ರಾಜಕೀಯ ರ‍್ಯಾಲಿಯಲ್ಲಿ ಭಾಗವಹಿಸುವ ಬಗ್ಗೆ ಜನರು ದೂರುವ ವೀಡಿಯೋವೊಂದನ್ನು ಬಿಜೆಪಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಅಕ್ಟೋಬರ್ 10 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ರಾಜಕೀಯ ರ‍್ಯಾಲಿಯಲ್ಲಿ ಭಾಗವಹಿಸುವ ಬಗ್ಗೆ ಜನರು ದೂರುವ ವೀಡಿಯೋವೊಂದನ್ನು ಬಿಜೆಪಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಜೈಪುರದಲ್ಲಿ ಪಕ್ಷದ ರಾಲಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಬಿಜೆಪಿ ಜನರಿಗೆ ಸುಳ್ಳು ಹೇಳಿದೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ವೀಡಿಯೋದಲ್ಲಿ ಕಂಡುಬರುವ ಮಹಿಳೆಯರು ರಾಜಸ್ಥಾನದ ಸಿಕಾರ್‌ನಲ್ಲಿ ಜನನಾಯಕ್ ಜನತಾ ಪಾರ್ಟಿಯ ರ‍್ಯಾಲಿಗೆ ಸುಳ್ಳು ಹೇಳಿ ಅವರನ್ನು ಕರೆದೊಯ್ದಿದ್ದರ ಬಗ್ಗೆ ಮಾತನಾಡುತ್ತಿದ್ದಾರೆ.

ಕ್ಲೈಮ್ ಐಡಿ cb8e0228

ಉತ್ತರ ಭಾರತದ ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಸಂಪೂರ್ಣ ಪ್ರಚಾರವನ್ನು ನಡೆಸುತ್ತಿದೆ. ಬಿಜೆಪಿ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ ೨೫ ರಂದು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ರ‍್ಯಾಲಿ ನಡೆಸಿದರು.

ಇಲ್ಲಿನ ಹೇಳಿಕೆಯೇನು?

ರಾಜಸ್ಥಾನದ ಸಿಕರ್‌ನಲ್ಲಿರುವ ಖಾತು ಶಾಮ್ ದೇವಸ್ಥಾನಕ್ಕೆ ಜನರನ್ನು ಕರೆದುಕೊಂಡು ಹೋಗುವುದಾಗಿ ಹೇಳಿ ಜೈಪುರದ ಬಿಜೆಪಿ ರ‍್ಯಾಲಿಗೆ ಜನರನ್ನು ಕರೆದುಕೊಂಡು ಹೋಗಿ ಮೋಸ ಮಾಡಲಾಗಿದೆ ಎಂದು ಹೇಳುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ದೇವಸ್ಥಾನ ಭೇಟಿಯ ನೆಪದಲ್ಲಿ ತಮ್ಮನ್ನು ದಾರಿ ತಪ್ಪಿಸಿ ರ‍್ಯಾಲಿಗೆ ಕರೆತರಲಾಗಿದೆ ಎಂದು ಮಹಿಳೆಯರ ಗುಂಪು ಸುದ್ದಿಗಾರರಿಗೆ ಹೇಳುತ್ತಿರುವುದನ್ನು ವೈರಲ್ ಕ್ಲಿಪ್ ತೋರಿಸುತ್ತದೆ. ವೀಡಿಯೋದಲ್ಲಿ ಒಬ್ಬ ಮಹಿಳೆ ಕೋಪದಿಂದ  ವರದಿಗಾರನಿಗೆ ಹೀಗೆ ಹೇಳುತ್ತಾಳೆ, "ಅವರು ನಮಗೆ ಬಾಯಿ ಮುಚ್ಚಿಕೊಳ್ಳುವಂತೆ ಹೇಳಿದರು ಮತ್ತು ನಾವು ಎಲ್ಲವನ್ನೂ ನೀಡುತ್ತೇವೆ ಎಂದು ಭರವಸೆ ನೀಡಿದರು. ಅವರು ಬಸ್ ಅನ್ನು ಸಹ ನಿಲ್ಲಿಸಲಿಲ್ಲ ಮತ್ತು ನಮಗೆ ನೀರು ನೀಡಲಿಲ್ಲ ... ಅವರು ಸುಳ್ಳು ಹೇಳಿದರು. ನಮ್ಮನ್ನು ಇಲ್ಲಿಗೆ ಕರೆತರಲು (ಕನ್ನಡಕ್ಕೆ ಅನುವಾದಿಸಲಾಗಿದೆ)."

ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು "ಬಿಜೆಪಿ ಜನರನ್ನು ಮೂರ್ಖರು ಎಂದು ಭಾವಿಸುತ್ತದೆ! ಖತು ಶ್ಯಾಮ್ ಜಿ ಅವರ ದರ್ಶನ ನೀಡುವ ಹೆಸರಿನಲ್ಲಿ ಜೈಪುರ ಬಿಜೆಪಿ ರ‍್ಯಾಲಿಗೆ ಮಹಿಳೆಯರನ್ನು ಕರೆದೊಯ್ಯಲಾಯಿತು (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ಬರೆದಿದ್ದಾರೆ. ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪ್ರಕಟಿಸುವ ಸಮಯದಲ್ಲಿ ೨೧,೦೦೦ ವೀಕ್ಷಣೆಗಳು ಮತ್ತು ೬೬೦ ಲೈಕ್ ಗಳನ್ನೂ ಗಳಿಸಿದೆ. ಇದೇ ರೀತಿಯ ಪೋಷ್ಟ್ ಅನ್ನು ಫೇಸ್‌ಬುಕ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ.

ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿನ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಪ್ರಾದೇಶಿಕ ರಾಜಕೀಯ ಪಕ್ಷವಾದ ಜನನಾಯಕ್ ಜನತಾ ಪಾರ್ಟಿ (ಜೆಜೆಪಿ) ಆಯೋಜಿಸಿದ್ದ ರ‍್ಯಾಲಿಗೆ ದಾರಿತಪ್ಪಿಸಿ ಕರೆತಂದಿರುವ ಬಗ್ಗೆ ಜನರು ದೂರುತ್ತಿರುವುದನ್ನು ವೀಡಿಯೋ ತೋರಿಸುತ್ತದೆ.

ನಾವು ಕಂಡುಹಿಡಿದದ್ದೇನು?

ವೈರಲ್ ವೀಡಿಯೋವನ್ನು ಪರಿಶೀಲಿಸಿದ ನಂತರ, ವೀಡಿಯೋದಲ್ಲಿ 'HR20News' ಲೋಗೋ ಕಂಡುಬಂದಿದ್ದು, ವರದಿಗಾರರೊಬ್ಬರು ಬೂಮ್ ನ ಮೈಕ್ ಅನ್ನು ಹಿಡಿದಿರುವುದನ್ನು ನಾವು ಗಮನಿಸಿದ್ದೇವೆ. HR20NEWS INDIA ಉತ್ತರ ಭಾರತದ ರಾಜ್ಯವಾದ ಹರಿಯಾಣ ಮೂಲದ ಸ್ಥಳೀಯ ಸುದ್ದಿ ಸಂಸ್ಥೆಯಾಗಿದೆ. ವೈರಲ್ ವೀಡಿಯೋವಿನ ಒಂಬತ್ತು ನಿಮಿಷಗಳ ಅವಧಿಯ ಆವೃತ್ತಿಯನ್ನು ಸೆಪ್ಟೆಂಬರ್ ೨೫ ರಂದು ಈ ಸುದ್ದಿವಾಹಿನಿಯ ಫೇಸ್‌ಬುಕ್ ನಲ್ಲಿ ಹಂಚಿಕೊಂಡಿದೆ ಎಂದು ನಾವು ಕಂಡುಕೊಂಡಿದ್ದೇವೆ. ವಿಸ್ತೃತ ವೀಡಿಯೋದಲ್ಲಿ, ಜನರನ್ನು ದಾರಿತಪ್ಪಿಸಲಾಗಿದೆ ಮತ್ತು ಸಿಕಾರ್‌ನಲ್ಲಿನ ಜೆಜೆಪಿ ನಾಯಕ ದುಷ್ಯಂತ್ ಚೌತಾಲಾ ಅವರ ರ‍್ಯಾಲಿಗೆ ರಾಜಸ್ಥಾನಕ್ಕೆ ಕರೆದೊಯ್ಯಲಾಗಿತ್ತು ಎಂದು ವರದಿಗಾರರು ಹೇಳಿದ್ದಾರೆ. ತಮಗೆ ನೀಡಿದ ಭರವಸೆಯ ಊಟವನ್ನು ನೀಡಿಲ್ಲ ಮತ್ತು ದೇವಸ್ಥಾನದ ಭೇಟಿಯ ನೆಪದಲ್ಲಿ ಸೋನಿಪತ್‌ನಿಂದ ೧೫-೧೬ ಬಸ್‌ಗಳಲ್ಲಿ ಕರೆತಂದಿದ್ದಾರೆ ಎಂದು ಜನರು ವೀಡಿಯೋವಿನಲ್ಲಿ ಹೇಳಿಕೊಳ್ಳುವುದನ್ನು ಕಾಣಬಹುದು.

ವೈರಲ್ ವೀಡಿಯೋವನ್ನು HR20News ವೀಡಿಯೋವಿನ ೧:೩೦ ನಿಮಿಷಗಳ ಸಮಯದಿಂದ  ಮತ್ತು ೨:೦೫ ನಿಮಿಷಗಳವರೆಗೆ ತೆಗೆದುಕೊಳ್ಳಲಾಗಿದೆ.

ಹಿಂದಿ ಸುದ್ದಿವಾಹಿನಿ ದೈನಿಕ್ ಭಾಸ್ಕರ್ ಕೂಡ ಘಟನೆಯ ಬಗ್ಗೆ ವರದಿ ಮಾಡಿದೆ. ಆ ವರದಿಯ ಪ್ರಕಾರ, ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಮಾಜಿ ಉಪಪ್ರಧಾನಿ ಚೌಧರಿ ದೇವಿ ಲಾಲ್ ಅವರ ೧೧೦ ನೇ ಜನ್ಮದಿನದಂದು ಜೆಜೆಪಿ ಸಿಕಾರ್‌ನಲ್ಲಿ ರ‍್ಯಾಲಿಯನ್ನು ನಡೆಸಿತು. ಇದರಲ್ಲಿ ಹರಿಯಾಣದ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಭಾಷಣ ಮಾಡಿದರು. ಅಂಬಾಲಾದ ಬಲದೇವ್ ನಗರ ಮತ್ತು ಮಾಡೆಲ್ ಟೌನ್‌ನಿಂದ ಹಲವಾರು ಮಹಿಳೆಯರು ಖತು ಶ್ಯಾಮ್ ದೇವಸ್ಥಾನಕ್ಕೆ ಭೇಟಿ ನೀಡುವ ನೆಪದಲ್ಲಿ ತಮ್ಮನ್ನು ರ‍್ಯಾಲಿಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಜೆಜೆಪಿ ತಮ್ಮಿಂದ ತಲಾ ರೂ. ೧೦೦ ತೆಗೆದುಕೊಂಡಿದೆ ಎಂದು ಮಹಿಳೆಯರು ಹೇಳಿದರು. ಈ ಆರೋಪವನ್ನು ಜೆಜೆಪಿ ಪಕ್ಷವು ನಿರಾಕರಿಸಿದೆ.

ಸ್ಥಳೀಯ ಸುದ್ದಿ ಸಂಸ್ಥೆ ದೇಶ್ ಪ್ರದೇಶ್ ಖಬರ್ ಸೆಪ್ಟೆಂಬರ್ ೨೬ ರಂದು ಪ್ರಕಟಿಸಿದ ವೀಡಿಯೋ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ವರದಿಯ ಶೀರ್ಷಿಕೆ, "ಜೆಜೆಪಿ, ನಾಚಿಕೆಗೇಡಿನಾಗಿದೆ! ಖಾತು ಶ್ಯಾಮ್ ದರ್ಶನ್ ಎಂಬ ನೆಪದಲ್ಲಿ ಮಹಿಳೆಯರನ್ನು ರ‍್ಯಾಲಿಗೆ ಕರೆದೊಯ್ದು ಅವರ ನಂಬಿಕೆಯೊಂದಿಗೆ ಆಟವಾಡಿದ್ದಾರೆ (ಹಿಂದಿಯಿಂದ ಅನುವಾದಿಸಲಾಗಿದೆ)" ಎಂದು ಓದುತ್ತದೆ. ಈ ವೀಡಿಯೋದಲ್ಲಿ, ಅಂಬಾಲಾದ ಜನರು ತಮ್ಮನ್ನು ದಾರಿತಪ್ಪಿಸಿ ಸಿಕಾರ್‌ನಲ್ಲಿ ಜೆಜೆಪಿ ರ‍್ಯಾಲಿಗೆ ಕರೆದೊಯ್ಯಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಜೆಜೆಪಿ ಸೆಪ್ಟೆಂಬರ್ ೨೫ ರಂದು ಸಿಕಾರ್‌ನಲ್ಲಿ ರ‍್ಯಾಲಿಯನ್ನು ನಡೆಸಿತು. ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ೨೫-೩೦ ಸ್ಥಾನಗಳಲ್ಲಿ ಸ್ಪರ್ಧಿಸುವ ಗುರಿಯನ್ನು ಹೊಂದಿದೆ ಎಂದು ವರದಿ ಹೇಳಿದೆ.

ತೀರ್ಪು

ಮಹಿಳೆಯರ ಗುಂಪೊಂದು ತಮ್ಮನ್ನು ಸುಳ್ಳು ಹೇಳಿ ಜೆಜೆಪಿ ರ‍್ಯಾಲಿಗೆ ಕರೆದುಕೊಂಡು ಹೋದ  ಬಗ್ಗೆ ದೂರುತ್ತಿರುವ ವೀಡಿಯೋವನ್ನು ಬಿಜೆಪಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ವೈರಲ್ ವೀಡಿಯೋವನ್ನು ಸಿಕಾರ್‌ನಲ್ಲಿ ಸೆರೆಹಿಡಿಯಲಾಗಿದೆ ಮತ್ತು ಇದು ಬಿಜೆಪಿಯ ಜೈಪುರ ರ‍್ಯಾಲಿಗೆ ಸಂಬಂಧಿಸಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.