ಕೇಸರಿ ಧ್ವಜದೊಂದಿಗೆ ಗುಜರಾತ್ ಸ್ಕೂಬಾ ಡೈವರ್‌ನ ವೀಡಿಯೋವನ್ನು ಭಾರತೀಯ ನೌಕಾಪಡೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ರಾಜೇಶ್ವರಿ ಪರಸ
ಜನವರಿ 25 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕೇಸರಿ ಧ್ವಜದೊಂದಿಗೆ ಗುಜರಾತ್  ಸ್ಕೂಬಾ ಡೈವರ್‌ನ ವೀಡಿಯೋವನ್ನು ಭಾರತೀಯ ನೌಕಾಪಡೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಗುಜರಾತ್ ಮೂಲದ ಸ್ಕೂಬಾ ಡೈವಿಂಗ್ ಕಂಪನಿಯು ತಮ್ಮ ಉದ್ಯೋಗಿ ಈ ಸಾಹಸವನ್ನು ಮಾಡಿದ್ದು, ಭಾರತೀಯ ನೌಕಾಪಡೆಯೊಂದಿಗೆ ಅವರ ಯಾವುದೇ ಸಂಬಂಧವಿಲ್ಲಾ ಎಂದು ಖಚಿತಪಡಿಸಿದ್ದಾರೆ.

ಕ್ಲೈಮ್ ಐಡಿ 1ee19031

ಹೇಳಿಕೆ ಏನು?

ಜನವರಿ ೨೨, ೨೦೨೪ ರಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೊಸ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು. ಜನರು ಈ ಸಂಭ್ರಮವನ್ನು ಆಚರಿಸುವ ಹಲವಾರು ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಅಂತಹ ಒಂದು ೩೦ ಸೆಕೆಂಡುಗಳ ಕ್ಲಿಪ್ , ಹಿಂದೂ ದೇವರು ಹನುಮಾನ್‌ನ ಚಿತ್ರದೊಂದಿಗೆ ಅಲಂಕರಿಸಲ್ಪಟ್ಟ ಕೇಸರಿ ಧ್ವಜವನ್ನು ಹಿಡಿದಿರುವ ಸ್ಕೂಬಾ ಡೈವರ್ ಅನ್ನು ಒಳಗೊಂಡಿದೆ  ಮತ್ತು ಅದರ ಮೇಲೆ 'ಜೈ ಶ್ರೀ ರಾಮ್' ಎಂಬ ಹಿಂದಿ ಪಠ್ಯವು ಕಾಣಿಸುತ್ತದೆ. ಈ ವೀಡಿಯೋ ಭಾರತೀಯ ನೌಕಾಪಡೆಯ ನೀರೊಳಗಿನ ಸಾಹಸವನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಒಂದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ  ನೋಡಬಹುದು.

ಆದರೆ ಈ ಹೇಳಿಕೆ ತಪ್ಪಾಗಿದೆ, ವೀಡಿಯೋದಲ್ಲಿರುವ ವ್ಯಕ್ತಿ ಗುಜರಾತ್‌ನ ಖಾಸಗಿ ಸ್ಕೂಬಾ ಡೈವರ್ ಆಗಿದ್ದು, ಭಾರತೀಯ ನೌಕಾಪಡೆಯ ಸದಸ್ಯರಲ್ಲ.

ವೈರಲ್ ಹೇಳಿಕೆಯ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಸತ್ಯ ಏನು?

ಭಾರತೀಯ ನೌಕಾಪಡೆಯು ರಾಮ ಮಂದಿರದ ಪ್ರತಿಷ್ಠಾಪನೆಗೆ ಸಂಬಂಧಿಸಿದ ಆಚರಣೆಗಳನ್ನು ಅಧಿಕೃತವಾಗಿ ಘೋಷಿಸಿದೆಯೇ ಎಂದು ನಾವು ಮೊದಲು ತನಿಖೆ ಮಾಡಿದೆವು. ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಥವಾ ಭಾರತೀಯ ಮಾಧ್ಯಮಗಳಲ್ಲಿ ಅಂತಹ ಯಾವುದೇ ಘೋಷಣೆಗಳು ಕಂಡುಬಂದಿಲ್ಲ. ನೌಕಾಪಡೆಯನ್ನು ಒಳಗೊಂಡ ಈ ರೀತಿಯ ಮಹತ್ವದ ಘಟನೆಯು ವ್ಯಾಪಕವಾದ ಗಮನವನ್ನು ಸೆಳೆಯುತ್ತದೆ.

ವೈರಲ್ ವೀಡಿಯೋದ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಜನವರಿ ೨೧, ೨೦೨೪ ರ ಸಾಮಾಜಿಕ ಮಾಧ್ಯಮದ ಪೋಷ್ಟ್ ಗೆ ನಮ್ಮನ್ನು ನಿರ್ದೇಶಿಸಿತು. ಈ ಪೋಷ್ಟ್  ಗುಜರಾತ್‌ನ ದ್ವಾರಕಾದಲ್ಲಿರುವ ಶಿವರಾಜ್‌ಪುರ ಬೀಚ್ ಬಳಿ ನೀರಿನೊಳಗೆ ಕೇಸರಿ ಧ್ವಜವನ್ನು ಬೀಸುತ್ತಿರುವ ರಾಮಭಕ್ತನನ್ನು ವಿವರಿಸುವ ಶೀರ್ಷಿಕೆಯೊಂದಿಗೆ ಅದೇ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಜನವರಿ ೧೯, ೨೦೨೪ ರಂದು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಇದೇ ವೀಡಿಯೋವನ್ನು ಹಂಚಿಕೊಂಡಿದೆ, ಮತ್ತು ಅದರ ಶೀರ್ಷಿಕೆ, “ವೀಡಿಯೋ | ಗುಜರಾತಿನ ಶಿವರಾಜ್‌ಪುರ ಬೀಚ್‌ನಲ್ಲಿ ಸಮುದ್ರದ ನೀರಿನ ಅಡಿಯಲ್ಲಿ ಭಗವಾನ್ ಹನುಮಂತನ ಚಿತ್ರವಿರುವ ಕೇಸರಿ ಧ್ವಜವನ್ನು ಸ್ಕೂಬಾ ಡೈವರ್ ಎತ್ತುಹಿಡಿದಿದ್ದಾನೆ (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ಹೇಳಲಾಗಿದೆ.

ಈ ಸಾಹಸಕ್ಕೆ ಕಾರಣವಾದ  ಗುಜರಾತ್ ಮೂಲದ ದ್ವಾರಕಾದಲ್ಲಿರುವ ಸ್ಕೂಬಾ ಡೈವಿಂಗ್ ಕಂಪನಿಯಾದ ಡಿವೈನ್ ಸ್ಕೂಬಾವನ್ನು ನಾವು ಸಂಪರ್ಕಿಸಿದೆವು. ಏಜೆನ್ಸಿಯ ಮಾಲೀಕರು ತಮ್ಮ ಉದ್ಯೋಗಿ ಈ ಸಾಹಸ ಪ್ರದರ್ಶಿಸಿದ್ದಾರೆ ಮತ್ತು ಭಾರತೀಯ ನೌಕಾಪಡೆಗೆ ಯಾವುದೇ ಸಂಭಂದವಿಲ್ಲ ಎಂದು ನಮಗೆ ತಿಳಿಸಿದರು. 

ಕಂಪನಿಯ ಮಾಲೀಕರಾದ, ಕೃಷ್ಣ ನಯನಿ ಅವರು ಹೀಗೆ ವಿವರಿಸಿದರು, “ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ನಾವು ಶಿವರಾಜಪುರ ಬೀಚ್ ಬಳಿ ನೀರಿನೊಳಗೆ ಕೇಸರಿ ಧ್ವಜವನ್ನು ಪ್ರದರ್ಶಿಸಿದೆವು ಮತ್ತು ಅದನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದೆವು. ಎರಡು ಅಥವಾ ಮೂರು ಇತರ ಏಜೆನ್ಸಿಗಳು ಸಹ ಇದೇ ರೀತಿಯ ಸಾಹಸಗಳನ್ನು ನಡೆಸಿದವು. ಇದು ನಮಗೆ ರೂಢಿಯಲ್ಲಿರುವ ಅಭ್ಯಾಸವಾಗಿದೆ - ಮುಂಬರುವ ಗಣರಾಜ್ಯೋತ್ಸವ ಆಚರಣೆಗಳಿಗಾಗಿ ನಾವು ರಾಷ್ಟ್ರಧ್ವಜವನ್ನು ನೀರಿನೊಳಗೆ ತೋರಿಸುವ ಯೋಜನೆ ಹಾಕಿದ್ದೇವೆ. ಅವರು ಭಾರತೀಯ ನೌಕಾಪಡೆಯೊಂದಿಗೆ ಸಂಬಂಧ ಹೊಂದಿಲ್ಲ" ಎಂದು ಅವರ ಏಜೆನ್ಸಿಯ ಸ್ಥಾನಮಾನವನ್ನು ಸ್ಪಷ್ಟಪಡಿಸಿದರು.

ಲಾಜಿಕಲಿ ಫ್ಯಾಕ್ಟ್ಸ್ ಅಧಿಕೃತ ಹೇಳಿಕೆಗಾಗಿ ಭಾರತೀಯ ನೌಕಾಪಡೆಯ ವಕ್ತಾರರನ್ನು ತಲುಪಿದೆ ಮತ್ತು ಅವರ ಪ್ರತಿಕ್ರಿಯೆಯನ್ನು ಸ್ವೀಕರಿಸಿದಾಗ ಲೇಖನವನ್ನು ನವೀಕರಿಸಲಾಗುವುದು. 

ತೀರ್ಪು

ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆಯನ್ನು ಆಚರಿಸಲು ಭಾರತೀಯ ನೌಕಾಪಡೆಯು ಕೇಸರಿ ಧ್ವಜದೊಂದಿಗೆ ನೀರೊಳಗಿನ ಸಾಹಸವನ್ನು ನಡೆಸಲಿಲ್ಲ. ಬದಲಾಗಿ ಗುಜರಾತ್ ಮೂಲದ ಖಾಸಗಿ ಸ್ಕೂಬಾ ಡೈವಿಂಗ್ ಏಜೆನ್ಸಿಯೊಂದು ಸಾಹಸವನ್ನು ಪ್ರದರ್ಶಿಸಿದೆ. ಆದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.