ಪಂಜಾಬ್‌ನಲ್ಲಿ ೨೦೨೨ರ ಬೈಸಾಖಿ ಜಾತ್ರೆಯ ಸಂದರ್ಭದಲ್ಲಿ ಚಿತ್ರೀಕರಿಸಲಾದ ವೀಡಿಯೋವನ್ನು ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ಅನುರಾಗ್ ಬರುವಾ
ಫೆಬ್ರವರಿ 20 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಪಂಜಾಬ್‌ನಲ್ಲಿ ೨೦೨೨ರ ಬೈಸಾಖಿ ಜಾತ್ರೆಯ ಸಂದರ್ಭದಲ್ಲಿ ಚಿತ್ರೀಕರಿಸಲಾದ ವೀಡಿಯೋವನ್ನು ರೈತರ ಪ್ರತಿಭಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ವೈರಲ್ ಪೋಷ್ಟ್ ಗಳನ್ನು ತೋರಿಸುವ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ.

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಪಂಜಾಬ್‌ನಲ್ಲಿ ೨೦೨೨ರ ಬೈಸಾಖಿ ಮೇಳದ ದೃಶ್ಯಗಳನ್ನು ವೀಡಿಯೋ ಸೆರೆಹಿಡಿಯುತ್ತದೆ, ಕೂಟಗಳ ಸಮಯದಲ್ಲಿ ಟ್ರಾಕ್ಟರ್‌ಗಳನ್ನು ಸ್ವಚ್ಛಗೊಳಿಸಲು ಬಳಸುವ ಜಲಮೂಲವನ್ನು ಪ್ರದರ್ಶಿಸುತ್ತದೆ.

ಕ್ಲೈಮ್ ಐಡಿ 68ec72db

ಹೇಳಿಕೆ ಏನು?


ನೀಳವಾದ ಟ್ರಾಲಿಯೊಂದಿಗೆ ಟ್ರ್ಯಾಕ್ಟರ್ ಜಲಮೂಲವನ್ನು ದಾಟುತ್ತಿರುವುದನ್ನು ಚಿತ್ರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಸೇರಲು, ಜಲಮೂಲಗಳನ್ನು ದಾಟುವ ಮೂಲಕ ಪೋಲೀಸರ ಬ್ಯಾರಿಕೇಡ್‌ಗಳನ್ನು ದಾಟಿ, ದೆಹಲಿಗೆ ಹೋಗುವ ಮಾರ್ಗದಲ್ಲಿ 'ತಡೆಯಲಾಗದ' ರೈತರನ್ನು ತೋರಿಸುತ್ತದೆ ಎಂದು ಹೇಳಿಕೆಗಳು ಸೂಚಿಸುತ್ತವೆ.

ಅಂತಹ ಪೋಷ್ಟ್ (ಇಲ್ಲಿದೆ ಆರ್ಕೈವ್) ಒಂದರ ಶೀರ್ಷಿಕೆ ಹೀಗಿದೆ, "*ಕಿಸಾನ್ ಕೋ ಕೋಯಿ ನಹಿಂ ರೋಕ್ ಸಕ್ತೇ !*ದೆಹಲಿ ಹರಿಯಾಣ ಹೆದ್ದಾರಿ ಬಂದ್ ಮಾಡಿದ್ದ ಪೋಲಿಸ್ ಬ್ಯಾರಿಕೇಡ್ ದಾಟಿಕೊಂಡು ದೆಹಲಿಗೆ ಹೋರಟ ರೈತರು. ಮೋದಿ ಸರ್ಕಾರದ ವಿರುದ್ಧ ದೇಶದ ರೈತರ ಸಂಘಟನೆಗಳು ದೊಡ್ಡ ಪ್ರತಿಭಟನೆ. ಜೈ ಜವಾನ್ ಜೈ ಕಿಸಾನ್."

ವೈರಲ್ ಪೋಷ್ಟ್ ಗಳನ್ನು ತೋರಿಸುವ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ. 

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದರು, ಪ್ರಸ್ತುತ ರೈತರ ಪ್ರತಿಭಟನೆಯನ್ನು ತೂರಿಸಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿ ಇಲ್ಲಿದೆ.

ಅಖಿಲೇಶ್ ಯಾದವ್ ಅವರು ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ನಾವು ಕಂಡುಹಿಡಿದದ್ದು ಏನು?
ವೀಡಿಯೋವನ್ನು ಪರಿಶೀಲಿಸುವಾಗ, ಟ್ರಾಲಿಯ ಬದಿಯಲ್ಲಿ 'P A W' ಎಂದು ಗುರುತು ಮಾಡಿರುವುದನ್ನು ನಾವು ನೋಡಬಹುದು. ಫೇಸ್‌ಬುಕ್ ಹುಡುಕಾಟವು ಪಂಜಾಬ್ ಮೂಲದ ಕೃಷಿ ಉಪಕರಣ ತಯಾರಕರಾದ 'New Plaha Agri Works BILGA -P.A.W' ಪುಟಕ್ಕೆ ನಮ್ಮನ್ನು ಕರೆದೊಯ್ಯಿತು.

ವೈರಲ್ ಪೋಷ್ಟ್  ನ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಅವರ ಫೇಸ್‌ಬುಕ್ ವೀಡಿಯೋವನ್ನು ಪರಿಶೀಲಿಸಿದಾಗ ಏಪ್ರಿಲ್ ೩, ೨೦೧೭ ರ ವೀಡಿಯೋದಲ್ಲಿ ಇದೇ ರೀತಿಯ ಟ್ರಾಕ್ಟರ್ ಟ್ರಾಲಿಯನ್ನು ನಾವು ಕಾಣಬಹುದು, ಇದನ್ನು ಸ್ಪೇಡ್ ಮತ್ತು ರೈಫಲ್ ಲಾಂಛನದ ಜೊತೆಗೆ 'ಚೀಮಾ ಆಗ್ರೋ ಫಾರ್ಮ್' ಎಂದು ಗುರುತಿಸಲಾಗಿದೆ. ಈ ನಿರ್ದಿಷ್ಟ ಫೇಸ್‌ಬುಕ್ ಪೋಷ್ಟ್ 'TalJinDeR SinGh CheeMa' ಅವರನ್ನು ಟ್ರಾಲಿ ಮಾಲೀಕ ಎಂದು ಉಲ್ಲೇಖಿಸಿದೆ.

Plaha Agri Works (PAW) ಫೇಸ್‌ಬುಕ್ ಪುಟದಿಂದ ಅಪ್‌ಲೋಡ್ ಮಾಡಿದ ವೀಡಿಯೋ ಮತ್ತು ವೈರಲ್ ಕ್ಲಿಪ್ ನ ನಡುವಿನ ಹೋಲಿಕೆ. (ಮೂಲ: ಸ್ಕ್ರೀನ್‌ಶಾಟ್‌ಗಳು/ಫೇಸ್‌ಬುಕ್/ಎಕ್ಸ್ / ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಮುಂದೆ, ಟ್ರಾಲಿಯ ಮಾಲೀಕ ಎಂದು ಉಲ್ಲೇಖಿಸಲಾದ ಹೆಸರಿಗಾಗಿ ನಾವು ಇನ್‌ಸ್ಟಾಗ್ರಾಮ್ ನಲ್ಲಿ ಹುಡುಕಿದೆವು ಮತ್ತು ವೈರಲ್ ವೀಡಿಯೋವನ್ನು ಡಿಸೆಂಬರ್ ೮, ೨೦೨೩ ರಂದು ತಲ್ಜಿಂದರ್ ಸಿಂಗ್ ಚೀಮ್ಸ್ ಅವರ ಖಾತೆಯಿಂದ ಪೋಷ್ಟ್ ಮಾಡಲಾಗಿದೆ ಎಂದು ಕಂಡುಬಂದಿದೆ.

೨೦೨೨ ರಲ್ಲಿ ಪಂಜಾಬ್‌ನ ಆನಂದ್‌ಪುರ ಸಾಹಬ್‌ನಲ್ಲಿ ನಡೆದ ಬೈಸಾಖಿ ಮೇಳದ ಸಂದರ್ಭದಲ್ಲಿ ಚಿತ್ರೀಕರಣ ಮಾಡಲಾದ ಈ ವೀಡಿಯೋ, ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿಲ್ಲ ಎಂದು ಚೀಮಾ ಲಾಜಿಕಲಿ ಫ್ಯಾಕ್ಟ್ಸ್‌ಗೆ ಸ್ಪಷ್ಟಪಡಿಸಿದ್ದಾರೆ. ಇದು ಕಿರಾತ್‌ಪುರ ಸಾಹಬ್ ಬಳಿ ಟ್ರ್ಯಾಕ್ಟರ್‌ಗಳಿಗೆ ಶುದ್ಧೀಕರಣ ಆಚರಣೆಯನ್ನು ಚಿತ್ರಿಸುತ್ತದೆ ಎಂದು ಹೇಳಿದರು.

ಇದನ್ನು ಬೆಂಬಲಿಸುತ್ತಾ, ಮಾರ್ಚ್ ೧೭, ೨೦೨೨ ರಂದು ಹೋಲಾ ಮೊಹಲ್ಲಾ ಬಣ್ಣದ ಹಬ್ಬದಲ್ಲಿ ಇದೇ ರೀತಿಯ ದೃಶ್ಯವನ್ನು ತೋರಿಸುವ ಸಿಪಾ ಯುಎಸ್‌ಎ ಯ ರವಿ ಬಾತ್ರಾ ಅವರು ಸೆರೆಹಿಡಿದ  ಚಿತ್ರಗಳನ್ನು ನಾವು ಅಲಾಮಿ ವೆಬ್ಸೈಟ್ ನಲ್ಲಿ ಕಂಡುಕೊಂಡಿದ್ದೇವೆ, ಇದು ಸಿಖ್ ಸಮುದಾಯದ ಕೌಶಲ್ಯ ಮತ್ತು ಪರಾಕ್ರಮವನ್ನು ಫಾರ್ಮ್ ಟ್ರ್ಯಾಕ್ಟರ್‌ನೊಂದಿಗೆ ವಿವರಿಸುತ್ತದೆ.

ಮುಂದುವರಿದ ರೈತರ ಪ್ರತಿಭಟನೆ


ಟ್ರ್ಯಾಕ್ಟರ್‌ಗಳು ನಡೆಯುತ್ತಿರುವ ರೈತರ ಪ್ರತಿಭಟನೆಯ ಸಂಕೇತವಾಗಿ ಮಾರ್ಪಟ್ಟಿವೆ, ಫೆಬ್ರವರಿ ೧೩, ೨೦೨೪  ರಿಂದ ದೆಹಲಿಗೆ ಪ್ರಯಾಣಿಸಲು ಸಾವಿರಾರು ಜನರು ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡರು,  ಇದು ಕೃಷಿ ಬಳಕೆಗಳನ್ನು ಮೀರಿ ತಮ್ಮ ಮಹತ್ವವನ್ನು ಪ್ರದರ್ಶಿಸಿದೆ. 

ತೀರ್ಪು

ಪಂಜಾಬ್‌ನಲ್ಲಿ ೨೦೨೨ ರ ಉತ್ಸವದಿಂದ ಹುಟ್ಟಿಕೊಂಡ ವೀಡಿಯೋ, ಇತ್ತೀಚಿನ ರೈತರ ಪ್ರತಿಭಟನೆಗೆ ಯಾವುದೇ ಪ್ರಸ್ತುತತೆಯನ್ನು ಹೊಂದಿಲ್ಲ ಎಂದು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ. ಹೀಗಾಗಿ, ಈ ಹೇಳಿಕೆ ತಪ್ಪು ಎಂದು ಗುರುತಿಸಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.