ಕೇಂದ್ರ ಸಚಿವ ಗಡ್ಕರಿ ಅವರು ಮೋದಿ ಸರ್ಕಾರವನ್ನು ಟೀಕಿಸುತ್ತಿರುವಂತೆ ಕ್ಲಿಪ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಮಾರ್ಚ್ 8 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕೇಂದ್ರ ಸಚಿವ ಗಡ್ಕರಿ ಅವರು ಮೋದಿ ಸರ್ಕಾರವನ್ನು ಟೀಕಿಸುತ್ತಿರುವಂತೆ ಕ್ಲಿಪ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಸಾಮಾಜಿಕ ಜಾಲತಾಣಗಳಲ್ಲಿ ನಿತಿನ್ ಗಡ್ಕರಿ ಅವರು ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. (ಮೂಲ: ಎಕ್ಸ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ವೈರಲ್ ಕ್ಲಿಪ್‌ನಲ್ಲಿ ನಿತಿನ್ ಗಡ್ಕರಿ ಮೋದಿ ಸರ್ಕಾರವನ್ನು ಟೀಕಿಸಲಿಲ್ಲ. ಅವರು ಗ್ರಾಮೀಣ-ನಗರ ವಲಸೆಯ ಕುರಿತು ಚರ್ಚಿಸುತ್ತಿರುವ ವೀಡಿಯೋವನ್ನು ಸಂದರ್ಭವಿಲ್ಲದೆ ಹಂಚಿಕೊಳ್ಳಲಾಗಿದೆ.

ಕ್ಲೈಮ್ ಐಡಿ 4d4391bc

ಹೇಳಿಕೆ ಏನು?

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯು ಇತ್ತೀಚೆಗೆ ವೀಡಿಯೋವನ್ನು ಪೋಷ್ಟ್ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯನ್ನು ಉಲ್ಲೇಖಿಸಿ ಗ್ರಾಮಗಳು, ಬಡವರು, ಕಾರ್ಮಿಕರು ಮತ್ತು ರೈತರ ಸ್ಥಿತಿಯ ಬಗ್ಗೆ ಗಡ್ಕರಿ ಅವರು ಸಂದರ್ಶನವೊಂದರಲ್ಲಿ ಕಳವಳ ವ್ಯಕ್ತಪಡಿಸುವುದನ್ನು ವೀಡಿಯೋ ಚಿತ್ರಿಸುತ್ತದೆ. ಹಿಂದಿಯಿಂದ ಅನುವಾದಿಸಲಾದ ಪೋಷ್ಟ್, ಈ ವಲಯಗಳಲ್ಲಿ ಪ್ರಸ್ತುತ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಅಸಮಾಧಾನವನ್ನು ಸೂಚಿಸುತ್ತದೆ.

ಮಾರ್ಚ್ ೧ ರಂದು ಹಂಚಿಕೊಳ್ಳಲಾದ ಪೋಷ್ಟ್ ತ್ವರಿತವಾಗಿ ವೈರಲ್ ಆಯಿತು, ಒಂದು ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಇದನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ: “ಇಂದು ಹಳ್ಳಿಗಳು, ಬಡವರು, ಕಾರ್ಮಿಕರು ಮತ್ತು ರೈತರು ಅತೃಪ್ತರಾಗಿದ್ದಾರೆ. ಹಳ್ಳಿಗಳಲ್ಲಿ ಉತ್ತಮ ರಸ್ತೆಗಳಿಲ್ಲ, ಕುಡಿಯಲು ಶುದ್ಧ ನೀರಿಲ್ಲ, ಉತ್ತಮ ಆಸ್ಪತ್ರೆ, ಶಾಲೆಗಳಿಲ್ಲ. - ಮೋದಿ ಸರ್ಕಾರದ ಸಚಿವ ನಿತಿನ್ ಗಡ್ಕರಿ (ಹಿಂದಿಯಿಂದ ಅನುವಾದಿಸಲಾಗಿದೆ).” 

ಇದನ್ನು ಗಮನಾರ್ಹ ವ್ಯಕ್ತಿಗಳು ಮತ್ತು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧಿಕೃತ ಖಾತೆಯಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮರುಹಂಚಿಕೊಳ್ಳಲಾಗಿದೆ. ಅಂತಹ ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಪ್ರವೇಶಿಸಬಹುದು. 

ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಹೇಳಿಕೆ ಸಂದರ್ಭದಿಂದ ಹೊರಗಿಡಲಾಗಿದೆ. ನಿತಿನ್ ಗಡ್ಕರಿ ಅವರು ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದಾರೆಂದು ಹೇಳಿಕೊಳ್ಳಲು ಯಾವುದೇ ಸಂದರ್ಭವಿಲ್ಲದೆ ಗ್ರಾಮೀಣ-ನಗರ ವಲಸೆಯ ಕುರಿತು ಚರ್ಚಿಸುತ್ತಿರುವ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. 

ನಾವು ಏನು ಕಂಡುಕೊಂಡಿದ್ದೇವೆ?

ವೈರಲ್ ವೀಡಿಯೋದಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಕ್ಲಿಪ್‌ನ ಮೂಲ ಆವೃತ್ತಿಗೆ ನಮ್ಮನ್ನು ಕರೆದೊಯ್ಯಿತು. ಫೆಬ್ರವರಿ ೨೯ ರಂದು ಯೂಟ್ಯೂಬ್‌ನಲ್ಲಿಅಪ್‌ಲೋಡ್ ಮಾಡಿದ TheLallantop  ಮಾಧ್ಯಮ ಔಟ್‌ಲೆಟ್ ನಿಂದ ಸೌರಭ್ ದ್ವಿವೇದಿ ಅವರು ನಡೆಸಿದ ನಿತಿನ್ ಗಡ್ಕರಿ ಅವರೊಂದಿಗೆ ಒಂದು ಗಂಟೆ ನಲವತ್ತೆರಡು ನಿಮಿಷಗಳ ಸುದೀರ್ಘ ಸಂದರ್ಶನದಿಂದ ವೈರಲ್ ಕ್ಲಿಪ್ ಅನ್ನು ಹೊರತೆಗೆಯಲಾಗಿದೆ. ಯೂಟ್ಯೂಬ್ ವೀಡಿಯೋದ ೧೮:೧೯ ರಿಂದ ೧೮:೩೮ ಸಮಯದಿಂದ ಕಿರು ಕ್ಲಿಪ್ ಅನ್ನು ತೆಗೆದುಕೊಳ್ಳಲಾಗಿದೆ. 

ಸಂವಾದದಲ್ಲಿ, ಗಡ್ಕರಿ ಅವರು ಭಾರತದ ಅಭಿವೃದ್ಧಿ ಮತ್ತು ಉತ್ಪಾದನೆ ಮತ್ತು ಕೃಷಿಯಂತಹ ವಿವಿಧ ಕ್ಷೇತ್ರಗಳ ಕೊಡುಗೆಗಳನ್ನು ಜಿಡಿಪಿಗೆ ಚರ್ಚಿಸುತ್ತಿದ್ದಾರೆ. ಮಹಾತ್ಮ ಗಾಂಧಿಯವರ ಕಾಲದ ನಂತರದ ವರ್ಷಗಳಲ್ಲಿ ಗ್ರಾಮೀಣ-ನಗರಗಳ ವಲಸೆಯ ಮಾದರಿಗಳ ಬದಲಾವಣೆಯನ್ನು ಅವರು ವಿವರಿಸುತ್ತಾರೆ. ಅವರ ಪ್ರಕಾರ, ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿಯ ಕೊರತೆಯಿಂದ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದೆ. ಆದರೆ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಕ್ಷೇತ್ರದಲ್ಲಿ ಗಮನಾರ್ಹ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಕೇಂದ್ರ ಸಚಿವರು ಹೇಳಿದರು.

ನಿತಿನ್ ಗಡ್ಕರಿಯವರ ಕಾಮೆಂಟ್‌ಗಳ ಆಯ್ದ ಕ್ಲಿಪ್ಪಿಂಗ್ ಮತ್ತು ಪ್ರಸಾರವು ಸರ್ಕಾರದ ಗ್ರಾಮೀಣ ಅಭಿವೃದ್ಧಿ ನೀತಿಗಳ ಬಗ್ಗೆ ಅವರ ನಿಲುವನ್ನು ತಪ್ಪಾಗಿ ಅರ್ಥೈಸಲು ಕಾರಣವಾಗಿದೆ. ಸಂದರ್ಶನದ ವಿಸ್ತೃತ ಆವೃತ್ತಿಯು ಗಡ್ಕರಿ ಅವರು ಗ್ರಾಮೀಣಾಭಿವೃದ್ಧಿಯಲ್ಲಿ ಐತಿಹಾಸಿಕ ಮತ್ತು ಚಾಲ್ತಿಯಲ್ಲಿರುವ ಸವಾಲುಗಳನ್ನು ಚರ್ಚಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ, ಅದನ್ನು ಟೀಕಿಸುವ ಬದಲು ಸರ್ಕಾರ ಮಾಡಿದ ಕೆಲಸವನ್ನು ಗುರುತಿಸಿದ್ದಾರೆ.

ಅವರ ಸಂಪೂರ್ಣ ಹೇಳಿಕೆ, "ದೇಶದ ಅಭಿವೃದ್ಧಿಯಲ್ಲಿ, ನಮ್ಮ ಕೃಷಿ ಕ್ಷೇತ್ರವು ಜಿಡಿಪಿಗೆ ಕೇವಲ ೧೨ ಪ್ರತಿಶತದಷ್ಟು ಕೊಡುಗೆ ನೀಡುತ್ತದೆ, ಆದರೆ ಉತ್ಪಾದನಾ ವಲಯವು ೨೨ ರಿಂದ ೨೪ ಪ್ರತಿಶತ ಮತ್ತು ಸೇವಾ ವಲಯವು ೫೨ ರಿಂದ ೫೪ ರಷ್ಟು ಕೊಡುಗೆ ನೀಡುತ್ತದೆ. ಜನಸಂಖ್ಯೆಯ ಅರವತ್ತೈದು ಶೇಕಡಾ ಕೃಷಿಯ ಮೇಲೆ ಅವಲಂಬಿತವಾಗಿದೆ. ಗಾಂಧೀಜಿಯವರ ಕಾಲದಲ್ಲಿ ಜನಸಂಖ್ಯೆಯ ೯೦ ಪ್ರತಿಶತದಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು, ಹಾಗಾದರೆ, ಈ ಶೇಕಡಾ ೩೦ ರಷ್ಟು ವಲಸೆ ಕ್ರಮೇಣ ಏಕೆ ಸಂಭವಿಸಿತು? ಕಾರಣ ಇಂದಿನ ಹಳ್ಳಿಗಳು, ಬಡವರು, ಕಾರ್ಮಿಕರು ಮತ್ತು ರೈತರು ಸಂಕಷ್ಟದಲ್ಲಿದ್ದಾರೆ. ನೀರಿನ ಆರ್ಥಿಕತೆ , ಭೂಮಿ, ಕಾಡುಗಳು ಮತ್ತು ಪ್ರಾಣಿಗಳು- ಇದು ಗ್ರಾಮೀಣ, ಕೃಷಿ ಮತ್ತು ಬುಡಕಟ್ಟು-ಉತ್ತಮ ರಸ್ತೆಗಳು, ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಸ್ಪತ್ರೆಗಳು ಮತ್ತು ಶಾಲೆಗಳ ಕೊರತೆ, ಹಾಗು ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ನೀಡುವುದಿಲ್ಲ. ಸುಸ್ಥಿರ ಅಭಿವೃದ್ಧಿ ಸಂಭವಿಸಿದೆ, ಇದು ಆಗಿಲ್ಲ ಅಂತ ಅಲ್ಲ, ಆಗಿದೆ ಆದರೆ ಇತರ ಕ್ಷೇತ್ರಗಳಲ್ಲಿ ಕಂಡುಬರುವ ಮಟ್ಟಿಗೆ ಅಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಾವು ಸಹ ಸಾಕಷ್ಟು ಕೆಲಸಗಳನ್ನು ಕೈಗೊಂಡಿದ್ದೇವೆ.

ಇದಲ್ಲದೆ, ನಿತಿನ್ ಗಡ್ಕರಿ ಅವರ ಅಧಿಕೃತ ಎಕ್ಸ್  ಖಾತೆಯಲ್ಲಿ ವೀಡಿಯೋದ ಸಂದರ್ಭವನ್ನು ಸ್ಪಷ್ಟಪಡಿಸಲು ಎಡಿಟ್ ಮಾಡಿದ ಕ್ಲಿಪ್ ಮತ್ತು ಮೂಲ ವೀಡಿಯೋದ  ನಡುವಿನ ಹೋಲಿಕೆಯನ್ನು ಹಂಚಿಕೊಂಡಿದ್ದಾರೆ.

ತೀರ್ಪು

ನಿತಿನ್ ಗಡ್ಕರಿ ಅವರು ಗ್ರಾಮೀಣ-ನಗರ ವಲಸೆಯ ಕುರಿತು ಚರ್ಚಿಸುತ್ತಿರುವ ವೀಡಿಯೋವನ್ನು ಕ್ಲಿಪ್ ಮಾಡಲಾಗಿದೆ ಮತ್ತು ಸಂದರ್ಭವಿಲ್ಲದೆ ಹಂಚಿಕೊಳ್ಳಲಾಗಿದೆ. ವೈರಲ್  ಪೋಷ್ಟ್ ಹೇಳಿಕೊಂಡಂತೆ  ಕೇಂದ್ರ ಸಚಿವರು  ಮೋದಿ ಸರ್ಕಾರವನ್ನು ಟೀಕಿಸುತ್ತಿಲ್ಲ, ಇದು ವೀಡಿಯೋದ ದೀರ್ಘವಾದ ಆವೃತ್ತಿಯಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.