ಜಿಂಬಾಬ್ವೆ ಕ್ರಿಕೆಟಿಗರು 'ಜೈ ಶ್ರೀ ರಾಮ್' ಘೋಷಣೆಗಳಿಗೆ ನೃತ್ಯ ಮಾಡುತ್ತಿರುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ

ಮೂಲಕ: ರಜಿನಿ ಕೆ.ಜಿ
ಆಗಸ್ಟ್ 24 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಜಿಂಬಾಬ್ವೆ ಕ್ರಿಕೆಟಿಗರು 'ಜೈ ಶ್ರೀ ರಾಮ್' ಘೋಷಣೆಗಳಿಗೆ ನೃತ್ಯ ಮಾಡುತ್ತಿರುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಐಸಿಸಿ ಪುರುಷರ ಟಿ೨೦ ವಿಶ್ವಕಪ್ ೨೦೨೨ ರಲ್ಲಿ ಪಂದ್ಯವನ್ನು ಗೆದ್ದ ನಂತರ ಜಿಂಬಾಬ್ವೆ ಆಟಗಾರರು ತಮ್ಮ ಸ್ಥಳೀಯ ಭಾಷೆಯ ಹಾಡಿಗೆ ನೃತ್ಯ ಮಾಡುತ್ತಿದ್ದರು.

ಕ್ಲೈಮ್ ಐಡಿ 6d8dae0d

ಸಂದರ್ಭ

ಪಾಕಿಸ್ತಾನವನ್ನು ಸೋಲಿಸಿದ ನಂತರ ಜಿಂಬಾಬ್ವೆಯ ಪುರುಷ ಕ್ರಿಕೆಟಿಗರು ನೃತ್ಯ ಮಾಡುತ್ತಿರುವ ವೀಡಿಯೋ ಒಂದು, ಆಟಗಾರರು ಶ್ರೀ ರಾಮನನ್ನ ಜಪಿಸುವ ಹಾಡಿಗೆ  ಕುಣಿದಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎಕ್ಸ್ (X) ಪ್ಲಾಟ್ಫಾರ್ಮ್ ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡ ಪೋಷ್ಟ್ ಒಂದರ ಶೀರ್ಷಿಕೆ, "ಟಿ-೨೦ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯದಲ್ಲಿ ಜಿಂಬಾಂಬ್ವೆ ಯು ಪಾಕಿಸ್ತಾನವನ್ನ ಹೀನಾಯವಾಗಿ ಸೋಲಿಸಿದ ನಂತರ ಜಿಂಬಾಂಬ್ವೆ ಟೀಮ್ ಆಟಗಾರರು "ಭಾರತ ಕಾ ಬಚ್ಚಾ ಬಚ್ಚಾ ಜೈ ಶ್ರೀ ರಾಮ್" ಎಂದು ಹಾಡನ್ನು ಹಚ್ಚಿ ಸಂಭ್ರಮಿಸಿದರು" ಎಂಬ ಹೇಳಿಕೆಯೊಂದಿಗೆ ಶೇರ್ ಮಾಡಲಾಗಿದೆ.

೩೦ ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ಮಹಿಳೆಯೊಬ್ಬರು ಕ್ಯಾಮರಾದಲ್ಲಿ ಮಾತನಾಡುವುದರೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಆಟಗಾರರು ಹಿಂದೂ ದೇವರನ್ನು ಜಪಿಸುವ ಹಾಡಿಗೆ ಆಟಗಾರರು ನೃತ್ಯ ಮಾಡುತ್ತಿದ್ದರು ಎಂಬ ಅದೇ ಹೇಳಿಕೆಯನ್ನು ಹೊಂದಿದೆ. ವೀಡಿಯೋದಲ್ಲಿ ಸುಮಾರು ೧೨ ಸೆಕೆಂಡುಗಳಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡದ ಸದಸ್ಯರು 'ಜೈ ಶ್ರೀ ರಾಮ್' ಎಂಬ ಘೋಷಣೆಗಳು ಹಿನ್ನಲೆಯಲ್ಲಿ ಪ್ರತಿಧ್ವನಿಸುತ್ತಿದ್ದಂತೆ ನೃತ್ಯ ಮಾಡುವುದನ್ನು ಕಾಣಬಹುದು. ಈ ವೀಡಿಯೋವನ್ನು ಫೇಸ್‌ಬುಕ್, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ.

ಆನ್‌ಲೈನ್‌ನಲ್ಲಿ ಶೇರ್ ಮಾಡಲಾದ ಹೇಳಿಕೆಗಳು 
(ಮೂಲ: ಎಕ್ಸ್/@Bitt2DA/ಫೇಸ್ಬುಕ್/यदुवंशी बाजीराव पारकना/ಇನ್ಸ್ಟಾಗ್ರಾಮ್/ @haveri_le/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಆಲ್ಟೆರ್ ಮಾಡಲಾಗಿದೆ )

ವಾಸ್ತವವಾಗಿ

ರಿವರ್ಸ್ ಇಮೇಜ್ ಸರ್ಚ್ ಮೂಲಕ, ಐಸಿಸಿ ಪುರುಷರ ಟಿ೨೦ ವಿಶ್ವಕಪ್ ೨೦೨೨ರ ಸಮಯದಲ್ಲಿ ಈ ವೀಡಿಯೋವನ್ನು ರೆಕಾರ್ಡ್ ಮಾಡಲಾಗಿತ್ತು ಎಂದು ನಾವು ಕಂಡುಕೊಂಡೆವು. 'ಜಿಂಬಾಬ್ವೆ ಕ್ರಿಕೆಟ್' ಖಾತೆಯಲ್ಲಿ ೧೪೦ ಸೆಕೆಂಡುಗಳ ಅವಧಿಯ ವೀಡಿಯೋವನ್ನು ಅಕ್ಟೋಬರ್ ೨೮, ೨೦೨೨ ರಂದು ಎಕ್ಸ್ ನಲ್ಲಿ ಪೋಷ್ಟ್ ಮಾಡಲಾಗಿತ್ತು ಮತ್ತು ಅದರ ಶೀರ್ಷಿಕೆ ಹೀಗೆ ಹೇಳಿತ್ತದೆ, "ಮತ್ತೊಂದು ಅದ್ಭುತ ಪ್ರದರ್ಶನವನ್ನು ಆಚರಿಸಲಾಗುತ್ತಿದೆ! #PAKvZIM | #T20WorldCup." ಕ್ರಿಕೆಟಿಗರು ಮೈದಾನದಲ್ಲಿ ಸಂಭ್ರಮಿಸುತ್ತಿರುವುದನ್ನು ವೀಡಿಯೋ ತೋರಿಸಿದೆ.

0:40 ಟೈಮ್‌ಸ್ಟ್ಯಾಂಪ್‌ನಲ್ಲಿ, ಜಿಂಬಾಬ್ವೆ ಆಟಗಾರರು ನೃತ್ಯ ಮಾಡುವ ಅದೇ ವೈರಲ್ ಕ್ಲಿಪ್ ಅನ್ನು ಗುರುತಿಸಬಹುದು. ಆದರೆ, ಈಗ ವೈರಲ್ ಆಗಿರುವ ವೀಡಿಯೋದಲ್ಲಿನ ಆಡಿಯೋಗೂ  ಇದಕ್ಕೂ ಹೊಂದಾಣಿಕೆ ಇಲ್ಲ. ಅವರು ಬೇರೆ ಹಾಡಿಗೆ ನೃತಿಯ ಮಾಡುತ್ತಿದ್ದರು, ಬಹುತೇಕ ಅವರ ಸ್ಥಳೀಯ ಭಾಷೆಯಾಗಿರಬಹುದು. ಕ್ರಿಕೆಟ್ ಅಪ್ಡೇಟ್ಸ್ ಗಳನ್ನು ನೀಡಲು ಮೀಸಲಾಗಿರುವ ವೆಬ್‌ಸೈಟ್ 'CricketTimes.com' ನ ಅಧಿಕೃತ ಎಕ್ಸ್ ಖಾತೆಯಲ್ಲಿ ಕ್ಲಿಪ್‌ನ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೋವನ್ನು ಸಹ ಅಕ್ಟೋಬರ್ ೨೮, ೨೦೨೨ ರಂದು ಹಂಚಿಕೊಳ್ಳಲಾಗಿತ್ತು. 

ಅದೇ ದಿನ ಪ್ರಕಟವಾದ ವರದಿಯಲ್ಲಿ, ಇಂಡಿಯಾ ಟುಡೇ, ಜಿಂಬಾಬ್ವೆ ಆಟಗಾರರು ಮತ್ತು ಸಿಬ್ಬಂದಿಯು ಅಕ್ಟೋಬರ್ ೨೭, ೨೦೨೨ ರಂದು ಟಿ೨೦ ವಿಶ್ವಕಪ್‌ನ ಸೂಪರ್ ೧೨ ಹಂತದಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಅಚ್ಚರಿಯ ವಿಜಯವನ್ನು ಆಚರಿಸಿದರು ಎಂದು ಹೇಳುತ್ತದೆ. ಎಕ್ಸ್ ನಲ್ಲಿ ಜಿಂಬಾಬ್ವೆ ಕ್ರಿಕೆಟ್ ಹಂಚಿಕೊಂಡ ವೀಡಿಯೋವನ್ನೂ ಸಹ ಒಳಗೊಂಡಿದೆ. ನಾಯಕ ಕ್ರೇಗ್ ಎರ್ವಿನ್ ಕೆಲವು ನೃತ್ಯ ಚಲನೆಗಳನ್ನು ತೋರಿಸಿದ್ದರಿಂದ ಪೇಸರ್ ರಿಚರ್ಡ್ ನಾಗರವ ಮುಖ್ಯ ಗಾಯಕರಾಗಿ ಕಾಣಿಸಿಕೊಂಡಿದ್ದರು ಎಂದು ವರದಿ ಹೇಳುತ್ತದೆ.

ಕ್ರಿಕ್‌ಟ್ರಾಕರ್, ಭಾರತೀಯ ಕ್ರಿಕೆಟ್ ಸುದ್ದಿ ವೆಬ್‌ಸೈಟ್, ಸಂಭ್ರಮಾಚರಣೆಯ ಸಮಯದಲ್ಲಿ ಆಟಗಾರರು ವೃತ್ತವನ್ನು ರಚಿಸಿದರು ಮತ್ತು ನಂತರ ಎರ್ವಿನ್, ಕೋಚಿಂಗ್ ಸಿಬ್ಬಂದಿಯ ಸದಸ್ಯರು ಮತ್ತು ಹ್ಯಾಮಿಲ್ಟನ್ ಮಸಕಡ್ಜಾ ನೃತ್ಯದಲ್ಲಿ ತೊಡಗಿದರು ಎಂದು ವರದಿ ಮಾಡಿದೆ. ನಗರವ ಅವರು ತಮ್ಮ ಸ್ಥಳೀಯ ಭಾಷೆಯಲ್ಲಿ ಹಾಡನ್ನು ಹಾಡಿದ್ದರು (ಶೋನಾ ಮತ್ತು ನಡೆಬೇಳೆ ಆಫ್ರಿಕನ್ ರಾಷ್ಟ್ರದಲ್ಲಿ ಹೆಚ್ಚು ಮಾತನಾಡುವ ಭಾಷೆಗಳು) ಮತ್ತು ಪ್ರತಿ ಆಟಗಾರರನ್ನು ನೃತ್ಯವನ್ನು ಮಾಡಲು ಆವ್ಹಾನಿಸಿದರು. 

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಆಟಗಾರರ ಮೂಲ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಆಟಗಾರರು ವಿಭಿನ್ನ ಹಾಡಿಗೆ ಹಾಡುವುದನ್ನು ಮತ್ತು ನೃತ್ಯ ಮಾಡುವುದನ್ನು ಕೇಳಬಹುದು, ಆದರೆ ಅಲ್ಲಿ ಯಾವುದೇ ಹಿಂದೂ ದೇವರಾಗಲಿ ಅಥವಾ ರಾಮನ ಬಗ್ಗೆ ಹಾಡಿಲ್ಲ. ಈ ಎಲ್ಲಾ ಪುರಾವೆಗಳು 'ಜೈ ಶ್ರೀ ರಾಮ್' ಘೋಷಣೆಗಳನ್ನು ಮೂಲ ವೀಡಿಯೋಗೆ ಡಿಜಿಟಲ್ ಆಗಿ ಸೇರಿಸಲಾಗಿದೆ ಎಂದು ದೃಢಪಡಿಸುತ್ತದೆ. 

ತೀರ್ಪು

ಪಂದ್ಯವನ್ನು ಗೆದ್ದ ನಂತರ ಜಿಂಬಾಬ್ವೆ ಕ್ರಿಕೆಟ್ ಆಟಗಾರರು ನೃತ್ಯ ಮತ್ತು ಹಾಡುವ ೨೦೨೨ ರ ವೀಡಿಯೋಗೆ ಹಿಂದೂ ದೇವರಾದ ರಾಮನನ್ನು ಸ್ತುತಿಸುವ ಹಾಡನ್ನು ಕೃತಕವಾಗಿ ಸೇರಿಸಲಾಗಿದೆ. ಎಡಿಟ್ ಮಾಡಿದ ವೀಡಿಯೋವನ್ನು ತಪ್ಪಾದ ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. 

Translated by Ankita Kulkarni

ಈ ವಾಸ್ತವಾಂಶವನ್ನು ಪರಿಶೀಲಿಸಿ

English , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.