ಕಾಂಗ್ರೆಸ್‌ಗೆ ಮತ ಹಾಕಿದ್ದಕ್ಕಾಗಿ ತಮಿಳುನಾಡಿನ ವ್ಯಕ್ತಿ ತನ್ನ ಬೆರಳನ್ನು ಕತ್ತರಿಸಿಕೊಂಡನು ಎಂದು ಹೇಳಲು ಮಹಾರಾಷ್ಟ್ರದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಆಗಸ್ಟ್ 31 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕಾಂಗ್ರೆಸ್‌ಗೆ ಮತ ಹಾಕಿದ್ದಕ್ಕಾಗಿ ತಮಿಳುನಾಡಿನ ವ್ಯಕ್ತಿ ತನ್ನ ಬೆರಳನ್ನು ಕತ್ತರಿಸಿಕೊಂಡನು  ಎಂದು ಹೇಳಲು ಮಹಾರಾಷ್ಟ್ರದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವ್ಯಕ್ತಿಯೊಬ್ಬ ತನ್ನ ಸಹೋದರನ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆಯನ್ನು ಪ್ರತಿಭಟಿಸಲು ಬೆರಳನ್ನು ಕತ್ತರಿಸಿಕೊಂಡಿದ್ದನ್ನುಈ ವೀಡಿಯೋ ತೋರುತ್ತದೆ.

ಕ್ಲೈಮ್ ಐಡಿ d30240ee

(ಪ್ರಚೋದಕ ಎಚ್ಚರಿಕೆ: ಈ ಕಥೆಯು ಆತ್ಮಹತ್ಯೆಯ ಉಲ್ಲೇಖಗಳನ್ನು ಮತ್ತು ದುಃಖಕರ ಘಟನೆಗಳ ವಿವರಣೆಯನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.) 

ಏನನ್ನು ಹೇಳಲಾಗುತ್ತಿದೆ?

ದಕ್ಷಿಣ ಏಷ್ಯಾ ರಾಷ್ಟ್ರದ ಅತಿದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್‌ಗೆ ಮತ ಹಾಕಿದ್ದಕ್ಕಾಗಿ ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನ ವ್ಯಕ್ತಿಯೊಬ್ಬ ತನ್ನ ಬೆರಳನ್ನು ಕತ್ತರಿಸಿಕೊಂಡಿದ್ದಾನೆ ಎಂದು ಹೇಳುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೈರಲ್ ವೀಡಿಯೋದಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬ ತನ್ನ ತೋರು ಬೆರಳನ್ನು ಹರಿತವಾದ ವಸ್ತುವಿನಿಂದ ಕತ್ತರಿಸುತ್ತಿರುವುದನ್ನು ನೋಡಬಹುದು. 

ಆ ವ್ಯಕ್ತಿ ಕಾಂಗ್ರೆಸ್‌ಗೆ ಮತ ಹಾಕಿದ್ದರಿಂದ ಬೆರಳನ್ನು ಕತ್ತರಿಸಿಕೊಂಡಿದ್ದಾನೆ ಎಂದು ಹಲವಾರು ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ಬರೆಯಲಾದ X (ಹಿಂದೆ ಟ್ವಿಟರ್) ನಲ್ಲಿನ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ತಮಿಳುನಾಡಿನಲ್ಲಿ ಒಬ್ಬ ವ್ಯಕ್ತಿ *ತನ್ನ ಬೆರಳನ್ನು ಕತ್ತರಿಸಿದ್ದಾನೆ * ಅವನು ಆ ಬೆರಳಿನಿಂದ ಕಾಂಗ್ರೆಸ್‌ಗೆ ಮತ ಹಾಕಿದ್ದನು. *ಮತ್ತು* ಮೋದಿ ಸರ್ಕಾರಕ್ಕೆ ಮತ ಹಾಕದೆ * ಮಾಡಿದ ಒಂದು ದೊಡ್ಡ ತಪ್ಪು*."

ಎಕ್ಸ್‌ ನಲ್ಲಿ ಕಂಡುಬಂದ ಪೋಷ್ಟ್ ಗಳು (ಮೂಲ: ಎಕ್ಸ್‌/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಆಲ್ಟೆರ್ ಮಾಡಲಾಗಿದೆ)

ಈ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿಯೂ ಸಹ ವ್ಯಾಪಕವಾಗಿ ಶೇರ್ ಮಾಡಲಾಗಿದೆ.

ಫೇಸ್ಬುಕ್ ನಲ್ಲಿ  ಕಂಡುಬಂದ ಪೋಷ್ಟ್ ಗಳು ( ಮೂಲ: ಫೇಸ್ಬುಕ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಆಲ್ಟೆರ್ ಮಾಡಲಾಗಿದೆ)

ಆದರೆ ಹೇಳಿಕೆಯು ತಪ್ಪಾಗಿದೆ. ಪ್ರಶ್ನೆಯಲ್ಲಿರುವ ವ್ಯಕ್ತಿ ತನ್ನ ಸಹೋದರನ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆಯ ವಿರುದ್ಧ ಪ್ರತಿಭಟಿಸಲು ತನ್ನ ಬೆರಳನ್ನು ಕತ್ತರಿಸಿಕೊಂಡಿದ್ದನು ಮತ್ತು ಘಟನೆಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ.

ವಾಸ್ತವಾಂಶಗಳೇನು?

ತನ್ನ ಬೆರಳನ್ನು ಕತ್ತರಿಸಿಕೊಂಡ ನಂತರ, ವೀಡಿಯೋದಲ್ಲಿರುವ ವ್ಯಕ್ತಿ ಮರಾಠಿಯಲ್ಲಿ ಹೀಗೆ  ಹೇಳುತ್ತಾನೆ,“ಇದನ್ನು ನೋಡಿ, ಇದು ನನ್ನ ದೇಹದ ಭಾಗವಾಗಿದೆ, ನಾನು ನಿಮಗೆ ಉಡುಗೊರೆಯಾಗಿ ನೀಡುತ್ತಿದ್ದೇನೆ, ಮೋದಿ ಸರ್ಕಾರ. ಇದನ್ನು ನೋಡಿ, ನಿಮಗೆ ಒಳ್ಳೆಯದಾಗುತ್ತದೆಯೇ? ಮೋದಿ ಸರಕಾರ ಇದನ್ನು ತೆಗೆದುಕೊಳ್ಳಿ ಪ್ರತಿದಿನ, ಪ್ರತಿ ವಾರ, ನಾನು ನಿಮಗೆ ನನ್ನ ದೇಹದ ಒಂದು ಭಾಗವನ್ನು ನೀಡುತ್ತಲೇ ಇರುತ್ತೇನೆ."

ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಫಾಲ್ತಾನ್‌ನಲ್ಲಿ ಎಂದು ನಮ್ಮ ಸಂಶೋಧನೆಯಿಂದ ತಿಳಿದುಬಂದಿದೆ. ಆಗಸ್ಟ್ ೧೯ ರಂದು ಪ್ರಕಟವಾದ ಹಿಂದೂಸ್ತಾನ್ ಟೈಮ್ಸ್ (ಹೆಚ್ ಟಿ) ವರದಿಯ ಪ್ರಕಾರ, ವೈರಲ್ ವೀಡಿಯೋದ ಸ್ಕ್ರೀನ್‌ಗ್ರಾಬ್ ಅನ್ನು ತೋರುತ್ತದೆ. ೪೩  ವರ್ಷದ ಧನಂಜಯ್ ನಾನವರೆ ತನ್ನ ಸಹೋದರನ ಆತ್ಮಹತ್ಯೆ ಪ್ರಕರಣದಲ್ಲಿ ಆಪಾದಿತ ಪೊಲೀಸ್ ನಿಷ್ಕ್ರಿಯತೆಯನ್ನು ಗಮನಕ್ಕೆ ತರಲು ತನ್ನ ಬೆರಳನ್ನು ಕತ್ತರಿಸಿಕೊಂಡಿದ್ದನು ಎಂದು ಹೇಳುತ್ತದೆ. 

ಆಗಿದ್ದೇನು?

ಹೆಚ್ ಟಿ ವರದಿಯ ಪ್ರಕಾರ, ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ಆಗಸ್ಟ್ ೧ ರಂದು ನಾನವರೆಯ ಸಹೋದರ ಮತ್ತು ಅವನ ಹೆಂಡತಿ ಆತ್ಮಹತ್ಯೆ  ಮಾಡಿಕೊಂಡಿದ್ದರು. ದಂಪತಿಗಳು ವೀಡಿಯೋ ಸಂದೇಶ ಮತ್ತು ತಮ್ಮ ಅವರ ಆತ್ಮಹತ್ಯೆಗೆ  ಕಾರಣರಾದ ವ್ಯಕ್ತಿಗಳ ಹೆಸರನ್ನು ನಮೂದಿಸಿ ಟಿಪ್ಪಣಿಯನ್ನು ಬರೆದಿದ್ದರು. ಅವರ ಸಾವಿನ ನಂತರ ಎಂಟು ಜನರ ವಿರುದ್ಧ ವಿಠ್ಠಲವಾಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ನಾನವರೆ ಅವರ ಬೆರಳನ್ನು ಕತ್ತರಿಸಿದ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಲ್ಲಿ ವೈದ್ಯರಿಗೆ ಚಿಕಿತ್ಸೆ ನೀಡಲು ಮತ್ತು ಅವರ ಕೈಗೆ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ ಮಾಡಲು ಸೂಚಿಸಲಾಗಿದೆ.

ಘಟನೆಯ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿಯ ಸ್ಕ್ರೀನ್‌ಶಾಟ್. (ಮೂಲ: ಹಿಂದೂಸ್ತಾನ್ ಟೈಮ್ಸ್)

ನಾನವರೇ ವೀಡಿಯೋ ಮಾಡಿದ್ದು ಯಾಕೆ?
ಎಬಿಪಿ ಮಝಾಗೆ  ನೀಡಿದ ಸಂದರ್ಶನದಲ್ಲಿ ಕ್ಯಾಮೆರಾದಲ್ಲಿ ಬೆರಳು ಏಕೆ ಕತ್ತರಿಸಿದ್ದೇನೆ ಎಂದು ವಿವರಿಸಿದ ನಾನಾವರೆ, “ನನ್ನ ಕುಟುಂಬಕ್ಕೆ ನ್ಯಾಯ ಸಿಗುತ್ತಿಲ್ಲ. ನನ್ನ ಅಣ್ಣ, ಅತ್ತಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ... ಆದರೆ, ಪೊಲೀಸರು ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎನ್ನುತ್ತಿದ್ದಾರೆ. ನನ್ನ ಸಹೋದರ ಮತ್ತು ಅತ್ತಿಗೆ ವೀಡಿಯೋ ಮಾಡಿ ಅದರಲ್ಲಿ ಹೆಸರುಗಳನ್ನು ಸ್ಪಷ್ಟವಾಗಿ ನಮೂದಿಸಿ ಪುರಾವೆ ನೀಡಿದ್ದಾರೆ. ವೀಡಿಯೋವು (ರಾಜಕೀಯ) ನಾಯಕರು ಮತ್ತು ಅವರ ಅಧೀನ ಅಧಿಕಾರಿಗಳ ಹೆಸರನ್ನು ಒಳಗೊಂಡಿದೆ. ಇದಕ್ಕಾಗಿಯೇ ಮಾಹಿತಿಯನ್ನು ನಿಗ್ರಹಿಸಲಾಗುತ್ತಿದೆಯೇ? ೪-೫ ದಿನಗಳ ರಜೆ ಇರುವುದರಿಂದ ತನಿಖೆ ನಡೆಸಲು ಸಮಯ ಸಿಕ್ಕಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಅದಕ್ಕಾಗಿಯೇ ನಾನು  ನನ್ನ ಸಹೋದರನಿಗೆ ನ್ಯಾಯ ಕೇಳಲು ನಿರ್ಧರಿಸಿದ್ದೇನೆ."

ಆಗಸ್ಟ್ ೧೯ ರಂದು ಡೆಕ್ಕನ್ ಹೆರಾಲ್ಡ್ ವರದಿಯು, ಪೊಲೀಸ್ ನಿಷ್ಕ್ರಿಯತೆಯನ್ನು ಪ್ರತಿಭಟಿಸಲು ನಾನವರೆ ಕ್ಯಾಮೆರಾದಲ್ಲಿ ಬೆರಳನ್ನು ಕತ್ತರಿಸಿದ ನಂತರ ನಾಲ್ವರನ್ನು ಬಂಧಿಸಲಾಯಿತು ಎಂದು ಹೇಳಿದೆ.
 
ನಾನವರೆ ಕಾಂಗ್ರೆಸ್ ವಿರುದ್ಧದ ಅಸಮಾಧಾನವನ್ನು ಪ್ರಸ್ತಾಪಿಸಿದ್ದಾರೆಯೇ?

ಫೇಸ್‌ಬುಕ್‌ನಲ್ಲಿ ಲಭ್ಯವಿರುವ ವೈರಲ್ ವೀಡಿಯೋದ ದೀರ್ಘ ಆವೃತ್ತಿಯಲ್ಲಿ, ನಾನವರೇ ವಿಷಯವನ್ನು ವಿವರವಾಗಿ ತೂರಿಕೊಂಡಿದ್ದಾರೆ ಮತ್ತು ಅದರಲ್ಲಿ ಹೀಗೆ ಹೇಳಿದ್ದಾರೆ, “ಇದಲ್ಲದೆ, ಮೋದಿ ಸರ್ಕಾರದ ಮಂತ್ರಿಯೊಬ್ಬರು ಈ ವಿಷಯದಲ್ಲಿ ಭಾಗಿಯಾಗಿದ್ದಾರೆ, ಇದು ಸತ್ಯವನ್ನು ಹತ್ತಿಕ್ಕುವ ಪ್ರಯತ್ನಗಳಿಗೆ ಕಾರಣವಾಗುತ್ತದೆ. ನಮಗೆ ನ್ಯಾಯ ಸಿಗುತ್ತದೋ ಇಲ್ಲವೋ? ಮತ್ತು ಮಿಸ್ಟರ್ ಫಡ್ನವಿಸ್, ನೀವು ಏನು ಮಾಡುತ್ತಿದ್ದೀರಿ? ನಿಮ್ಮ ರಾಜ್ಯದಲ್ಲಿ ಇದು ನಡೆಯುತ್ತಿದ್ದರೆ, ಇದು ಹೇಗೆ ಸಾಧ್ಯ?... ಇಷ್ಟೆಲ್ಲಾ ಇದ್ದರೂ, ಸರ್ಕಾರವು ಗಮನ ಹರಿಸಲು ಸಿದ್ಧರಿಲ್ಲ ... ” ಅವರು ಹೆಚ್ಚಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನಡೆಸುತ್ತಿರುವ ಮತ್ತು ನೇತೃತ್ವದ ಭಾರತದ ಕೇಂದ್ರ ಸರ್ಕಾರವನ್ನು ಉಲ್ಲೇಖಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ (ಬಿಜೆಪಿ). ಶ್ರೀ ಫಡ್ನವೀಸ್ ಅವರು ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಂಭಾವ್ಯ ಉಲ್ಲೇಖವಾಗಿದೆ.

ಮತ್ತು, ನಾನವರೆ, “ಈ ಬೆರಳಿನಿಂದ ನಾನು ಬಿಜೆಪಿ ಸರ್ಕಾರಕ್ಕೆ ಮತ ಹಾಕಿದ್ದೆ. ನಾನು ಈಗ ಈ ಬೆರಳನ್ನು ನಗರ ಪೊಲೀಸ್ ಠಾಣೆಗೆ ಮತ್ತು ಮೋದಿ ಸರ್ಕಾರಕ್ಕೆ ಉಡುಗೊರೆಯಾಗಿ ನೀಡುತ್ತಿದ್ದೇನೆ, ಇದು ನಮ್ಮ ಪರಿಸ್ಥಿತಿ ಈ ಹಂತಕ್ಕೆ ತಲುಪಿದೆ" ಎಂದು ಹೇಳುತ್ತಾರೆ. 

ಅವರು ತಮ್ಮ ಸಹೋದರನ ಸಾವಿನ ಪ್ರಕರಣದಲ್ಲಿ ಪೊಲೀಸ್ ಕ್ರಮದ ಕೊರತೆಯ ಆರೋಪದ ಬಗ್ಗೆ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಪ್ರಸಾರ ಮಾಡುವಾಗ ಅವರು ಬಿಜೆಪಿಯನ್ನು ಉಲ್ಲೇಖಿಸುತ್ತಾರೆ, ಆದರೆ ಅವರು ಕಾಂಗ್ರೆಸ್ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ.

ತೀರ್ಪು

ಕಾಂಗ್ರೆಸ್‌ಗೆ ಮತ ಹಾಕಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಬೆರಳನ್ನೇ ಕತ್ತರಿಸಿದ್ದಾನೆ ಎಂಬ ವೈರಲ್‌ ವೀಡಿಯೋನ ಹೇಳಿಕೆ ತಪ್ಪಾಗಿದೆ. ಮಹಾರಾಷ್ಟ್ರದ ವ್ಯಕ್ತಿಯೊಬ್ಬ ತನ್ನ ಸಹೋದರನ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆಯನ್ನು ಪ್ರತಿಭಟಿಸಲು ತನ್ನ ಬೆರಳನ್ನು ಕತ್ತರಿಸಿಕೊಂಡಿದ್ದಾನೆ ಮತ್ತು ಅದಕ್ಕಾಗಿ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾನೆ. ಆದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ. 

(ನಿಮಗೆ ಅಥವಾ ನಿಮಗೆ ತಿಳಿದಿರುವ ಯಾರಿಗಾದರೂ ಬೆಂಬಲದ ಅಗತ್ಯವಿದ್ದರೆ, ದಯವಿಟ್ಟು ಈ ತುರ್ತು ಸೇವಾ ಸಹಾಯವಾಣಿಗಳನ್ನು ಸಂಪರ್ಕಿಸಿ.)

ಅನುವಾದಿಸಿದವರು: ಅಂಕಿತಾ ಕುಲಕರ್ಣಿ 

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.