಿ ಮಾತ್ರ ಕನ್ನಡದಲ್ಲಿ ಮುದ್ರಿತವಾಗಿರುವ ಜಾಹೀರಾತುಗಳು ಮತ್ತು ಲೇಖನಗಳಿವೆ, ಇತರ ತುಣುಕುಗಳು ಇಂಗ್ಲಿಷ್‌ನಲ್ಲಿ ಪ್ರಕಟವಾಗಿತ್ತು ಎಂದು ತೋರಿಸುತ್ತದೆ.

ಜೂನ್ ೧೨, ೨೦೧೭ ರಂದು ಏನ್ ಡಿ ಟಿ ವಿ (NDTV) ಪ್ರಕಟಿಸಿದ ವರದಿಯಲ್ಲಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪುನರಾರಂಭದ ಕಾರ್ಯಕ್ರಮದಲ್ಲಿ ತೆಗೆದ ಮತ್ತೊಂದು ಚಿತ್ರವನ್ನು ಒಳಗೊಂಡಿದೆ. ಇದರಲ್ಲಿ ರಾಹುಲ್ ಗಾಂಧಿ, ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಇತರ ಗಣ್ಯರು ಇದೇ ಪತ್ರಿಕೆಯ ಸಂಪಾದನೆಯನ್ನು ಹಿಡಿದುಕೊಂಡಿರುವುದನ್ನು ನಾವು ನೋಡಬಹುದು.

ಇದಲ್ಲದೆ, ಪತ್ರಿಕೆಯ ಅಧಿಕೃತ ವೆಬ್‌ಸೈಟ್ "ಅಬೌಟ್ ಅಸ್" ಪುಟದಲ್ಲಿ ಅವರು ಹಿಂದಿ ಮತ್ತು ಉರ್ದುವಿನಲ್ಲಿ ಪತ್ರಿಕೆಗಳನ್ನು ಪ್ರಕಟಿಸುತ್ತಾರೆ ಎಂದು ನಮೂದಿಸಿದೆ. ಅದರಲ್ಲಿ ಕನ್ನಡ ಭಾಷೆಯ ಉಲ್ಲೇಖನವಿಲ್ಲ.

ತೀರ್ಪು

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ವಿಶೇಷ ಆವೃತ್ತಿಯಲ್ಲಿ ಇಂಗ್ಲಿಷ್ ಲೇಖನಗಳನ್ನು ಓದುತ್ತಿರುವ ರಾಹುಲ್ ಗಾಂಧಿಯವರ ೨೦೧೭ರ ಛಾಯಾಚಿತ್ರವನ್ನು, ಗಾಂಧಿಯವರು ಕನ್ನಡ ಓದುತ್ತಿದ್ದರು ಎಂಬ ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತಿದ್ದೇವೆ.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.