ಯೋಗಿ ಆದಿತ್ಯನಾಥ್ ಅವರು 'ಮಂಗಲಸೂತ್ರ' ಹೇಳಿಕೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ

ಮೂಲಕ: ರಜಿನಿ ಕೆ.ಜಿ
ಮೇ 3 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಯೋಗಿ ಆದಿತ್ಯನಾಥ್ ಅವರು 'ಮಂಗಲಸೂತ್ರ' ಹೇಳಿಕೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ

ಯೋಗಿ ಆದಿತ್ಯನಾಥ್ ಅವರ ವೈರಲ್ ವೀಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. (ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಯೋಗಿ ಆದಿತ್ಯನಾಥ್ ಅವರು ಮೋದಿಯವರ ಮಂಗಳಸೂತ್ರದ ಟೀಕೆಗೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕಿ ಡಿಂಪಲ್ ಯಾದವ್ ಅವರನ್ನು ಪ್ರಶ್ನಿಸಿರುವುದನ್ನು ಮೂಲ ವೀಡಿಯೋ ತೋರಿಸುತ್ತದೆ.

ಕ್ಲೈಮ್ ಐಡಿ ff4c1294

ಹೇಳಿಕೆ ಏನು?

ಏಪ್ರಿಲ್ ೨೧, ೨೦೨೪ ರಂದು ರಾಜಸ್ಥಾನದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 'ಮಂಗಲಸೂತ್ರ' (ಮದುವೆಯಾದ ನಂತರ ಹಿಂದೂ ಮಹಿಳೆಯರು ತಮ್ಮ ಕುತ್ತಿಗೆಯಲ್ಲಿ ಧರಿಸುವ ಮಂಗಳಕರ ದಾರ) ಕುರಿತು ಮಾಡಿದ ಹೇಳಿಕೆಯು ಕೆಲವು ದಿನಗಳ ಹಿಂದೆ ವಿವಾದವನ್ನು ಹುಟ್ಟುಹಾಕಿತು. ಭಾರತದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, ಅದು "ಮುಸ್ಲಿಮರಿಗೆ ಸಂಪತ್ತನ್ನು ಹಂಚುತ್ತದೆ" ಎಂದು ಹೇಳಿದ್ದ ಮೋದಿ ಅವರು "ಜನರ ವಸ್ತುಗಳನ್ನು ಕಸಿದುಕೊಳ್ಳುತ್ತಾರೆ" ಮತ್ತು "ಮಹಿಳೆಯರ ಮಂಗಳಸೂತ್ರವನ್ನು ತೆಗೆದುಕೊಂಡು" ಮುಸ್ಲಿಮರಿಗೆ ಹಸ್ತಾಂತರಿಸುತ್ತಾರೆ ಎಂದು ಆರೋಪಿಸಿದರು. ಹಲವು ಕಾಂಗ್ರೆಸ್ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರು ಮೋದಿಯವರ 'ಮಂಗಲಸೂತ್ರ' ಹೇಳಿಕೆಯನ್ನು ಟೀಕಿಸಿದ್ದರು

ಇದರ ಬೆನ್ನಲ್ಲೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ, ಅಲ್ಲಿ ಅವರು ಹೀಗೆ ಹೇಳುವುದನ್ನು ನಾವು ಕೇಳಬಹುದು, "ಸೋದರ ಸೋದರಿಯರೇ, ನಾವು ಮೋದಿಜಿಯವರನ್ನು ಕೇಳಲು ಬಯಸುತ್ತೇವೆ, ಪುಲ್ವಾಮಾದಲ್ಲಿ ಹುತಾತ್ಮರಾದ ವಿಧವೆಯರ ಮಂಗಳಸೂತ್ರ ಏನಾಯಿತು. ಮತ್ತು ಯುವಕರ ಕುಟುಂಬದ ಹೆಂಡತಿಯರ ಮಂಗಳಸೂತ್ರದ ಬಗ್ಗೆ ಏನು (ಹಿಂದಿಯಿಂದ ಅನುವಾದಿಸಲಾಗಿದೆ)?"

ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮೋದಿಯನ್ನು ಪ್ರಶ್ನಿಸಿದ್ದಾರೆ ಮತ್ತು "ಹುತಾತ್ಮರಾದ ಪುಲ್ವಾಮಾದ ವೀರ ಸೈನಿಕರ ಪತ್ನಿಯರ ಮಂಗಳಸೂತ್ರದ ಬಗ್ಗೆ ಏನು ಎಂದು ಕೇಳಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ಈ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡಿದ್ದಾರೆ. ಪುಲ್ವಾಮಾ, ಫೆಬ್ರವರಿ ೨೦೧೯ ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಆತ್ಮಾಹುತಿ ಬಾಂಬರ್‌ನಿಂದ ಸೈನಿಕರ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸುತ್ತದೆ, ಇದರಲ್ಲಿ ೪೦ ಭಾರತೀಯ ಸೈನಿಕರು ಸಾವನ್ನಪ್ಪಿದ್ದರು.

ಯೋಗಿ ಆದಿತ್ಯನಾಥ್ ಅವರ ವೈರಲ್ ವೀಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. (ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಯೋಗಿ ಆದಿತ್ಯನಾಥ್ ಅವರ ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ಮೂಲ ವೀಡಿಯೋದಲ್ಲಿ ಯೋಗಿ ಆದಿತ್ಯನಾಥ್ ಅವರು ವಿರೋಧ ಪಕ್ಷದ ನಾಯಕಿ ಡಿಂಪಲ್ ಯಾದವ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ವಾಸ್ತವಾಂಶಗಳು ಇಲ್ಲಿವೆ

ರಿವರ್ಸ್ ಇಮೇಜ್ ಸರ್ಚ್ ನ  ಮೂಲಕ, ಏಪ್ರಿಲ್ ೨೫, ೨೦೨೪ ರಂದು ಸುದ್ದಿ ಸಂಸ್ಥೆ ANI ನ ಯೂಟ್ಯೂಬ್  ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ೧೪:೪೦ ರ ಟೈಮ್‌ಸ್ಟ್ಯಾಂಪ್‌ನಲ್ಲಿ, ಆದಿತ್ಯನಾಥ್ ಹೇಳುವುದನ್ನು ನಾವು ಕೇಳಬಹುದು, “ಸಮಾಜವಾದಿ ಪಕ್ಷದ ನಾಯಕರೊಬ್ಬರು ಪುಲ್ವಾಮಾದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ವಿಧವೆಯರ ಮಂಗಳಸೂತ್ರಕ್ಕೆ ಏನಾಯಿತು ಎಂದು ಪ್ರಧಾನಿ ಮೋದಿಗೆ ಕೇಳುವ ಹೇಳಿಕೆ ನೀಡಿದ್ದಾರೆ. ಸೋದರ ಸೋದರಿಯರೇ, ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷದ ಸರ್ಕಾರವು ತಮ್ಮ ರಕ್ತವನ್ನು ಸುರಿಸಿದ 'ರಾಮಭಕ್ತರ' ಯುವಕರ ವಿಧವೆಯರು ಮತ್ತು ಅವರ 'ಮಂಗಲಸೂತ್ರ' ಏನಾಯಿತು ಎಂದು ಸಮಾಜವಾದಿ ಪಕ್ಷದ ನಾಯಕನನ್ನು ನಾನು ಕೇಳಲು ಬಯಸುತ್ತೇನೆ." 

ಇಂಡಿಯಾ ಟುಡೇ ವರದಿಯ ಪ್ರಕಾರ, ಯೋಗಿ ಆದಿತ್ಯನಾಥ್ ಅವರು ನವೆಂಬರ್ ೧೯೯೦ ರಲ್ಲಿ ರಾಮ ಜನ್ಮಭೂಮಿ ಆಂದೋಲನದ ಸ್ವಯಂಸೇವಕರ ಮೇಲೆ ಗುಂಡು ಹಾರಿಸಿದ ಘಟನೆಯನ್ನು ಉಲ್ಲೇಖಿಸಿದ್ದಾರೆ, ಇದು ಬಾಬರಿ ಮಸೀದಿಯನ್ನು ಕೆಡವಲು ಹೊರಟಿದ್ದ ಅನೇಕ ಸ್ವಯಂಸೇವಕರ ಸಾವಿಗೆ ಕಾರಣವಾಯಿತು. ಗುಂಡಿನ ದಾಳಿಗೆ ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆದೇಶ ನೀಡಿದ್ದರು.

ನ್ಯೂಸ್ ನೇಷನ್ ಯೂಟ್ಯೂಬ್ ಚಾನೆಲ್ ಯೋಗಿ ಆದಿತ್ಯನಾಥ್ ಅವರ ಸುದೀರ್ಘ ವೀಡಿಯೋವನ್ನು ಸಹ ಹಂಚಿಕೊಂಡಿದೆ ಮತ್ತು ಈಗ ವೈರಲ್ ವೀಡಿಯೋದ ಪ್ರಾರಂಭವನ್ನು ೧:೩೮ ಸೆಕೆಂಡುಗಳ ಟೈಮ್‌ಸ್ಟ್ಯಾಂಪ್‌ನಲ್ಲಿ ನೋಡಬಹುದು. ವೈರಲ್ ವೀಡಿಯೋದಲ್ಲಿ ಕೆಲವು ಪದಗಳನ್ನು ಎಡಿಟ್ ಮಾಡಲಾಗಿದೆ ಎಂದು ಹೋಲಿಕೆ ತೋರಿಸುತ್ತದೆ - ವಿಶೇಷವಾಗಿ ಸಮಾಜವಾದಿ ನಾಯಕರೊಬ್ಬರು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಆದಿತ್ಯನಾಥ್ ಹೇಳುವುದನ್ನು ಕೇಳಬಹುದು.

ಇಂಡಿಯಾ ಟುಡೇ ಪ್ರಕಾರ, ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಡಿಂಪಲ್ ಯಾದವ್, ಏಪ್ರಿಲ್ ೨೪, ೨೦೨೪ ರಂದು, ಮಂಗಳಸೂತ್ರದ ಕುರಿತು ಮೋದಿಯವರ ಹೇಳಿಕೆಯನ್ನು ಪ್ರಶ್ನಿಸಿದರು, "ಕೇಂದ್ರ ಸರ್ಕಾರವು ೨೦೧೯ ರ ಪುಲ್ವಾಮಾ ದಾಳಿಯ ಹಿಂದಿನ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಸೈನಿಕರ ವಿಧವೆಯರು ತಮ್ಮ ಮಂಗಳಸೂತ್ರವನ್ನು ಕಳೆದುಕೊಂಡಿದ್ದಾರೆ." ಯೋಗಿ ಆದಿತ್ಯನಾಥ್ ಅವರು ೧೯೯೦ ರ ಘಟನೆಯ ಬಗ್ಗೆ ಪ್ರಶ್ನಿಸಲು ಏಪ್ರಿಲ್ ೨೫, ೨೦೨೪ ರ ರ‍್ಯಾಲಿಯಲ್ಲಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಡಿಂಪಲ್ ಯಾದವ್ ಮುಲಾಯಂ ಸಿಂಗ್ ಯಾದವ್ ಅವರ ಸೊಸೆಯಾಗಿದ್ದು, ಎಸ್‌ಪಿಯ ಭದ್ರಕೋಟೆಯಾಗಿರುವ ಮೈನ್‌ಪುರಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ (ಎಸ್‌ಪಿ) ಟಿಕೆಟ್‌ನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆಕೆಯ ವಿರುದ್ಧ ಬಿಜೆಪಿ ಜೈವೀರ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತೀರ್ಪು

ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್ ಅವರ ವೀಡಿಯೋವನ್ನು ಅವರು ಪ್ರಧಾನ ಮಂತ್ರಿಯನ್ನು ಪ್ರಶ್ನಿಸಿದ್ದಾರೆ ಎಂದು ಹೇಳಲು ಎಡಿಟ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೇವೆ.

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.